ಪತ್ರಿಕೋದ್ಯಮ
ಕಾಯಕದ ಮಹತ್ವ ತಿಳಿಸಿದ ವಚನಕಾರ ಸಿದ್ದರಾಮ.

ಕಾಯಕದ ಮಹತ್ವ ತಿಳಿಸಿದ ವಚನಕಾರ ಸಿದ್ದರಾಮ.
12ನೇ ಶತಮಾನದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರು ಪ್ರತಿಪಾದಿಸಿದ ಕಾಯಕ ಸಿದ್ಧಾಂತವನ್ನು ಕಾರ್ಯರೂಪದಲ್ಲಿ ಅನುಷ್ಠಾನಗೊಳಿಸಿದ ವಚನಕಾರ ಸಿದ್ದರಾಮ. ತಾನೇ ಹಾರೆ, ಗುದ್ದಲಿ, ಪುಟ್ಟಿ-ತಟ್ಟೆ ಹಿಡಿಯುವ ಮೂಲಕ ಸಾವಿರಾರು ಕಾರ್ಮಿಕರನ್ನು ಉದ್ಯೋಗದಲ್ಲಿ ತೊಡಗಿಸಿಕೊಂಡು ಶ್ರಮಿಕ ವರ್ಗದ ಪ್ರತಿನಿಧಿಯಾಗಿದ್ದಾನೆ. ಸಿದ್ದರಾಮನು ಸಾವಿರಾರು ಕೆರೆಗಳು, ದೇವಾಲಯಗಳು, ಉದ್ಯಾನವನಗಳು, ದಾಸೋಹ ಕೇಂದ್ರಗಳನ್ನು ನಿರ್ಮಿಸುವ ಮೂಲಕ ಲೋಕೋಪಯೋಗಿ ಚಿಂತಕನಾಗಿದ್ದಾನೆಂದು ಸಿದ್ದರಾಮಯ್ಯ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಪಾಪಯ್ಯ ನಿ.
ಶಿಕ್ಷಕ ಹೇಳಿದರು.
ವಿವಿಧ ಇಲಾಖೆಗಳ ಸಯೋಗದಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಭೋವಿ ಸಮಾಜ ಹಾಗೂ ತಾಲೂಕ್ ನೊಳಂಬ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಸೇರಿ ಶಿವಯೋಗಿ ಸಿದ್ದರಾಮನ ಜಯಂತಿಯಲ್ಲಿ ಸಿದ್ದರಾಮನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಿದರು.
ಭೋವಿ ಸಮಾಜದ ತಾಲೂಕು ಅಧ್ಯಕ್ಷ ಈಶಪ್ಪ ಬಿ.ಸಿ. ಮಾತನಾಡಿ ಕಾಯಕಯೋಗಿ ಸಿದ್ದರಾಮ ನಮ್ಮ ಸಮಾಜದಲ್ಲಿ ಜನಸಿರುವುದಕ್ಕೆ ನಾವೆಲ್ಲ ಹೆಮ್ಮೆ ಪಡಬೇಕು. ಪ್ರತಿಯೊಂದು ಸಮಾಜಕ್ಕೂ ಸಿದ್ದರಾಮ ಪ್ರತಿಪಾದಿಸಿದ ಕಾಯಕತತ್ವ ಆದರ್ಶವಾಗಿದೆ ಎಂದರು.
ತಾಲೂಕು ನೊಳಂಬ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಲೋಹಿತ್ ಮಾತನಾಡಿ ಪ್ರತಿ ವರ್ಷವೂ ನೊಳಂಬ ಸಮಾಜ ಹಾಗೂ ಭೋವಿ ಸಮಾಜ ಸಿದ್ದರಾಮ ಜಯಂತಿಯನ್ನು ಜಂಟಿಯಾಗಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
ವಿನಯ್ ತಹಸಿಲ್ದಾರ್ ಸಿದ್ದರಾಮನ ಜೀವನ ಚರಿತ್ರೆ ಹಾಗೂ ಸಾಧನೆಗಳನ್ನು ಸ್ಮರಿಸಿ ಪಾಲಿಸಿದರೆ ಜಯಂತಿ ಯಶಸ್ವಿಯಾಗುತ್ತದೆ ಎಂದರು.
ಪಾಲಾಕ್ಷಪ್ಪ ನೊಳಂಬ ವೀರಶೈವ ಲಿಂಗಾಯತ ಸಮಾಜ, ಭೋವಿ ಸಮಾಜದ ತಾಲೂಕ್ ಗೌರವಾಧ್ಯಕ್ಷ ಸಣ್ಣ ಹನುಮಂತಪ್ಪ, ಸಂತೋಷ್ ಪ್ರಧಾನ ಕಾರ್ಯದರ್ಶಿ, ಶಾಂತಪ್ಪ ಪುನೇದಹಳ್ಳಿ, ಈಶ್ವರಪ್ಪ ಮಾಜಿ ತಾ. ಪಂ. ಸದಸ್ಯ, ಸುನಿಲ್ ಬಗರ್ ಹುಕುಂ ಸಮಿತಿ ಸದಸ್ಯ, ಆನಂದ್, ಉಪನ್ಯಾಸಕರಾದ ಕೆ.ಎಚ್. ಪುಟ್ಟಪ್ಪ, ಬಂಗಾರಪ್ಪ ಬಿ. ಮತ್ತಿತರ ಮುಖಂಡರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



