ಪತ್ರಿಕೋದ್ಯಮ

ಕೆಂಬತ್ತಹಳ್ಳಿಯಲ್ಲಿ 8 ಎಕರೆ ಜಾಗ ಆಶ್ರಯ ಅರ್ಹ ಫಲಾನುಭವಿಗಳಿಗೆ ಕೊಡಿ, ಭೂಮಾಫಿಯದವರ ವಿರುದ್ದ ಕ್ರಮ ಕೈಗೊಳ್ಳಿ

ಕೆಂಬತ್ತಹಳ್ಳಿಯಲ್ಲಿ 8 ಎಕರೆ ಜಾಗ ಆಶ್ರಯ ಅರ್ಹ ಫಲಾನುಭವಿಗಳಿಗೆ ಕೊಡಿ, ಭೂಮಾಫಿಯದವರ ವಿರುದ್ದ ಕ್ರಮ ಕೈಗೊಳ್ಳಿ

ಬೆಂಗಳೂರು ದಕ್ಷಿಣ ತಾಲ್ಲೂಕುನಲ್ಲಿ ಆಶ್ರಯ ಯೋಜನೆಗಾಗಿ ಕೆಂಬತ್ತಹಳ್ಳಿ ಗ್ರಾಮದ ಸರ್ವೆ ನಂಬರ್ 55ರಲ್ಲಿ 8ಎಕರೆ 10ಗುಂಟೆ ಜಾಗವನ್ನು ಕಡುಬಡವರು, ದಲಿತರು, ಅಲ್ಪಸಂಖ್ಯಾತ ವರ್ಗದವರಿಗೆ ಕೊಡಬೇಕು ಎಂದು ನಿರ್ಣಯಿಸಲಾಗಿತ್ತು ಅದರೆ ಭೂಕಬಳಿಕೆದಾದರು, ಕೆಲವು ಸಂಘಟನೆಯವರು ಹಣ ವಸೂಲಿ ಮಾಡಿ ಅನ್ಯರಿಗೆ ಸೈಟು ವಿತರಿಸುತ್ತಿದ್ದಾರೆ ಇದನ್ನ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ದಲಿತರ ಪರ ಸಂಘಟನೆಗಳಿಂದ ಮಾಧ್ಯಮಗೋಷ್ಟಿ.

ಅಂಬೇಡ್ಕರ್ ಸ್ವಾಭಿಮಾನಿ ಸೇನೆ ರಾಜ್ಯಾಧ್ಯಕ್ಷರಾದ ಕೋದಂಡರಾಮ್ ,ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕರಾದ ಎಂ.ಗೋವಿಂದರಾಜು, ಪ್ರಜಾ ವಿಮೋಚನಾ ಚಳುವಳಿ ರಾಜ್ಯ ಗೌರವಾಧ್ಯಕ್ಷರಾದ ಭವಾನಿ ಪ್ರಸಾದ್, ದಲಿತ ಸಮುದಾಯದ ಮುಖಂಡರು, ಪದಾಧಿಕಾರಿಗಳು ಭಾಗವಹಿಸಿದ್ದರು.

ಕೆಂಬತ್ತಹಳ್ಳಿಯಲ್ಲಿ ಆಶ್ರಯ ಯೋಜನೆಯ ಅಜಿಯಲ್ಲಿ 8ಎಕರೆ 10ಗುಂಟೆ ಜಾಗ ಮೀಸಲು ಇಡಲಾಗಿದೆ. ವಿವಿಧ ದಲಿತ ಪರ ಸಂಘಟನೆಗಳು ಅರ್ಹ ಫಲಾನುಭವಿಗಳು, ಸ್ಥಳೀಯರಿಗೆ ಮಂಜೂರು ಮಾಡಬೇಕು ಎಂಬ ವಿನಂತಿ ಮಾಡಿದರು.

ಅಧಿಕಾರಿ ಮತ್ತು ಪಟಭದ್ರ ಹಿತಾಸಕ್ತಿಗಳ ಜೊತೆಯಲ್ಲಿ ಕೈಜೋಡಿಸಿದ ಸಾರ್ವಜನಿಕರಿಂದ ಸೈಟು ಕೊಡುತ್ತೇನೆ ಎಂದು ಹಣ ವಸೂಲಿ ಮಾಡಿ ವಿತರಣೆ ಮಾಡುತ್ತಿದ್ದಾರೆ.

ಜಿಬಿಎ ವ್ಯಾಪ್ತಿಗೆ ಬರುವ ಕೆಂಬತ್ತಹಳ್ಳಿ ಜಾಗವನ್ನು ಪಾಲಿಕೆ ಅಭಿವೃದ್ದಿ ಪಡಿಸಿ ಫಲಾನುಭವಿಗಳಿಗೆ ಹಂಚಬೇಕು ಅದರೆ ಇಲ್ಲಿ ಖಾಸಗಿಯವರು ಜಾಗವನ್ನು ಅಭಿವೃದ್ದಿ ಮಾಡುತ್ತೇವೆ, ಸೈಟು ನಿಮಗೆ ನೀಡುತ್ತೇವೆ ಎಂದು ಹೇಳಿ ಈಗಾಗಲೇ ಹಲವಾರು ಜನರಿಗೆ ವಿತರಿಸಿದ್ದಾರೆ ಬಾಗೂ ಸರ್ಕಾರ 3 ಎಕರೆ ಜಾಗವನ್ನು ಕಬಳಿಕೆ ಸಹ ಮಾಡಿದ್ದಾರೆ.

8 ಎಕರೆ ಜಾಗ ಸರಿಸಮಾರು 100ಕೋಟಿ ಬೆಲೆ ಬಾಳುತ್ತದೆ. ಬಡವರು, ದಲಿತರಿಗೆ ಸೇರಬೇಕಾದ ಜಾಗ ಉಳ್ಳವರ ಪಾಲು ಆಗುತ್ತಿದೆ.

ಕೆಂಬತ್ತಹಳ್ಳಿ ಸ್ಥಳೀಯ ಜನರಿಗೆ ಆಶ್ರಯ ಯೋಜನೆಯ ಅಡಿಯಲ್ಲಿ ಸೈಟು ವಿತರಿಸಬೇಕು, ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು. ಭೂಕಬಳಿಕೆ ಮಾಡುತ್ತಿರುವ ವ್ಯಕ್ತಿಗಳನ್ನು ಬಂಧಿಸಬೇಕು ಇಲ್ಲದೇ ಹೋದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು. ವರದಿ. ಮಂಜುಳಾ ರೆಡ್ಡಿ

Related Articles

Leave a Reply

Your email address will not be published. Required fields are marked *

Back to top button