ಖಂಡಿತವಾದಿ ಲೋಕ ವಿರೋಧಿ, ಬಿ.ಆರ್.ಪಾಟೀಲ್ ಶಾಸಕರು, ಆಳಂದ.

ಖಂಡಿತವಾದಿ ಲೋಕ ವಿರೋಧಿ, ಬಿ.ಆರ್.ಪಾಟೀಲ್ ಶಾಸಕರು, ಆಳಂದ.
ಕರ್ನಾಟಕ ರಾಜ್ಯದ ಹಿಂದುಳಿದ ಉತ್ತರ ಕರ್ನಾಟಕ ಕಲ್ಯಾಣ ಕರ್ನಾಟಕ ಭಾಗದ ಆಳಂದ್ ವಿಧಾನಸಭಾ ಕ್ಷೇತ್ರದ ಶಾಸಕರೂ ಯೋಜನಾ ಆಯೋಗದ ಉಪಾದ್ಯಕ್ಷರೂ ಆಗಿರುವ ಪಾಟೀಲರು ರಾಜ್ಯ ಕಂಡ ಹಲವಾರು ಮುತ್ಸದ್ದಿ, ಪ್ರಜ್ಞಾವಂತ ರಾಜಕೀಯ ನಾಯಕರಲ್ಲೊಬ್ಬರು. ಹಲವಾರು ಬಾರಿ ಶಾಸಕರಾಗಿ, ಮಂತ್ರಿಗಳಾಗಿ ರಾಜ್ಯದ ಆಡಳಿತ ಕ್ಷೇತ್ರದಲ್ಲಿ ಭಾಗವಹಿಸಿ ನೈಪುಣ್ಯತೆ ತೋರಿದ ಜನಪ್ರತಿನಿಧಿ.
ಆದರೇ ಇಂದಿನ ದಿನಗಳಲ್ಲಿ ಇಂಥಹ ಸುಶೀಕ್ಷಿತ ಅನುಭವಿ ವ್ಯಕ್ತಿಗಳಿಗೆ ಬೆಲೆ ಇಲ್ಲದಂಥಾಗಿದೆ, ಬ್ರಹ್ಮಾಂಡ ಭ್ರಷ್ಟಾಚಾರಿಗಳೆಲ್ಲರೂ ಸೇರಿಕೊಂಡು ಇವರನ್ನು ಮೂಲೆಗುಂಪಾಗಿಸಿದ್ದಾರೆ. ಮಧಾಂಧ ಮುಖ್ಯಮಂತ್ರಿಯ ಅಷ್ಟದಿಕ್ಕುಗಳಲ್ಲಿಯೂ ವಂದಿಮಾಘದರೂ, ಬಕೇಟ ಬಾದಷಾಗಳು ಸುತ್ತುವರೆಡಿದ್ದು, ಸ್ಥೀಮಿತ ಕಳೆದುಕೊಂಡಿರುವ ಮುಖ್ಯಮಂತ್ರಿಗಳನ್ನು ಗೊಂಬೆಯoತೆ ತುದಿ ಬೆರಳಲ್ಲಿ ಆಡಿಸುತ್ತಿದ್ದಾರೆ.
ರಾಜ್ಯದಲ್ಲಿ ಸರಕಾರದ ವಿರುದ್ಧ ಯಾರೂ ಮಾತಾಡುವಂತಿಲ್ಲ, ಟೀಕಿಸುವಂತಿಲ್ಲ, ಹಾಗೇನಾದರೂ ಆದರೇ, ಪೊಲೀಸ ಕೇಸ್, ಎಫ್,ಐ.ಆರ್. ಜಡಿದೇ ಬಿಡುತ್ತಾರೆ. ಪಕ್ಷ ಮತ್ತು ರಾಜ್ಯದಲ್ಲಿ ಹೇಳುವವರಿಲ್ಲ ಕೇಳುವವರಿಲ್ಲವೆಂಬoತಾಗಿ ಆಡಳಿತದ ಹಡಗು ದಿಕ್ಕು ದೆಸೆಯಿಲ್ಲದೇ ಅಂಡಲೆಯುತ್ತಿದೆ.
