ದುರಾಸೆಯ ರನ್ಯರಾವ್ ಳಿಂದ, ಸಜ್ಜನ ತಂದೆಯ ವ್ಯಕ್ತಿತ್ವಕ್ಕೆ ಧಕ್ಕೆ. ಆದರೂ ಸಹ ಶ್ರೀ ರಾವ್ ಅಧಿಕಾರಿ 24 ಕ್ಯಾರೆಟ್ ಚಿನ್ನ.

ದುರಾಸೆಯ ರನ್ಯ ರಾವ್ಳಿಂದಾಗಿ , ಸಜ್ಜನ ತಂದೆಯ
ವ್ಯಕ್ತಿತ್ವಕ್ಕೆ ಧಕ್ಕೆ. ಆದರೂ ಸಹ ಶ್ರೀ ರಾವ್ 24 ಕ್ಯಾರೆಟ್ ಚಿನ್ನ.
ದುರಾಸೆಯ ರನ್ಯಳ ಎಡವಟ್ಟಿನಿಂದ ರನ್ಯರಾವ್ ಳಿಂದ, ಸಜ್ಜನ ತಂದೆಯ ವ್ಯಕ್ತಿತ್ವಕ್ಕೆ ಧಕ್ಕೆ.
ಆಸೆಗೂ ಮಿತಿ ಇರುತ್ತದೆ ವಯಸ್ಸಿನ ತುಡಿತವೋ, ಐಶಾರಾಮಿ ಜೀವನದ ಮೋಹವೊ, ಹಣ ಗಳಿಕೆಯ ಹಪಹಪಿಯೋ, ಮೋಜಿನ ಜೀವನದ ಆಕರ್ಷಣೆಯೊ, ಹಣ ಗಳಿಕೆಯ ಹುಂಬತನವೋ, ದುರ್ಬುದ್ದಿಯ ಪರಕಾಷ್ಟೆಯೋ ಒಂದೂ ತಿಳಿಯದಾಗಿದೆ. ಒಟ್ಟಿನಲ್ಲಿ ರನ್ಯಾರಾವ್ ತನ್ನ ಮೋಜಿನ ಜೀವನಕ್ಕಾಗಿ ತಂದೆಯ ಪ್ರತಿಷ್ಠೆ ಮಾನ ಮರ್ಯಾದೆ ಹಾಳು ಮಾಡಿಬಿಟ್ಟಳು. ಬಿಳಿ ಹಾಳೆ ಹನಿ ಮಸಿಯಿಂದ ಕೆಟ್ಟಿತು ಎನ್ನುವಂತೆ ಸರಳ ಸಜ್ಜನಿಕೆಯ ರಾವ್ ಪೊಲೀಸ ಅಧಿಕಾರಿಯ ಹೆಸರಿಗೆ ಕಳಂಕ ತಟ್ಟಿತು
ಹೆಣ್ಣು ಮನೆಯ ದೀಪ ಹೆಣ್ಣು ಸಂಸಾರದ ಕಣ್ಣು , ಹೆಣ್ಣು ಹುಟ್ಟಿದ ಮನೆ ತಣ್ಣಗೆ ಹೆಣ್ಣು Tensen ಅಲ್ಲ. equal in to 10 sons ಎಂದು ನಾನು ನನ್ನ ಗೆಳೆಯರಿಗೆ ಹಿತೈಷಿಗಳಿಗೆ ಹೇಳುತ್ತಾ ಇದ್ದೆ. ಹಲವಾರು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದೇನೆ ಆದರೆ ರನ್ಯಾ ರಾವ್ ಅವಳ ವಿಚಾರದಲ್ಲಿ ನನಗೆ ಮುಜುಗರ ಮತ್ತು ಅಸಹ್ಯವಾಯಿತು.
ಸಂಭಾವಿತ ಸದೃಢ ಕರ್ತವ್ಯನಿಷ್ಠ ಅಧಿಕಾರಿ ಶ್ರೀ ರಾವ ಅವರು ಸದ್ದು ಗದ್ದಲವಿಲ್ಲದೆ ಎಲೆ ಮರೆಯ ಕಾಯಿಯಂತೆ ಪೊಲೀಸ್ ಇಲಾಖೆಯಲ್ಲಿ ತಮ್ಮ ಸರಳತೆ ಕರ್ತವ್ಯ ನಿಷ್ಠೆಯಿಂದ ಇದ್ದವರು ಹೆಸರುವಾಸಿಯಾಗಿದ್ದವರು.
ದಿನಾಂಕ 6.3.20 25 ರಂದು ಸಾಮಾಜಿಕ ಜಾಲತಾಣಗಳಲ್ಲಿ ಟಿವಿ ಗಳಲ್ಲಿ ರಾವ್ ಅವರ ಮಗಳು ರನ್ಯ ರಾವ್ ಅವಳ ಕರ್ಮಕಾಂಡವನ್ನು ನೋಡಿ ಮುಜುಗರವಾಯಿತು ಕೆಲವು ಯೂಟ್ಯೂಬ್ ಗಳಲ್ಲಿ ರಾವ್ ಅವರ ಚಿಕ್ಕ ಫೋಟೋ ನೋಡಿ ನಾನು ಹೌಹಾರಿದನು. ರನ್ಯಾ ರಾವ್ನ ನನ್ನ ಆತ್ಮೀಯ ಅಧಿಕಾರಿಯ ಮಗಳಾ? ಎಂದು ನನ್ನನ್ನೇ ನಾನು ಪ್ರಸ್ನಿಸಿಕೊಂಡೆನು. ದಿಗ್ಭ್ರಮೆಗೊಂಡೆನು. ಸಾಧು ಹೊಟ್ಟೆಯಲ್ಲಿ ಸೈತಾನ್ ಹುಟ್ಟಿತ್ತಲ್ಲ ಎಂದು ಹಪಪಿಸಿಕೊಂಡೆನು.
ಹೀಗಾಗಬಾರದಾಗಿತ್ತು ಆದರೆ ಇದು ಕಲಿಯುಗ ಈ ಕಲಿಯುಗದಲ್ಲಿ ಒಳ್ಳೆಯವರೇ ಟಾರ್ಗೆಟ್ ಆಗುತ್ತಾರೆ ಶ್ರಮ ಜೀವಿಗಳಿಗೆನೇ ಕಷ್ಟ ನಷ್ಟ ತೊಂದರೆ ಹೆಚ್ಚಾಗಿ ಬರುತ್ತದೆ. ರಾವ್ ಅವರ ಪೂರ್ಣ ಹೆಸರು ಅವರ ಭಾವಚಿತ್ರ ಈ ಸಂದರ್ಭದಲ್ಲಿ ತೋರಿಸುವುದಿಲ್ಲ ಕೆದಕುವುದಿಲ್ಲ. ಯಾಕಂದರೆ ನನ್ನ ಹಿತೈಷಿಗಳು ಪ್ರಾಂತಸ್ಮರಣೀಯರಾದ ರಾವ್ ಇವರನ್ನು ಸಾರ್ವಜನಿಕವಾಗಿ ಬೆತ್ತಲೆಯಾಗಿಸಲು ನಾನು ಬಯಸುವುದಿಲ್ಲ. ಆದರೆ ರಾವ್ ಅವರು ಎಂತಹ ವ್ಯಕ್ತಿತ್ವದವರು ನನ್ನ ಜೀವನದಲ್ಲಿ ಪ್ರಾಂತಸ್ಮರಣೀಯರು ಎಂದು ಯಾಕೆ ಹೇಳುತ್ತೇನೆ ಎಂದರೆ?
