ಕರ್ನಾಟಕ ರಾಜ್ಯದ ಕಾಡು ಗೊಲ್ಲ ಸಮಾಜದ ವತಿಯಿಂದ ಪೂರ್ವ ಭಾವಿ ಸಭೆ.ಕನಕಗಿರಿ ಪಟ್ಟಣ.

ಕರ್ನಾಟಕ ರಾಜ್ಯದ ಕಾಡು ಗೊಲ್ಲ ಸಮಾಜದ ವತಿಯಿಂದ ಪೂರ್ವ ಭಾವಿ ಸಭೆ
ಕನಕಗಿರಿ ಪಟ್ಟಣದಲ್ಲಿ ಶ್ರೀ ಕೃಷ್ಣ ಗೊಲ್ಲ ಕ್ಷೇಮಾಭಿವೃದ್ಧಿ ಸಂಘ ದ್ಧಿ ಸಂಘ ಕಾಡುಗೊಲ್ಲ ಸಮಾಜದ ವತಿಯಿಂದ ತಾಲೂಕ ಅಧ್ಯಕ್ಷರಾದ ನಿರುಪಾದಿ ಹಾಗೂ ತಾಲೂಕಿನ ವಿವಿಧ ಹಳ್ಳಿಯ ಗೊಲ್ಲ ಸಮಾಜದ ಅವರ ನೇತೃತ್ವದಲ್ಲಿ ಪೂರ್ವ ಭಾವಿ ಸಭೆ ನಡೆಸಿ ಕೊಪ್ಪಳ ಜಿಲ್ಲೆಯ ಕನಕಗಿರಿ ಭಾಗದ ಗೊಲ್ಲ ಸಮಾಜದವರು ಅನಾದಿ ಕಾಲದಿಂದಲೂ ಗೋಗಳ ಪೋಷಣೆ ಹಾಗೂ ಪಾಲನೆ ಮಾಡುವುದೇ ಉದ್ಯಮಿ ಎಂದು ತಿಳಿದು ವಿದ್ಯೆ ಹಾಗೂ ಶಿಕ್ಷಣ ಉದ್ಯೋಗ ಮತ್ತು ಎಲ್ಲಾ ರೀತಿಯ ಸರ್ಕಾರಿಯ ಸೌಲಭ್ಯ ದಿಂದ ಹಿಂದೆ ಹುಳಿದಿದ್ದು ಶೇಕಡ 70 ಪರ್ಸೆಂಟ್ ಕೊಪ್ಪಳ ಜಿಲ್ಲೆಯಲ್ಲಿ ಗೊಲ್ಲ ಸಮಾಜದವರು ಕುರಿ ಧನ ಕಾಯುವದೆ ಉದ್ಯಮಿ ಆಗಿರುತ್ತದೆ ಅದಕ್ಕಾಗಿ ಗೊಲ್ಲ ಸಮಾಜ ದವರನ್ನು ಕಲಾಂ ನಂ 9,10 ಪ್ರಕಾರ,ಕಾಡು ಗೊಲ್ಲ (ಅಡಿವಿ ಗೊಲ್ಲ) ಸೇರ್ಪಡೆ ಮಾಡಿ ಎಂದು ಪೂರ್ವ ಭಾವಿ ಸಭೆ ನಡೆಯಿತು.
ಸಭೆಯಲ್ಲಿ ತಾಲೂಕ ಅಧ್ಯಕ್ಷರಾದ ನಿರುಪಾದಿ ಯಾದವ್ ಮಾತನಾಡಿ ಅನಾದಿ ಕಾಲದಿಂದ ಕೊಪ್ಪಳ ಭಾಗದ ಎಲ್ಲಾ ಸಮಾಜದವರು ಶೇಕಡ 70% ಅಷ್ಟು ಜನರು ತಮ್ಮ ಜೀವನವನ್ನು ಕಾಡಿನಲ್ಲಿ ದನ ಕುರಿ ಗಳನ್ನು ಪಾಲನೆ ಪೋಷಣೆ ಮಾಡುತ್ತಾ ಸತತಕಾಲ ಕಳೆಯುತ್ತಿದ್ದು ಇವರಿಗೆ ಅನ್ಯ ಕೆಲಸ ಉದ್ಯೋಗ ಹಾಗೂ ಸರ್ಕಾರದ ಸೌಲಭ್ಯಗಳು ಇಲ್ಲದೆ ಜೀವನ ಸಾಗಿಸುತ್ತಾರೆ ಅದಕ್ಕಾಗಿ ಅಡವಿಗೊಲ್ಲ ಸಮುದಾಯದ ಜನರನ್ನು ತಮ್ಮ ಪೂರ್ವಜರಂತೆ ಕಾಡಿನಲ್ಲಿ ಅತಿ ಹೆಚ್ಚು ಕಾಲ ಕಳೆಯುತ್ತಿದ್ದು ಅದಕ್ಕಾಗಿ ಕಾಡುಗೊಲ್ಲ ಎಂದು ಕಾಲಂ ನಂಬರ್ 9ರಲ್ಲಿ ಇರುವಂತ ಸೇರ್ಪಡೆಯನ್ನು ಮಾಡಬೇಕು ಎಂದು ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು. ಇದಕ್ಕೆ ಕನಕಗಿರಿ ತಾಲೂಕಿನ (ಅಡವಿಗೊಲ್ಲ) ಕಾಡು ಗೊಲ್ಲ ಸಮಾಜದ ಜನರು ಹಾಗೂ ವಿವಿಧ ಗ್ರಾಮಗಳ ಸಮಾಜದವರು ಕೈಜೋಡಿಸಿ ಸಹಕರಿಸುತ್ತೇವೆ ಎಂಬುದನ್ನು ಚರ್ಚಿಸಲಾಯಿತು ಎಂದು ನಿರುಪಾದಿ ಗೊಲ್ಲರ್ ತಿಳಿಸಿದರು ಮತ್ತು ಇದಕ್ಕೆ ಎಲ್ಲರ ಒಪ್ಪಿಗೆೆಯೂ ಇದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ಪಾಲ್ಗೊಂಡಂತಹ ಕನಕಗಿರಿ ತಾಲೂಕ ಶ್ರೀ ಕೃಷ್ಣ ಕ್ಷೇಮಾಭಿವೃದ್ಧಿ ಸಂಘದ ತಾಲೂಕ್ ಅಧ್ಯಕ್ಷರಾದ ನಿರುಪಾದಿ ಗೊಲ್ಲರ್ ಗೌರವಾಧ್ಯಕ್ಷರಾದ ಕನಕದಾಸ ಪೂಜಾರಿ ಉಪಾಧ್ಯಕ್ಷರಾದ ಕೃಷ್ಣಮೂರ್ತಿ ದಾಸರ ಕಾರ್ಯದರ್ಶಿಗಳಾದ ಯಂಕಪ್ಪ ಸೂಜಿ ಛತ್ರಪ್ಪ ದಾಸರ್ ಹನುಮಂತ ಮಂದಲರ್ ರಮೇಶ್ ಗೊಲ್ಲರ್ ಮುದಿಯಪ್ಪ ದಾಸರ್ ಚೇತನ್ ಗೋಲ್ಲರ್ ತರುಣ್ ಕುಮಾರ್ ವಿನೋದ್ ಕೌಲಿ ಸಣ್ಣದುರ್ಗಪ್ಪ ದಾಸರ್ ಹಾಗೂ ತಾಲೂಕಿನ ಹಲವು ಗ್ರಾಮಗಳ ಅಧ್ಯಕ್ಷರು ಕಾರ್ಯಕರ್ತರು ಯುವಕರು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



