ಸುದ್ಧಿ

ಡಾ.ಕೆ.ಸುಧಾಕರ ಎಮ್.ಪಿ. ಅಭ್ಯರ್ಥಿಗೆ ಬಹಿಷ್ಕಾರ. ರಾಜ್ಯಾಧ್ಯಕ್ಷರು, ಡಾ.ಮು.ಕೃಷ್ಣಮೂರ್ತಿ. ತಿಗಳರ (ವಹ್ನಿಕುಲ ಕ್ಷತ್ರಿಯರ) ಸಂಘ (ರಿ) ಬೆಂಗಳೂರು.

ಚಿಕ್ಕಬಳ್ಳಾಪುರ ಲೋ.ಸ.ಕ್ಷೇತ್ರದ ಡಾ.ಕೆ.ಸುಧಾಕರ ಎಮ್.ಪಿ. ಅಭ್ಯರ್ಥಿಗೆ ಬಹಿಷ್ಕಾರ. ರಾಜ್ಯಾಧ್ಯಕ್ಷರು, ಡಾ.ಮು.ಕೃಷ್ಣಮೂರ್ತಿ. ತಿಗಳರ (ವಹ್ನಿಕುಲ ಕ್ಷತ್ರಿಯರ) ಸಂಘ (ರಿ) ಬೆಂಗಳೂರು.

ಕರ್ನಾಟಕ ರಾಜ್ಯದಲ್ಲಿ ತಿಗಳ (ವಹ್ನಿಕುಲ ಕ್ಷತ್ರಿಯರ) ಸಂಘ (ರಿ) ಬೆಂಗಳೂರು ಇವರ ಪ್ರತಿಭಟನೆ. ಚಿಕ್ಕಬಳ್ಳಾಪುರ ಲೋ.ಸ. ಕ್ಷೇತ್ರದಿಂದ ಬಿ.ಜೆ.ಪಿ. ಅಭ್ಯರ್ಥಿ ಯಾಗಿ ಸ್ಪರ್ಧಿಸಿರುವ ಡಾ.ಕೆ.ಸುಧಾಕರ ಎಮ್.ಪಿ. ಅಭ್ಯರ್ಥಿಗೆ ಬಹಿಷ್ಕಾರ.

ಕರ್ನಾಟಕ ರಾಜ್ಯದಲ್ಲಿ ತಿಗಳ (ವಹ್ನಿಕುಲ ಕ್ಷತ್ರಿಯ ) ಜನಾಂಗವು ಸುಮಾರು ೪೦ ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ವಾಸವಾಗಿದ್ದಾರೆ. ಈ ಜನಾಂಗವು ಸುಮಾರು ೧೬೦ ಸ್ಥಳಗಳಲ್ಲಿ ಕರಗ ಮಹೋತ್ಸವವನ್ನು ಆಚರಿಸುತ್ತಾ ಹಿಂದುತ್ವವನ್ನು ಕರ್ನಾಟಕ ರಾಜ್ಯದಲ್ಲಿ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ.

೨೦೨೩ ರ ಚುನಾವಣೆ ಯಲ್ಲಿ ಬಿ.ಜೆ.ಪಿ. ಪಕ್ಷದ ಹಿರಿಯ ಮುಖಂಡರುಗಳ ಆದೇಶ ಮತ್ತು ಆಶಿರ್ವಾದದ ಮೇರೆಗೆ ಎಮ್.ಎಲ್.ಎ.ಉಮೇದುದಾರರಾಗಿ ಶ್ರೀ ಹೂಡಿ ವಿಜಯಕುಮಾರ್ ರವರನ್ನು ಮಾಲೂರು ಕ್ಷೇತ್ರಕ್ಕೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದು ಈ ಹಿನ್ನೆಲೆಯಲ್ಲಿ ಸುಮಾರು ೪ ವರ್ಷಗಳ ಕಾಲ ಹೂಡಿ ವಿಜಯ್ ಕುಮಾರರವರ ಮಾಲೂರು ಕ್ಷೇತ್ರದಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಯಾಗಿ ಬಿಂಬಿಸಿ ಕೆಲಸ ಮಾಡಿರುತ್ತಾರೆ.

ಆದರೇ, ಚಿಕ್ಕಬಳ್ಳಾಪುರ ಹಾಲಿ ಬಿ.ಜೆ.ಪಿ. ಎಮ್.ಪಿ. ಅಭ್ಯರ್ಥಿ ಯಾದ ಡಾ.ಕೆ.ಸುಧಾಕರ ರವರ ಹೂಡು ವಿಜಯಕುಮಾರ ಅವರಿಗೆ ನೀಡಬೇಕಾಗಿದ್ದ ಎಮ್.ಎಲ್.ಎ. ಅಭ್ಯರ್ಥಿ ಸ್ಥಾನವನ್ನು ಮಂಜುನಾಥ ಗೌಡ ಎಂಬುವವರಿಗೆ ಕೊಡಿಸುವುದರ ಮೂಲಕ ಜನಾಂಗಕ್ಕೆ ದ್ರೋಹ ಮಾಡಿರುತ್ತಾರೆ. ತಿಗಳ ( ವಹ್ನಿಕುಲ ಕ್ಷತ್ರಿಯ ) ಜನಾಂಗಕ್ಕೆ ದ್ರೋಹವೆಸಗಿದ ಡಾ.ಕೆ.ಸುಧಾಕರ ರವರ ವರ್ತನೆಯನ್ನು ಈ ಜನಾಂಗ ಖಂಡಿಸುವುದರ ಜೊತೆಗೆ ಅವರನ್ನು ಜನಾಂಗವು ಬೆಂಬಲಿಸುವುದಿಲ್ಲವೆಂದು ಈ ಮೂಲಕ ಘೋಷಿಸಿರುತ್ತೆವೆ ವರದಿ.. ಮಂಜುಳಾರೆಡ್ಡಿ ಪತ್ರಕರ್ತೆ. ಬೆಂಗಳೂರು.

Related Articles

Leave a Reply

Your email address will not be published. Required fields are marked *

Back to top button