2002 ರಲ್ಲಿ ಕಲಬುರಗಿ ಜಿಲ್ಲೆಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಲೋಕ್ ಕುಮಾರ್ ( ಸದ್ಯ ಎಡಿಜಿಪಿಯಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.) ಅವರಲ್ಲಿ ಒಂದು ಕೆಲಸ ಮಾಡಿಸಿಕೊಂಡಿದ್ದೆ ಅದೆಂದರೆ, ನನ್ನ ಗ್ರಾಮದಲ್ಲಿ ಮಟಕ ಹಾವಳಿ ತುಂಬಾ ಹೆಚ್ಚಾಗಿತ್ತು ಅಷ್ಟೇ ಅಲ್ಲ ಮಟಕಾ ಬುಕ್ಕಿಗಳಿಂದ ಹಣ ವಸೂಲಿ ಮಾಡಿಕೊಂಡು ( ತಾವೂ ಕೂಡ ಮಠಕಾ ಬರೆದುಕೊಳ್ಳುತ್ತಿದ್ದರು ) ಕೆಲ ಅರೆಬರೆ ಚಿಲ್ಲರೆ ಪುಡಾರಿಗಳು ಗ್ರಾಮದಲ್ಲಿ ತುಂಬಾ ಮೆರೆಯುತ್ತಿದ್ದರು. ನನ್ನ ಗ್ರಾಮ ಬಿಟ್ಟು ಕಲಬುರ್ಗಿಯಲ್ಲಿ ನೆಲೆಸಿದ ನನಗೆ ಹಲವಾರು ಬಗಯ ಕಿರುಕುಳ ಕೊಡುತ್ತಿದ್ದರು ಇದರಿಂದಾಗಿ ಅಂದಿನ ಪೊಲೀಸ್ ವರಿಷ್ಠಾಧಿಕಾರಿಗಳಾಗಿದ್ದ ಶ್ರೀ ಅಲೋಕ್ ಕುಮಾರ್ ಅವರ ಎಸ್. ಪಿ. ಕಾರ್ಯಾಲಯಕ್ಕೆ ಹೋಗಿ ನನ್ನ ಗ್ರಾಮದಲ್ಲಿ ನಡೆಯುತ್ತಿರುವ ಮಟಕಾ ಹಾವಳಿ ಮತ್ತು ಚಿಲ್ಲರೆ ಪುಡಾರಿಗಳ ಹಾವಳಿ ಅವರ ಗಮನಕ್ಕೆ ತಂದು ಇದನ್ನು ನಿಯಂತ್ರಿಸಲು ಶ್ರೀ ಅಲೋಕ್ ಕುಮಾರ್ ಅವರನ್ನು ಪ್ರಾರ್ಥಿಸಿಕೊಂಡನು. ಅಂದಿನ ದಿನಗಳಲ್ಲಿ ಶ್ರೀ ಅಲೋಕ್ ಕುಮಾರ್ ಎಸ್ ಪಿ ಅವರು ಎರಡನೆಯ ಸಾಂಗ್ಲಿಯಾನ ಎಂದು ಕಲಬುರಗಿ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿದ್ದರು. ಕಲ್ಬುರ್ಗಿ ನಗರದ ಹೊರವಲಯದಲ್ಲಿರುವ ಖಜೂರಿ ಕ್ರಾಸ್ ನಲ್ಲಿ ನಡೆದ ಕೊಲೆ ಪ್ರಕರಣವನ್ನು ಮೂರು ಗಂಟೆಯಲ್ಲಿಯೇ ಭೇಧಿಸಿ ಕೊಲೆಗಾರರ ಎಡಮುರಿಗೆ ಕಟ್ಟಿದ್ದ ಧೀಮಂತ ಅಧಿಕಾರಿ. ಅಂತಹ ಅಧಿಕಾರಿಯ ಎದುರು ನನ್ನ ಸಮಸ್ಯೆಯನ್ನು ಹೇಳಿದಾಗ ಸುರಪುರ ಪೊಲೀಸ್ ಠಾಣೆಯ ಪಿ..