ಸುದ್ಧಿ

ಹಾಲು ಏರಿದು ಭಕ್ತಿಯಿಂದ ನಾಗರ ಪಂಚಮಿಯ ಆಚರಣೆ..ಕನಕಗಿರಿ ಪಟ್ಟಣ

ಹಾಲು ಏರಿದು ಭಕ್ತಿಯಿಂದ ನಾಗರ ಪಂಚಮಿಯ ಆಚರಣೆ

ಕನಕಗಿರಿ ಪಟ್ಟಣದಲ್ಲಿ ನಾಗರ ಪಂಚಮಿಯ ವಿಶೇಷವಾಗಿ ನಾಗದೇವತೆಗಳಿಗೆ ಹಾಗೂ ನಾಗ ವಿಗ್ರಹಗಳಿಗೆ ಪೂಜೆ ಸಲ್ಲಿಸಿ ಹಾಲನ್ನು ಏರಿದು ಸಿಹಿ ತಿನಿಸುಗಳನ್ನು ಉಂಡೆಗಳನ್ನು ಲಡ್ಡುಗಳನ್ನು ನೈವೇದ್ಯಕ್ಕೆ ಇಟ್ಟು ನಾಗರ ಪಂಚಮಿ ಹಬ್ಬವನ್ನು ಬಾವ ಭಕ್ತಿಯಿಂದ ಆಚರಿಸಲಾಯಿತು.

ನಂತರ ನಾಗರಪಂಚಮಿಯ ಕುರಿತಾಗಿ ಮಾತನಾಡಿದ ಸರಸ್ವತಿ ರಾಘವೇಂದ್ರ ಮರಾಠಿ ಅವರು ಹಿಂದೂ ನಂಬಿಕೆಯ ಪ್ರಕಾರ, ಪ್ರಾಚೀನ ಕಾಲದಿಂದಲೂ ಹಾವುಗಳನ್ನು ದೇವರಂತೆ ಪೂಜಿಸಲಾಗುತ್ತದೆ. ಆದ್ದರಿಂದ ನಾಗರ ಪಂಚಮಿಯ ದಿನದಂದು ನಾಗರ ಹಾವುಗಳಿಗೆ ಪೂಜೆಯನ್ನು ಮಾಡುವುದು ಹೆಚ್ಚಿನ ಮಹತ್ವವನ್ನು ಹೊಂದಿದೆ. ನಾಗರ ಪಂಚಮಿಯ ದಿನದಂದು ಹಾವುಗಳನ್ನು ಪೂಜಿಸುವ ಜನರು ಹಾವು ಕಡಿತದಿಂದ ರಕ್ಷಣೆಯನ್ನು ಪಡೆದುಕೊಳ್ಳುತ್ತಾರೆ.ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬ ಎಂದರೆ ಅದು ನಾಗರ ಪಂಚಮಿ. ಶ್ರಾವಣ ಶುದ್ಧ ಪಂಚಮಿಯಿಂದ ಆಚರಿಸಲ್ಪುಡುವ ಈ ಹಬ್ಬ ಮುಂದೆ ಬರಲಿರುವ ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ನವರಾತ್ರಿ, ಊರಿನ ಜಾತ್ರೆಗೆ, ಎಲ್ಲ ಶುಭ ಆಚರಣೆಗಳಿಗೆ ಮೊದಲ ಮೆಟ್ಟಿಲು.ಶ್ರಾವಣ ಮಾಸದಲ್ಲಿ ನಾಗರ ಪಂಚಮಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬವು ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಬರುತ್ತದೆ. ಈ ದಿನ ನಾಗ ದೇವರನ್ನು ಪೂಜಿಸಿ ಉಪವಾಸ ಮಾಡುವ ಸಂಪ್ರದಾಯವಿದೆ. ನಾಗ ದೇವರನ್ನು ಪೂಜಿಸುವುದರಿಂದ ವ್ಯಕ್ತಿಯು ಎಲ್ಲಾ ತೊಂದರೆಗಳು ದೂರವಾಗುತ್ತವೆ ಎನ್ನುವ ನಂಬಿಕೆಯಿದೆ ಎಂದು ತಿಳಿಸಿದರು..
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button