ಪತ್ರಿಕೋದ್ಯಮ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಶಿಶಿಲ ಗ್ರಾಮದ ಒಟ್ಲ ಪ್ರದೇಶದಲ್ಲಿ ಭತ್ತದ ಗದ್ದೆಗಳಿಗೆ ಹಿಂಡುಗಟ್ಟಲೆ ಆನೆಗಳು ನುಗ್ಗಿ, ದಾಂಧಲೆ ಮಾಡಿ, ರೈತರ ಫಸಲು ಹಾಳು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಶಿಶಿಲ ಗ್ರಾಮದ ಒಟ್ಲ ಪ್ರದೇಶದಲ್ಲಿ ಅಕ್ಟೋಬರ್ 1 ರಂದು ಈ ಗ್ರಾಮದ ರೈತರ ಭತ್ತದ ಗದ್ದೆಗಳಿಗೆ ಹಿಂಡುಗಟ್ಟಲೆ ಆನೆಗಳು ನುಗ್ಗಿ, ದಾಂಧಲೆ ಮಾಡಿ, ರೈತರ ಫಸಲು ಹಾಳು ಮಾಡಿವೆ.

ಬರಗಾಲದ ಈ ದಿನಗಳಲ್ಲಿ ಅಲ್ಪಸ್ವಲ್ಪ ಫಸಲು ಕಾಣುವ ಆಸೆಯಿಂದ ಇದ್ದ ರೈತರ ಜೀವನ ಆನೆಗಳ ದಾoಧಲೆಯಿಂದಾಗಿ ರೈತರ ಬಾಳು ಮುರಿದು ಮೂರಾಬಟ್ಟಿ ಆಗಿದೆ.

ರೈತರ ಈ ಸಮಸ್ಯೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಡಿ. ಎಫ್. ಓ. ಅಧಿಕಾರಿ. ಜಿಲ್ಲಾಧಿಕಾರಿಗಳು, ಮತ್ತು ಅರಣ್ಯ ಮಂತ್ರಿ ಶ್ರೀ ರಾಮಲಿಂಗ ರೆಡ್ಡಿಯವರು ರೈತರ ಸಮಸ್ಯೆಯ ಕಡೆ ಗಮನಹರಿಸಿ, ಹಾಳಾಗಿರುವ ಭತ್ತದ ಗದ್ದೆಯ ರೈತರಿಗೆ ಪರಿಹಾರ ಧನ ಕೊಡಬೇಕು. ಮತ್ತು ಪ್ರತಿ ವರ್ಷದಲ್ಲಿ ಆರೆಂಟು ಬಾರಿ ಹಿಂಡು ಹಿಂಡಾಗಿ ರೈತರ ಭೂಮಿಗಳಿಗೆ ನುಗ್ಗುವ ಆನೆಗಳ ಉಪಟಳವನ್ನು ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಬೇಕು ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಮತ್ತು ಅರಣ್ಯ ಸಚಿವರಿಗೆ ಇಲ್ಲಿ ರೈತರು ಮನವಿ ಮಾಡಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ರಮೇಶ್ ಓಟ್ಲ ರೈತರು, ತಮಗಾಗುತ್ತಿರುವ ಸಮಸ್ಯೆಯನ್ನು ಸರ್ಕಾರಕ್ಕೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಪುನಃ ಪುನಃ ಮನವಿ ಮಾಡಿ ತಮ್ಮ ಸಂಕಷ್ಟ ಸ್ಪಂದಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button