ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ.ಅರಗಿನಮರ ಕ್ಯಾಂಪ್.ಸಿಂಧನೂರು ತಾಲೂಕ.

ದಿನಾಂಕ 29/12/2025 ರಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪ್ ನ ಜ್ಞಾನಜೋತಿ ಪಬ್ಲಿಕ್ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಗ್ಯಾನಪ್ಪ ಕನ್ನಾಪುರ ಹಟ್ಟಿ ರವರು ಹಸಿರು ಶಾಲು ಹಾಕಿಕೊಂಡು ವೇದಿಕೆ ಅಲಂಕರಿಸಿದ್ದು ವಿಶೇಷವಾಗಿತ್ತು ಹಾಗೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ರೈತರ ಮತ್ತು ರೈತ ಮಹಿಳೆಯರ ಉಡುಗೆ ತೊಡುಗೆಗಳನ್ನು ತೊಟ್ಟು ಹಸಿರು ಶಾಲು ಧರಸಿ ರೈತರ ತರಕಾರಿ ಮಾರುಕಟ್ಟೆ ಮತ್ತು ದವಸ ಧಾನ್ಯಗಳ ಮಾರುಕಟ್ಟೆ ಸಜ್ಜೆ ರೊಟ್ಟಿ ಕಾಳು ಪಲ್ಯ ಚಟ್ನಿ ಸೇರಿದಂತೆ ಹಲವಾರು ಪದಾರ್ಥಗಳ ಪ್ರದರ್ಶನದ ಜೊತೆಗೆ ರೈತ ಗೀತೆ ಹಾಡುವ ಮೂಲಕ ಧಾನ್ಯಗಳಿಗೆ ಪೂಜೆ ಮಾಡಿ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಪಬ್ಲಿಕ್ ಶಾಲೆಯ ಮುದ್ದು ಮಕ್ಕಳು ಹಾಗೂ ಗುರುರುಂದ ದವರು ರೈತರ ಕಷ್ಟಗಳ ಕುರಿತು ಬಹಳ ಅಚ್ಚುಕಟ್ಟಾಗಿ ವಿವರಿಸಿದರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳನ್ನಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳಿಂದ ಮಕ್ಕಳಿಗೆ ರೈತರ ಕುರಿತು ಮಾರ್ಗದರ್ಶನ ನೀಡಲು ಹವಾನಿಸಿದ್ದು.ವಿಶೇಷವಾಗಿ ಕಾರ್ಯಕ್ರಮದಲ್ಲಿ ಮಕ್ಕಳು ಶಾಂತ ರೀತಿಯಾಗಿ ಕುಳಿತು ಆಲಿಸಿದ್ದು ನಮಗೆ ತುಂಬಾ ಸಂತೋಷವಾಯಿತು ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಗ್ಯಾನಪ್ಪ ಕನ್ನಾಪುರ ಹಟ್ಟಿ,
ಡಾಕ್ಟರ್ ಎಂ ಎಸ್ ಸ್ವಾಮಿನಾಥನ್ ಆಯೋಗದ ವರದಿ ಜಾರಿ ಹೋರಾಟ ಸಮಿತಿ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಶರಣಪ್ಪ ಮರಳಿ ಸುಲ್ತಾನಪುರ.
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಗೋಡಿಹಾಳ,
ಜಿಲ್ಲಾಧ್ಯಕ್ಷರಾದ ರಾಮಯ್ಯ ಜವಳಗೇರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು



