ಸಂಪಾದಕೀಯ

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಬರಗಾಲ ಆವರಿಸಿದೆ. ರೈತರ ಗೋಳು ಕೇಳುವವರು ಯಾರಿಲ್ಲ?

ಕಲ್ಯಾಣ ಕರ್ನಾಟಕ ಬರಗಾಲ ಬಿದ್ದರೂ ರೈತರ ಗೋಳು ಕೇಳುವವರು ಯಾರಿಲ್ಲ?

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಜುಲೈ 16 2026
ಈ ವರ್ಷದ ಮುಂಗಾರಿನ ಮಳೆ ಅಲ್ಪಸ್ವಲ್ಪವಾಗಿದ್ದು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಅಲ್ಪಸಲ್ಪನ ಬಿತ್ತನೆಯಾಗಿದ್ದು ಬಿತ್ತನೆಯಾಗಿ ಒಂದುವರೆ ತಿಂಗಳ ಕಳೆದರೂ ಒಂದು ಹನಿ ಮಳೆ ಬರದಿದ್ದ ಕಾರಣ ಬಿತ್ತಿರುವ ಬೆಳೆಯು ಒಣಗಿಹೋಗುತ್ತಿದೆ ಬೆಳೆದಿರುವ ಬೆಳೆ ಒಣಗಿ ಹೋಗುವುದನ್ನು ಕಂಡು ಈ ಭಾಗದ ಬಡ ರೈತರು ಆಕಾಶ ನೋಡಿ ಕಣ್ಣೀರು ಹಾಕುವಂತಾಗಿದೆ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಅನಕ್ಷರತೆ ಹಾಗೂ ಅತಿ ಹೆಚ್ಚು ಬಡತನ ಹೊಂದಿರುವ ಜಿಲ್ಲೆ ಈ ಭಾಗದಲ್ಲಿ ಅಲ್ಪಸಲ್ಪ ಜಮೀನ ಹೊಂದಿರುವ ರೈತರು ಹಾಗೂ ಹೆಚ್ಚಿನ ಕಾರ್ಮಿಕರು ಇರುವುದರಿಂದ ಮುಂಗಾರು ಮಳೆ ಬಂದರೆ ಬಿತ್ತನೆ ಮಾಡುತ್ತಿದ್ದರು ಹುಣಸಗಿ ತಾಲೂಕಿನ ಬಸವಸಾಗರ ಅಣೆಕಟ್ಟಿನಿಂದ ಬರುವ ನೀರನ್ನು ಬಳಸಿ ರೈತರು ಸಂಪೂರ್ಣ ಬೆಳೆಯನ್ನು ಬೆಳೆಯುತ್ತಿದ್ದರು ಈ ವರ್ಷ ಆಲಮಟ್ಟಿ ಹಾಗೂ ಬಸವಸಾಗರ ಅಣೆಕಟ್ಟಿನಲ್ಲಿ ನೀರು ಸಂಗ್ರಹಣೆ ಇಲ್ಲದ ಕಾರಣ ಜುಲೈ ತಿಂಗಳ ಕಳೆದರೂ ಎಡದಂಡೆ ಹಾಗೂ ಬಲದಂಡೆ ಕಾಲುವೆಗೆ ನೀರು ಬರದೇ ಇರುವುದರಿಂದ ರೈತರು ಮತ್ತಷ್ಟು ಕಂಗಾಲಾಗಿದ್ದು ಈ ಕೂಡಲೇ ಸಂಬಂಧಪಟ್ಟ ರಾಜಕಾರಣಿಗಳು ಹಾಗೂ ಜಿಲ್ಲಾ ಆಡಳಿತ ಅಧಿಕಾರಿಗಳು ಯಾದಗಿರಿ ಜಿಲ್ಲೆ, ಈ ವರ್ಷ ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರಿಗೆ ಬರ ಪರಿಹಾರ ನೀಡಬೇಕೆಂದು ಈ ಭಾಗದ ರೈತರು ಆಗ್ರಹಿಸುತ್ತಿದ್ದಾರೆ

ಯಾದಗಿರಿ ಜಿಲ್ಲೆಯ ವರದಿ ಗುಂಡಪ್ಪ ಜೆ ಬೋಗಿ

Related Articles

Leave a Reply

Your email address will not be published. Required fields are marked *

Back to top button