

ವಿರೇಂದ್ರ ಕುಮಾರ್ ಕರಿಬಸಪ್ಪ ಎಂಬ ಒಬ್ಬ ವ್ಯಕ್ತಿ ಹೆಸರಿನಲ್ಲಿ ಎರಡು ನಿವೇಶನಗಳ ಖಾತ ನಕಲು ನೀಡಿರುವ ಭ್ರಷ್ಟ ಅಧಿಕಾರಿ ಪೌರಾಯುಕ್ತ ರಮೇಶ್ ಬಡಿಗೇರ.
ಯಾದಗಿರಿ ಜಿಲ್ಲೆಯ ಶಹಾಪುರ ನಗರಸಭೆಯ ಪೌರಯುಕ್ತರಾದ. ರಮೇಶ್ ಬಡಿಗೇರ್ ಅವರು ಐಡಿಎಸ್‌ಎಮ್‌ಟಿ. ನಿವೇಶನ ಸಂಖ್ಯೆ 392 ರ. ದಿನಾಂಕ 21/08/2023 ರಂದು ವೀರೇಂದ್ರ ಕುಮಾರ್ ಕರಿ ಬಸಪ್ಪ ಕುಂಬಾರ್ ಎಂಬವರ ಹೆಸರಿನಲ್ಲಿ ಖಾತಾನಕಲು ನೀಡಿರುತ್ತಾರೆ. ಈ ಐಡಿ ಎಸ್ ಎಂ ಟಿ ನಿವೇಶನಗಳ ಅಕ್ರಮ ನೊಂದಣಿ ಅಕ್ರಮ ಖಾತಾನಕುಲಗಳ ತನಿಖೆ ಹಂತದಲ್ಲಿರುವಾಗ ದಿನಾಂಕ 03/01/2025 ರಂದು ನಿವೇಶನ ಸಂಖ್ಯೆ 811 ಕೂಡ ವೀರೇಂದ್ರ ಕುಮಾರ್ ಕರಿಬಸಪ್ಪ ಕುಂಬಾರ್ ಅವರ ಹೆಸರಿನಲ್ಲಿ ಖಾತಾನಕಲು ನೀಡಿರುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ನಗರ ಅಭಿವೃದ್ಧಿ ಕೋಶ ಯಾದಗಿರವರಿಗೆ ದೂರು ನೀಡಿದ್ದರು ಯಾವುದೇ ಸೂಕ್ತ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ಮಾನ್ಯ ಪ್ರಾದೇಶಿಕ ಆಯುಕ್ತರು ಕಲಬುರ್ಗಿರವರಿಗೆ ದಿನಾಂಕ 27.02.2025ರಂದು. ಪೌರಾಯುಕ್ತ ರಮೇಶ್ ಬಡಿಗೆರವರ ವಿರುದ್ಧ ದಾಖಲೆಗಳ ಸಹಿತ ದೂರು ನೀಡಿದ ಪ್ರಯುಕ್ತ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ದೂರು ಪ್ರತಿ ಹಾಗೂ ಅಡಕಗಳನ್ನು ಲಗತ್ತಿಸಿ ಪೌರಾಯುಕ್ತರಾದ ರಮೇಶ್ ಬಡಿಗೇರ್ ಅವರ ವಿರುದ್ಧ ಮುಂದಿನ ಕ್ರಮಕ್ಕಾಗಿ ಮಾನ್ಯ ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ರವರಿಗೆ ಕಳಿಸಿರುತ್ತಾರೆ. ಇಂತಹ ಭ್ರಷ್ಟಾಧಿಕಾರಿಯನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕೆಂದು ಶಾಂತಪ್ಪ ಬಿ ಸಾಲಿಮನಿ ಅವರು ಒತ್ತಾಯಿಸಿರುತ್ತಾರೆ





