ರಾಜಕೀಯ

ಶ್ರೀ ಬಸಯ್ಯ ಸ್ವಾಮಿ ಹಿರೇಮಠ ಯಾಳಗಿ ಇವರಿಂದ ಬೈಲಕುಂಟಿ ಗ್ರಾಮದಲ್ಲಿ ದೇವಿ ಪುರಾಣ.

ಶ್ರೀ ಬಸಯ್ಯ ಸ್ವಾಮಿ ಹಿರೇಮಠ ಯಾಳಗಿ ಇವರಿಂದ ಬೈಲಕುಂಟಿ ಗ್ರಾಮದಲ್ಲಿ ದೇವಿ ಪುರಾಣ

ಹುಣಸಗಿ ತಾಲೂಕಿನ ಬೈಲಕುಂಟಿ ಗ್ರಾಮದಲ್ಲಿ ನವರಾತ್ರಿ ಪ್ರಯುಕ್ತ 9 ದಿನಗಳ ಜಗನ್ಮಾತ ದೇವಿ ಪುರಾಣ ನಡೆಯುತ್ತಿದ್ದು ಇಂದು ಶುಕ್ರವಾರದಂದು ದೇವಿಗೆ ಊಡಿತುಂಬುವ ಕಾರ್ಯಕ್ರಮದ ಪ್ರಯುಕ್ತ ಸುತ್ತಮುತ್ತಲಿನ ಗ್ರಾಮದ ನೂರಾರು ಭಕ್ತರೊಂದಿಗೆ ಗಾನಯೋಗಿ ವೇದಮೂರ್ತಿ ಶ್ರೀ ಬಸಯ್ಯಸ್ವಾಮಿ ಹಿರೇಮಠ ಯಾಳಗಿ ನೆರವೇರಿಸಿ ತಾಯಿಯ ಜಗನ್ಮಾತೆ ಚರಿತ್ರೆಯು ಪ್ರಾರಂಭಿಸಿದರು ಗ್ರಾಮದಲ್ಲಿ ಪ್ರತಿದಿನ ರಾತ್ರಿ 8.30 ರಿಂದ 10.30 ರವರೆಗೆ ದೇವಿಯ ಚರಿತ್ರೆ ಹಾಗೂ ಅಧ್ಯಾತ್ಮಿಕ ಸಂಸ್ಕಾರ ಪ್ರವಚನ ನೀಡುತ್ತಿದ್ದು ಹಾಗೂ ಪರಿಶುದ್ಧವಾದ ಇವರ ಕಂಠದಿಂದ ಭಕ್ತಿಗೀತೆಗಳನ್ನು ಹಾಡುತ್ತಿದ್ದು ಹಾಗೂ ಇವರೊಂದಿಗೆ ಮುಖ್ಯ ಸಂಗೀತಗಾರರಾದ ತಬಲವಾಧ್ಯಕರಾದ ಶ್ರೀ ಹೈಧರ ಲಿಂಗ ಬಳಗಾನೂರ ಇವರು ಹುಟ್ಟುತ್ತ ಅಂಗವಿಕಲರಾಗಿ ಹುಟ್ಟಿದ್ದು ಇವರು ಸಂಗೀತದ ಶಾಲೆ ಗದಗಿನ ಶ್ರೀ ಪುಟ್ಟರಾಜ ಅಪ್ಪನವರ ಆಶ್ರಯದಲ್ಲಿ ಸಂಗೀತ ಕಲಿತು ಶ್ರೀ ವೇದಮೂರ್ತಿ ಬಸಯ್ಯಸ್ವಾಮಿ ಹಿರೇಮಠ ಅವರೊಂದಿಗೆ ಪರಿಶುದ್ಧವಾದ ತಬಲ ನುಡಿಸುತ್ತಿದ್ದು ಬೈಲಕುಂಟಿ ಗ್ರಾಮದಲ್ಲಿ ನಡೆಯುತ್ತಿರುವ ದೇವಿಯ ಚರಿತ್ರೆ ಕೇಳಲು ಸುತ್ತಮುತ್ತಲದ ಗ್ರಾಮಸ್ಥರು ಆಗಮಿಸಿ

ಗ್ರಾಮದ ಮಹಿಳೆಯರು ಹಾಗೂ ಮಕ್ಕಳು ಹಿರಿಯರು ಗೌರವದಿಂದ ಕಾರ್ಯಕ್ರಮ ನಿರ್ವಹಿಸಿದರು

Related Articles

Leave a Reply

Your email address will not be published. Required fields are marked *

Back to top button