ಮರಭೂಮಿಯಲ್ಲಿ ಓಯಸ್ಸಿಸ್ ಕಂಡoತೆ ಕರ್ನಾಟಕ ರಾಜ್ಯದಲ್ಲಿ ಕಾಂಗೈನಲ್ಲಿರುವ ಪ್ರಜ್ಞಾವಂತ ನಾಯಕರುಗಳಲ್ಲಿ ಜನಪರ, ಜನಾನುರಾಗಿ, ಕಾಳಜಿ ಕಳಕಳಿಯಿರುವ, ಮತ್ತು ನೀತಿ ಸಿದ್ದಾಂತಗಳನ್ನು ಹೊಂದಿರುವ ಹಿರಿಯ ಧುರೀಣರು ಬೆರಳೆಣಿಯಷ್ಟು ಜನರನ್ನು ಮಾತ್ರ ಕಾಣಬಹುದಾಗಿದೆ. ರಾಜ್ಯದಲ್ಲಿ ಕಾಂಗೈ ಪಕ್ಷದ ಮಾನ ಮರ್ಯಾದೆ ಕಾಯ್ದುಕೊಂಡು ಕಾಂಗೈ ಪಕ್ಷವನ್ನು ಮುಂದಿನ ದಿನಗಳಲ್ಲಿಯೂ ಅಧಿಕಾರಕ್ಕೆ ಬರಬೇಕು ಎಂಬ ಸದಾಶಯವನ್ನು ಹೊಂದಿರುವವರು ಕೆಲವೇ ಕೆಲ ಧುರೀಣರು ಇದ್ದಾರೆ ಅವರುಗಳೆಂದರೇ, ಬಸವರಾಜ ರಾಯರೆಡ್ಡಿ, ಬಸವರಾಜ ಪಾಟೀಲ ಅನ್ವರಿ, ಮೈಸೂರು ಭಾಗದಲ್ಲಿ, ಮಧ್ಯ ಕರ್ನಾಟಕದಲ್ಲಿ, ಉತ್ತರ ಕರ್ನಾಟಕದಲ್ಲಿ, ಕಲ್ಯಾಣ ಕರ್ನಾಟಕದಲ್ಲಿರುವ ಕೆಲವೇ ಕೆಲವರನ್ನು ಗುರುತಿಸಬಹುದು. ಅವರುಗಳಲ್ಲಿ ನೇರ, ದಿಟ್ಟ ನಡೆ ನುಡಿಯ ಜನಪರ ಕಾಳಜಿಯುಳ್ಳ ಹಿರಿಯ ಕಾಂಗೈ ಧುರೀಣರಾಗಿರುವ ಶ್ರೀ ಬಿ.ಆರ್. ಪಾಟೀಲ ಆಳಂದ ಎಮ್.ಎಲ್.ಎ ಯವರು ಮೂಂಚೂಣಿಯಲ್ಲಿದ್ದಾರೆ.
ರಾಜ್ಯದಲ್ಲಿ ಕಾಂಗೈ ಪಕ್ಷದ ಕೆಲ ಅಬ್ಬೇಪಾರಿಗಳು ಮೂರು ಭ್ರಷ್ಟಾಚಾರ ಮಾಡುತ್ತಾ ನವರಂಧ್ರಗಳಿoದ ಮುಕ್ಕುತ್ತಾ ರಾಜ್ಯ ದಿವಾಳಿಯಂಚಿಗೆ ತಂದಿದ್ದಾರೆ.
