ಗಣರಾಜ್ಯೋತ್ಸವ ಆಚರಿಸುವ ಕುರಿತು ಪೂರ್ವಭಾವಿ ಸಿದ್ಧತಾ ಸಭೆ .ಕನಕಗಿರಿ

ಗಣರಾಜ್ಯೋತ್ಸವ ಆಚರಿಸುವ ಕುರಿತು ಪೂರ್ವಭಾವಿ ಸಿದ್ಧತಾ ಸಭೆ .
ಕನಕಗಿರಿ ತಾಲೂಕ ಆಡಳಿತ ಅಧಿಕಾರಿ ವಿಶ್ವನಾಥ್ ಮುರಳಿ ಅವರ ನೇತೃತ್ವದಲ್ಲಿ ಹಾಗೂ ತಾಲೂಕ್ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳ ಚಂದ್ರಶೇಖರ್ ಬಿ ಕಂದುಕುರ್ ಹಾಗೂ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳ ಸಂಯುಕ್ಯದಲ್ಲಿ ಗಣರಾಜ್ಯೋತ್ಸವದ ಕುರಿತಾಗಿ ಪೂರ್ವಭಾವಿ ಸಭೆಯನ್ನು ಗಣರಾಜ್ಯೋತ್ಸವ ಆಚರಿಸುವ ಪ್ರಯುಕ್ತ ಚರ್ಚಿಸಲು ತಾಲೂಕಿಗೆ ಸಂಬಂಧಪಟ್ಟಂತಹ ಎಲ್ಲಾ ಇಲಾಖೆಗಳ ಅಧಿಕಾರಿ ಗಳೊಂದಿಗೆ ತಹಶೀಲ್ ಕಾರ್ಯಾಲಯ ಕನಕಗಿರಿಯಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು.
ಸದರಿ ಸಭೆಗೆ ಎಲ್ಲಾ ತಾಲ್ಲೂಕ ಪಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. ಕನಕಗಿರಿ ಆಡಳಿತ ಅಧಿಕಾರಿಗಳಾದ ವಿಶ್ವನಾಥ್ ಮುರೂಡ ಅವರು ಗಣರಾಜ್ಯೋತ್ಸವದ ಯಶಸ್ಸಿಗೆ ಸಲಹೆಗಳನ್ನು ನೀಡಲು ಯಾಲ್ಲ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದಾರು.
ನಂತರ ಮಾತನಾಡಿದ ತಹಶೀಲ್ದಾರ್ ವಿಶ್ವನಾಥ್ ಮುರುಡಿ ಅವರು ಈ ಬಾರಿ ಗಣರಾಜ್ಯೋತ್ಸವದ ಪ್ರಯುಕ್ತ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳಿಂದ ದೇಶಭಕ್ತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು ಎಂದು ಪತ್ರಿಕಾಗೋಷ್ಠಿ ಮಾಡಿದರು.
ಜೊತೆಗೆ ಪ್ರತಿ ಮಂಗಳವಾರವು ಕನಕಗಿರಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಜನಸಾಮಾನ್ಯರ ಸಮಸ್ಯ ಹಾಗೂ ಕುಂದು ಕೊರತೆಗಳನ್ನು ಈಡೇರಿಸಲು ಪ್ರತಿಪಂಚಾಯಿತಿಯಲ್ಲಿಯೂ ಜನರೊಂದಿಗೆ ಸಂಪರ್ಕಿಸಿ ಅವರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ್ ಆಡಳಿತ ಅಧಿಕಾರಿ ವಿಶ್ವನಾಥ್ ಮುರುಡಿ 2 ಗ್ರೇಡ್ 2 ತಹಸಿಲ್ದಾರ್ ಸಿ ಎಚ್ ವರಪೇಟೆ ಚಂದ್ರಶೇಖರ್ ಬಿ ಕಂಡುಕುರ್ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತ್ ಕನಕಗಿರಿ . ಅಂಜನಪ್ಪ ಶಿಕ್ಷಣಾಧಿಕಾರಿಗಳು ಕನಕಗಿರಿ ಬಜರಂಗಬಲಿ ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಶ್ರೀ ಪಂಪಣ್ಣ ಶೆಟ್ಟರ್ ಪ್ರಾಂಶುಪಾಲರು ಪದವಿ ಪೂರ್ವ ಕಾಲೇಜು ಕನಕಗಿರಿ ವ್ಯವಸ್ಥಾಪಕರು ಶ್ರೀ ರಾಮ್ ಕೆಎಸ್ಆರ್ಟಿಸಿ, ಪ್ರಕಾಶ್ ಆರ್ಯರ ಪಟ್ಟಣ ಪಂಚಾಯಿತಿ ಕನಕಗಿರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಕನಕಗಿರಿ ಸಹಾಯಕ ಕೃಷಿ ನಿರ್ದೇಶಕರು ಕೃಷಿ ಇಲಾಖೆ ,ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂ.ರಾ.ಇ.ಇ ಉಪ-ವಿಭಾಗ ಕನಕಗಿರಿ,ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾ.ಕು.ನಿ ಮತ್ತು ಉಪ-ವಿಭಾಗ ಕನಕಗಿರಿ,ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಕನಕಗಿರಿ,ಸಹಾಯಕ ನಿರ್ದೇಶಕರು ಸಮಾಜಕಲ್ಯಾಣಾಧಿಕಾರಿಗಳು ಕನಕಗಿರಿ,ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ತಾಲೂಕ ಪಂಚಾಯತ ಕನಕಗಿರಿ ,ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕನಕಗಿರಿ,ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯತ ಕನಕಗಿರಿ,ಆಡಳಿತ ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯಕೇಂದ್ರ ಕನಕಗಿರಿ.ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಜೆಸ್ಕಾಂ ಉಪ-ವಿಭಾಗ ಕನಕಗಿರಿ, ಪಶು ವೈದ್ಯಾಧಿಕಾರಿಗಳು ಪಶುಸಂಗೋಪನಾ ಇಲಾಖೆ ಕನಕಗಿರಿ,ಆರಕ್ಷಕ ನಿರೀಕ್ಷಕರು ಪೊಲೀಸ್ ಠಾಣೆ ಕನಕಗಿರಿ,ಕಾರ್ಯದರ್ಶಿ ಎ.ಪಿ.ಎಂ.ಸಿ ಕನಕಗಿರಿ,ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಕನಕಗಿರಿ ಸೇರಿ ಉಳಿದ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



