ಸುದ್ಧಿ

ತಾಲೂಕಾದ್ಯಂತ ಮತ್ತು ಸರ್ಕಾರಿ ಕಚೇರಿಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂ ತಿ ಆಚರಣೆ

ತಾಲೂಕಾದ್ಯಂತ ಮತ್ತು ಸರ್ಕಾರಿ ಕಚೇರಿಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂ ತಿಆಚರಣೆ

ಕನಕಗಿರಿ ತಾಲೂಕಾದ್ಯಂತ ಮತ್ತು ಸರ್ಕಾರಿ ಕಚೇರಿಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಅವರ ಫೋಟೋವನ್ನು ಇಟ್ಟು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಹಿತು.

ಅದೇರೀತಿ ತಾಲೂಕ್ ಆಡಳಿತ ತಾಲೂಕ್ ಪಂಚಯತ್ ಪಟ್ಟಣ ಪಂಚಾಯತ ಪೊಲೀಸ್ ಠಾಣೆಯಲ್ಲಿ ಮತ್ತು ವಿವಿದ ಇಲಾಖೆಗಳಲ್ಲಿ ಮಾಡಿದರು.

ಇಂದು ತಾಲೂಕ್ ಆಡಳಿತ ಅಧಿಕಾರಿ ವಿಶ್ವನಾಥ್ ಮುರಡಿ ಅವರ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ಜನರನ್ನು ಮತ್ತು ಅನೇಕ ಸಮಾಜ ಜೊತೆ ಜಯಂತಿ ಆಚರಣೆ ಮಾಡಲಾಗುತ್ತದೆ.

ನಂತರ ತಾಲೂಕ್ ಆಡಳಿತ ಅಧಿಕಾರಿ ವಿಶ್ವನಾಥ್ ಮುರಡಿ ಮಾತಾಡಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಬಗ್ಗೆ ಸೂಕ್ತ ಮಾಹಿತಿ ನೀಡಿದರು.
ವಾಲ್ಮೀಕಿ ರಾಮಾಯಣ ಮಹಾಕಾವ್ಯದ ಋಷಿ ಮತ್ತು ಕರ್ತೃ, ಅವರು ಮೊದಲು ‘ರತ್ನಾಕರ’ ಎಂಬ ದರೋಡೆಕೋರರಾಗಿದ್ದರು, ನಂತರ ನಾರದರ ಉಪದೇಶದಿಂದ ರಾಮ ನಾಮ ಜಪಿಸಿ ಜ್ಞಾನೋದಯ ಪಡೆದು, ಹುತ್ತದೊಳಗೆ ತಪಸ್ಸು ಮಾಡಿ ವಾಲ್ಮೀಕಿಯಾದರು. ಅವರು ರಾಮಾಯಣವನ್ನು ಬರೆದು, ರಾಮನ ಪತ್ನಿ ಸೀತೆಗೆ ಆಶ್ರಯ ನೀಡಿ, ಅವಳಿ ಮಕ್ಕಳಾದ ಕುಶ ಮತ್ತು ಲವನಿಗೆ ರಾಮಾಯಣವನ್ನು ಕಲಿಸುವ ಮೂಲಕ ಪ್ರಮುಖ ಪಾತ್ರ ವಹಿಸುತ್ತಾರೆ. ರಾಮಾಯಣ ಬರೆದ ಕಾರಣ ಅವರನ್ನು ಆದಿಕವಿ (ಮೊದಲ ಕವಿ) ಮತ್ತು ಮಹರ್ಷಿ (ಮಹಾ ಋಷಿ) ಎಂದು ಗೌರವಿಸಲಾಗುತ್ತದೆ ಎಂದು ತಿಳಿಸಿದರು.

