ಸಂಪಾದಕೀಯ

ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ SIR ಪ್ರಕ್ರಿಯೆ 91.02% ಡಿಜಿಟಲೀಕರಣ ಪೂರ್ಣ.

ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ SIR ಪ್ರಕ್ರಿಯೆ 91.02% ಡಿಜಿಟಲೀಕರಣ ಪೂರ್ಣ

ಕನಕಗಿರಿ ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ ತಸಿಲ್ದಾರ್ ಚಂದ್ರಶೇಖರ್ ಗಾಳಿ ಹಾಗೂ ಪ್ರವಾರಿ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಕೆ ರಾಜಶೇಖರ್ ಅವರ ನೇತೃತ್ವದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರೊಂದಿಗೆ ಸಭೆ ನಡೆಸಿ SIR ಬಗ್ಗೆ ಮಾಹಿತಿ ನೀಡಿದರು.
ನಂತರ ಮಾತನಾಡಿ ಒಟ್ಟಾರೆ ತಾಲೂಕಿನಲ್ಲಿ 79,679 ಮತದಾರರ ಮಾಹಿತಿ ಡಿಜಿಟಲೀಕರಣ; EPIC ನಂಬರ್ ಮೂಲಕ ದ್ವಿತೀಯ ಮತದಾರರ ಪರಿಶೀಲನೆ

ಕನಕಗಿರಿ: 61-ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 (SIR) ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಕನಕಗಿರಿ ತಾಲೂಕಿನಲ್ಲಿ ಶೇ. 91.02ರಷ್ಟು ಎನ್ಯುಮರೇಷನ್ (EF) ನಮೂನೆಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ ಎಂದು ಕನಕಗಿರಿ ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ತಹಶೀಲ್ದಾರ್ ಚಂದ್ರಶೇಖರ್ ಗಾಳಿ ತಿಳಿಸಿದ್ದಾರೆ.

ಕನಕಗಿರಿ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ SIR ಪ್ರಕ್ರಿಯೆ ಕುರಿತು ಜನಪ್ರತಿನಿಧಿಗಳು ಹಾಗೂ ವಾರ್ಡ್ ಸದಸ್ಯರ ಸಭೆ ನಡೆಸಿ, ಪಟ್ಟಣದ ಸಾರ್ವಜನಿಕರಿಗೆ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಜಾಗೃತಿ ಮೂಡಿಸುವಂತೆ ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಪಟ್ಟಣ ಪಂಚಾಯಿತಿಯ ಪ್ರಭಾರಿ ಅಧಿಕಾರಿ ಕೆ. ರಾಜಶೇಖರ್, ಅಧ್ಯಕ್ಷರಾದ ತನುಶ್ರೀ, ಉಪಾಧ್ಯಕ್ಷರಾದ ಕಂಠೀರಂಗ ನಾಯಕ ಸೇರಿದಂತೆ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಕ್ಷೇತ್ರದಲ್ಲಿ 2.32 ಲಕ್ಷಕ್ಕೂ ಅಧಿಕ ಮತದಾರರು

61-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,32,342 ಮತದಾರರು ಇದ್ದು, ಈ ಪೈಕಿ 2,08,789 ಮತದಾರರ ಮಾಹಿತಿಯನ್ನು ಡಿಜಿಟಲೀಕರಣ ಮಾಡಲಾಗಿದೆ. ಕನಕಗಿರಿ ತಾಲೂಕಿನಲ್ಲಿ ಒಟ್ಟು 79,679 ಮತದಾರರು ಇದ್ದಾರೆ.

ಕ್ಷೇತ್ರದಲ್ಲಿ ಒಟ್ಟು 94 ಮತಗಟ್ಟೆಗಳಿದ್ದು, ಅವುಗಳಲ್ಲಿ 17 ನಗರ ಪ್ರದೇಶದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, 77 ಮತಗಟ್ಟೆಗಳು ಗ್ರಾಮೀಣ ಪ್ರದೇಶದಲ್ಲಿವೆ.

ASDDO ಮೂಲಕ ಮತದಾರರ ಮಾಹಿತಿ ಪರಿಶೀಲನೆ

SIR ಪ್ರಕ್ರಿಯೆಯಲ್ಲಿ ASDDO (Absent, Shifted, Duplicate, Death, Others) ವಿಭಾಗದ ಮೂಲಕ ಮತದಾರರ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ.

ಕ್ಷೇತ್ರದಲ್ಲಿ ಒಟ್ಟು 4,863 ಮೃತ ಮತದಾರರು ಗುರುತಿಸಲ್ಪಟ್ಟಿದ್ದು, ಕನಕಗಿರಿ ತಾಲೂಕಿನಲ್ಲಿ ಈ ಸಂಖ್ಯೆ 1,464 ಆಗಿದೆ. ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರ ಸಂಖ್ಯೆ ಕ್ಷೇತ್ರದಲ್ಲಿ 11,111 ಇದ್ದು, ಕನಕಗಿರಿ ತಾಲೂಕಿನಲ್ಲಿ 3,856 ಮತದಾರರು ಸ್ಥಳಾಂತರಗೊಂಡಿರುವುದಾಗಿ ಗುರುತಿಸಲಾಗಿದೆ.

