ಸುದ್ಧಿ

ತುರವಿಹಾಳ ಪಟ್ಟಣದಲ್ಲಿ ವಿವಿಧೆಡೆ 78ನೇ ಸ್ವಾತಂತ್ರೋತ್ಸವ ದಿನಾಚರಣೆಯ ಅಂಗವಾಗಿ ರಾಷ್ಟ್ರಧ್ವಜಾರೋಹಣ

ಪಟ್ಟಣದ ವಿವಿಧಡೆ 78ನೇಯ ಸ್ವತಂತ್ರೋತ್ಸವ ದಿನಾಚರಣೆ

ವರದಿ:ವಿಜಯಕುಮಾರ ಹಿರೇಮಠ

ತುರವಿಹಾಳ : ಪಟ್ಟಣದಲ್ಲಿ ವಿವಿಧಡೆ 78ನೇ ಸ್ವಾತಂತ್ರೋತ್ಸವ ದಿನಾಚರಣೆಯ ಅಂಗವಾಗಿ ಗುರುವಾರ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಅತ್ಯಂತ ಸಡಗರ ಸಂಭ್ರ ಮದಿಂದ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.

ಪಟ್ಟಣದ ಠಾಣಾಧಿಕಾರಿ ಸುಜಾತ.ಡಿ.ಎನ್.ಧ್ವಜಾರೋಹಣವನ್ನು ನೆರವೇರಿಸಿದರು. ನಂತರ ಮಾತನಾಡಿದ ಅವರು ಸ್ವಾತಂತ್ರ್ಯ ದಿನದಂದು ನಮ್ಮ ಹಿರಿಯರ ತ್ಯಾಗ ಬಲಿದಾನವನ್ನು
ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. 78 ವರ್ಷ ಕಳೆದರೂ ಹೆಣ್ಣು ಮಕ್ಕಳಿಗೆ ಇನ್ನೂ ಸ್ವಾತಂತ್ರ್ಯ ದೊರಕಿಲ್ಲ. ಅದಕ್ಕಾಗಿ ಹೆಣ್ಣು ಮಕ್ಕಳು ಎಲ್ಲಾ ರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಾಗ ಮಾತ್ರ ಸ್ವಾತಂತ್ರರಾಗಲು ಸಾಧ್ಯ ಎಂದರು.

ನಂತರ ಮಾತನಾಡಿದ
ಬಾಪುಗೌಡ ದೇವರಮನೆ ದೇಶಕ್ಕೆ ಎಲ್ಲರಿಗೂ ಸ್ವಾತಂತ್ರ ಸಿಕ್ಕಿತು ಆದರೆ ಮಹಿಳೆಯರಿಗೆ ಸಮಾನತೆಯ ಸ್ವಾತಂತ್ರ್ಯ ಇನ್ನು ಸಿಕ್ಕಿಲ್ಲ ಹಾಗಾಗಿ ಮಹಿಳೆಯರಿಗೆ ಎಲ್ಲಾ ರಂಗದಲ್ಲಿ ಸಮಾನತೆ ಸಿಕ್ಕಾಗ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ:ಬಸಯ್ಯ.ಎ.ಎಸ್. ಐ.ಅಮರೇಶ,ವಿರೂಪಾಕ್ಷಿ, ಅಬ್ಜಲ್ ಪಾಷಾ,ವಿಶ್ವನಾಥ ರೆಡ್ಡಿ,ಪ್ರಶಾಂತ,ಮತ್ತು ಸಿಬ್ಬಂದಿಯವರು ಭಾಗವಹಿಸಿದ್ದರು.

ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ ಧ್ವಜಾ ರೋಹಣವನ್ನು ಮುಖ್ಯಧಿಕಾರಿ ಸಾಬಣ್ಣ ಕಟ್ಟಿಕಾರ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ: ಮಲ್ಲನಗೌಡ ದೇವರಮನೆ ಮೌಲಪ್ಪಯ್ಯ ಗುತ್ತೇದಾರ್, ಸಾಮಿದ್ಸಾಬ್ ಚೌದರಿ, ಬಾಪುಗೌಡ ದೇವರಮನೆ, ಅಬು ತುರಾಬ್, ಶಾಮಿದ ಸಾಬ್ ಅರಬ್, ಭೀಮದಾಸ್ ಮತ್ತು ಪಟ್ಟಣ ಪಂಚಾಯತ್ ಸಿಬ್ಬಂದಿಯವರು ಭಾಗವಹಿಸಿದ್ದರು.