ಎಸ್ಐ. ಪಿ.ಐ. ಎ ಎಸ್ಐ ಅವರನ್ನು ಫೋನಿನಲ್ಲಿಯೇ ತರಾಟೆಗೆ ತೆಗೆದುಕೊಂಡು ನನ್ನ ಸಮಸ್ಯೆಯನ್ನು ಒಂದೇ ದಿನದಲ್ಲಿ ಬಗೆಹರಿಸಬೇಕೆಂದು ವಾರ್ನಿಂಗ್ ಮಾಡಿದರು. ನೀವು ಸುರಪುರ ಠಾಣೆಯ ಅಧಿಕಾರಿಗಳಿಗೆ ಭೇಟಿಯಾಗಿರಿ ಎಂದು ಹೇಳಿ ನನ್ನನ್ನು ಅಲ್ಲಿಂದ ಕಳುಹಿಸಿದರು. ನಾನು ಸುರಪುರ ಠಾಣೆಯ ಎಲ್ಲಾ ಅಧಿಕಾರಿಗಳನ್ನು ಭೇಟಿಯಾಗಿ ನನ್ನ ಸಮಸ್ಯೆಯನ್ನು ಹೇಳಿದಾಗ ಯಾವೊಬ್ಬ ಅಧಿಕಾರಿಯೂ ಕಮಕ ಕೀಮಕ್ ಎನ್ನದೆ ನನ್ನ legal work ಸರಳವಾಗಿ ಬಗೆಹರಿಸಿ ಕೊಟ್ಟರು ಸುರಪುರ ಠಾಣೆಯ ಅಧಿಕಾರಿಗಳು ನನ್ನನ್ನು ಗೌರವಯುತವಾಗಿ ಕಾಣಲಾರಂಭಿಸಿದರು.
ಕೆಲವು ತಿಂಗಳ ನಂತರ ಶ್ರೀ ಅಲೋಕ್ ಕುಮಾರ್ ಅವರು ವರ್ಗಾವಣೆಗೊಂಡು ಆ ಜಾಗಕ್ಕೆ ಕಲಬುರ್ಗಿಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ರಾವ್ ಅವರು ಅಧಿಕಾರ ವಹಿಸಿಕೊಂಡರು. ಎಸ್ ಪಿ ರಾವ್ ಅವರು ಸಂಬಾವಿತರಿದ್ದಾರೆ ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಮಾತನಾಡಿಕೊಳ್ಳುತ್ತಿದ್ದರು. ಕಲಬುರಗಿ ಜಿಲ್ಲೆಯ ಎಲ್ಲಾ ಠಾಣೆಗಳಲ್ಲಿಯೂ ವರಿಷ್ಠಾಧಿಕಾರಿ ತುಂಬಾ ಮೃದು ಸ್ವಭಾವದವರು ಎಂದೇ ಆಡಿಕೊಳ್ಳುತ್ತಿದ್ದರು.
