ಕನಕಗಿರಿಯಲ್ಲಿ ಛತ್ರಪತಿ ಶಿವಾಜಿ ಜಯಂತಿ ಮತ್ತು ಹಿಂದೂ ಸಾಮ್ರಾಜ್ಯೋತ್ಸವದ ಆಚರಣೆ.*

*ಕನಕಗಿರಿಯಲ್ಲಿ ಛತ್ರಪತಿ ಶಿವಾಜಿ ಜಯಂತಿ ಮತ್ತು ಹಿಂದೂ ಸಾಮ್ರಾಜ್ಯೋತ್ಸವದ ಆಚರಣೆ.*
ಕನಕಗಿರಿ, ಪಟ್ಟಣದಲ್ಲಿ ಕನಕಗಿರಿ ಮತ್ತು ಕಾರಟಗಿ ರಸ್ತೆಗೆ ಹೊಂದಿಕೊಂಡಿರುವ ಮಲ್ಲಿಗೆವಾಡ ವೃತ್ತದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ತಾಯಿ ರಾಷ್ಟ್ರ ಮಾತಾ ಜೀಜಾಬಾಯಿ ಸರ್ಕಲ್ ಶನಿವಾರ ಸ್ಥಾಪಿಸಿ, ಉದ್ಘಾಟನೆ ಮಾಡಲಾಯಿತು
ನಂತರ ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ತಾಯಿ ಭಾರತಾಂಬೆಯ ಭಾವಚಿತ್ರದ ಮೆರವಣಿಗೆಯೊಂದಿಗೆ ಕನಕಗಿರಿಯ ತೇರು ಹನುಮಪ್ಪನ ದೇವಸ್ಥಾನದಿಂದ ಪ್ರಾರಂಭಗೊಂಡು ರಾಜಬೀದಿ ಮುಖಾಂತರ ಶ್ರೀ ಕನಕ ಚಲಪತಿ ದೇವಸ್ಥಾನದವರೆಗೆ ಮೆರವಣಿಗೆ ವಿಜೃಂಭಣೆಯಿಂದ ಮಾಡಲಾಯಿತು.
ಈ ಸಂದರ್ಭದಲ್ಲಿ ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷರಾದ ಅಂಬಣ್ಣ ಮಹಿಪತಿ, ಉಪಾಧ್ಯಕ್ಷ ಸಣ್ಣ ನಾಗರಾಜ್ ಮರಾಠ, ಸುರೇಶ್ ವಾಲಿಕಾರ್, ಪ್ರಕಾಶ್ ಮಹಿಪತಿ, ಬೈರೋಜಿ ವಾಲಿಕಾರ್, ಕುಮಾರ್ ಮರಾಠ್, ವೆಂಕೋಬ ವಾಲಿಕಾರ್, ಬಸವರಾಜ್ ಪೈದೊಡ್ಡಿ, ಭೈರಪ್ಪ ಅರೇರ್, , ಲಕ್ಷ್ಮಿ ಖಂಡೋಜಿ, ಮಂಜುಳಾ ಪರಸಪ್ಪ, ವಿಜಯಲಕ್ಷ್ಮಿ ಕೃಷ್ಣ, ಮಮತಾ ನಾರಾಯಣಪ್ಪ, ಅಯ್ಯನಗೌಡ ಹನುಮೇಶ್ ಗಂಗಾಮತ ಪೃಥ್ವಿ ಕುಮಾರ್ ವೆಂಕೋಬ್ ಪೂಜಾರ್ ಗೋಪಿನಾಥ್ ಗೊಂದಳೆ ಸಂಪತ್ ಕಿರಣ್ ಕುಮಾರ್ ಸೇರಿ ಹಿಂದೂ ಸಮಾಜದ ಗುರುಹಿರಿಯರು ಮುಖಂಡರು ಯುವಕರು ಮಹಿಳೆಯರು ಹಾಗೂ ಪಟ್ಟಣದ ಸಾರ್ವಜನಿಕರು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ





