ಪರೀಕ್ಷೆ ಎಂಬ ಹಬ್ಬ ಆಚರಿಸೋಣ ಬನ್ನಿ ಕಾರ್ಯಕ್ರಮಕ್ಕೆ ಚಾಲನೆ… ಪ್ರಯತ್ನಶೀಲರು ಮಾತ್ರ ಯಶಸ್ವಿಯಾಗುತ್ತಾರೆ…. ಸಾವಿತ್ರಿ ಗಚ್ಚಿನಮನಿ

ಪರೀಕ್ಷೆ ಒಂದು ಹಬ್ಬ ಆಚರಿಸೋಣ ಬನ್ನಿ ಕಾರ್ಯಕ್ರಮಕ್ಕೆ ಚಾಲನೆ ಪ್ರಯತ್ನಶಿಲರು ಮಾತ್ರ ಯಶಸ್ವಿಯಾಗುತ್ತಾರೆ ಸಾವಿತ್ರಿ ಗಚ್ಚಿನಮನಿ
ಸಿಂಧನೂರು:ತಾಲೂಕಿನ ತುರ್ವಿಹಾಳ ಪಟ್ಟಣದ ಬಸವಚೇತನ ಕಾಲೇಜಿನ ವತಿಯಿಂದ ಪ್ರತಿ ವರ್ಷದಂತೆ 2023-24ನೇ ಸಾಲಿನ ಬೋರ್ಡ ಪರೀಕ್ಷೆ ಬರೆಯುತ್ತಿರುವ ಎಸ್.ಎಸ್.ಎಲ್.ಸಿ ಮತ್ತು ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಸಿ ಪರೀಕ್ಷೆಯನ್ನು ಖುಷಿಯಿಂದ ಎದುರಿಸಲು ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೇರವೆರಿಸಲಾಯಿತು
ಉದ್ಘಾಟನೆಯನ್ನು ಮಾಡಿದ ಶ್ರೀಮತಿ ಸಾವಿತ್ರಿ ಗಚ್ಚಿನಮನಿ ಅರ್ಥಶಾಸ್ತ್ರ ಉಪನ್ಯಾಸಕರು ವಿದ್ಯಾರ್ಥಿಗಳು ಇದರ ಸದೂಪಯೋಗಪಡಿಸಿಕೊಂಡು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದಾಗ ಮಾತ್ರ ನಮ್ಮ ಈ ಪ್ರಯತ್ನಕ್ಕೆ ಸಾಪಲ್ಯ ದೊರೆಯಿತ್ತದೆ ಪ್ರಯತ್ನ ಪಟ್ಟವರು ಇತಿಹಾಸ ನಿರ್ಮಿಸಿದ್ದಾರೆ ಎಲ್ಲವನ್ನು ಸಾಧಿಸುವ ಶಕ್ತಿ ನಮ್ಮಲ್ಲಿದೆ ಅದಕ್ಕಾಗಿ ಪ್ರಯತ್ನ ಶೀಲರಾಗೋಣ ಎಂದು ಹೇಳಿದರು
ಸಂಪನ್ಮೂಲ ವ್ಯಕ್ತಿ ಗುಂಡಪ್ಪ ಶಿಕ್ಷಕರು ಸರಕಾರಿ ಪ್ರೌಢಶಾಲೆ ಗಾಂದಿನಗರವರು 10ನೇ ತರಗತಿಯ ಮಕ್ಕಳು ಪರೀಕ್ಷೇಗೆ ಓದಿಕೊಳ್ಳುವು ,ಸುಲಭವಾಗಿ ನೇನಪಿಟ್ಡಿಕೊಳ್ಳವ ಬಗ್ಗೆ ಹೇಳುತ್ತಾ ಹಿಂದಿ ವಿಷಯದ ಕುರಿತು ಪರೀಕ್ಷೇಯಲ್ಲಿ ಬರುವ ಪ್ರಶ್ನೆಗಳಿಗೆ ಉತ್ತರಿಸುವ ಬಗ್ಗೆ ಹೇಳಿದರು ಮತ್ತು ನೀಲ ನಕ್ಷದಂತೆಯೇ ಪ್ರಶ್ನೆಪತ್ರಿಕೆ ಇರುತ್ತದೆ ವಿದ್ಯಾರ್ಥಿಗಳು ನಿರಂತರ ಅಭ್ಯಾಸಮಾಡಿ ಯಾವ ಆತಂಕವಿಲ್ಲದೆನೆ ಪರಿಕ್ಷೆಯನ್ನು ಬರೆಯಬೇಕು. ವಾರ್ಷಿಕ ಪರೀಕ್ಷೆಗೆ ಉಳಿದಿರುವ ಸಮಯವನ್ನು ಸದೂಪಯೋಗಿಸಿಕೊಳ್ಳುವಂತೆ ಕಿವಿ ಮಾತೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಕಾರ್ಯದರ್ಶಿ ವಿರೂಪಾಕ್ಷಪ್ಪ ಗಚ್ಚಿನಮನಿ ಮಾತನಾಡಿ ಕಳೆದ ಹಲುವು ವರ್ಷಗಳಿಂದ ಈ ಕಾರ್ಯಕ್ರಮವನ್ನು ಏರ್ಪಡಿಸುತ್ತಾ ಬರಲಾಗುತ್ತಿದೆ. ಫಲಿತಾಂಶ ಬಂದಮೆರಲೆ ವಿದ್ಯಾರ್ಥಿಗಳು ಮತ್ತು ಪಾಲಕರು ಬಹಳಷ್ಟು ಖುಷಿಯಿಂದ ನಮ್ಮೊಂದಿಗೆ ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಿರುತ್ತಾರೆ ಅದೆ ನಮಗೆ ಸ್ಪೂರ್ತಿಯಾಗಿದೆ. ಪರೀಕ್ಷಯನ್ನು ಹಬ್ಬದಂತೆ ಸಂಭ್ರಮಿಸಬೇಕು ಯನ್ನುವ ಬಯಕೆಯಿಂದಲೆ ಪರೀಕ್ಷೆ ಒಂದು ಹಬ್ಬ ಆಚಿರಿಸೋಣ ಬನ್ನಿ ಎಂಬ ಹೆಸರನಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ವಿವಿಧ ವಿಷಯಗಳ ಪರಣಿತರನ್ನು ಕರೆಯಿಸಿ ಮಕ್ಕಳಿಗೆ ಪರಿಕ್ಷಾ ಪೂರ್ವ ತಯಾರಿ ಮಾರ್ಗದರ್ಶನ ಕೊಡಿಸಲಾಗುತ್ತಿದೆ. ನಮ್ಮವರೊಂದಿಗೆ ಪಟ್ಟದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೆಕು ಎಂದರು.
ವರದಿಗಾರರು ….ವಿಜಯ್ ಕುಮಾರ್ ಹಿರೇಮಠ್. ತುರುವಿಹಾಳ.




