ಸಿನಿಮಾ

ನದಿ ಮೂಲ ಋಷಿ ಮೂಲ ನೋಡಬಾರದು ಆದೇ ತರಹ ವಿಜಯಪುರ ಗೌಡರ ಮೂಲ ನೋಡಬಾರದು.

ವಿಜಯಪುರ ಗೌಡರ ಮೂಲ ನೋಡಬಾರದು. ಕನ್ನಡದಲ್ಲಿ ಒಂದು ಗಾದೆ ಮಾತಿದೆ ನದಿ ಮೂಲ ಋಷಿ ಮೂಲ ನೋಡಬಾರದೆಂದು ಈಗ ಅದಕ್ಕೆ ಇನ್ನೊಂದು ಸೇರಿಸಬೇಕು ವಿಜಯಪುರ ಗೌಡರ ಮೂಲ ನೋಡಬಾರದೆಂದು ಇದು ಬಸನಗೌಡ ಪಾಟೀಲ್ ಯತ್ನಾಳ ಅವರ ವಿಷಯದಲ್ಲಿ ನೂರಕ್ಕೆ ನೂರು ಸರಿ ಹೊಂದುವ ಮಾತು ಶಿವಾನಂದ ಪಾಟೀಲರು ವಿಜು ಗೌಡರು ಮತ್ತು ಯತ್ನಾಳ ಬಸನಗೌಡರು ಪರಸ್ಪರರು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿ ತಮ್ಮ ಮನೆತನದ ಮಾನ ಮರ್ಯಾದೆ ಹರಾಜು ಹಾಕುತ್ತಿದ್ದಾರೆ ಅಷ್ಟೇ ಅಲ್ಲ ಒಬ್ಬರನ್ನೊಬ್ಬರು ತೇಜೋವುದೇ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ ಅವರ ಹುಳುಕು ಕೊಳಕು ಇವರು ಎತ್ತಿ ಮಾತನಾಡುತ್ತಿದ್ದಾರೆ ಇವರ ಹುಳುಕು ಕೊಳಕು ಅವರು ಮಾತನಾಡುತ್ತಿದ್ದಾರೆ ಇಲ್ಲಿ ಕೆಸರೆರ್ಚಾಟ ನಡೆದಿದೆ ಪರಸ್ಪರರು ದೋಷಾರೋಪಗಳಲ್ಲಿ ತೊಡಗಿ ತಮ್ಮ ತಮ್ಮಅಂಗೈ ತೋರಿಸಿ ಅವಲಕ್ಷಣವಾಗುತ್ತಿದ್ದಾರೆ ಇದು ಆರೋಗ್ಯಕರವಾದ ಬೆಳವಣಿಗೆ ಅಲ್ಲ ನಾವು ಹಿಂದಿನ ಕಾಲದಲ್ಲಿ ನದಿ ಮೂಲ ಋಷಿ ಮೂಲ ನೋಡಬಾರದು ಎಂದು ಹೇಳುತ್ತಾ ಬಂದಿದ್ದೇವೆ ಹಿಂದಿನದನ್ನು ಅಗಿಯುತ್ತ ಬಗೆಯುತ್ತ ಹೋದರೆ ಅಲ್ಲಿ ಸಣ್ಣ ವಿಷಯಗಳಿರುತ್ತವೆ, ಅದಕ್ಕಿಂತಲೂ ಹೆಚ್ಚಾಗಿ ಮುಂದಿನ ಬೆಳವಣಿಗೆ ದೊಡ್ಡದಾಗಿ ಬೆಳೆದು ನಿಂತ ರೀತಿ ನೋಡಬೇಕೆ ವಿನಃ ಹಿಂದಿನದನ್ನು ನೋಡಬಾರದು ನದಿ ಚಿಕ್ಕದಾಗಿ ಹುಟ್ಟುತ್ತದೆ ಬೆಳೆದು ವಿಶಾಲವಾಗಿ ಹರಿ ದು ಸಮುದ್ರ ಸೇರುತ್ತದೆ ಹಾಗೆ ಒಬ್ಬ ಋಷಿ ಕಡಿಮೆ ಕುಲದಲ್ಲಿಯೂ ಸಣ್ಣಮನೆತನದಲ್ಲಿಯೂ ಹುಟ್ಟುತ್ತಾನೆ ಆದರೆ ಅವನು ಮುಂದೆ ಬೆಳೆದು ದೊಡ್ಡವನಾಗಿ ಮಹಾತ್ಮನಾಗುತ್ತಾನೆ ಹಾಗೆ ಭಾರತದ ನದಿಗಳು ಚಿಕ್ಕದಾಗಿ ಹುಟ್ಟಿ ಬೃಹತ್ ಆಗಿ ಮಹತ್ತಾಗಿ ಬೆಳೆದು ಸಮುದ್ರವನ್ನು ಸೇರಿ ವಿಶಾಲವಾಗುತ್ತದೆ ಹಾಗೆ ವಿಜಯಪುರ ಗೌಡ್ರು ಜಗಳ ಆಡುವುದನ್ನು ಆರೋಪ ಪ್ರತ್ಯಾರೋಪದಲ್ಲಿ ತೊಡಗಿರುವುದನ್ನು ನೋಡಿದಾಗ ಇವರ ಹಿಂದಿನ ಹಿರಿಯರು ಹೇಗಿದ್ದರು ಈಗ ಇವರು ಹೇಗಿದ್ದಾರೆ ಎಂಬುದನ್ನು ಗೊತ್ತಾಗುತ್ತದೆ ಆಗಿನ ಕಾಲ ಕಷ್ಟದ್ದು ಬಡತನದಿಂದ ಕೂಡಿದ್ದು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತ ಅನೇಕ ಕುಟುಂಬಗಳು ಹಸಿದ ಹೊಟ್ಟೆ ಅರೇ ಬಟ್ಟೆ ಕೈಯಲ್ಲಿ ಕಾಸಿಲ್ಲದೆ ಬಳಲಿದಂತಹ ದಿನಗಳು ಆದರೆ ಅವರ ಹೊಟ್ಟೆಯಲ್ಲಿ ಹುಟ್ಟಿದ ಈಗ ಜಗಳವಾಡುತ್ತಿರುವ ಗೌಡರು ಇಂದು ಸಾವಿರ ಕೋಟಿ ರೂಪಾಯಿ ಆಸ್ತಿ ಮಾಡಿದ್ದಾರೆ ಏನೂ ಇಲ್ಲದವರು ಹೇಗೆ ಇಷ್ಟೊಂದು ಹಣ ಸಂಪಾದಿಸಿದರು ಎಂಬುದು ಎಲ್ಲರಿಗೂ ತಿಳಿದ ವಿಷಯ ಆದರೂ ನಮ್ಮ ವಿಷಯ ಯಾರಿಗೂ ಗೊತ್ತಿಲ್ಲವೆಂಬಂತೆ, ಅವರು ಮಾತನಾಡುತ್ತಿರುವುದು ಆಶ್ಚರ್ಯದ ಸಂಗತಿಯೇ ಸರಿ ಶಿವಾನಂದ ಪಾಟೀಲ್ ಅವರ ಮೂಲ ಹೆಸರು ಹಚ್ಚಡ ಎಂದು ಹಚ್ಚಡ ದವರು ಪಾಟೀಲರಾದದ್ದು ಹೇಗೆ ಎಂಬ ಕಥೆ ಯತ್ನಾಳ ಗೌಡರು ಹೇಳುತ್ತಾರೆ ಯತ್ನಾಳ ಗೌಡ್ರು ಧರ್ಮ ಕಡ್ಲಿ ಯವರು ಎಂದು ಅವರು ಹೇಳುತ್ತಾರೆ ಧರ್ಮ ಕಡ್ಲಿ ಯವರು ಹೇಗೆ ಗೌಡರಾದರು ಎಂದು ಪ್ರಶ್ನಿಸುತ್ತಾರೆ ಇದು ಓದುಗರಿಗೆ ಮತ್ತು ಕೇಳುಗರಿಗೆ ಮೋಜು ಮಜವನ್ನುಂಟು ಮಾಡುವ ಸಂಗತಿಯಾಗಿದೆ ಹ ಚ್ಚಡದ ಹಚ್ಚಡವೆಂದರೆ ಹೋದಿಕೆ ವ್ಯವಹಾರ ಮಾಡುವುದರಿಂದ ಇವರು ಹಚ್ಚಡದವರಾಗಿದ್ದಾರೆಂದು ಬಸನಗೌಡರು ಹೇಳುತ್ತಾರೆ ಧರ್ಮಾರ್ಥವಾಗಿ ತಮ್ಮ ಹೊಲದಲ್ಲಿನ ಕಡಲೆ ಹಾದಿಗೆ ಹೋಗಿ ಬರುವವರೆಗೆ ತಿನ್ನಲು ಹೇಳಿರುವದರಿಂದ ಇದು ಧರ್ಮದ ಕಡಲೆ ಹೊಲ ಅದಕ್ಕೆ ನಮ್ಮ ಮನೆತನಕ್ಕೆ ಧರ್ಮ ಕಡ್ಲಿ ಯವರ ಎಂಬ ಅಡ್ಡ ಹೆಸರು ಬಂದಿರಬಹುದು ಎಂದಾಗಿರಬಹುದು ಎಂಬುದು ಬಸನಗೌಡರ ಕಾರ್ಯಕ್ರಮ ಮತ್ತು ವಾದವಾಗಿದೆ ಇದು ಸತ್ಯವೂ ಇರಬಹುದು ಆದರೆ ಈ ತರಹ ರಾಜಕೀಯ ಜೀವನದಲ್ಲಿ ಒಬ್ಬರ ಮೇಲೆ ಒಬ್ಬರು ಕೆಸರನ್ನು ಚೆಲ್ಲಿ ಮೈ ಹೊಲಸು ಮಾಡಿಕೊಂಡು ತಮ್ಮ ಮಾನ ಮರ್ಯಾದೆ ಪ್ರತಿಷ್ಠೆ ಕಳೆದುಕೊಂಡು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ಯಾರ ಅರಿವಿಗೂ ಬರುತ್ತಿಲ್ಲ ಈ ಗೌಡರುಗಳು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ ಜನಪರ ಪ್ರಗತಿಪರ ಚಿಂತನ ಪರ ಕೆಲಸಗಳನ್ನು ಬಿಟ್ಟು ಈ ಹೊಲಸು ಚೆಲ್ಲುವ ಕೆಲಸದಲ್ಲಿ ಯಾಕೆ ತೊಡಗಿದ್ದಾರೆ ಎಂಬುದು ಜನಗಳಿಗೆ ಇನ್ನೂ ಅರ್ಥವಾಗಿಲ್ಲ ಖಾನ್ದಾನ ಮನೆತನದ ಹೆಸರು ಘನತೆ ಗೌರವ ಪ್ರತಿಷ್ಠೆ ಉಳಿಸಿಕೊಂಡು ಊರನ್ನು ಆಳುವ ಮನೆತನಗಳು ಜನರಿಗೆ ಒಳಿತನ್ನು ಮಾಡುವ ಉದ್ದೇಶ ಈ ಮನೆತನಗಳದು ಅಂತಹ ಮನೆತನದಲ್ಲಿ ಹುಟ್ಟಿ ಇವರು ಸಿರಿವಂತರಾಗಿ ಬಾಳಿ ಬದುಕುತ್ತಿರುವದು ಮತ್ತು ಹಿಂದಿನ ಹಳೆಯ ಹಾದರ ತೆಗೆದುಕೊಂಡು ಮೊಲೆ ಮೂಗು ಕುಯಿಸಿಕೊಂಡರು ಎಂಬಂತೆ ತಮ್ಮ ಮರ್ಯಾದೇ ತಾವೇ ಕಳೆದುಕೊಳ್ಳುವ ದಾರಿಯಲ್ಲಿ ಹೊರಟುದ್ದು ಈ ಮನೆತನಗಳಿಗೆ ಕಳಂಕ ಉಂಟು ಮಾಡುತ್ತಿ ರುವದು ಸರಿಯಲ್ಲ ಅದಕ್ಕಾಗಿ ಈ ವಿಜಯಪುರ ಗೌಡರು ಜಗಳವಾಡುವುದನ್ನು ಬಿಟ್ಟು ಜನರ ಸೇವೆಯನ್ನು ಮಾಡಲಿ ಇದು ಕೆಲಸಕ್ಕೆ ಬಾರದ ಕೆಲಸ ಜನ ಅವರನ್ನು ಚುನಾಯಿಸಿ ಕಳಿಸಿರುವುದು ನಮ್ಮ ಸೇವೆ ಮಾಡಿ ಎಂದು ಅದನ್ನು ಬಿಟ್ಟು ಅವರ ಹೊಲಸು ಇವರು ಇವರ ಕೊಳಕು ಅವರು ಇಂತಹವಿಷಯಗಳ ಕಡೆ ಜನರ ಗಮನವನ್ನು ಏಳಿ ಯುತ್ತಿರುವುದು ಮತ್ತು ಸೆ ಳೆತ್ತಿರುವುದು ಸರಿಯಲ್ಲ ಇನ್ನಾದರೂ ವಿಜಯಪುರ ಜಿಲ್ಲೆಯ ಗೌಡ್ರು ಖಾ ನ್ಡ್ದಾನ್ ಗೌಡರಾಗಿ ಪ್ರತಿಷ್ಠೆ ಗೌರವ ಉಳಿಸಿಕೊಂಡು ಜಾಣ ಜಾರಿ ಬಿದ್ದರೂ ಮೀಸೆ ಮಣ್ಣಾಗದಂತೆ ತಮ್ಮ ದಾರಿಯಲ್ಲಿ ತಾವು ನಡೆದು ದೊಡ್ಡವರೇನಿಸಿಕೊಳ್ಳಬೇಕೆಂದು ನನ್ನ ಶುಭ ಹಾರೈಕೆಯಾಗಿದೆ ಪ್ರೊಫೆಸರ್ ಶಿವರಾಜ್ ಪಾಟೀಲ್ ಹಳ್ಳಿ ಊರ ಗೌಡರು ಮತ್ತು ಚಿಂತಕರು ಕಲ್ಬುರ್ಗಿ

Related Articles

Leave a Reply

Your email address will not be published. Required fields are marked *

Back to top button