ವಾರ ಬಂದಿ ಕಡಿತಗೊಳಿಸಿ ನಿರಂತರ ನೀರು ಹರಿಸಿ ಲಕ್ಷಾಂತರ ಜನರ ರೈತರ ಪ್ರಾಣ ಉಳಿಸಿ ಮನವಿ. ಹುಣಸಗಿ ರೈತರು.

ಹುಣಸಗಿ ತಾಲೂಕು ತಹಶೀಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ವಾರ ಬಂದಿ ಕಡಿತಗೊಳಿಸಿ ಡಿಸೆಂಬರ್ ವರೆಗೆ ನಿರಂತರ ನೀರು ಹರಿಸಿ ಲಕ್ಷಾಂತರ ಜನರ ರೈತರ ಪ್ರಾಣ ಉಳಿಸಿ ಎಂದು ಮನವಿ ಸಲ್ಲಿಸಲಾಯಿತು
ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಬಸವಸಾಗರ ಅಣೆಕಟ್ಟಿನಿಂದ ಲಕ್ಷಾಂತರ ಹೆಕ್ಟರ್ ಜಮೀನಿಗೆ ಎಡದಂಡೆ ಕಾಲುವೆ ಮುಖಾಂತರ ಬರುವ ನೀರಿನಿಂದ ಸಾವಿರಾರು ರೈತರು ಬೆಳೆ ಬೆಳೆಯುತ್ತಿದ್ದು 2026ರ ಮುಂಗಾರಿನ ಹಂಗಾಮಿಗೆ ಜೂನ್ ಜೂಲೈ ತಿಂಗಳ ಸಾಕಷ್ಟು ಮಳೆಯಾಗಬೇಕಿತ್ತು, ಆದರೆ ಈ ವರ್ಷ ವರುಣ ಕೃಪೆ ತೋರಿದಿದ್ದರಿಂದ ರೈತರು ಸಂಕಷ್ಟದಲ್ಲಿ ಆಕಾಶವನ್ನು ನೋಡಿ ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ಮಳೆ ಆಗಿರುವುದರಿಂದ ಘಟಪ್ರಭಾ ಮಲಪ್ರಭಾ ಕೃಷ್ಣಾ ನದಿಗೆ ನೀರು ತುಂಬಿ ಬಂದಿರುವುದರಿಂದ ಆಲಮಟ್ಟಿ ಅಣೆಕಟ್ಟು ಹಾಗೂ ಬಸವಸಾಗರ ಅಣೆಕಟ್ಟು ತುಂಬಿರುವುದರಿಂದ ಈ ಭಾಗದ ರೈತರ ಮುಖದಲ್ಲಿ ಸಂತೋಷ ಬಂದಿತ್ತು ಈಗಿನ ಸರಕಾರ ಎಡದಂಡೆ ಮತ್ತು ಬಲದಂಡೆ ಕಾಲುವೆಗೆ ನೀರು ಹರಿಸುವುದಾಗಿ ಹೇಳಿದಾಗ ಎಲ್ಲಾ ರೈತರು ತಮ್ಮ ಜಮೀನಿನಲ್ಲಿ ಈ ಭಾಗದ ಅತಿ ಮುಖ್ಯ ಬೆಳೆಗಳಾದ ಹತ್ತಿ ತೊಗರಿ ಜೋಳ ಮೆಣಸಿನ ಸಸಿ ಹಾಗೂ ಅತಿ ಹೆಚ್ಚು ಭತ್ತ ಬೆಳೆಯುತ್ತಿದ್ದು ಬತ್ತ ಬೆಳೆಯುವ ರೈತರಿಗೆ ಏಕಾಏಕಿ ಈ ಸರ್ಕಾರದ ಕೃಷ್ಣ ದಂಡೆ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹೆ ಸಮಿತಿ ಇಲ್ಲದಿರುವುದರಿಂದ ಸರ್ಕಾರದಿಂದ ಬತ್ತ ನಾಟಿ ಮಾಡುವ ಸಮಯದಲ್ಲಿ ಯಾವುದೇ ವಾರ ಬಂದಿ ಸಲಹೆ ನೀಡಲಿಲ್ಲದಿದ್ದರಿಂದ ಕಾಲುವೆಯ ಕೊನೆಯ ಭಾಗದ ರೈತರು ಹಾಗೂ ಎಲ್ಲ ರೈತರು ಸಂತೋಷದಿಂದ ಭತ್ತ ನಾಟಿ ಮಾಡಲಾಯಿತು ನಾಟಿ ಮಾಡಿದ ತಿಂಗಳ ನಂತರ ಸರಕಾರ ಏಕೈಕ ನೀರಾವರಿ ಸಲಹೆ ಸಮಿತಿ ವಾರ್ಬಂದಿ ಮಾಡಿ ಆದೇಶ ಹೊರಡಿಸಿದಾಗ ರೈತರಿಗೆ ಸಂಕಷ್ಟವಾಗಿದ್ದು ಸೆಪ್ಟೆಂಬರ್ 27ರಂದು ಮುಖ್ಯ ಕಾಲ್ವೆಗಳಿಗೆ ಬರುವ ನೀರು ನಿಲ್ಲಿಸಿದಾಗ ಈ ಭಾಗದ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬತ್ತಮ ನಾಟಿ ಮಾಡಿದ ರೈತರು ತಮ್ಮ ಕಣ್ಣ ಮುಂದೆ ಬೆಳೆಸಿದ ಬತ್ತ ಒಣಗಿರುವುದನ್ನು ನೋಡಿ ಕಣ್ಣೀರು ಹಾಕುತ್ತಿದ್ದು ದಯಮಾಡಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಲಹೆ ಸಮಿತಿ ಹಾಗೂ ಕೃಷ್ಣ ಮೇಲ್ದಂಡೆ ಹಚ್ಚು ಕಟ್ಟು ಪ್ರದೇಶದ ಮುಖ್ಯ ಅಧಿಕಾರಿಗಳು ದಯಮಾಡಿ ಡಿಸೆಂಬರ್ ವರೆಗೆ ನಿರಂತರ ನೀರು ಅರಸಿ ಈ ಭಾಗದ ರೈತರ ಜೀವ ಉಳಿಸಿ ಎಂದು ಸರಕಾರಕ್ಕೆ ಮನವಿ ಮಾಡಿಕೊಂಡರು
ಗುಂಡಪ್ಪ ಜೆ ಬೋಗಿ