ಈ ವಿಷಯವನ್ನರಿತ ನನ್ನ ಗ್ರಾಮದ ಚಿಲ್ಲರೆ ಲೀಡರ್ ಗಳು ಮತ್ತೆ ತಮ್ಮ ಬಾಲ ಬಿಚ್ಚಲಾರಾಂಭಿಸಿದರು. ಚಿಗುರಲಾರಂಭಿಸಿದರು. ಊರಲ್ಲಿ ಮಟಕಾ ದಂಧೆ ಪುನಃ ಆರಂಭವಾಯಿತು ಜೊತೆಗೆ ನನಗೆ ತೊಂದರೆ ಕೊಡಲಾರಂಬಿಸಿದರು ಚಿಲ್ಲರೆ ಲೀಡರಿಗೆ ಮಟಕ ಬುಕ್ಕಿಗಳು ಖರ್ಚಿಗೆ ದುಡ್ಡು ಕೊಡುತ್ತಿದ್ದರು ಆ ದುಡ್ಡಿನಿಂದ ಗ್ರಾಮದಲ್ಲಿ ಈ ಚಿಲ್ಲರೆ ನಾಯಕರು ಬಿಲ್ಡಪ್ ಕೊಡಲಾರಂಬಿಸಿದರು ನನ್ನ ಮೇಲೆ ಆಕ್ರಮಣಗಳು ನಡೆಯಲಾರಂಭಿಸಿದವು ಸುರಪುರ ಪೊಲೀಸ್ ಅಧಿಕಾರಿಗಳು ನನ್ನನ್ನು ನಿರ್ಲಕ್ಷಿಸಲಾರಂಭಿಸಿದರು ಚಿಲ್ಲರೆ ನಾಯಕರ ಕೈ ಮೇಲಾಗಲಾರಂಬಿಸಿತು ಸುರಪುರ ಪೊಲೀಸ್ ಠಾಣೆಯಲ್ಲಿ ಅವರದೇ ದರ್ಬಾರು ಪ್ರಾರಂಭವಾಯಿತು ಅಂದಿನ ಪಿ ಐ ನಾಗರಾಜ್ ಅಂಬಲಿ ಕಂಚಿನ ಕಿವಿ ಉದೀದ ಪುಡಾರಿಗಳು ನನ್ನ ವಿರುಧ ಎತ್ತಿ ಕಟ್ಟಿದರು ನಂಗೆ ಕಿರುಕುಳ ಮಾಡಲಾರಂಬಿಸಿದ್ದರು ಆಗ ನನಗೆ ದಿಕ್ಕು ತೋಚದಂತಾಯಿತು ಅಸಹಾಯಕನಾದೆ ಹುಟ್ಟಿನಿಂದಲೂ ಒಂಟಿ ಸಲಗದಂತೆಯೇ ಜೀವನ ಮಾಡುತ್ತಿದ್ದ ನನಗೆ ಈ ಸಮಯ ನನಗೆ ತುಂಬಾ ಕಷ್ಟದಾಯಕ ಎನಿಸಲಾರಂಭಿಸಿತು.
ಕಲಬುರ್ಗಿ ಜಿಲ್ಲೆಗೆ ಹೊಸತಾಗಿ ಬಂದಿದ್ದ ವರಿಷ್ಠ ಅಧಿಕಾರಿ ತುಂಬಾ ಮೃದು ಎಂದು ಪ್ರಚಲಿತವಾಗಿತ್ತು ಆದರೂ ನಾನು ಧೃತಿಗೆಡದೆ ಒಂದು ದಿನ ಮಧ್ಯಾಹ್ನ 3 ಗಂಟೆಗೆ ಕಲಬುರ್ಗಿ ಜಿಲ್ಲೆಯ ವರಿಷ್ಠಾಧಿಕಾರಿಗಳ ಚೇಂಬರ್ನಗೆ ಹೋದೆನು , ರಾವ್ ಅವರನ್ನು ಭೇಟಿಯಾಗಿ ಅವರ ಎದುರು ನನ್ನ ಎಲ್ಲಾ ಸಮಸ್ಯೆ ಹಾಗೂ ಮಟಕಾ ದಂಧೆ ಜೋರಾಗಿ ನಡೆಯುತ್ತಿದೆ ಸರ್ ಎಂದು ಹೇಳಿದೆನು. ಹಿಂದಿನ ಎಸ್. ಪಿ. ಅಲೋಕ್ ಕುಮಾರ್ ಅವರ ಖಡಕ್ತನವನ್ನು ಹೇಳಿದನು . ನೀವು ತುಂಬಾ ಮೃದು ಅಂತೆ? ಎಂದು ರಾವ ಅವರಿಗೆ ಪ್ರಶ್ನೆ ಮಾಡಿದಾಗ ಅಲ್ಲಿಯವರೆಗೂ ಶಾಂತ ಚಿತ್ತದಿಂದ ನನ್ನ ಮಾತು ಕೇಳುತ್ತಿದ್ದ ರಾವ್ ಅವರು ನಗಲಾರಂಭಿಸಿದರು ನನ್ನ ಮುಖ ನೋಡಿ ಏನೊಂದು ಅನ್ನದೇ ಟೇಬಲ ಮೇಲಿರುವ ಫೋನ್ ಎತ್ತಿಕೊಂಡು ಯಾರಿಗೋ ಮಾತನಾಡಿ, ನನ್ನ ಕಡೆಗೆ ತಿರುಗಿ ಕಟ್ಟಡದ ನೆಲಮಹಡಿಯಲ್ಲಿ ಡಿಸಿಆರ್ ಬಿ ಸೆಕ್ಷನ್ ಇದೆ ಅಲ್ಲಿ ಚಿಪ್ಪಾರ್ ಎಂಬ ಅಧಿಕಾರಿ ಇದ್ದಾರೆ ಅವರನ್ನು ಭೇಟಿಯಾಗಿರಿ ಎಂದು ಹೇಳಿ ಕಳಿಸಿದರು. ರಾವ್ ಅವ್ರಿಗೆ ಧನ್ಯವಾದ ಅರ್ಪಿಸಿ ನೆಲ ಮಾಹಡಿಗೆ ಬಂದು ಚಿಪ್ಪಾರ್. ಡಿ.ಎಸ್.ಪಿ.ಅವರನ್ನು ಭೇಟಿಯಾಗಿ ನನ್ನ ಸಮಸ್ಯೆ ಎಲ್ಲವನ್ನು ಹೇಳಿದನು. ಚಿಪ್ಪಾರ್ ಅವರು ನನ್ನ ಮಾತನ್ನು ಶಾಂತಚಿತ್ತದಿಂದ ಆಲಿಸಿದರು ಚೆನ್ನಾಗಿ ಪ್ರತಿಕ್ರಿಯಿಸಿದರು ತಮ್ಮ ಆಫೀಸಿನ ಶ್ರೀ ಶಿವಾನಂದ್ H.C. ಹಾಗೂ ಮಹೆಬೂಬ್ ಎಚ್ ಸಿ ಅವರನ್ನು ಕರೆದು ನನಗೆ ಪರಿಚಯ ಮಾಡಿಸಿದರು ಇವರೊಂದಿಗೆ ನಾಳೆ ದೇವಪುರ ಗ್ರಾಮಕ್ಕೆ ಹೋಗಿ ಮಟ್ಕಾ ಬುಕ್ಕಿಗಳ ವಿವರಣೆಯನ್ನು ಕಲೆಕ್ಟ್ ಮಾಡಬೇಕು ಒಂದೆರಡು ದಿನ ಅಲ್ಲಿಯೇ ವಾಸ್ತವ ಹೂಡಿದರು ಪರವಾಗಿಲ್ಲ ಎಂದು ಅವರಿಗೆ ಹೇಳಿದರು ನಿಮ್ಮ ಕೆಲಸ ಒಂದು ವಾರದಲ್ಲಿ ಮಾಡಿ ಮುಗಿಸುತ್ತೇನೆ ಎಂದು ಚಿಪ್ಪಾರ್ ಸರ್ ನನಗೆ ಭರವಸೆ ಕೊಟ್ಟರು.
