ಬಂಜಾರ ಸಾಂಪ್ರದಾಯಿಕ ಕಸೂತಿ ಕಲಿಕೆ ಕಾರ್ಯಾಗಾರದ ಸಮಾರೋಪ ಸಮಾರಂಭ. ಬೆಂಗಳೂರು.
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ದಿನಾಂಕ:10.10.2024 ರಂದು ಬೆಳಗ್ಗೆ 11.00 ಗಂಟೆಗೆ ಬಾಪೂಜಿ ಸಭಾಂಗಣ, ಸರ್ಕಾರಿ ಕಲಾ ಕಾಲೇಜು, ಅಂಬೇಡ್ಕರ್ ವೀದಿ, ಸೆಂಟ್ರಲ್ ಕಾಲೇಜು ಎದುರು, ಬೆಂಗಳೂರು ಇಲ್ಲಿ ಬಂಜಾರ ಸಾಂಪ್ರದಾಯಿಕ ಕಸೂತಿ ಕಲಿಕೆ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದೆ.
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಎ. ಆರ್. ಗೋವಿಂದಸ್ವಾಮಿ ಅವರು ಸಮಾರೋಪ ಸಮಾರಂಭದ ನುಡಿ ನುಡಿಯಲಿದ್ದಾರೆ. ಡಾ. ಪಿ.ಟಿ. ಶ್ರೀನಿವಾಸ ನಾಯಕ, ಪ್ರಾಂಶುಪಾಲರು, ಸರ್ಕಾರಿ ಕಲಾ ಕಾಲೇಜು, ಬೆಂಗಳೂರು ಇವರು ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶ್ರೀ ಎನ್. ಜಯದೇವ ನಾಯಕ್, ಅಧ್ಯಕ್ಷರು, ತಾಂಡಾ ಅಭಿವೃದ್ಧಿ ನಿಗಮ, ಬೆಂಗಳೂರು, ಶ್ರೀ ಸೈದುಲು ಅಡಾವತ್ ಭಾ.ಪೋ.ಸೇ , ಉಪ ಪೋಲಿಸ್ ಆಯುಕ್ತರು, ಬೆಂಗಳೂರು ಉತ್ತರ, ಶ್ರೀಮತಿ ಕಾಂತಾ ನಾಯಕ್ , ಅಧ್ಯಕ್ಷರು,ಕೌಶಲ್ಯ ಅಭಿವೃದ್ಧಿ ನಿಗಮ,ಬೆಂಗಳೂರು, ಶ್ರೀ ಕೆ ಬಲರಾಮ, ಕ.ವಿ.ಪ್ರ.ನಿ. ನಿ. ನೌಕರ ಸಂಘ(659), ಬೆಂಗಳೂರು, ಶ್ರೀ ವಿ. ನಾಗೇಂದ್ರ ಪ್ರಸಾದ್, ಹೆಸರಾಂತ ಗೀತ ರಚನಾಕಾರರು ಹಾಗೂ ನಿರ್ದೇಶಕರು ಹಾಗೂ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ದಯವಿಟ್ಟು ಈ ವಿಷಯವನ್ನು ತಮ್ಮ ಪತ್ರಿಕೆಯಲ್ಲಿ ರಾಜ್ಯಮಟ್ಟದ ಸುದ್ಧಿಯನ್ನಾಗಿ ಪ್ರಕಟಿಸಬೇಕಾಗಿ ಕೋರಿದೆ ಹಾಗೂ ತಮ್ಮ ಪತ್ರಿಕೆ/ಮಾಧ್ಯಮ ಪ್ರತಿನಿಧಿಯೊಬ್ಬರನ್ನು ಈ ಸಮಾರಂಭಕ್ಕೆ ನಿಯೋಜಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದೆ. ಈ ಪತ್ರದೊಂದಿಗೆ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಲಗತ್ತಿಸಲಾಗಿದೆ.
(ಬಿ.ನೀಲಮ್ಮ)



