ಪತ್ರಿಕೋದ್ಯಮ

ನ್ಯೂ ಹಾರಿಜನ್ ಕಾಲೇಜ ಆಗಲಿದೆ ‘ಸ್ಮಾರ್ಟ್ ಹಾರಿಜನ್ 2026’ ಹ್ಯಾಕಥಾನ್: ವಿದ್ಯಾರ್ಥಿಗಳ ನವೀನ ಆಲೋಚನೆಗಳಿಗೆ ಜಾಗತಿಕ ವೇದಿಕೆ

ನ್ಯೂ ಹಾರಿಜನ್ ಕಾಲೇಜಿ ಆಗಲಿದೆ ‘ಸ್ಮಾರ್ಟ್ ಹಾರಿಜನ್ 2026’ ಹ್ಯಾಕಥಾನ್: ವಿದ್ಯಾರ್ಥಿಗಳ ನವೀನ ಆಲೋಚನೆಗಳಿಗೆ ಜಾಗತಿಕ ವೇದಿಕೆ

ಬೆಂಗಳೂರು: ನ್ಯೂ ಹಾರಿಜನ್ ಕಾಲೇಜ್ ಆಫ್ ಎಂಜಿನಿಯರಿಂಗ್ ವತಿಯಿಂದ ಆಯೋಜಿಸಿರುವ ‘ಸ್ಮಾರ್ಟ್ ಹಾರಿಜನ್ 2026 – 48 ಗಂಟೆಗಳ ಅಂತರರಾಷ್ಟ್ರೀಯ ಹ್ಯಾಕಥಾನ್’ ಕುರಿತು ಬೆಂಗಳೂರಿನ ಪ್ರೆಸ್ ಕ್ಲಬ್ ಆಫ್ ಬೆಂಗಳೂರುನಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

ಪತ್ರಿಕಾಗೋಷ್ಠಿಯಲ್ಲಿ ಹ್ಯಾಕಥಾನ್ ಕಾರ್ಯಕ್ರಮದ ಉದ್ದೇಶ, ವಿಶೇಷತೆಗಳು, ಸ್ಪರ್ಧೆಯ ವಿವಿಧ ಹಂತಗಳು, ವಿದ್ಯಾರ್ಥಿಗಳಿಗೆ ದೊರೆಯುವ ಅವಕಾಶಗಳು ಹಾಗೂ ಬಹುಮಾನಗಳ ಕುರಿತು ನ್ಯೂ ಹಾರಿಜನ್ ಕಾಲೇಜಿನ ಪ್ರಿನ್ಸಿಪಾಲರಾದ ಡಾ. ಮಂಜುನಾಥ್ ಅವರು ವಿಸ್ತಾರವಾಗಿ ವಿವರಿಸಿ ಸಂಪೂರ್ಣ ಮಾಹಿತಿಯನ್ನು ನೀಡಿದರು.

ಕಾಲೇಜಿನ ಸಿಲ್ವರ್ ಜುಬಿಲಿ ಸಂಭ್ರಮದ ಅಂಗವಾಗಿ ಆಯೋಜಿಸಿರುವ ‘ಸ್ಮಾರ್ಟ್ ಹಾರಿಜನ್ 2026’ ಹ್ಯಾಕಥಾನ್‌ನಲ್ಲಿ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ (AI & ML), ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ (CSE) ಸೇರಿದಂತೆ ವಿವಿಧ ತಾಂತ್ರಿಕ ಕ್ಷೇತ್ರಗಳಲ್ಲಿ ನವೀನ ಪರಿಹಾರಗಳನ್ನು ರೂಪಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಡಾ. ಮಂಜುನಾಥ್ ತಿಳಿಸಿದರು.