ರಾಜ್ಯದಲ್ಲಿಯೇ ಇಂತಹ ಭ್ರಷ್ಟಾಚಾರಿಗಳಿಂದ ಕರ್ನಾಟಕದ ಮಾನ ಮರ್ಯಾದೆ ಕಾಸಿಗೆ ಮಾರಾಟವಾಗುತ್ತಿರುವ ಪರಿಸ್ಥಿತಿಯನ್ನು ಸಮೀಪದಿಂದ ಕಂಡು ಸಹಿಸಲಾರದೇ, ಹಲವಾರು ಬಾರಿ ಪಕ್ಷದಲ್ಲಿ ಹಿರಿಯರಿಗೆ ಹಲವಾರು ಭ್ರಷ್ಟ ನವರಂಧ್ರೀಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಎಚ್ಚರಿಸಿದ್ದಾರೆ. ಆದರೇ ಮುಖ್ಯಮಂತ್ರಿಯವರು ಅಧಿಕಾರದ ನಶೆಯಲ್ಲಿ unconscious ಆಗಿದ್ದಾರೆ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎನ್ನುವುದೇ ಗೊತ್ತಿಲ್ಲದಂತೆ. ಕಂದೂ ಕಾಣದಂತೆ, ಜಾಣ ಕುರುಡು ತೋರುತ್ತಿದ್ದಾರೆ.


ಕರ್ನಾಟಕ ರಾಜ್ಯ ಸರಕಾರದ ವಸತಿ ಇಲಾಖೆಯಲ್ಲಿ ಸಚಿವರ ಕಾರ್ಯಾಲಯದಲ್ಲಿ ನಡೆಯುತ್ತಿರುವ ಕಾಲ ದಂಧಾ ಎಂಬುದು ಬಿ.ಆರ್.ಪಾಟೀಲರಿಗೆ ತಿಳಿದುಬಂದಿದೆ ಅದನ್ನು ಸಾಬೀತು ಪಡಿಸಲೂ ಕೂಡ ತಯಾರಾಗಿದ್ದಾರೆಂದರೇ ಹಗರಣದ ವಿಷಯ ಅದೆಷ್ಟು ಗಂಭೀರವಾಗಿದೆ ಎಂಬುದು ಸಾರ್ವಜನಿಕರು, ಪ್ರಜ್ಞಾವಂತ ನಾಗರೀಕರು, ರಾಜಕೀಯ ಜನರು ಯೋಚಿಸಲೇಬೇಕಾಗಿದೆ.
ಬಿ ಆರ್ ಪಾಟೀಲರು ವಸತಿ ಸಚಿವ ಕಾರ್ಯಾಲಯಕ್ಕೆ ಪತ್ರ ಬರೆದು ತಮ್ಮ ಕ್ಷೇತ್ರದ ಟೂರಿಲ್ಲದವರಿಗೆ ಸೂರ್ ಒದಗಿಸಲು ಹಲವಾರು ಬಡವರಿಗೆ ಮನೆ ಮಂಜೂರು ಮಾಡಲು ತಮ್ಮ ಲೆಟರ್ ಹೆಡ್ನಲ್ಲಿ ಮನವಿ ಸಲ್ಲಿಸಿದ್ದಾರೆ. ಆದರೆ ವಸತಿ ಸಚಿವರ ಆಪ್ತ ಆಪ್ತ ಅಧಿಕಾರಿ ಈ ಸಂದರ್ಭದಲ್ಲಿ ಯಾವುದೇ ತರಹದ ಯೋಜನೆಗಳಿಲ್ಲ ಎಂದು ಉತ್ತರಿಸಿದ್ದಾರೆ. ಆದರೆ ಆಳಂದ ಕ್ಷೇತ್ರದ ಗ್ರಾಮ ಪಂಚಾಯತ್ ಸದಸ್ಯರು ಬೆಂಗಳೂರಿಗೆ ಬಂದು ವಸತಿ ಸಚಿವರ ಕಾರ್ಯಾಲಯದಿಂದ ಹಲವಾರು ಮನೆಗಳನ್ನು ಮಂಜೂರು ಮಾಡಿಕೊಂಡು ಆಳಂದ್ ಕ್ಷೇತ್ರಕ್ಕೆ ಹೋಗಿದ್ದಾರೆ. ಈ ವಿಷಯವನ್ನು ತಿಳಿದುಕೊಂಡ ಬಿ ಆರ್ ಪಾಟೀಲರು ವಸತಿ ಸಚಿವರ ಆಪ್ತ ಅಧಿಕಾರಿಗೆ ಪ್ರಶ್ನಿಸುತ್ತಿದ್ದಾರೆ
ಈ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಎಲ್ಲವೂ ಪ್ಯಾಕೇಜ್, ಪರ್ಸೆಂಟೇಜ್, ಕಮಿಶನ್ ಗಳ ದಂಧೆ ಅನುಚ್ಛಾನವಾಗಿ ನಡೆಯುತ್ತಿದೆ ಎಂಬುದು ಸಾರ್ವಜನಿಕರ ದೂರು.