ಡಿಎಸ್ಪಿ ಚಿಪ್ಪಾರ್ ಸರ್ ಆದೇಶದಂತೆ ಮರು ದಿನ ಶಿವಾನಂದ್ H.C ಮತ್ತು ಮಹಬೂಬ್ HC ಇಬ್ಬರು ನನ್ನೊಂದಿಗೆ ದೇವಪುರಕ್ಕೆ ಬಂದು 2 ದಿನ ನನ್ನ ಗ್ರಾಮದಲ್ಲಿಯೇ ಉಳಿದುಕೊಂಡು ಸಮಗ್ರ ಮಾಹಿತಿಯನ್ನು ಸಂಗ್ರಹಿಸಿಕೊಂಡರು ಮಟಕಾ ಬುಕ್ಕಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಮತ್ತು ಸ್ವತಃ ತಾನೂ ಕೂಡ ಮಟಕಾ ಬರೆದುಕೊಳ್ಳುತ್ತಿದ್ದ ಅರೆಬರೆ ಚಿಲ್ಲರೆ ಲೀಡರ್ನನ್ನು ದೇವಪುರ ಕ್ರಾಸಿನಲ್ಲಿ ಮಟಕಾ ಚೀಟಿಗಳೊಂದಿಗೆ ರೂ. 10, 000/- ಹಣವನ್ನು ಸಹ ಅವನಿಂದ ಜಪ್ತಿ ಮಾಡಿದರು ಆ ಚಿಲ್ಲರೆ ಲೀಡರ್ ನನ್ನು ಸುರಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಲಾಕಪ್ ನಲ್ಲಿ ಹಾಕಿಸಿದರು ಆಗ ಪಿಐ ಅಂಬಲಿಯವರು ಎಗರಾಡಲಾರಂಭಿಸಿದರಂತೆ . ಇದೆಲ್ಲ ಕಟ್ಟುಕಥೆ ಸರ್. ಇದ್ಕಕೆಲ್ಲ ಕಾರಣ ದೇವಪುರದಲ್ಲಿರುವ ಆ ಒಬ್ಬ ಯುವಕ ಸುಳ್ಳು ಸುದ್ದಿ ಹೇಳಿದ್ದಾನೆಂದು ಚಿಪ್ಪಾರ್ ಸರ್ ರವರಿಗೆ ಮನವರಿಕೆ ಮಾಡಲಾರಭಿಸಿದಾಗ ಅಂಬಲಿ ಅವರೇ ಯಾರ ಮಾತನ್ನು ಕೇಳುವ ವ್ಯಕ್ತಿ ನಾನಲ್ಲ ಒಂದು ವಾರದಿಂದಲೂ ಡಿಸಿರ್ಬ್ ಯ ಇಬ್ಬರು HC ಗಳನ್ನು ಆ ಗ್ರಾಮದಲ್ಲಿ ಬಿಟ್ಟು ಸಮಗ್ರ ತಪಾಸಣೆ ಮಾಡಿ ಈ ಕೆಲಸ ಮಾಡಿದ್ದೇನೆ ಹೆಚ್ಚಿಗೆ ಕೂಗಾಡಿದರೆ ಎಸ್ ಪಿ ಅವರಿಗೆ ಕಂಪ್ಲೇಂಟ್ ಮಾಡುತ್ತೇನೆ ಎಂದು ನಾಗರಾಜ್ ಅಂಬ್ಲಿ ಪಿಐ ಅವರ ಬಾಯಿ ಮುಚ್ಚಿಸಿದರಂತೆ.
ಆ ದಿನಗಳಲ್ಲಿ ಆ ಸಂದರ್ಭದಲ್ಲಿ ನನಗೆ ತುಂಬಾ ಖುಷಿ ಆಯಿತು ನಾನು ನಿರಾಳನಾದೆನು ಅದೇ ಖುಷಿಯಲ್ಲಿ ಎಸ್‌ಪಿ ರಾವ್ ರನ್ನು ಅವರ ಚಂಬರ್ನಲ್ಲಿ ಭೇಟಿಯಾಗಿ ನನಗಾಗಿರುವ ಖುಷಿಯನ್ನು ಅವರೊಂದಿಗೆ ಹಂಚಿಕೊಂಡೆನು ಆಗಲೂ ಸಹ ರಾವ್ ಅವರು ಬರೀ ಮುಗುಳ್ನಗೆ ನಕ್ಕು ಒಳ್ಳೆಯದಾಗಲಿ ಎಂದು ವಿಶ್ ಮಾಡಿದರು.
ಮೃದು ಸ್ವಭಾವದ ಎಸ್ ಪಿ ರಾವ್ ಅವರು ತಮ್ಮ ಕಾಯಕದಲ್ಲಿಯೇ ಖಡಕ್ತನ ತೋರಿಸುವ ಅಧಿಕಾರಿ ಎಂಬುದು ಆ ಸಂದರ್ಭದಲ್ಲಿ ನನಗೆ ಮನವರಿಕೆ ಆಯಿತು.
