ಬೆಂಗಳೂರುನಗರ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ದೀಪಾವಳಿ ಸಂಭ್ರಮಾಚರಣೆ

ಬೆಂಗಳೂರುನಗರ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ದೀಪಾವಳಿ ಸಂಭ್ರಮಾಚರಣೆ
ಬೆಂಗಳೂರುನಗರ ಐದು ಪಾಲಿಕೆ ಬಿಜೆಪಿ ಮೇಯರ್ ಗಳು ಆಯ್ಕೆ ಖಚಿತ ಎಸ್.ಹರೀಶ್ ಭವಿಷ್ಯ
ಬೆಂಗಳೂರು: ಬಿಜೆಪಿ ನಗರ ಜಿಲ್ಲಾ ಕಛೇರಿಯಲ್ಲಿ ದೀಪಾವಳಿ ಹಬ್ಬದ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ತಾಯಿ ಹೆಸರಿನಲ್ಲಿ ಸಸಿ ನೆಡಲು ಸಸಿ ವಿತರಣಾ ಕಾರ್ಯಕ್ರಮ.
ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರು, ಮಾಜಿ ಉಪಮುಖ್ಯಮಂತ್ರಿ, ಶಾಸಕರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಶಾಸಕರಾದ ಸಿ.ಕೆ.ರಾಮಮೂರ್ತಿ, ಮಾಜಿ ಶಾಸಕಗಳಾದ ನೆ.ಲ.ನರೇಂದ್ರಬಾಬು, ಅಖಂಡ ಶ್ರೀನಿವಾಸಮೂರ್ತಿ, ವಿಧಾನಪರಿಷತ್ ಸದಸ್ಯ ಕೇಶವಪ್ರಸಾದ್ ಮತ್ತು ಉತ್ತರ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಹರೀಶ್ ರವರು, ಕೇಂದ್ರ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ, ಮಾಜಿ ಮಹಾಪೌರರಾದ ಗೌತಮ್ ಕುಮಾರ್ ರವರು ಕಛೇರಿ ಪೂಜೆ ನೇರವೆರಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಸ್.ಹರೀಶ್ ರವರು ಮಾತನಾಡಿ ಪ್ರಧಾನಿ ನರೇಂದ್ರಮೋದಿರವರು ಆಶಯಂದಂತೆ ತಾಯಿ ಹೆಸರಿನಲ್ಲಿ ಒಂದು ನೆಟ್ಟು ಷೋಷಣೆ ಮಾಡುವುದು ಪರಿಸರ ರಕ್ಷಣೆ ಜೊತೆಯಲ್ಲಿ ತಾಯಿ ಹೆಸರು ಜೀವಂತವಾಗಿ ಇರಲಿದೆ.
ಅದ್ದರಿಂದ ದೀಪಾವಳಿ ಹಬ್ಬದ ಪ್ರಯುಕ್ತ ಬಿಜೆಪಿ ಪ್ರಮುಖರು, ಕಾರ್ಯಕರ್ತರಿಗೆ ಸಸಿಗಳನ್ನು ವಿತರಿಸಲಾಗುತ್ತಿದೆ.
ರಾಜ್ಯದಲ್ಲಿ ಜನವಿರೋಧಿ, ಸಂವಿಧಾನ ವಿರೋಧಿ ಕಾಂಗ್ರೆಸ್ ಪಕ್ಷ ಆಡಳಿತದಿಂದ ರಾಜ್ಯದ ಜನರು ರೋಸಿಹೋಗಿದ್ದಾರೆ.
ಗಾರ್ಡನ್ ಸಿಟಿ, ಐಟಿ ಬಿಟಿ ಸಿಟಿ ಬೆಂಗಳೂರು ಇಂದು ಗುಂಡಿಗಳ ನಗರವಾಗಿದೆ. ಗುಂಡಿ ಮುಚ್ಚಿ ಎಂದು ಹೇಳಿದರೆ ಉಡಾಪೆ ಉತ್ತರ ನೀಡುವ ಕಾಂಗ್ರೆಸ್ ಲೀಡರ್ ಗಳು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ.
ಕಾಂಗ್ರೆಸ್ ಪಕ್ಷ ದುರಾಡಳಿತಕ್ಕೆ ಜನರು ತಕ್ಕ ಪಾಠ ಕಲಿಸಲು ಜನರು ಕಾಯುತ್ತಿದ್ದಾರೆ. ಬೆಂಗಳೂರು ಪಂಚ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯುವುದು ಖಚಿತ ಐದು ಮೇಯರ್ ಗಳು ಬಿಜೆಪಿ ಪಕ್ಷದವರು ಆಯ್ಕೆಯಾಗಲಿದ್ದಾರೆ ಎಂದು ಹೇಳಿದರು.





