ಸುದ್ಧಿ

ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡಲಾಗುತ್ತಿದೆ) ಹಾಗೂ 500 ಕೋಟಿ ಊಟದ ಮೈಲಿಗಲ್ಲು ಮುಟ್ಟುವ ಉದ್ದೇಶವೂ ಇದೆ.

ಬೆಳಗ್ಗೆ ನನ್ನ ಗೃಹ ಕಚೇರಿಗೆ #ಇಸ್ಕಾನ್ ಸಂಸ್ಥೆಯ ಶ್ರೀ ಮಾಧವ ಹರಿದಾಸ ಬಂದಿದ್ದರು.

ಮುಂಬರುವ ಆಗಸ್ಟ್ 25 ಮತ್ತು 26ರಂದು ಇಸ್ಕಾನ್ ಮಂದಿರದಲ್ಲಿ ನಡೆಯಲಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಅವರೊಂದಿಗೆ ಮಾತನಾಡುವಾಗ ಒಂದು ಚೇತೋಹಾರಿ ಮಾಹಿತಿ ದೊರಕಿತು.

ಇಸ್ಕಾನ್ ನಡೆಸುತ್ತಿರುವ “#ಅಕ್ಷಯ_ಪಾತ್ರ” ಕಾರ್ಯಕ್ರಮ 24 ವರ್ಷ ಪೂರೈಸಿದೆ.

ಕಳೆದ ಏಪ್ರಿಲ್ 4 ರಂದು ವಿಶ್ವಸಂಸ್ಥೆಯಲ್ಲಿ “ಅಕ್ಷಯಪಾತ್ರ” ಸಂಸ್ಥೆ ಜಗತ್ತಿನ ಪ್ರಪ್ರಥಮ NGO ಆಗಿ ಭಾಗವಹಿಸಿತ್ತು.

ಅಕ್ಷಯಪಾತ್ರೆ ಕಾರ್ಯಕ್ರಮದಡಿ 400 ಕೋಟಿ (4 Billion) ಊಟ ದ ಮೈಲಿಗಲ್ಲು ದಾಟಿದ ಶುಭ ಸಂದರ್ಭದಲ್ಲಿ ಈ ಮನ್ನಣೆ.

ಅಂದು, ಏಪ್ರಿಲ್ 4 ರಂದು, ವಿಶ್ವಸಂಸ್ಥೆಯ ಸಭಾಂಗಣದಲ್ಲಿ ನಡೆದ ಆ ಅಪರೂಪದ ಕಾರ್ಯಕ್ರಮದಲ್ಲಿ ಇಸ್ಕಾನ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಧು ಪಂಡಿತ ದಾಸ್, ಶ್ರೀ ಚಂಚಲಪತಿ ದಾಸ್, ನೋಬೆಲ್ ಪ್ರಶಸ್ತಿ ವಿಜೇತ ಶ್ರೀ ಕೈಲಾಸ ಸತ್ಯಾರ್ಥಿ, ಇನ್ಫೋಸಿಸ್ ಸಂಸ್ಥಾಪಕ ಶ್ರೀ ನಾರಾಯಣ ಮೂರ್ತಿ, ಅಮೆರಿಕಾದಲ್ಲಿ ಭಾರತದ ರಾಯಭಾರಿ ಶ್ರೀಮತಿ ರುಚಿರ ಕಂಬೋಜ್… ರವರು ಉಪಸ್ಥಿತರಿದ್ದರು.

ಮುಂದಿನ ವರ್ಷ “ಅಕ್ಷಯಪಾತ್ರಾ” ದ ಬೆಳ್ಳಿ ಹಬ್ಬ. (2000 ರಲ್ಲಿ ಶಾಲೆ ಮಕ್ಕಳಿಗೆ ವಿಶೇಷವಾಗಿ ಸರಕಾರಿ ಶಾಲಾ ಮಕ್ಕಳಿಗೆ, ಮಧ್ಯಾಹ್ನದ ಊಟ ನೀಡುವ ಈ ಉದಾತ್ತ ಕಾರ್ಯ ಪ್ರಾರಂಭವಾಗಿದ್ದು).

ತನ್ನ ಈ ಮಹಾನ್ ಕಾರ್ಯದ ರಜತ ಮಹೋತ್ಸವದ ಸಂದರ್ಭದಲ್ಲಿ, 25 ಲಕ್ಷ ಮಕ್ಕಳಿಗೆ ಊಟ ತಲುಪಿಸುವ ಗುರಿ ಹೊಂದಿದ್ದು (ಈಗ 23 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡಲಾಗುತ್ತಿದೆ) ಹಾಗೂ 500 ಕೋಟಿ ಊಟದ ಮೈಲಿಗಲ್ಲು ಮುಟ್ಟುವ ಉದ್ದೇಶವೂ ಇದೆ.

” ಅಕ್ಷಯಪಾತ್ರ ” ದ ಈ ಕಾರ್ಯದ ಮಹಾನ್ ಬೆಳವಣಿಗೆ ನಿಜಕ್ಕೂ ಸ್ತುತ್ಯಾರ್ಹ.

Related Articles

Leave a Reply

Your email address will not be published. Required fields are marked *

Back to top button