೧೩೦ ವರ್ಷದ ಮುಪ್ಪಾವಸ್ಥೆಯಲ್ಲಿ ಮುರಿದುಬೀಳುತ್ತಾ ನಡೆದಿರುವ ಕಾಂಗೈ ಪಕ್ಷಕ್ಕೆ ಈ ಗತಿ ಬರಲು ಕಾರಣ ಪಕ್ಷದಲ್ಲಿ ನೀತಿ, ಸಿದ್ಧಾಂತ ಇಲ್ಲದೇ ಇರುವುದು. ಹೊಗಳು ಭಟ್ಟಂಗಿತನದಿoದಲೇ ಮುಖ್ಯಮಂತ್ರಿಗಳನ್ನು ಓಲೈಸಿ ಆಯಕಟ್ಟಿನ ಜಾಗೆ ಹಿಡಿದು ಖಮಾಯಿಸುವದೇ ತಮ್ಮ ಜೀವನದ ಪರಮೋದ್ದೇಶವೆಂಬoತೆ ನಡೆದುಕೊಳ್ಳುತ್ತಿರುವ ಕೆಲವು ಜನರಿಂದಾಗಿ ಪಕ್ಷದ ಮಾನ ಮರ್ಯಾದೆ ಹರಾಜಾಗುತ್ತಿದೆ. ದೇಶದಲ್ಲಿ ಕರ್ನಾಟಕ ರಾಜ್ಯವು ಲಂಚಭಾಕ ರಾಜ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಪಕ್ಷಾಭೀಮಾನಿಯಾಗಿರುವ ಬಿ.ಆರ್. ಪಾಟೀಲರಿಗೆ ಬೇಸರ ತರಿಸಿದೆ. ನೋವಾಗಿರುವ ಕಾರಣಕ್ಕೇನೇ ಪಕ್ಷಕ್ಕೆ ಮುಜುಗರವಾದರೂ ಆಗಲಿ ಎಂದು ರೋಷಿ ಹೋಗಿ, ಈ ಥರಹ ಅವರು ಸಾರ್ವಜನಿಕವಾಗಿ ಹೇಳಿಕೆ ಕೊಡುತ್ತಿರುವುದು ಕಂಡು ಬರುತ್ತಿದೆ. ಕಾಂಗೈ ಪಕ್ಷದಲ್ಲಿ ಇಂಥಹವರ ಪ್ರಮಾಣ ಹೆಚ್ಚಾಗಬೇಕು. ಆದರೆ ಪಕ್ಷದ ಹಿರಿಮೆ ಗರಿಮೆ ಹೆಚ್ಚಿಸಲು ಪ್ರಾಮಾಣಿಕವಾಗಿ ದುಡಿಯುತ್ತಿರುವ ಸಚಿವರು ಪದಾಧಿಕಾರಿಗಳು ಕಾರ್ಯ ಕರ್ತರಿಗೆನೇ ತುಳಿದು ಗಹಗಹಿಸಿ ನಗುತ್ತಿದ್ದಾರೆ. ಅಂತಹವರ ಟೊಂಕ ಮುರಿಯುವ ಕೆಲಸ ಪ್ರಾರಂಭವಾದಾಗಲೇ ಪಕ್ಷದಲ್ಲಿ ಹೆದರಿಕೆ, ಶಿಸ್ತು ತರಲು ಸಾಧ್ಯ.
ಕಾಂಗ್ರೆಸ್ ಪಕ್ಷದಲ್ಲಿ ಶ್ರಮಿಕರ ಪ್ರಾಮಾಣಿಕರ ನ್ಯಾಯವಂತರ ಸಂಖ್ಯೆ ಹೆಚ್ಚಳವಾಗಲಿ ಎಂಬುದೇ ಕಾರ್ಯಕರ್ತರ ಆಶಯವಾಗಿದೆ.



