ಪತ್ರಿಕೋದ್ಯಮ

“ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ‘ಆರಾಧನಾ” ಮಹೋತ್ಸವಕ್ಕೆ ಕ್ಷಣ ಗಣನೆ””ವಿಶೇಷ ದಾನಿಗಳಿಗೆ ಮಂತ್ರಾಲಯ ಯಾತ್ರೆ”

“ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ‘ಆರಾಧನಾ” ಮಹೋತ್ಸವಕ್ಕೆ ಕ್ಷಣ ಗಣನೆ”
“ವಿಶೇಷ ದಾನಿಗಳಿಗೆ ಮಂತ್ರಾಲಯ ಯಾತ್ರೆ”

ಬೆಂಗಳೂರು : ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಭಕ್ತಾದಿಗಳ ಸಹಕಾರದೊಂದಿಗೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 27-8-2026 ರಿಂದ 2-9-2026ವರೆಗೆ ಒಂದು ವಾರಗಳ ಕಾಲ ನಡೆಯುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ “ಆರಾಧನಾ” ಸಪ್ತ ರಾತ್ರೋತ್ಸವ-ಮಹೋತ್ಸವದ ಅಂಗವಾಗಿ ಆಗಸ್ಟ್ 27, ಗುರುವಾರ ಸಂಜೆ 6-30ಕ್ಕೆ ಮುಳಬಾಗಲು ಶ್ರೀಪಾದರಾಜ ಮಠದ ಪರಮಪೂಜ್ಯ ಶ್ರೀ 1008 ಶ್ರೀ ಸುಜಯನಿಧಿತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಗೋಪೂಜೆ, ಧ್ವಜಾರೋಹಣ ಪೂಜೆ, ಶ್ರೀಲಕ್ಷ್ಮೀಪೂಜೆ, ಧನ ಧಾನ್ಯ ಪೂಜೆ ಮತ್ತು “ಉದ್ಘಾಟನೆ” ಕಾರ್ಯಕ್ರಮವೂ ನಡೆಯಲಿದೆ. ಈ ಆರಾಧನಾ ಉತ್ಸವದ ಕಾರ್ಯಕ್ರಮದ ಅಂಗವಾಗಿ 55ಕ್ಕೂ ಹೆಚ್ಚಿನ ಅಡಿಗೆ ಬಾಣಸಿಗರಿಂದ ಸಹಸ್ರಾರು ಭಕ್ತರಿಗಾಗಿ ವಿಶೇಷ “ಘಮಘಮಿಸುವ ಪರಿಮಳ ಪ್ರಸಾದ” ಮತ್ತು 5 ತರಹದ ಪಂಚ ಭಕ್ಷಾದಿಗಳನ್ನು ತಯಾರಿಸಲಾಗುತ್ತಿದೆ. ಹಾಗೂ ಶ್ರೀಮಠದ ಪ್ರಾಕಾರ, ಪೂಜಾ ಮಂದಿರ, ದ್ವಾರದ ಮುಂಭಾಗದಲ್ಲಿ, ಹಾಗೂ ಕಟ್ಟಡಕ್ಕೂ ಶ್ರೀ ಮಠದ ಮುಂಬಾಗದ ರಾಜಭೀದಿಯಲ್ಲಿ ವಿದ್ವತ್ ದೀಪಗಳಿಂದ ಅಲಂಕಾರವು ನೆರವೇರುತ್ತಿದೆ, ಮತ್ತು ಗುರು ರಾಯರ ಸನ್ನಿಧಿಗೆ ಸಹಸ್ರಾರು ಭಕ್ತಾದಿಗಳು ಆಗಮಿಸಿ ಗುರುರಾಯರ ಮಂತ್ರಾಕ್ಷತೆಯನ್ನು ಸ್ವೀಕರಿಸಲು ಬರುತ್ತಿರುವ ಭಕ್ತರಿಗಾಗಿ ವೇದ ಮಂತ್ರ ಸ್ತೋತ್ರದೊಂದಿಗೆ ಮಂತ್ರಾಕ್ಷತೆಯನ್ನು ಸಿದ್ದಪಡಿಸಲಾಗುತ್ತಿದೆ. ವಿಶೇಷವಾಗಿ ಆಗಸ್ಟ್ 29- ಶ್ರೀರಾಘವೇಂದ್ರ ಸ್ವಾಮಿಗಳ “ಪೂರ್ವಾರಾಧನೆ” ಆಗಸ್ಟ್ 30 ಮಧ್ಯಾರಾಧನೆ ಮತ್ತು ಆಗಸ್ಟ್ 31 “ಉತ್ತರಾರಾಧನೆ” ನಡೆಯಲಿದೆ. ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಮಧ್ಯಾರಾಧನೆಯ ದಿನದಂದು ಬೃಂದಾವನ ಪ್ರವೇಶ ಮಾಡಿದ ವಿಶೇಷ ದಿನ ಈ ಮೂರು ದಿನಗಳಲ್ಲಿ ಬೆಳಗ್ಗೆ 6:30ಕ್ಕೆ ಅರ್ಚಕರಾದ ಶ್ರೀ ಕೃಷ್ಣಾಚಾರ್ ಮತ್ತು ಗೊಗ್ಗಿ ರಾಮಚಂದ್ರ ಆಚಾರ್ ಅವರಿಂದ ಗುರು ರಾಯರ ಬೃಂದಾವನಕ್ಕೆ ವಿಶೇಷ ಫಲ ಪಂಚಾಮೃತ ಅಭಿಷೇಕ, ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣದೊಂದಿಗೆ ನೆರವೇರಲಿದೆ. ನಂತರ ನೂತನ ವಸ್ತ್ರ ಸಮರ್ಪಣೆ, ನವರತ್ನ ಕವಚದ ಅಲಂಕಾರ ವಿಶೇಷ ಹೂವಿನ ಅಲಂಕಾರ ಮತ್ತು ವಿಶೇಷ ಉತ್ಸವಗಳು ನೆರವೇರಲಿದೆ. ಪ್ರತಿದಿನ ಬೆಳಗ್ಗೆ 7 ಗಂಟೆಗೆ ಸೇವಾ ಕರ್ತೃಗಳಿಗೆ ಸಂಕಲ್ಪ, ರಾಯರಿಗೆ ಫಲ ಸಮರ್ಪಣೆ, ಶ್ರೀ ಮಠದ ಕಡೆಯಿಂದ ಸಾಮೂಹಿಕವಾಗಿ ಗುರು ರಾಯರ ಪಾದಪೂಜೆ ನೆರವೇರಲಿದ್ದು ಸೇವಾಕರ್ತುಗಳಿಗೆ ಸಂಕಲ್ಪದ ನಂತರ ಗುರು ರಾಯರ ಶೇಷ ವಸ್ತ್ರ, ಫಲಮಂತ್ರಾಕ್ಷತೆ ಪ್ರಸಾದ ಹಾಗೂ ವಿಶೇಷ ಸೇವೆ ಸಲ್ಲಿಸಿದ ಸೇವಾ ಕರ್ತರಿಗೆ ರಾಯರ ಮುಂಭಾಗದಲ್ಲಿ ಇರಿಸಿ ಪೂಜಿಸಿದ ಗುರು ರಾಯರ ಪಾದುಕೆಯನ್ನು ಪ್ರಸಾದ ರೂಪವಾಗಿ ಕೊಡಲಾಗುವುದು, ತದನಂತರ 11-00ಕ್ಕೆ ಕನಕಾಭಿಷೇಕ 12-00ಕ್ಕೆ ಮಹಾಮಂಗಳಾರತಿ 12-30ಕ್ಕೆ ಸರ್ವರಿಗೂ ಸನ್ನಿಧಿಗೆ ಆಗಮಿಸುವ ಸಹಸ್ರಾರು ಭಕ್ತರಿಗೆ ಅನ್ನ ಸಂತರ್ಪಣೆ ಪ್ರಸಾದ ವಿತರಣೆ ಈ ಮೂರು ದಿನಗಳ ಕಾಲ ನೆರವೇರುತ್ತದೆ. ಹಾಗೂ ಪ್ರತಿನಿತ್ಯ ಸಂಜೆ ಹರಿ ಭಜನೆ, ವಿದ್ವಾಂಸರಿಂದ ಪ್ರವಚನ ಹಾಗೂ ಸಂಗೀತ, ಭರತನಾಟ್ಯ, ಪಲ್ಲಕ್ಕಿ ಉತ್ಸವ, ಗಜವಾಹನ ಉತ್ಸವ, ರಥೋತ್ಸವ, ವಿಶೇಷ ಉತ್ಸವಗಳು ನೆರವೇರಲಿದೆ ಎಂದು ಪುರೋಹಿತರಾದ ನಂದಕಿಶೋರ್ ಆಚಾರ್ಯರು ತಿಳಿಸಿದರು. ವಿಶೇಷವಾಗಿ ಉತ್ತರಾರಾಧನಾ ಪ್ರಯುಕ್ತ 30ನೇ ತಾರೀಕು ಬೆಳಗ್ಗೆ 8-30ಕ್ಕೆ ಜಯನಗರದ ಐದನೇ ಬಡಾವಣೆಯ ರಾಜಭೀದಿ ಯಲ್ಲಿ “ಮಹಾರಥೋತ್ಸವ ವು” ಚಂಡೇವಾದನ, ಗೊಂಬೆಗಳ ಕುಣಿತ, ಇನ್ನು ವಿಶೇಷ ವಾದ್ಯಗಳಿಂದ ಮಹಾರಥೋತ್ಸವದ ಮೆರವಣಿಗೆಯು ನೆರವೇರಲಿದೆ. ಈ ಏಳು ದಿನಗಳಲ್ಲೂ ಪ್ರತಿದಿನ ಸಂಜೆ 5 ರೀಂದ 6 ವಿವಿಧ ಭಜನಾ ಮಂಡಲಿಗಳಿಂದ ಭಜನೆ
ಆಗಸ್ಟ್ 27, ಶ್ರೀಮತಿ ಗೀತಾ ಬತ್ತದ್ ಮತ್ತು ತಂಡದವ ರಿಂದ ಶ್ರೀಹರಿ ಭಜನೆ ,
ಆಗಸ್ಟ್ 28 ಶ್ರೀಮತಿ ಶ್ರೀ ಗೀತಾ ಪ್ರಸಾದ್ ಹಿರಣ್ಮಯಿ ತಂಡದವರಿಂದ ಶ್ರೀಹರಿ ಭಜನೆ,
ಆಗಸ್ಟ್ 29, ಹೃಷಿಕೇಶ ಭಜನಾ ಮಂಡಳಿ, ಚಾಮರಾಜಪೇಟೆ
ಆಗಸ್ಟ್ 30, ಅಕ್ಷಯ ವಿಪ್ರ ಭಜನಾ ಮಂಡಳಿ, ಜೆ.ಪಿ. ನಗರ
ಆಗಸ್ಟ್ 31, ಮಂಜುಳವಾಣಿ ಭಜನಾ ಮಂಡಳಿ, ಶ್ರೀನಗರ