ಈಗಾಗಲೇ ಕ್ಷೇತ್ರದಲ್ಲಿ ದಾಖಲಾಗಿರುವ ಮತದಾರರ ಸಂಖ್ಯೆ 7,395 ಆಗಿದ್ದು, ಗೈರುಹಾಜರಿರುವ ಮತದಾರರ ಸಂಖ್ಯೆ 181. ಇದರಲ್ಲಿ ಕನಕಗಿರಿ ತಾಲೂಕಿನಲ್ಲಿ 133 ಮತದಾರರು ಗೈರುಹಾಜರಿದ್ದಾರೆ. ಒಟ್ಟಾರೆ ಕ್ಷೇತ್ರದಲ್ಲಿ ASDDO ವ್ಯಾಪ್ತಿಗೆ ಬಂದಿರುವ ಮತದಾರರ ಸಂಖ್ಯೆ 23,550 ಇದ್ದು, ಕನಕಗಿರಿ ತಾಲೂಕಿನಲ್ಲಿ 7,175 ಮತದಾರರು ಇದ್ದಾರೆ.

91.02% ಡಿಜಿಟಲೀಕರಣ ಪೂರ್ಣ

ಕನಕಗಿರಿ ತಾಲೂಕಿನಲ್ಲಿ 79,679 ಮತದಾರರಿಗೆ ಶೇ.100ರಷ್ಟು ಎನ್ಯುಮರೇಷನ್ ಫಾರ್ಮ್‌ಗಳನ್ನು ತಲುಪಿಸಲಾಗಿತ್ತು. ಈ ಪೈಕಿ 72,504 ಫಾರ್ಮ್‌ಗಳು ಹಿಂತಿರುಗಿ ಬಂದಿದ್ದು, ಶೇ.91.02ರಷ್ಟು ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ. ಇದು ಕೊಪ್ಪಳ ಜಿಲ್ಲೆಯಲ್ಲಿ ಉತ್ತಮ ಸಾಧನೆಯಾಗಿದೆ ಎಂದು ತಹಶೀಲ್ದಾರ್ ಚಂದ್ರಶೇಖರ್ ಗಾಳಿ ತಿಳಿಸಿದರು.

ಕೊಪ್ಪಳ ಜಿಲ್ಲೆಯಲ್ಲಿ ಹೊಂದಿಕೆಯಾಗದ (Mismatch) ಪ್ರಕರಣಗಳು ಸುಮಾರು ಶೇ.3ರಷ್ಟು ಇದ್ದು, 2002ರ ಮತದಾರರ ಪಟ್ಟಿಯಲ್ಲಿ ಒಂದು ಹೆಸರಿದ್ದು, ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಅದೇ ವ್ಯಕ್ತಿಗೆ ಸಂಬಂಧಿಸಿದ ಮತ್ತೊಂದು ಹೆಸರು ಕಂಡುಬಂದರೆ ಅಂತಹ ಪ್ರಕರಣಗಳನ್ನು No Mapping Categoryಯಲ್ಲಿ ಗುರುತಿಸಲಾಗುತ್ತದೆ. ಕನಕಗಿರಿ ತಾಲೂಕಿನಲ್ಲಿ ಇಂತಹ 360 ಮತದಾರರು ಇದ್ದು, ಅವರ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಈ ಪ್ರಕರಣಗಳ ಪರಿಶೀಲನೆಯನ್ನು ಜಿಲ್ಲಾಧಿಕಾರಿಗಳು ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.

ಎರಡು ಅಥವಾ ಮೂರು Voter ID ಇದ್ದರೆ EPIC ನಂಬರ್ ಮೂಲಕ ಪರಿಶೀಲನೆ

ಒಬ್ಬ ಮತದಾರನ ಹೆಸರಿನಲ್ಲಿ ಎರಡು ಅಥವಾ ಮೂರು ಮತದಾರರ ಗುರುತಿನ ಚೀಟಿಗಳು ಇದ್ದಲ್ಲಿ, EPIC ನಂಬರ್ ಆಧಾರದ ಮೇಲೆ ಮಾಹಿತಿಯನ್ನು ಪರಿಶೀಲಿಸಲಾಗುವುದು ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದರು.

ಒಂದೇ ಮತದಾರರಿಗೆ ಒಂದಕ್ಕಿಂತ ಹೆಚ್ಚು EPIC ನಂಬರ್‌ಗಳು ಕಂಡುಬಂದಲ್ಲಿ, ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ಹೆಚ್ಚುವರಿ ಅಥವಾ ದ್ವಿತೀಯ ನೋಂದಣಿ ಕಂಡುಬಂದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಮ್ಯಾಪಿಂಗ್ ಆಗದಿರುವ ಮತದಾರರ ವಿವರಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದರು.

ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ

ASDDO ಪಟ್ಟಿಯಲ್ಲಿ ಹೆಸರು ಬಂದ ತಕ್ಷಣ ಮತದಾರರ ಹೆಸರು ಸಂಪೂರ್ಣವಾಗಿ ರದ್ದಾಗಿದೆ ಎಂದರ್ಥವಲ್ಲ ಎಂದು ತಹಶೀಲ್ದಾರ್ ಚಂದ್ರಶೇಖರ್ ಗಾಳಿ ಸ್ಪಷ್ಟಪಡಿಸಿದರು. BLOಗಳು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಲಭ್ಯವಿಲ್ಲದಿರುವುದು, ಸ್ಥಳಾಂತರ, ಇತರೆ ಕಾರಣಗಳಿಂದ ಕೆಲವು ಮತದಾರರನ್ನು ASDDO ಪಟ್ಟಿಯಲ್ಲಿ ಸೇರಿಸಲಾಗಿದೆ. ಸಂಬಂಧಿಸಿದ ಅರ್ಹ ಮತದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ಹೆಸರುಗಳನ್ನು ಮರುಸೇರ್ಪಡೆ ಮಾಡಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

ಆಗಸ್ಟ್ 17, 2026ರೊಳಗೆ ಅಗತ್ಯ ದಾಖಲೆಗಳೊಂದಿಗೆ Form-6 ಸಲ್ಲಿಸಬಹುದಾಗಿದೆ. ಆಗಸ್ಟ್ 24, 2026ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ವಿಚಾರಣೆ ಹಾಗೂ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡ ನಂತರ ಅಕ್ಟೋಬರ್ 27, 2026ರಂದು SIR-2026ರ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಸಾರ್ವಜನಿಕರಿಗೆ ಮಾಹಿತಿ ನೀಡಲು ಜನಪ್ರತಿನಿಧಿಗಳಿಗೆ ಸೂಚನೆ

ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಈಗಾಗಲೇ ASDDO ಪಟ್ಟಿಯನ್ನು ಒದಗಿಸಲಾಗಿದೆ. ಸಾರ್ವಜನಿಕರು ತಮ್ಮ ಹೆಸರು, EPIC ನಂಬರ್ ಹಾಗೂ ಮತದಾರರ ಪಟ್ಟಿಯಲ್ಲಿರುವ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು. ಯಾವುದೇ ತಪ್ಪು ಅಥವಾ ಗೊಂದಲ ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಹಶೀಲ್ದಾರ್ ಮನವಿ ಮಾಡಿದರು.

ಪಟ್ಟಣದ ಪ್ರತಿಯೊಂದು ವಾರ್ಡ್‌ನ ಸಾರ್ವಜನಿಕರಿಗೆ SIR ಪ್ರಕ್ರಿಯೆ ಕುರಿತು ಸರಿಯಾದ ಮಾಹಿತಿ ತಲುಪಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ವಾರ್ಡ್ ಸದಸ್ಯರು ಸಹಕರಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.

ಸಭೆಯಲ್ಲಿ ಪಿ. ಸುನಿಲ್ ಕುಮಾರ್, ತನುಶ್ರೀ, ಟಿ.ಜೆ., ಕಂಠೀರಂಗ ನಾಯಕ, ಕೆ. ರಾಜಶೇಖರ್, ಶೇಷಪ್ಪ ಪೂಜಾರಿ, ನರಸಪ್ಪ, ಕನಕಪ್ಪ ಮ್ಯಾಗಡಿ ಸೇರಿದಂತೆ ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿಗಳಾದ ವಿಜಯಲಕ್ಷ್ಮಿ, ವಿಜಯ್ ಜಿ., ವಿಜಯ್ ಟಿ.ಜೆ., ನರಸಪ್ಪ, ಪ್ರಕಾಶ್, ಮಹಿಪತಿ, ಶರಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮತದಾರರ ಪಟ್ಟಿಯಲ್ಲಿನ ಹೆಸರು ಮತ್ತು EPIC ವಿವರಗಳನ್ನು ಪ್ರತಿಯೊಬ್ಬರೂ ಪರಿಶೀಲಿಸಿಕೊಂಡು, ಯಾವುದೇ ಸಮಸ್ಯೆ ಕಂಡುಬಂದಲ್ಲಿ ನಿಗದಿತ ಅವಧಿಯೊಳಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ.

Related Articles

Leave a Reply

Your email address will not be published. Required fields are marked *

Back to top button