ಸುದ್ಧಿ

ಚರಿತ್ರೆಯನ್ನು ಅಳಿಸುತ್ತಿದ್ದಾರೆ – ಅಳಿಸಬೇಡಿ ಉಳಿಸಿಕೊಡಿ – ಹೆಚ್. ಎಂ. ಕೃಷ್ಣಮೂರ್ತಿ…. *ಶಾಸಕರ, ಅಧಿಕಾರಿಗಳ ದಬ್ಬಾಳಿಕೆ ಮಾಗಡಿ ಕೆಂಪೇಗೌಡ ಪ್ರತಿಮೆ ಸ್ಥಳಾಂತರ

ಚರಿತ್ರೆಯನ್ನು ಅಳಸುತ್ತಿದ್ದಾರೆ – ಆಲಿಸಬೇಡಿ ಉಳಿಸಿಕೊಡಿ – ಹೆಚ್. ಎಂ. ಕೃಷ್ಣಮೂರ್ತಿ *ಶಾಸಕರ, ಅಧಿಕಾರಿಗಳ ದಬ್ಬಾಳಿಕೆ ಮಾಗಡಿ ಕೆಂಪೇಗೌಡ ಪ್ರತಿಮೆ ಸ್ಥಳಾಂತರ, 400ಮರಗಳ ಮಾರಣಹೋಮ ಖಂಡಿಸಿ ಶ್ರೀ ಕೆಂಪೇಗೌಡ ಅಭಿವೃದ್ದಿ ಸಮಿತಿ ಹೋರಾಟ

ಬೆಂಗಳೂರು.ಚರಿತ್ರೆಯನ್ನು ಅಳಸುತ್ತಿದ್ದಾರೆ ಆಲಿಸಬೇಡಿ ಉಳಿಸಿಕೊಡಿ ಎಂದು ಹೆಚ್. ಎಂ. ಕೃಷ್ಣಮೂರ್ತಿ ಅವರು ಇಂದು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿ ಮಾಡಿದರು. ಮಾಗಡಿ ತಾಲೂಕು ಪುರಸಭೆ ಮುಂಭಾಗದಲ್ಲಿ ಇರುವ ಪೂಜ್ಯ ಕೆಂಪೇಗೌಡರ ಪ್ರತಿಮೆ ಉಳಿವಿಗಾಗಿ ಮತ್ತು ಪ್ರತಿಮೆ ಸುತ್ತ ಮುತ್ತಲು ಇರುವ 400ಕ್ಕೂ ಹೆಚ್ಚು ಮರಗಳ ಮರಣಹೋಮ ಮಾಡುಲು ಹೊರಟಿರುವ ಪುರಸಭೆ ಮತ್ತು ಸ್ಥಳೀಯ ಶಾಸಕರ ನಡವಳಿಕೆ ವಿರುದ್ದ ಶ್ರೀ ಕೆಂಪೇಗೌಡ ಅಭಿವೃದ್ದಿ ಸಮತಿ ವತಿಯಿಂದ ಅಧ್ಯಕ್ಷರಾದ ಡಾ||ಹೆಚ್.ಎಂ.ಕೃಷ್ಣಮೂರ್ತಿರವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡುತ್ತಾ ನಾಡು ಕಟ್ಟಿದ ಕೆಂಪೇಗೌಡರಿಗೆ ಅವರ ಪ್ರತಿಮೆ ಸ್ಥಳವಾಕಾಶ ಇಲ್ಲದಂತೆ ಆಗಿದೆ ಎಂಬುದು ಶೋಚನೀಯ ಸಂಗತಿ. ಕೆಂಪೇಗೌಡರು ಪ್ರತಿಮೆ ಕಳೆದ 22ವರ್ಷಗಳ ಹಿಂದೆ ಪುರಸಭೆ ಮುಂಭಾಗದಲ್ಲಿ ಪ್ರತಿಷ್ಠಾಪನೆ ಮಾಡಿ, ಪ್ರತಿವರ್ಷ ಕೆಂಪೇಗೌಡ ಜನ್ಮದಿನಾಚರಣೆ ಅದ್ದೂರಿಯಾಗಿ ಅಚರಿಸಿಕೊಂಡು ಬರಲಾಗುತ್ತಿದೆ ಎಂದು ಅಭಿವೃದ್ದಿಯ ಹೆಸರಿನಲ್ಲಿ ಪೂಜ್ಯ ಕೆಂಪೇಗೌಡರ ಪ್ರತಿಮೆ ಸ್ಥಳಾಂತರ ಮತ್ತು ಅದರ ಸುತ್ತಮುತ್ತಲ 400ಮರಗಿಡಗಳಗಳನ್ನು ಕಡಿಯಲಾಗುತ್ತಿದೆ.
ಮಾಗಡಿ ಕ್ಷೇತ್ರದಲ್ಲಿ ಸ್ಥಳೀಯ ಶಾಸಕರಾದ ಬಾಲಕೃಷ್ಣರವರು ದುರಾಡಳಿತ, ಬೆದರಿಕೆ ಒಡ್ಡುತ್ತಿದ್ದಾರೆ. ಪುರಸಭೆ ಅಧಿಕಾರಿಗಳು ಬೇಜವಾಬ್ದರಿ ಆಡಳಿತ ಮಾಗಡಿ ಕೆಂಪೇಗೌಡರರ ಕುರಿತು ಅಭಿಮಾನವಿಲ್ಲದ ಶೂನ್ಯರು ಇವರು ಎಂದು ದೂರಿದರು
ಕೋಟೆ ಕಂದಕ ಮುಚ್ಚುವ ಕಾರ್ಯ ಮಾಡುವ ಪ್ರಯತ್ನ ಮಾಡಿದರು ಇದೀಗ ಕೆಂಪೇಗೌಡರ ಪ್ರತಿಮೆ ತೆಗೆಯುವ ಪ್ರಯತ್ನ, 400ಮರಗಳ ತೆರವು ಕಾರ್ಯಕ್ಕೆ ತಡೆ ನೀಡಬೇಕು ಕೋರ್ಟ್ ನಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ತಿಳಿಸಿದರು .
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಜನರ ಕೆಂಪೇಗೌಡ ಪ್ರತಿಮೆ ಸ್ಥಳಾಂತರ ಮಾಡಬಾರದು ಹಾಗೂ ಮರಗಳನ್ನು ಉಳಿಸಬೇಕು ಎಂದು ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ಆಗ್ರಹಿಸಿದರು. ಡಾ||ಹೆಚ್.ಎಂ.ಕೃಷ್ಣಮೂರ್ತಿರವರು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು, ದಲಿತ ಸಮುದಾಯದ ಮುಖಂಡರಾದ ಜಯರಾಮಯ್ಯ, ಹಿರಿಯ ಪತ್ರಕರ್ತರಾದ ಕುಮಾರ್ ಮತ್ತು ಮಂಜುನಾಥ್ ರವರು ಭಾಗವಹಿಸಿದ್ದರು. ವರದಿ . ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button