ಸೆಪ್ಟೆಂಬರ್ 1, ಹರಿ ವಾಯು ಭಜನಾ ಮಂಡಳಿ, ಜೆ.ಪಿ.ನಗರ
ಸೆಪ್ಟೆಂಬರ್ 2, ಅಂಭ್ರಣೀಶ ಭಜನಾ ಮಂಡಳಿ, ಹೊಸಕೆರೆಹಳ್ಳಿ ಶ್ರೀಹರಿ ಭಜನೆ ಇರುತ್ತಧೆ.

ಸಾಂಸ್ಕೃತಿಕ ಕಾರ್ಯಕ್ರಮಗಳು ; ಸಂಜೆ 6-30ರಿಂದ . ಆಗಸ್ಟ್ 28-ವಿದುಷಿ ಶ್ರೀಮತಿ ರಂಜಿತಾ ಪ್ರಸಾದ್ ಮತ್ತು ಸಂಗಡಿಗರಿಂದ “ದಾಸವಾಣಿ” ಆಗಸ್ಟ್ 31- ಸಂಜೆ 6:30ಕ್ಕೆ “ವಾದ್ಯ ಸಂಗೀತ” ನಾದಸ್ವಾದ ತಂಡದವರಿಂದ”, ಆಗಸ್ಟ್ 1-“ದಾಸ ಲಹರಿ” ಡಾ|| ರಾಯಚೂರು ಶೇಷಗಿರಿದಾಸ್ ತಂಡದವರಿಂದ ಹಾಗೂ ಆಗಸ್ಟ್ 2-“ಭರತನಾಟ್ಯ” ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ “ನೃತ್ಯ ದಿಶಾ “ತಂಡದವರಿಂದ. ಈ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ. ಭಕ್ತರ ಅನುಕೂಲಕ್ಕಾಗಿ ಜಯನಗರದ ಪೊಲೀಸ್ ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಅಚ್ಚುಕಟ್ಟಾದ ಆರಾಧನಾ ಮಹಾರಥೋತ್ಸವಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ಗುರುರಾಯರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ
ಸನ್ನಿಧಿಗೆ ಆಗಮಿಸುವ ಪ್ರತಿಯೊಬ್ಬ ಭಕ್ತರಿಗೂ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರು ತಿಳಿಸಿದ್ದಾರೆ. ವಯೋವೃದ್ದವರಿಗೂ, ವಿಕಲಚೇತನರಿಗೂ, ಗರ್ಭಿಣಿ ಸ್ತ್ರೀಯರಿಗೂ, ಸೇವಾ ಕರ್ತೃಗಳಿಗೂ ಮತ್ತು ಭಕ್ತಾದಿಗಳಿಗೂ, ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಉತ್ಸವದ ಸಂದರ್ಭದಲ್ಲಿ ಭಕ್ತಾದಿಗಳು ಕೂಡ ಶ್ರೀಮಠದ ಆಡಳಿತ ಮಂಡಳಿಯೊಂದಿಗೆ ಸಹಕರಿಸಬೇಕಾಗಿ ತಿಳಿಸಿದರು. ಗುರುರಾಯರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಸೇವೆ ಗಳನ್ನು ಸಲ್ಲಿಸುವಂತಹ ಭಕ್ತರು ಶ್ರೀ ಮಠದ ಈ ನಂಬರ್ 9449133929 ಆನ್ಲೈನ್ ಮುಖಾಂತರ ಸೇವೆಯನ್ನು ಕೂಡ ಸಲ್ಲಿಸಬಹುದು ಸೇವೆ ಸಲ್ಲಿಸಿದ ಸಲ್ಲಿಸಿ ಭಕ್ತರು ಗುರುರಾಯರ ಸನ್ನಿಧಿಗೆ ಆಗಮಿಸಿ ರಾಯರ ಶೇಷ ವಸ್ತ್ರ ಪರಿಮಳ ಪ್ರಸಾದ ಫಲ ಫಲಮಂತ್ರಾಕ್ಷತೆಯನ್ನು ಸ್ವೀಕರಿಸಿ ಗುರು ರಾಯರ ಅನುಗ್ರಹಕ್ಕೆ ಪಾತ್ರರಾಗಬಹುದು , “ದಾನಿಗಳಿಗೆ ಮಂತ್ರಾಲಯ ಯಾತ್ರೆ” ವಿಶೇಷ ಸೇವೆ ಕಾಣಿಕೆಯನ್ನು ಸಮರ್ಪಿಸಿದ ದಾನಿಗಳಿಗೆ “ಶ್ರೀ ಕ್ಷೇತ್ರ ಮಂತ್ರಾಲಯ ಯಾತ್ರೆಯನ್ನು ಮಾಡಿಸಿ ಗುರುರಾಯರ ಮೂಲ ಬೃಂದಾವನದ ದರ್ಶನ ಹಾಗೂ ಶ್ರೀಗಳವರಿಂದ ಫಲ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಗುರುರಾಯರ ಅನುಗ್ರಹಕ್ಕೆ ಪಾತ್ರರಾಗಬಹುದು ಮಂತ್ರಾಲಯ ಯಾತ್ರೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ- 08022443962, 9945429129, 9448847586

Related Articles

Leave a Reply

Your email address will not be published. Required fields are marked *

Back to top button