48 ಗಂಟೆಗಳ ಕಾಲ ನಡೆಯಲಿರುವ ಹ್ಯಾಕಥಾನ್‌ನಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಆರೋಗ್ಯ ತಂತ್ರಜ್ಞಾನ, ರಕ್ಷಣಾ ಮತ್ತು ಬಾಹ್ಯಾಕಾಶ ತಂತ್ರಜ್ಞಾನ, ಸ್ಮಾರ್ಟ್ ಸಿಟಿಗಳು, ವಾಹನಗಳು ಮತ್ತು ಆಟೋಮೇಷನ್ ಹಾಗೂ ಫಿನ್‌ಟೆಕ್ ಸೇರಿದಂತೆ ಪ್ರಮುಖ ಕ್ಷೇತ್ರಗಳ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ.

ಕಾರ್ಯಕ್ರಮದಲ್ಲಿ 287 ತಂಡಗಳು ನೋಂದಾಯಿಸಿಕೊಂಡಿದ್ದು, 235 ತಂಡಗಳು ಸಾಫ್ಟ್‌ವೇರ್ ಹಾಗೂ 52 ತಂಡಗಳು ಹಾರ್ಡ್‌ವೇರ್ ಆಧಾರಿತ ಪರಿಹಾರಗಳೊಂದಿಗೆ ಸ್ಪರ್ಧಿಸಲಿವೆ. 118 ತಂಡಗಳು ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿವೆ ಎಂದು ಮಾಹಿತಿ ನೀಡಲಾಯಿತು.

ಹ್ಯಾಕಥಾನ್‌ನಲ್ಲಿ ಒಟ್ಟು ₹23.75 ಲಕ್ಷಕ್ಕೂ ಅಧಿಕ ಮೊತ್ತದ ಬಹುಮಾನ ನೀಡಲಾಗುತ್ತಿದ್ದು, ವಿಜೇತರಿಗೆ ಆಕರ್ಷಕ ಬಹುಮಾನಗಳ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರಯಾಣ ಭತ್ಯೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ವಿವಿಧ ಕ್ಷೇತ್ರಗಳ ತಜ್ಞರು ಹಾಗೂ ಮಾರ್ಗದರ್ಶಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ CSE ಡೀನ್ ಡಾ. ಎನ್.ವಿ. ಉಮಾರೆಡ್ಡಿ, ಅಸೋಸಿಯೇಟ್ ಹೆಡ್ – ಇನ್ಕುಬೇಶನ್ ಡಾ. ಮುಕುಲ್ ಮನೋಹರ್ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಹ್ಯಾಕಥಾನ್ ವಿದ್ಯಾರ್ಥಿಗಳಲ್ಲಿ ನವೀನ ಚಿಂತನೆ, ತಾಂತ್ರಿಕ ಕೌಶಲ್ಯ, ಸಂಶೋಧನಾ ಮನೋಭಾವ, ಸಮಸ್ಯೆ ಪರಿಹಾರ ಸಾಮರ್ಥ್ಯ ಹಾಗೂ ಉದ್ಯಮಶೀಲತೆಯನ್ನು ಬೆಳೆಸುವ ಉದ್ದೇಶ ಹೊಂದಿದೆ. ಭಾರತ @2047ರ ದೃಷ್ಟಿಕೋನಕ್ಕೆ ಪೂರಕವಾಗಿ ಯುವ ಪ್ರತಿಭೆಗಳನ್ನು ಸಜ್ಜುಗೊಳಿಸುವುದು ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲ ಡಾ.ಮಂಜುನಾಥ ಎನ್.ವಿ. ಉಮರೆಡ್ಡಿ, ಡಾ . ಮುಕುಲ್ ಮನೋಹರ್ ಮುಂತಾದವರು ಉಪಸ್ಥಿತರಿದ್ದರು. ಹ್ಯಾಕಥಾನ್‌ನ ವಿವಿಧ ಆಯಾಮಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಸಂಪೂರ್ಣ ಮಾಹಿತಿ ನೀಡಲಾಗಿದ್ದು, ವಿದ್ಯಾರ್ಥಿಗಳ ಪ್ರತಿಭೆ ಹಾಗೂ ತಾಂತ್ರಿಕ ಆವಿಷ್ಕಾರಗಳಿಗೆ ‘ಸ್ಮಾರ್ಟ್ ಹಾರಿಜನ್ 2026’ ಉತ್ತಮ ವೇದಿಕೆಯಾಗಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button