ನಂತರ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳು ಲಕ್ಷ್ಮಣ ಕಟ್ಟಿಮನಿ ಮಾತನಾಡಿದರು.
ರಾಮಾಯಣ ನಮಗೆ ಆದಿಕಾವ್ಯ. ಇಂದಿನ ಕವಿಗಳ ಕಾವ್ಯಗಳನ್ನು ಗಮನದಲ್ಲಿಟ್ಟುಕೊಂಡು ಅದಿಕಾವ್ಯವನ್ನು ಅರ್ಥಮಾಡಿಕೊಳ್ಳುವುದು ವಿಪರೀತ ಸಾಹಸವಾ-ಗುತ್ತದೆ. ಆದಿಕಾವ್ಯದ ಹುಟ್ಟಿಗೆ ಕಾರಣವಿದೆ. ಅದಕ್ಕೂ, ಅದರ ಕವಿ ವಾಲ್ಮೀಕಿಗಳಿಗೂ ನೇರವಾದ ನಂಟೂ ಇದೆ. ಈ ಕಾರಣದ ಮೂಲ ವೈಯಕ್ತಿಕ ಸ್ತರದ್ದಾದರೂ, ಅದರ ಗುರಿ ಮಾತ್ರ ವೈಶ್ಚಿಕ ಸ್ತರದ್ದು. ಇಂಥ ದಾರ್ಶನಿಕತೆಯ ನೆಲೆ ಇರುವುದರಿಂದಲೇ ವಾಲ್ಮೀಕಿ ಕೇವಲ ಕವಿ ಎನಿಸಿಕೊಳ್ಳಲಿಲ್ಲ. ಮಹರ್ಷಿಗಳೂ ಅದರು ಮತ್ತು ಅವರ ಕೃತಿ ಕೇವಲ ಕಾವ್ಯ ಎನಿಸಿಕೊ ಳ್ಳಲಿಲ್ಲ; ಆದಿಕಾವ್ಯ ಎನಿಸಿ, ಎನಿಸಿಕೊಂಡಿತು ಎಂದು ಹೇಳಿದರು.

ವಾಲ್ಮೀಕಿಯವರ ಜೀವನ:
ಆರಂಭಿಕ ಹೆಸರು: ಅವರ ಮೂಲ ಹೆಸರು ರತ್ನಾಕರ, ಮತ್ತು ಅವರ ತಂದೆ ಭಗವಾನ್ ಬ್ರಹ್ಮದ ಮಾನಸ ಪುತ್ರ ಪ್ರಚೇತಾ ಆಗಿದ್ದರು.
ದರೋಡೆಕೋರನಿಂದ ಋಷಿಯಾಗಿ: ವಾಲ್ಮೀಕಿಯು ತನ್ನ ಆರಂಭಿಕ ಜೀವನದಲ್ಲಿ ದರೋಡೆಕೋರನಾಗಿದ್ದನು. ಒಮ್ಮೆ ನಾರದ ಮುನಿಗಳ ಮಾರ್ಗದರ್ಶನದಿಂದ ರಾಮ ನಾಮ ಜಪಿಸಿ ತಪಸ್ಸು ಮಾಡಿದರು.
ವಾಲ್ಮೀಕಿಯಾಗಿ: ಒಂದು ಸ್ಥಳದಲ್ಲಿ ಕುಳಿತು ವರ್ಷಗಟ್ಟಲೆ ತಪಸ್ಸು ಮಾಡಿದಾಗ, ಅವರ ಸುತ್ತಲೂ ಗೆದ್ದಲು ಹುಳುಗಳು ಹುತ್ತ ಕಟ್ಟಿದವು. ಈ ಹುತ್ತದೊಳಗೆ ಇದ್ದು ಜ್ಞಾನೋದಯ ಪಡೆದ ಕಾರಣ ಅವರಿಗೆ ‘ವಾಲ್ಮೀಕಿ’ ಎಂಬ ಹೆಸರಾಯಿತು.
ರಾಮಾಯಣದಲ್ಲಿ ಪಾತ್ರ:
ಸೀತೆಗೆ ಆಶ್ರಯ: ರಾಮಾಯಣದಲ್ಲಿ, ವಾಲ್ಮೀಕಿ ಸೀತೆಗೆ ತನ್ನ ಆಶ್ರಮದಲ್ಲಿ ಆಶ್ರಯ ನೀಡುತ್ತಾರೆ.
ಕುಶ-ಲವರಿಗೆ ಶಿಕ್ಷಣ: ರಾಮ ಮತ್ತು ಸೀತೆಯ ಅವಳಿ ಮಕ್ಕಳಾದ ಕುಶ ಮತ್ತು ಲವನಿಗೆ ರಾಮಾಯಣವನ್ನು ಕಲಿಸಿ, ಸಾಹಿತ್ಯ, ಸಂಗೀತ ಮತ್ತು ಬಿಲ್ವಿದ್ಯೆಯನ್ನು ಕಲಿಸುತ್ತಾರೆ.
ಗೌರವ ಮತ್ತು ಇತಿಹಾಸ:
ಆದಿಕವಿ: ರಾಮಾಯಣದಂತಹ ಮಹಾಕಾವ್ಯವನ್ನು ರಚಿಸಿದ ಮೊದಲ ಕವಿ ಎಂದು ಅವರನ್ನು ಆದಿಕವಿ ಎಂದು ಕರೆಯಲಾಗುತ್ತದೆ.
ವಾಲ್ಮೀಕಿ ಜಯಂತಿ: ವಾಲ್ಮೀಕಿಯವರ ಜನ್ಮದಿನವನ್ನು “ವಾಲ್ಮೀಕಿ ಜಯಂತಿ” ಎಂದು ಅಶ್ವಿನಿ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button