ಮಹಾತ್ಮ ಗಾಂಧೀಜಿ, ಶಾಸ್ತ್ರಿ ಜಯಂತಿ ಆಚರಣೆ. ಕನಕಗಿರಿ:

ಮಹಾತ್ಮ ಗಾಂಧೀಜಿ, ಶಾಸ್ತ್ರಿ ಜಯಂತಿ ಆಚರಣೆ
ಕನಕಗಿರಿ: ಕನಕಗಿರಿ ಬಿಜೆಪಿ ಕಾರ್ಯಾಲಯದಲ್ಲಿ ಸ್ವಾತಂತ್ರ್ಯ ಹೋರಾಟದ ರೂವಾರಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರು ಮಹನೀಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕಾಗಿ ಸಲ್ಲಿಸಿದ ಸೇವೆ, ತ್ಯಾಗ ಹಾಗೂ ಹೋರಾಟವನ್ನು ಸ್ಮರಿಸಿದರು. ದೇಶದ ಸ್ವಾತಂತ್ರ್ಯ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆಗಳನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳಬೇಕು. ಅವರ ಆದರ್ಶಗಳು ಹಾಗೂ ದೇಶಪ್ರೇಮದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾಂತೇಶ್ ಸಜ್ಜನ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗ್ಯಾನಪ್ಪ ಗಾಣದಾಳ ಹಾಗೂ ಪ್ರಕಾಶ ಹಾದಿಮನಿ, ಮಂಡಲ ಉಪಾಧ್ಯಕ್ಷರಾದ ರಂಗಪ್ಪ ಕೊರಗಟಗಿ ಹಾಗೂ ಕನಕಪ್ಪ ಯಾದವ್, ಜಿಲ್ಲಾ ಎಸ್‌ಸಿ ಮೋರ್ಚಾ ಕಾರ್ಯದರ್ಶಿ ಲಿಂಗಪ್ಪ ಪೂಜಾರ್, ಪಟ್ಟಣ ಪಂಚಾಯಿತಿ ಸದಸ್ಯರಾದ ಸುರೇಶಪ್ಪ ಗುಗ್ಗಳಶೆಟ್ಟಿ, ಹನುಮಂತ ಬಸರಿಗಿಡದ್ ಹಾಗೂ ಶೇಷಪ್ಪ ಪೂಜಾರ್, ಕನಕಗಿರಿ ಮಹಾಶಕ್ತಿಕೇಂದ್ರ ಅಧ್ಯಕ್ಷ ಶಿವಕುಮಾರ್ ಕೋರಿ, ಮುಖಂಡರಾದ ವಾಗೀಶ್ ಹಿರೇಮಠ, ಹನುಮೇಶ ಯಲಬುರ್ಗಿ, ಶರಣಪ್ಪ ಪಲ್ಲವಿ, ಹೆಚ್.ಹೆಚ್. ಕಳ್ಳಿಮನಿ, ಯುವಮೋರ್ಚಾ ಅಧ್ಯಕ್ಷ ವಿನಾಯಕ ಚಿತ್ತಾರಕಿ, ಒಬಿಸಿ ಮೋರ್ಚಾ ಅಧ್ಯಕ್ಷ ನಾಗರಾಜ್ ವಾಲೇಕಾರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಹುಲಿಗೆಮ್ಮ ನಾಯಕ, ಯುವ ಮುಖಂಡರಾದ ನಾಗರಾಜ್ ಭಾವಿಕಟ್ಟಿ ಹಾಗೂ ದೇವರಾಜ್ ಪೂಜಾರ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಉಪಸ್ಥಿತರಿದ್ದರು.
ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ




