ಇಷುಧಿ ಪ್ರಕಟನಾಲಯದ ಬೆಳ್ಳಿಹಬ್ಬ : ಜಂಬೂಸವಾರಿ ಮಾಸಪತ್ರಿಕೆಯ ದಶಮಾನೋತ್ಸವ : ಪರಂಪರಾ ಪುರಸ್ಕಾರ ಪ್ರದಾನ : ಸಾವಿರ ಕತೆಗಳ ಸಂಭ್ರಮ :
ಇಷುಧಿ ಪ್ರಕಟನಾಲಯದ ಬೆಳ್ಳಿಹಬ್ಬ : ಜಂಬೂಸವಾರಿ ಮಾಸಪತ್ರಿಕೆಯ ದಶಮಾನೋತ್ಸವ : ಪರಂಪರಾ ಪುರಸ್ಕಾರ ಪ್ರದಾನ : ಸಾವಿರ ಕತೆಗಳ ಸಂಭ್ರಮ :
ಬೆಂಗಳೂರು
ಮಾನ್ಯರೆ,
ವಿಷಯ: ಇಷುಧಿ ಪ್ರಕಟನಾಲಯದ ಬೆಳ್ಳಿಹಬ್ಬ : ಜಂಬೂಸವಾರಿ ಮಾಸಪತ್ರಿಕೆಯ ದಶಮಾನೋತ್ಸವ : ಪರಂಪರಾ ಪುರಸ್ಕಾರ ಪ್ರದಾನ : ಸಾವಿರ ಕತೆಗಳ ಸಂಭ್ರಮ : ರಾಜ್ಯಮಟ್ಟದ ದೇಶಭಕ್ತಿ ಕವಿತೆಗಳ ವಾಚನದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
28.9.2024 ಶನಿವಾರ ಬೆಳಿಗ್ಗೆ 10ರಿಂದ ಸಂಜೆ 7.30ರ ತನಕ
ಇಷುಧಿ ಪ್ರಕಟನಾಲಯದ ಬೆಳ್ಳಿಹಬ್ಬ ಮತ್ತು ಜಂಬೂಸವಾರಿ ಮಾಸಪತ್ರಿಕೆಯ ದಶಮಾನೋತ್ಸವವು ಇದೇ 28.9.2024ರ ಶನಿವಾರದಂದು ನಗರದ ನಯನ ಸಭಾಂಗಣದಲ್ಲಿ ನಡೆಯಲಿದೆ. ಇದರ ಅಂಗವಾಗಿ ಪರಂಪರಾ ಕಲ್ಚರಲ್ ಫೌಂಡೇಷನ್‌ನ ಪರಂಪರಾ ಕ್ಲಬ್ ಹೌಸ್‌ನ ಸಾವಿರ ಕಥೆಗಳ ಸಂಭ್ರಮ ಕಥಾ ವಿಹಾರ 3.0 ಜರುಗಲಿದ್ದು, ಅಂದು ಬೆಳಿಗ್ಗೆ 10ಗಂಟೆಯಿಂದ ಸಂಜೆ 7.30ರ ವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಇದೇ ಸಂದರ್ಭದಲ್ಲಿ ಮನೋವಿಜ್ಞಾನಿ ಡಾ. ಸಿ.ಆರ್.ಚಂದ್ರಶೇಖರ್, ನೇಪಾಳದ ಪಶುಪತಿನಾಥ ದೇವಸ್ಥಾನದ ವಿಶ್ರಾಂತ ಪ್ರಧಾನ ಅರ್ಚಕ ರಾವಲ್ ಅನಂತಕೃಷ್ಣ ಸೋಮಯಾಜಿ, ನಿವೃತ್ತ ಸೈನಿಕ ಹುಣಸೂರು ರಾಜೇಶ್ ಭಟ್ ಪತ್ರಕರ್ತ ಗಣೇಶ್ ಕಾಸರಗೋಡು, ಉದ್ಯಮಿ ಮತ್ತು ಸಮಾಜಸೇವಕ ಬೇಳೂರು ರಾಘವೇಂದ್ರ ಶೆಟ್ಟಿ ಅವರುಗಳಿಗೆ ಪರಂಪರಾ ಪುರಸ್ಕಾರ ಪ್ರದಾನ ಮಾಡಲಾಗುವುದು.
