ಸಿಂಧನೂರು ನಗರದ ಶ್ರೀ ಆರಾಧ್ಯ ದೈವ ಆದಶೇಷನ ದೇವಸ್ಥಾನದಲ್ಲಿ ಪೂಜೆ ಮತ್ತು ಮಂಗಳಾರತಿ ಆರಾಧನೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ
ಇಂದು ಬೆಳಗ್ಗೆ 10 ಗಂಟೆಗೆ ಸಿಂಧನೂರು ನಗರದ ಶ್ರೀ ಆರಾಧ್ಯ ದೈವ ಆದಶೇಷನ ದೇವಸ್ಥಾನದಲ್ಲಿ ಪೂಜೆ ಮತ್ತು ಮಂಗಳಾರತಿ ಆರಾಧನೆ ಮಾಡುವುದರ ಮೂಲಕ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು 10 ಜೂನ್ 2026ರಂದು ಭಾರತದ ಅತಿ ಹೆಚ್ಚು ದಿನಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿ ಎಂಬ ದಾಖಲೆ ಬರೆದರು.
4399 ದಿನಗಳು 26 ಮೇ 2014ರಂದು ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಮೋದಿಜಿ 10 ಜೂನ್ 2026 ರಂದು 4399 ನಿರಂತರ ದಿನಗಳನ್ನು ಪೂರೈಸಿ. ಜವರಲಾಲ್ ನೆಹರು ಅವರ 4398 ದಿನಗಳ ಅವಧಿಯ ದಾಖಲೆಯನ್ನು ಮೀರಿಸಿರುವುದು,
12 ವರ್ಷಗಳ ಸೇವೆ. ಇದು 2014 ರಿಂದ 2026ರ ವರೆಗಿನ ಸತತ ಮೂರು ಅವಧಿಗಳ ಆಡಳಿತ ನಡೆಸಿರುವಂಥದ್ದು.
ಮುಖ್ಯವಾಗಿ ಸೇವಾ ಕಾರ್ಯಕ್ರಮಗಳು.
ಜನಕಲ್ಯಾಣ ಕೇಂದ್ರಿತ ಯೋಜನೆಗಳು ಇದರ ಅಡಿಯಲ್ಲಿ ಜನಧನ್, ಯೋಜನೆ ಸ್ವಚ್ಛ ಭಾರತ್ ಮಿಷನ್, ಪ್ರಧಾನಮಂತ್ರಿ ಅವಾಸ್, ಯೋಜನೆ ಜಲಜೀವನ್ ಮೆಷಿನ್, ಆಯುಷ್ಮಾನ್ ಭಾರತ್,
ಬಡತನ ನಿವಾರಣೆಗಾಗಿ ಕಳೆದ 12 ವರ್ಷಗಳಿಂದ ಸುಮಾರು 25 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ.
ಅಂತೋದಯ ತತ್ವ ಈ ದೇಶದ ಬಡತನ ರೇಖೆಗಿಂತ ಹಿಂದೆ ಇರುವ ಕೊನೆಯ ವ್ಯಕ್ತಿಯ ಅಭಿವೃದ್ಧಿಯ ಫಲ ತಲುಪಿಸುವ ಉದ್ದೇಶ.
