ಸುಂದರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು, ಮನಸ್ಸು ಪರಿಶುದ್ಧವಾಗಿರಬೇಕು. ಶ್ರೀಯುತ ರಾಬರ್ಟ್ ದದ್ದಾಪುರಿ ಪ್ರಧಾನ ಕಾರ್ಯದರ್ಶಿಗಳು ಕೆಪಿಸಿಸಿ.

ಸಹೃದಯರೇ, ಸುಂದರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು, ಮನಸ್ಸು ಪರಿಶುದ್ಧವಾಗಿರಬೇಕು ಮತ್ತು ಆತ್ಮವಿಶ್ವಾಸ ತಲಸ್ಪರ್ಶಿಯಾಗಿ ಬಲವಾಗಿರಬೇಕು. ನಾವು ಆಡುವ ಮಾತಿನಲ್ಲಿ ಹಿಡಿತ ಇರಬೇಕು. ‘ ಮನುಷ್ಯರ ‘ ಸಂಗ ಮಾಡಬೇಕು ಮುಖ್ಯವಾಗಿ ನಾವು ಮೊದಲು ಮನುಷ್ಯರಾಗಬೇಕು, ಬಂಧುಗಳೇ. ನಂಬಿಕೆ ಎಂಬುದನ್ನು ಉಳಿಸಿಕೊಳ್ಳಬೇಕು ತಾಳ್ಮೆಯಿಂದ ವರ್ತಿಸಬೇಕು ಬೇರೆಯವರ ಬಗ್ಗೆ ತಾತ್ಸಾರ ಭಾವ ತೋರಬಾರದು ಎಲ್ಲರನ್ನು ಅರ್ಥೈಸಿಕೊಳ್ಳುವ ಮನೋಭಾವ ಇರಬೇಕು. ಇದರಿಂದ ಸುಂದರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಮತ್ತು ಸಮಾಜಕ್ಕೂ ನಾವು ಕೊಡುಗೆಗಳನ್ನು ಕೊಡಬಹುದು, ಹಣ ಅಂತಸ್ತಿಗೆ ಬೆಲೆ ಕೊಡದೆ, ಮಾನವೀಯತೆಗೇ ಬೆಲೆ ಕೊಡವಂತರಾಗೋಣ. ಪ್ರಪಂಚದಲ್ಲಿಯೇ ಅತಿ ದೊಡ್ಡದಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ನಮಗೆ ” ನಮ್ಮ ಸಂವಿಧಾನವೇ” ಆತ್ಮಸಾಕ್ಷಿ ಯಾಗಬೇಕು. ನಮ್ಮ ಸಂವಿಧಾನದ ಪೀಠಿಕೆಯನ್ನು ನಿತ್ಯ ನಾವು ನಮ್ಮ ಪ್ರಾರ್ಥನೆಯಲ್ಲಿ ಅಳವಡಿಸಿಕೊಂಡರೆ ಸಾಕು ನಮ್ಮ ದೇಶ, ನಾಡು ಹಾಗೂ ವ್ಯವಸ್ತೆ ಸುಭದ್ರ ಸುಭಿಕ್ಷ ಸುಸಲಿತ ಆಡಳಿತವನ್ನು ಹೊಂದುತ್ತದೆ. ಜೈ ಭಾರತ ಮಾತಾ ಎನ್ನಲು ಅರ್ಹರಾಗುತ್ತೇವೆ. ** ಶ್ರೀಯುತ ರಾಬರ್ಟ್ ದದ್ದಾಪುರಿ ಪ್ರಧಾನ ಕಾರ್ಯದರ್ಶಿಗಳು ಕೆಪಿಸಿಸಿ & ಸಿಂಡಿಕೇಟ್ ಸದಸ್ಯರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ.



