ಇಂಟರ್ ನ್ಯಾಷನಲ್ ವುಮೆನ್ಸ್ ಕಾಫಿ ಕಾರ್ಮಿಕರ ಅಭಿವೃದ್ಧಿ ನಮ್ಮ ಗುರಿ – ಆರತಿ ಸೋಮಯ್ಯ ಅಧ್ಯಕ್ಷರು. ಬೆಂಗಳೂರು.

ಇಂಟರ್ ನ್ಯಾಷನಲ್ ವುಮೆನ್ಸ್ ಕಾಫಿ ಕಾರ್ಮಿಕರ ಅಭಿವೃದ್ಧಿ ನಮ್ಮ ಗುರಿ – ಅಧ್ಯಕ್ಷರಾದ ಆರತಿ ಸೋಮಯ್ಯ
ಬೆಂಗಳೂರು.ಇಂಟರ್ ನ್ಯಾಷನಲ್ ವುಮೆನ್ಸ್ ಕಾಫಿ ಕಾರ್ಮಿಕರ ಅಭಿವೃದ್ಧಿ ನಮ್ಮ ಗುರಿ ಎಂದು ಅಧ್ಯಕ್ಷರಾದ ಆರತಿ ಸೋಮಯ್ಯ ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು. ಭಾರತದಾದ್ಯಂತ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಮಹಿಳಾ ಕಾಫಿ ತೋಟದ ಕಾರ್ಮಿಕರು, ಅವರ ಹೆಣ್ಣುಮಕ್ಕಳು ಮತ್ತು ಕುಟುಂಬಗಳ ಕಲ್ಯಾಣಕ್ಕಾಗಿ ವಾರ್ಷಿಕ ನಿಧಿ ಸಂಗ್ರಹಣೆ ಮತ್ತು ವಿವಿಧ ಕಾಫಿ ಪ್ರಭೇದಗಳು ಹಾಗೂ ಉತ್ಪನ್ನಗಳನ್ನು ಪ್ರದರ್ಶಿಸುವ ಗುರಿಯೊಂದಿಗೆ ದಿನಾಂಕ 26/09/2026 ಮತ್ತು 27/09/2026 ರಂದು ಬೆಳಿಗ್ಗೆ 10 ಗಂಟೆಯಿಂದ ಬೆಂಗಳೂರಿನ ರಾಜಾಜಿನಗರದಲ್ಲಿರುವ ಬ್ರಿಗೇಡ್ ಗೇಟ್ ವೇ ಓರಿಯನ್ ಮಾಲ್ ನಲ್ಲಿ 8 ನೇ ಆವೃತ್ತಿಯ ಕಾಫಿ ಸಂತೆ 2026 ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಸುಮಾರು 60 ಮಳಿಗೆಗಳು, ಕಾಫಿ ಬೆಳೆಗಾರು, ಉದ್ಯಮಿಗಳು, ದೇಶ ವಿದೇಶಗಳಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಾಫಿ ತಜ್ಞರು, ಆಯೋಜಕರು ಸೇರಿದಂತೆ ಸುಮಾರು 1000 ಜನ ಸೇರುವ ಬಗ್ಗೆ ಮಾಹಿತಿ ತಿಳಿಸಿದರು. ಇಂಟರ್ ನ್ಯಾಷನಲ್ ವುಮೆನ್ಸ್ ಕಾಫಿ ಅಲೈಯನ್ಸ್(IWCA) ವತಿಯಿಂದ ಅಧ್ಯಕ್ಷರಾದ ಆರತಿ ಸೋಮಯ್ಯ ಸೊನಾಲಿ ಮೆನನ್ , ಅಮೂಲ್ಯ, ರಾಧಿಕ, ದೀಪಾಲಿ, ಸಾಂಗ್ಯ, ರಾಸಿಕ ರವರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು . ವರದಿ. ಮಂಜುಳಾ ರೆಡ್ಡಿ.