ಬಹುಷಃ 2015-16 ಆಗಿರಬಹುದು
ಬೆಂಗಳೂರು ನಗರದಲ್ಲಿರುವ
ಮಹಾರಾಣಿ ಕಾಲೇಜಿನ ಪಕ್ಕದಲ್ಲಿರುವ ಕಟ್ಟಡದ ಮೂರನೆಯ ಮಹಡಿಯಲ್ಲಿರುವ ಕರ್ನಾಟಕ ರಾಜ್ಯ ಸಾರ್ವಜನಿಕ ಕುಂದು ಕೊರತೆಗಳ ಇಲಾಖೆ ಕಾರ್ಯಾಲಯಕ್ಕೆ ಹೋದಾಗ ಅಲ್ಲಿ ಐಜಿಪಿಯಾಗಿ ಇದೇ ಅಧಿಕಾರಿಗಳು ಇದ್ದರು ತಕ್ಷಣ ಅವರನ್ನು ಭೇಟಿಯಾಗಿ ಮಾತನಾಡಿಸಿದನು 15 ವರ್ಷಗಳ ನಂತರ ಅವರು ಆದೇ ಮಾತು ಅದೇ ಮುಗುಳ್ನಗೆ ಕೆಲಸದಲ್ಲಿ ಅಚ್ಚುಕಟ್ಟುತನ, ಅಲ್ಲಿಯೂ ಸಹ ನನ್ನ ಕೆಲಸವನ್ನು ಸಂಬಂಧಿಸಿದೆ ಅಧಿಕಾರಿಗಳಿಂದ ಒಂದು ವಾರದಲ್ಲಿಯೇ ಮಾಡಿಸಿಕೊಟ್ಟರು.
ಮಿತ ಭಾಷಿ ಖಡಕ್ ಅಧಿಕಾರಿ, ಅದರ ಮೇಲೆ ಮೃದು ಸ್ವಭಾವ ಮುಗುಳ್ನಗೆಯ ಪರದೆ ಹೊದ್ದುಕೊಂಡು ಶಾಂತ ಚಿತ್ತದಿಂದ ತಮ್ಮ ಕೆಲಸದಲ್ಲಿಯೇ ಮಗ್ನರಾಗಿ ಎಲೆ ಮರಿಯ ಕಾಯಿಯಂತೆ ಪೊಲೀಸ್ ಇಲಾಖೆಯಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕರ್ತವ್ಯ ನಿರ್ವಹಿಸಿದ ಶ್ರೀ ರಾವ್ ಅವರು ತಮ್ಮ ಸೇವಾ ಅವಧಿಯ ಕೊನೆ ಘಟ್ಟದಲ್ಲಿದ್ದಾಗ ಇಂತಹ ದುರ್ಘಟನೆ ಆಗಬಾರದಾಗಿತ್ತು
ಮನಸ್ಸು ಮೊಮ್ಮಲನೆ ಮರುಗುತ್ತಿದೆ ಭಗವಂತನು ಅವರಿಗೆ ಧೈರ್ಯ ಮಾನಸಿಕ ನೆಮ್ಮದಿ ಕೊಡಲಿ ಅವರಿಗೆ ಅಂಟಿಕೊಂಡಿರುವ ಕಳಂಕ ಆದಷ್ಟು ಬೇಗ ಕಳಚಿ ಬೀಳಲಿ ಬೆಂಕಿಯಲ್ಲಿ ಬೆಂದ ಚಿನ್ನ ಪರಿ ಶುದ್ಧವಾಗಿ ಪಳ ಪಳನೆ ಹೊಳೆಯುವಂತೆ ಇವರ ವ್ಯಕ್ತಿತ್ವ ಮತ್ತೆ ಪ್ರಜ್ವಲಿಸಲಿ ಎಂದು ಆ ಕಾಣದ ದೇವನಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಎಂ ಎ ಸುಗಂಧಿ ವಕೀಲರು ಪತ್ರಕರ್ತರು ಬೆಂಗಳೂರು 9731113141.



