ಸುದ್ಧಿ

ದಿ. ಕೆ.ಎಸ್.ಶಿವರಾಮ್ ಐ.ಎ.ಎಸ್. ಅಧಿಕಾರಿ ಇಂದು‌ ನಮ್ಮೊಂದಿಗೆ ಇಲ್ಲ.‌

ದಿ. ಕೆ.ಎಸ್.ಶಿವರಾಮ್ ಐ.ಎ.ಎಸ್. ಅಧಿಕಾರಿ ಇಂದು‌ ನಮ್ಮೊಂದಿಗೆ ಇಲ್ಲ.‌ಎನ್ನುವ ಸುದ್ಧಿ ಕೇಳಿ ನಂಬಲಿಕ್ಕಾಗುತ್ತಿಲ್ಲ.

ನಿವೃತ್ತ ಐ.ಎ.ಎಸ್. ಅಧಿಕಾರಿ ಶಿವರಾಮ್ ಅವರು ತಮ್ಮ‌ ಜೀವನದಲ್ಲಿ ಹಲವಾರು ಪ್ರಥಮಗಳ‌ ಪ್ರಯೋಗ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದಂಥಹ ವ್ಯಕ್ತಿ. ಇವರ ಜೀವನವೇ ಇಂದಿನ ಅಲ್ಲ ಎಂದೆಂದಿನ ದಿನಗಳಲ್ಲಿ ಯುವಕರಿಗೆ ಪ್ರರೇಪಣೆಯಾಗಿದೆ.

ಕರ್ನಾಟಕ ಕೇಡರಸ್ ಐ.ಎ.ಎಸ್.‌ಅಧಿಕಾರಿಯಾಗಿ ಶ್ರೀಯುತರು ಮೊಟ್ಟ ಮೊದಲ ಬಾರಿಗೆ ನನ್ನ ತವರು ಜಿಲ್ಲೆ ಯಾದಗಿರಿಯ ಸಹಾಯಕ ವಿಭಾಗಾಧಿಕಾರಿಯಾಗಿ ( Asst.Commissioner) ತಮ್ಮ ವೃತ್ತಿ ಜೀವನ ಆರಂಭಿಸಿದರು. ಹಲವಾರು ಬಾರಿ ಡ್ಯೂಟಿ‌ಯಲ್ಲಿ ಸುರಪುರ ಪಟ್ಟಣಕ್ಕೆ ಬಂದಾಗ ಇವರನ್ನು ಯುವಕರು ಸುತ್ತುವರೆದು ಸೈನಿಕರಂತೆ ಜೊತೆಗೆ ಹಿಂಬಾಲಿಸುತ್ತಿದ್ದೆವು. ಕೆಎಸಶಿಜೀ ಅಂದಿನ‌ ಜಮಾನದಲ್ಲಿ ನಮ್ಮೇಲ್ಲರ ಹೀರೋ ಆಗಿದ್ದರು. ತಮ್ಮ ಜೀವನದಲ್ಲಿ ಕಷ್ಟ ಪಟ್ಟಿರುವುದು, ಜೀವನ ಛಾಲೆಂಜಾಗಿ ತೆಗೆದುಕೊಂಡು‌ ಕನ್ನಡ ಭಾಷೆಯಲ್ಲಿಯೇ ಐ.
ಎ.ಎಸ್. ಪಾಸು ಮಾಡಿದ‌ ಮೊಟ್ಟ‌ ಮೊದಲ ಕನ್ನಡಿಗ ಅಧಿಕಾರಿ.

” ಭವಿಷ್ಯದ ಬಗ್ಗೆ ಭರವಸೆ ಇರಲಿ.‌ಸಮಯದ ಬಗ್ಗೆ ಸಿರಿಯಸ್ನೆಸ್ ಇರಲಿ ಯಾವುದೇ ಕೆಲಸ ನಾಳೆ ಎಂದು ಮುಂದುಡದಿರಿ ಅಂದಿನ‌‌ ಕೆಲಸ ಅಂದೇ ಮಾಡಿರಿ. ಜೀವನದಲ್ಲಿ ಚೂರು ಭಯವಿರಲಿ ಹಾಗಾದರೇ ಭಯಪಟ್ಟು‌ ಕೈ ಕಟ್ಟಿಕೊಂಡು ಕುಳಿತುಕೊಳ್ಳದಿರಿ” ಎಂದು ವಿಶೇಷವಾಗಿ ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿಯ ಆರಂಭದ ದಿನಗಳಲ್ಲಿ ಹೇಳುತ್ತಿದ್ದರು.

ಇನ್ನು ಮುಂದೆ ಅವರ ನೆನಪು ಮಾತ್ರ. ಕೆ.ಎಸ್.ಶಿವರಾಮ ಅವರಿಗೆ ಹೃದಯಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತಾ ಅವರ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ನೋವು ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ಪ್ರರ್ಥಿಸೋಣ.

Related Articles

Leave a Reply

Your email address will not be published. Required fields are marked *

Back to top button