ಸ್ವಾತಂತ್ರ್ಯ ನಂತರ ಜನಿಸಿದ ಮೊದಲ ಪ್ರಧಾನಿ ರಾಜಕೀಯ ಅಂಶವಿಲ್ಲದೆ ಸಾಧಾರಣ ಹಿನ್ನೆಲೆಯಿಂದ ಬಂದು ದೇಶದ ಅತ್ಯುನ್ನತ ಉದಾಹರಣೆ,
ಮುಂದಿನ ದಿನಮಾನಗಳಲ್ಲಿ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರು ದೇಶದ ಸೇವೆಗಾಗಿ ದೇಶದ ಜನರ ಸೇವೆಗಾಗಿ ಇನ್ನೂ ನೂರು ವರ್ಷಗಳ ಕಾಲ ಬಾಳಲೆಂದು ಆ ದೇವರು ಅವರಿಗೆ ಆಯುಷ್ಯ ಆರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡಲೆಂದು ಪ್ರಾರ್ಥಿಸಲಾಯಿತು ಎಂದು ನಗರ ಮಂಡಲದ ಅಧ್ಯಕ್ಷರು ಸಿದ್ದರಾಮೇಶ ಮನ್ನಾಪುರ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿನಗರ ಸಭಾ ಸದಸ್ಯರು ಕೆ ರಾಜಶೇಖರ್, ನಗರ ಯೋಜನೆ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಮಧುರಾಜ ಆಚಾರ್ಯ ಅವರು, ನಿಕಟಪೂರ್ವ ಅಧ್ಯಕ್ಷರಾದ ನಿರುಪಾದ್ಯಪ್ಪ ಜೋಳದ ರಾಶಿ, ಅಲ್ಪಸಂಖ್ಯಾತ ಮಹೋತ್ಸವದ ರಾಜ್ಯ ಕಾರ್ಯದರ್ಶಿಗಳಾದ ಶಿವರಾಜ್ ಭಾಷಾ, ಇಲ್ಲ ಕಾರ್ಯದರ್ಶಿಗಳಾದ ಟಿ ಸುಬ್ಬರಾವ, ಶ್ರೀಮತಿ ಶೈಲಜಮ್ಮ ಷಡಕ್ಷರಪ್ಪ ನಾಗಲಪುರ,
ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ರವಿ ರಾಠೋಡ್ ಮತ್ತು ರವಿ ಉಪ್ಪಾರ್, ನಗರ ಮಂಡಲದ ಉಪಾಧ್ಯಕ್ಷರಾದ ಶರಣಬಸವ ದೂಮ್ತಿ, ಸೋಮನಾಥ ಪತ್ತಾರ್, ನಾಗರಾಜ್ ದೇವರ ಗುಡಿ, ಪ್ರಶಾಂತ ಶೆಟ್ಟಿ, ಪಕೀರಪ್ಪ ಬಾಗೋಡಿ,
ನಗರಮಂಡಲದ ಕಾರ್ಯದರ್ಶಿಗಳಾದ, ಶಿವು ಹಿರೇಮಠ, ರಾಮಕೃಷ್ಣ ಉಪ್ಪಾರ, ರೈತ ಮೋರ್ಚಾ ಅಧ್ಯಕ್ಷರಾದ ಶರಣಪ್ಪ ಬಂಡಿ,ಯುವ ಮೋರ್ಚಾ ಅಧ್ಯಕ್ಷರಾದ ಮತ್ತು ಬರ್ಸಿ,
SC ಮೋರ್ಚಾ ಅಧ್ಯಕ್ಷರಾದ ಹಸೇನಪ್ಪಾ ಸೋಲಂಗಿ, ST ಮೋರ್ಚಾ ಅಧ್ಯಕ್ಷರಾದ ಬಸವರಾಜ ನಾಯಕ್,OBC ಮೋರ್ಚಾ ಅಧ್ಯಕ್ಷರಾದ ಮುದಿಯಪ್ಪ ಕಟ್ಟಿಮನಿ, ಅಂಬರೀಷ್ ಕಡಬೂರ, ನಾಗರಾಜ್ ಕಡಬೂರ್, ಮೌನೇಶ ಹೊಸಮನೆ, ಕಾಶಿನಾಥ್ ಹಿರೇಮಠ್, ಮಾಜಿ ನಗರಸಭಾ ಸದಸ್ಯರು ಶ್ರೀನಿವಾಸ್ ಮೇಸ್ತ್ರಿ, ಮಾಜಿ ಉಪಾಧ್ಯಕ್ಷರಾದ ಯಲ್ಲುಸಾ ಬದಿ. ಆನಂದಯ್ಯ ಕೊಂಡ, ಸಂಗಪ್ಪ ಬೊಮ್ಮನಾಳ, ರಾಮು ಸುಕಲ್ಪಟ್ಟ ಸಹನಾ ಹಿರೇಮಠ್, ಮಮತಾ ಹಿರೇಮಠ್, ಶಿವಮ್ಮ ಅಂಬಿಗರ, ರೇಣಮ್ಮ ನಾಯಕ್, ಯಮನಮ್ಮ
ವೀರೇಶ ಕಂಬಾಳಿಮಠ ಸಿಂಧನೂರು
9686592432






