1 ರಂದು ಶುಕ್ರವಾರ 2026 ನೇ ಕಾರ್ಮಿಕ ದಿನಾಚರಣೆ – ಎನ್.ಎಲ್.ರಾಮ್ ಪ್ರಸಾದ್ ಗೌಡ.

1 ರಂದು ಶುಕ್ರವಾರ 2026 ನೇ ಕಾರ್ಮಿಕ ದಿನಾಚರಣೆ – ಎನ್.ಎಲ್.ರಾಮ್ ಪ್ರಸಾದ್ ಗೌಡ
ಬೆಂಗಳೂರು. ರಂದು ಶುಕ್ರವಾರ 2026 ನೇ ಕಾರ್ಮಿಕ ದಿನಾಚರಣೆ ಎಂದು ಎನ್.ಎಲ್.ರಾಮ್ ಪ್ರಸಾದ್ ಗೌಡ ಅವರು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು . ಯುವ ಕನ್ನಡಿಗರ ಸೇನೆ ವತಿಯಿಂದ ದಿನಾಂಕ ಮೇ 1 ರಂದು ಶುಕ್ರವಾರ 2026 ನೇ ಕಾರ್ಮಿಕ ದಿನಾಚರಣೆ ಪ್ರಯುಕ್ತ ಕಾರ್ಮಿಕರಿಗಾಗಿ ಬೃಹತ್ ಕಾರ್ಮಿಕರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಸುಮಾರು 5000 ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ.
ಈ ಸಮಾವೇಶ ಅಂಗವಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು, ಪ್ರಕ್ರಿಯಾ ಆಸ್ಪತ್ರೆಯ ವತಿಯಿಂದ ಆಯೋಜಿಸಲಾಗಿದೆ ಜೊತೆಗೆ ಕಾರ್ಮಿಕರಿಗೆ ಆರೋಗ್ಯ ವಿಮೆ ವಿತರಣೆ, ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ.ಇ-ಶ್ರಮ ಕಾರ್ಡ ನೋಂದಣಿ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಸಮಾವೇಶದಲ್ಲಿ ಪರಮ ಪೂಜ್ಯ ಶ್ರೀಶ್ರೀಶ್ರೀ ನಿರ್ಮಲಾನಂದ ಮಹಾಸ್ವಾಮೀಜಿಗಳ ದಿವ್ಯ ಸಾನ್ನಿಧ್ಯವನ್ನು ವಹಿಸಲಿದ್ದು. ಉದ್ಘಾಟನೆಯನ್ನು ಜನಪ್ರಿಯ ಶಾಸಕರಾದ ಎಸ್.ಪಿ. ಸೋಮಶೇಖರ್ ರವರು ನೆರವೇರಿಸಲಿದ್ದಾರೆ ಎಂದರು . ಘನ ಉಪಸ್ಥಿತಿಯನ್ನು ಶ್ರೀಮತಿ ಶೋಭಾ ಕರಂದ್ಲಾಜೆ ರವರು ಉಪಸ್ಥಿತರಿರಲಿದ್ದಾರೆ.ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಶೀಲತೆಯ ರಾಜ್ಯ ಸಚಿವರು ಮತ್ತು ಸಂತೋಷ ಲಾರ್ಡ್ರವರು, ರಾಜ್ಯ ಕಾರ್ಮಿಕ ಸಚಿವರು ವಹಿಸಲಿದ್ದು, ಮತ್ತು ಮುಖ್ಯ ಅತಿಥಿಗಳಾಗಿ ನಾಗಲಕ್ಷ್ಮೀ ಚೌದ್ರಿ ರವರು ಅಧ್ಯಕ್ಷರು ಮಹಿಳಾ ಅಯೋಗ, ವಿಧಾನ ಪರಿಷತ್ ಸದಸ್ಯರಾದ ಜವರಾಯಗೌಡರವರು, ವಿಶ್ವಕರ್ಮ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಜ್ಞಾನ ಮೂರ್ತಿರವರು. ಸ್ಥಳೀಯ ಮುಂಖಡರಾದ ಪೀಣ್ಯ ಅಸೋಸಿಯೆಷನ್ ಅಧ್ಯಕ್ಷರಾದ ದಾನಪ್ಪರವರು. ಯುವ ಎಂ.ಜಗದೀಶ ಗೌಡರವರು ಸ್ಥಳೀಯ ಕನ್ನಡಿಗರ ಸೇನೆಯ ಗೌರವ ಅಧ್ಯಕ್ಷರಾದ ಮುಂಖಡರುಗಳಾದ ಭಾನು ರಂಗಸ್ವಾಮಿಯವರು, ಸತೀಶ್ ಗೌಡರವರು. ಮತ್ತು ಡಿ.ಸಿ. ಗಂಗಾಧರ್ ಗೌಡರವರು, ಲತಾಸೋಮಶೇಖರ್ ರವರು ಭಾಗವಹಿಸಲಿದ್ದು,
ಕಾರ್ಮಿಕ ರತ್ನ ಪ್ರಶಸ್ತಿಯನ್ನು ಪಡೆದಂತಹ ನಾಲ್ಕು ಮಹಾನೀಯರಿಗೆ ನೀಡಿದ್ದು ಆ ಸಾಲಿನಲ್ಲಿ ಅಭಾಯ ಗೋಲ್ಡ್ ಮಾಲೀಕರಾದ ಸತೀಶ್ ಗೌಡರವರು, ಸ್ಕಾಟ್ ಬಿಗ್ ಕಂಪನಿ ಮಾಲೀಕರಾದ , ದೀಪು ಗೌಡರವರು, ಉದ್ಯಮಿಗಳಾದ ವೆಂಕಟೇಶ ಗೌಡರವರು. ಸಮಾಜ ಸೇವಕರಾದ ಸುಬ್ಬಣ್ಣ ನವರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.
ಎನ್.ಎಲ್.ರಾಮ್ ಪ್ರಸಾದ್ ಗೌಡ ರಾಜ್ಯಾಧ್ಯಕ್ಷರು. ವರದಿ. ಮಂಜುಳಾ ರೆಡ್ಡಿ.



