ಸುದ್ಧಿ
ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಪ್ರಕಾಶ ಗುತ್ತೇದಾರ. ಸುರಪುರ

ದಿನಾಂಕ. ೧೬/೦೩/೨೦೨೪ ರಂದು ಸುರಪುರ ಪಟ್ಟಣದ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಜನಪ್ರಿಯ ಯುವನಾಯಕ ಶ್ರಿ ಪ್ರಕಾಶ ಗುತ್ತೇದಾರ ಅವರು ಅಧಿಕಾರ ಸ್ವೀಕರಿಸಿದರು.ಈ ಸಂದರ್ಭದಲ್ಲಿ ತಾಲೂಕಿನ ಜನಪ್ರೀಯ ಜನ ನಾಯಕ, ಯುವಕರ ಕಣ್ಮಣಿ, ಹೃದಯವಂತ, ಶ್ರೀಯುತರು ವೇಣುಗೋಪಾಲ ನಾಯಕ ಧಣಿಯವರು,ವಿಠ್ಠಲ ಯಾದವ್, ವೆಂಕುಬೂ ಯಾದವ್, ಶಾಂತಗೌಡ ಚನ್ನಪಟ್ಟಣ, ಮಲ್ಲಣ್ಣ ಸಾಹುಕಾರ್, ರಾಜಾ ವಾಸುದೇವ ನಾಯಕ, ರಾಜಾ ಸಂತೋಷ ನಾಯಕ, ರಾಜಾ ಕುಮಾರ ನಾಯಕ,ರಾಜಾ ವಿಜಯ್ ಕುಮಾರ್ ನಾಯಕ್,ರಾಜಾ ಸುಶಾಂತ್ ನಾಯಕ್, ನಿಂಗರಾಜ ಎಸ್ ಬಾಚಿಮಟ್ಟಿ,ಚಂದ್ರಶೇಖರ ದಂಡಿನ ಹಾಗೂ ಅನೇಕ ಜನ ಕಾಂಗ್ರೆಸ ಪಕ್ಷದ ಗಣ್ಯರು ಉಪಸ್ಥಿತರಿದ್ದು ಶುಭ ಕೋರಿದರು. ಈ ಶುಭ ಸಂಧರ್ಭದಲ್ಲಿ ಪಾದರಸದಂಥಹ ವ್ಯಕ್ತಿತ್ವದ ಕ್ರೀಯಾಶೀಲ ವ್ಯಕ್ತಿ ಪತ್ರಕರ್ತ ಇವರು Satynarayan Gudgunti ಹಾಗೂ ಸಾಮಾಜಿಕ ಕಾರ್ಯಕರ್ತರಾದ Venkatesh Potalkar ಇವರು ಕೂಡ ಈ ಸಂದರ್ಭದಲ್ಲಿ ಸಮಾರಂಭದಲ್ಲಿ ಭಾಗವಹಿಸಿದ್ದರು.