ಶಾಸಕ ಸಿ.ಕೆ.ರಾಮಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಉದ್ಯಮಿ ಎಸ್.ರಾಮಕೃಷ್ನ ಅಡಿಗ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕತೆಗಾರ ಕೆ.ಎನ್.ಭಗವಾನ್, ಲೇಖಕ ಅಣಕು ರಾಮನಾಥ್ ಅವರುಗಳು ಆಗಮಿಸುವರು. ಉದ್ಯಮಿಗಳಾದ ಬಾ.ರಾಮಚಂದ್ರ ಉಪಾಧ್ಯ ಮತ್ತು ಜಿ.ಕೆ.ಸೋಮಯಾಜಿ ಉಪಸ್ಥಿತರಿರುವರು.
ಇದೇ ವೇದಿಕೆಯಲ್ಲಿ ಪರಂಪರಾ ಕ್ಲಬ್ ಹೌಸ್‌ನ ಜಯಶ್ರೀ ದೇಶಪಾಂಡೆ ಅವರ ʼಭಿನ್ನಕೋನʼ ಮತ್ತು ಅಂಬಿಕಾರಾವ್ ಅವರ ʼನೋಬೆಲ್ ವಿಜೇತ ನವತಾರೆಯರುʼ ಕೃತಿಗಳು ಜನಾರ್ಪಣೆಗೊಳ್ಳಲಿವೆ.
ಸಾವಿರ ಕತೆಗಳ ಸಂಭ್ರಮ, ಹಾಸ್ಯ ರಸಾಯನ, ಪ್ರತಿಭಾವಿಹಾರ, ಗಾಯನ ಮತ್ತು ಕವಿತಾ ವಾಚನ, ಕಥಾವಿಹಾರ, ನಾಟ್ಯವಿಹಾರ, ಕವಿತಾ ವಿಹಾರ ರಂಗವಿಹಾರ ಮತ್ತು ಗೀತ ವಿಹಾರದಂತಹ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನಡೆಸಲಾದ ರಾಜ್ಯಮಟ್ಟದ ದೇಶಭಕ್ತಿ ಕವಿತೆಗಳ ವಾಚನದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಬಹುಮಾನಿತ ವಿದ್ಯಾರ್ಥಿಗಳಿಂದ ಕವಿತಾ ವಾಚನ ಕಾರ್ಯಕ್ರಮವಿದೆ.
ಏಕವ್ಯಕ್ತಿ ರಂಗಪ್ರಯೋಗದಲ್ಲಿ ದಾಖಲೆ ನಿರ್ಮಿಸಿರುವ ಏಣಗಿ ಪ್ರಭಾಕರ್ ಅವರಿಗೆ ಗೌರವಾಭಿನಂದನೆ ಮತ್ತು ಅವರಿಂದ ಏಕವ್ಯಕ್ತಿ ಪ್ರದರ್ಶನ ನಡೆಯಲಿದೆ. ಜೀವನಪಯಣ ಎಂಬ ಮಾತು-ಗೀತೆಗಳ ದಿಬ್ಬಣದ ಚಲನಚಿತ್ರಗೀತೆಗಳನ್ನಾಧರಿಸಿದ ವಿಶೇಷ ಕಾರ್ಯಕ್ರಮವು ಒಟ್ಟಾರೆ ಸಮಾರಂಭವನ್ನು ಕಳೆಗಟ್ಟಿಸಲಿದ್ದು ಕಲಾಸಕ್ತರಿಗೆ ಸ್ವಾಗತ ಕೋರಲಾಗಿದೆ ಎಂದು ಪರಂಪರಾ ಸಂಸ್ಥೆಯ ಅಧ್ಯಕ್ಷ ಜಿ.ಪಿ.ರಾಮಣ್ಣ ಮತ್ತು ಜಂಬೂಸವಾರಿ ಪತ್ರಿಕೆಯ ಸಂಪಾದಕ ಡಿ. ಶರತ್ ಕುಮಾರ್ ತಿಳಿಸಿದ್ದಾರೆ.
ನಿಮ್ಮ ವಿಶ್ವಾಸಿ
ಜಿ ಪಿ ರಾಮಣ್ಣ, ಡಿ.ಶರತ್ ಕುಮಾರ್
9448202708
8762949037



