ಎಂ. ಪಿ. ಶ್ರೀ ಕುಮಾರ ನಾಯಕರವರ ಕ್ಷೇತ್ರದಲ್ಲಿ ಕನ್ನಡ ಬೆಳೆಯುತ್ತದೆ……ಗೋರೂರು ಚನ್ನಬಸಪ್ಪ.

ಕನ್ನಡ ನಾಡದೇವತೆ ಭುವನೇಶ್ವರಿಗೆ ಸಂಸದರಿಂದ ಪುಷ್ಪಾರ್ಚನೆ.
ಕುಮಾರ ನಾಯಕರವರ ಕ್ಷೇತ್ರದಲ್ಲಿ ಕನ್ನಡ ಬೆಳೆಯುತ್ತದೆ:ಗೋರೂರು ಚನ್ನಬಸಪ್ಪ.
ರಾಯಚೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿಯನ್ನು ಬೆಳಗಿಸುವ ಮೂಲಕ ಚಾಲನೆ ನೀಡಿದ ಅವರು ಬೆಂಗಳೂರಿನಂತಹ ಪಟ್ಟಣಗಳಲ್ಲಿ ಕನ್ನಡವೂ ಅಳಿವಿನಂಚಿಗೆ ಇದ್ದು ,ಕುಮಾರ ನಾಯಕರ ಲೋಕಸಭಾ ಕ್ಷೇತ್ರದಲ್ಲಿ ಕನ್ನಡ ನಾಡು ನುಡಿ ಬೆಳೆಯುತ್ತಿರುವುದು ಅತ್ಯಂತ ಸಂತೋಷ ಸಂಗತಿ ಎಂದು ಸಮ್ಮೇಳನ ಅಧ್ಯಕ್ಷರಾದ ಡಾ ನಾಡೋಜ ಗೊ.ರು.ಚನ್ನಬಸಪ್ಪ ಅವರು ಆಶಯವನ್ನು ವ್ಯಕ್ತಪಡಿಸಿದರು, ಕನ್ನಡ ನಾಡು ನುಡಿಗಾಗಿ ಎಲ್ಲರೂ ಎಲ್ಲರೂ ಒಂದಾಗಬೇಕಾಗಿದೆ ಕನ್ನಡವನ್ನು ಬಳಸುವುದು ಬೆಳೆಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಮಾತನಾಡಿದರು,
ತದನಂತರ ರಾಯಚೂರು ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದರಾದ ಜಿ ಕುಮಾರ ನಾಯಕರವರು ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದವರು, ಕನ್ನಡ ಕರ್ನಾಟಕ ಇಡೀ ದೇಶದ ಎಲ್ಲರೂ ಕನ್ನಡವನ್ನು ಅನುಷ್ಠಾನಗೊಳಿಸಬೇಕಾಗಿದೆ, ಕನ್ನಡ ನಾಡು ನುಡಿ ಸಂಸ್ಕೃತಿ ಕನ್ನಡ ನಾಡಿನ ಸಾಮ್ರಾಜ್ಯದ ಕುರಿತು ಸಿಕ್ಕ ಸಿಕ್ಕ ಅವಕಾಶಗಳಲ್ಲಿ ಕನ್ನಡವನ್ನು ಬಳಸಿಕೊಳ್ಳುಬೇಕಾಗಿದೆ ಒಂದು ಮಾತನಾಡಿದರು ಈ ಸಂದರ್ಭದಲ್ಲಿ ಸಮ್ಮೇಳನದ ಗೌರವಾಧ್ಯಕ್ಷರಾದ ನಾಡೋಜ ಗೋರೂರು ಚೆನ್ನಬಸಪ್ಪ, ಶಾಂತ ಮಲ್ಲ ಶಿವಾಚಾರ್ಯರು, ತಾಲೂಕು ಸಾಹಿತ್ಯ ಪರಿಷತ್ನ ಅಧ್ಯಕ್ಷರು ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಕನ್ನಡ ಅಭಿಮಾನಿಗಳು ಹಾಜರಿದ್ದರು.