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ರಮೇಶ್ ಯಾದವ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಚಂದ್ರ ಶೇಖ‌ರ್ ಪವಾಡಶೆಟ್ಟಿ, ಬಸವರಾಜ್ ಹೋಟೆಲ್, ನವಾಬ್ ಷರೀಫ್ ವರದಿಗಾರರು, ಮಹಿಬೂಬ್ ಮೋಮಿನ್ ವರದಿಗಾರರು, ಮುಖ್ಯಶಿಕ್ಷಕರಾದ ಬಸವರಾಜ ಕಡಿವಾಳ,ಶಿಕ್ಷಕರಾದ ಶಾಮಿದ್ ಅಲಿ, ಹನುಮೇಶ್,ರತ್ನಮ್ಮ,ನೀಲಗಂಗಾ, ಶಶಿಕಲಾ, ಸುಮಲತಾ,ಶಿಲ್ಪಾ, ರೆಹಮದ್ ಬಿ,ಅಶ್ವಿನಿ ಬಿದರಿ,ಆಶಾ ಮತ್ತು ಮಕ್ಕಳು ಭಾಗವಹಿಸಿದ್ದರು.

ಪಟ್ಟಣದ ಹರಿಜನವಾಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಲಾಯಿತು ಕಾರ್ಯಕ್ರಮದಲ್ಲಿ ಶಿವಪುತ್ರಪ್ಪ ಎಸ್ ಡಿ ಎಂ ಸಿ ಅಧ್ಯಕ್ಷರು ಮುಖ್ಯ ಗುರುಗಳಾದ ಕವಿತಾ.ಡಿ.ಅಯ್ಯನಗೌಡ.ಶಿಕ್ಷಕರಾದ ಶಿವಶಂಕರಪ್ಪ,ಮಲ್ಲಿಕಾರ್ಜುನ್ ಆನೆಗುಂದಿ,ತ್ರಿವೇಣಿ,ಹುಲಿಗೆಮ್ಮ ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು.

ಬಸವ ಚೇತನ ಸಂಸ್ಥೆಯಲ್ಲಿ ಧ್ವಜಾರೋಹ ಣವನ್ನು ಸಂಸ್ಥಾಪಕ ಅಧ್ಯಕ್ಷರಾದ ಕರಕಪ್ಪ ಸಾಹುಕಾರ್ ನೆರವೇರಿಸಿದರು. ದಿವ್ಯ ಸಾನಿದ್ಯವನ್ನು ಶ್ರೀ ಗುಂಡಯ್ಯ ಅಪ್ಪಾಜಿ ಸರ್ವೇಶ್ವರ ಮಠ ವಹಿಸಿ ಮಕ್ಕಳಿಗೆ ಸ್ವತಂತ್ರ್ಯ ಹೊರಾಟಗಾರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿರೂಪಾಕ್ಷಪ್ಪ ಗಚ್ಚಿನಮನಿ ಮಾತನಾಡಿ ಸ್ವಾತಂತ್ರಕ್ಕಾಗಿ ಹೋರಾಡಿದ ಮಹನಿಯರ ನೆನಪಿಸಿಕೊಂಡು ಅವರ ಋಣದಲ್ಲಿ ನಾವು ಸುಖವಾಗಿದ್ದೇವೆ. ಬಲಿಷ್ಟ ರಾಷ್ಟನಿರ್ಮಾಣ ಕಾರ್ಯದಲ್ಲಿ ನಮ್ಮನ್ನು ನಾವು ಅರ್ಪಿಸಿಕೊಳ್ಳೊಣ ಎಂದರು.

ನಂತರ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು
ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಶ್ರೀಮತಿ ಸಾವಿತ್ರಿ ಗಚ್ಚಿನಮನಿ ಪ್ರಾಂಶುಪಾಲ, ನಾಗರಾಜ ಮಾಲಿ ಪಾಟೀಲ, ಉಪನ್ಯಾಸಕರಾದ ಪಾಲಾಕ್ಷಯ್ಯ ಹಿರೇಮಠ,ಜ್ಯೋತಿ ಕೊನ್ನಪುರ್, ಲಕ್ಷ್ಮೀಬಾಯಿ ಗುಡೂರ್,ರಮೇಶ್ ಚಳ್ಳೂರ್,
ಶಿಕ್ಷಕರಾದ ಅಮರೇಶ ಹುಡೇದ,
ಬಸವರಾಜ್ ಚಲವಾದಿ,ದೊಡ್ಡ ಬಸವರಾಜ್ ಜುಮಲಾಪುರ್, ಅನಿತಾ ಕುಮಾರಿ,ವಿಜಯಲಕ್ಷ್ಮಿ ಮಡಿವಾಳರ್,ಶಿಲ್ಪ ಹಿರೇಮಠ್, ರೇಣುಕಾ ಸಂದೂರಿ,ಉಮಾದೇವಿ, ಸವಿತಾ, ವಿಜಯಲಕ್ಷ್ಮಿ ಬಟ್ಟೆರ್, ಹೀನಾಬೇಗಂ ಹಾಗೂ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದ್ದರು.

Oplus_0

Related Articles

Leave a Reply

Your email address will not be published. Required fields are marked *

Back to top button