ಸುದ್ಧಿ

ನ್ಯಾನೋ ಪಂಚಗವ್ಯ ನೀರು ಕುಡಿದರೆ ಕ್ಯಾನ್ಸ‌ರ್ ರೋಗ ನಿಯಂತ್ರಣ-ಕಿರಣ್ ಕುಮಾರ್,

ನ್ಯಾನೋ ಪಂಚಗವ್ಯ ನೀರು ಕುಡಿದರೆ ಕ್ಯಾನ್ಸ‌ರ್ ರೋಗ ನಿಯಂತ್ರಣ-ಕಿರಣ್ ಕುಮಾರ್,

ಬೆಂಗಳೂರು ಜನವರಿ 7; ನ್ಯಾನೋ ಪಂಚಗವ್ಯ ನೀರು ಕುಡಿದರೆ ಕ್ಯಾನ್ಸ‌ರ್ ರೋಗ ನಿಯಂತ್ರಣ ವಾಗುವುದು ಕಂಡುಬಂದಿದೆ ಎಂದು ಕಿರಣ್ ಕುಮಾರ್ ಅವರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು . ಕ್ಯಾನ್ಸರ್ ಇಂದು ಭಾರತದಲ್ಲಿ ಅತ್ಯಂತ ಗಂಭೀರ ಆರೋಗ್ಯ ಸಮಸ್ಯೆಗಳಲ್ಲೊಂದಾಗಿದ್ದು ಇದರ ನಿವಾರಣೆಗೆ
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ರಾಷ್ಟ್ರೀಯ ಕ್ಯಾನ್ಸರ್ ರಿಜಿಸ್ಟಿ ಕಾರ್ಯಕ್ರಮ ನೀಡಿರುವ ಅಂದಾಜುಗಳ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 14 ಲಕ್ಷಕ್ಕಿಂತ ಹೆಚ್ಚು ಜನರಿಗೆ ಕ್ಯಾನ್ಸ‌ರ್ ಪತ್ತೆಯಾಗುತ್ತದೆ,ಈ ಹಿನ್ನಲೆಯಲ್ಲಿ ಗೋಶಾಲಾ ಆಧಾರಿತ ಪಂಚಗವ್ಯ ವಿಜ್ಞಾನದಲ್ಲಿ ಬೇರು ಬಿಟ್ಟಿರುವ ಸಂಶೋಧನಾ ಯೋಜನೆ ಮೂಲಕ ಜೀವಾ ಬೈಯೋಟೆಕ್, ನ್ಯಾನೋ ತಂತ್ರಜ್ಞಾನ ಆಧಾರಿತ ಖನಿಜಸಮೃದ ಕ್ಷಾರೀಯ ನೀರಿನ ಕುರಿತು ವೈಜ್ಞಾನಿಕ ಪ್ರಯೋಗಾಲಯ ಅಧ್ಯಯನ ಫಲಿತಾಂಶ ಪ್ರಕಟಿಸಿದೆ.
ವೃಂದಾವನ ಆಯುರ್ವೇದ ಸಂಸ್ಥಾಪಕ ಕಿರಣ್ ಕುಮಾರ್, ನ್ಯಾನೋ ನೀರನ್ನು ಹಿರಿಯ ಆಯುರ್ವೇದ ತಜ್ಞರ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಲಾಗಿದೆ, ವೈದ್ಯಡಾ. ರೇವತಿ ಪಾಂಡುರಂಗ,25 ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿರುವ
ಡಾ. ಡಿ.ಪಿ. ರಮೇಶ್ ಇಬ್ಬರ ಮಾರ್ಗದರ್ಶನದಲ್ಲಿ ವೃಂದಾವನ ಗೋಶಾಲೆ ಮತ್ತು ಜೀವಾ ಬಯೋಟೆಕ್ ಸಂಸ್ಥೆಗಳು ಸೇರಿ 15 ವರ್ಷಕ್ಕೂ ಹೆಚ್ಚು ಕಾಲ ಸಂಶೋಧನೆ ನಡೆಸಿ, ಪಂಚಗವ್ಯ ತತ್ವಗಳು, ಆಯುರ್ವೇದೀಯ ಔಷಧಿ ಸಸ್ಯಗಳು ಮತ್ತು ಆಧುನಿಕ ನ್ಯಾನೋ ಸಂಸ್ಕರಣಾ ತಂತ್ರಜ್ಞಾನವನ್ನು ಒಟ್ಟುಗೂಡಿಸಿ
ನ್ಯಾನೋ ಪಂಚಗವ್ಯ ನೀರು ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದರು.
ನ್ಯಾನೋ ನೀರಿನಲ್ಲಿ 20ಕ್ಕಿಂತ ಹೆಚ್ಚು ನೈಸರ್ಗಿಕ ಖನಿಜಗಳು ಸೇರಿದ್ದು. ಅವುಗಳೆಲ್ಲವೂ ಸ್ವತಂತ್ರ ಪ್ರಯೋಗಾಲಯ ಪರೀಕ್ಷೆಗಳಿಂದ ದೃಢೀಕರಿಸಲಾಗಿದೆ. ಈ ಖನಿಜಗಳ ಕಾರಣದಿಂದ ನೀರು ಸ್ವಾಭಾವಿಕವಾಗಿ ಕ್ಷಾರೀಯ ಆಗಿರುತ್ತದೆ, ಬಣ್ಣ, ರುಚಿ ಅಥವಾ ವಾಸನೆಗೆ ಯಾವುದೇ ಬದಲಾವಣೆ ಇರುವುದಿಲ್ಲ ಇದರ ನೀರಿನ ವಿಶೇಷತೆಯಾಗಿದೆ ಎಂದರು.
ಈ ನ್ಯಾನೋ ನೀರು ಖನಿಜ ಸಮತೋಲನವನ್ನು ಪುನಃ ಸ್ಥಾಪಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದು ರೋಗ ನಿರೋಧಕ ಶಕ್ತಿ. ಕೋಶ ಮಟ್ಟದ ಆರೋಗ್ಯ ಮತ್ತು ದೇಹದ ಚೇತರಿಕೆಗೆ ಬೆಂಬಲ ನೀಡಬಹುದು ಎಂದು ವೈದ್ಯರು ಹೇಳಿದರು. ಪತ್ರಿಕಾಗೋಷ್ಟಿ ಯಲ್ಲಿ ವೈದ್ಯಡಾ. ರೇವತಿ ಪಾಂಡುರಂಗ,
ಡಾ. ಡಿ.ಪಿ. ರಮೇಶ್ ಉಪಸ್ಥಿತರಿದ್ದರು . ವರದಿ. ಮಂಜುಳಾ ರೆಡ್ಡಿ

Related Articles

Leave a Reply

Your email address will not be published. Required fields are marked *

Back to top button