ಸಂಪಾದಕೀಯ

ಬೈಲಕುಂಟಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳು ವಲಯ ಮಟ್ಟದ ಕೋ ಕೋ ರನ್ನಿಂಗ್ ಹಾಗೂ ಕಬಡಿಯಲ್ಲಿ ಪ್ರಥಮ ಸ್ಥಾನ.

ಬೈಲಕುಂಟಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳು ವಲಯ ಮಟ್ಟದ ಕೋ ಕೋ ರನ್ನಿಂಗ್ ಹಾಗೂ ಕಬಡಿಯಲ್ಲಿ ಪ್ರಥಮ ಸ್ಥಾನ
ಯಾದಗಿರಿ ಜಿ ಹುಣಸಗಿ ತಾಲೂಕು 2025 ನೇ ಸಾಲಿನ ಆಗಸ್ಟ್ 26ರಂದು ನಡೆದ ನಾರಾಯಣಪುರ ವಲಯ ಮಟ್ಟದಲ್ಲಿ ಬೈಲಕುಂಟಿ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕೋ ಕೋ ಆಟದಲ್ಲಿ ಬಾಲಕಿಯರ ಪ್ರಥಮ ಸ್ಥಾನದ ಕಬಡ್ಡಿ ಆಟದಲ್ಲಿ ಬಾಲಕರ ಪ್ರಥಮ ಸ್ಥಾನ 100 ಮೀಟರ್ 200 ಮೀಟರ್ ಓಟದಲ್ಲಿ ಗೋಪಾಲ ಪ್ರಥಮ ಸ್ಥಾನ ಗಳಿಸಿದ್ದು 400 ಮೀಟರ್ ಓಟದಲ್ಲಿ ದ್ಯಾಮಣ್ಣ ಪ್ರಥಮ ಸ್ಥಾನ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಹಾಗೂ ದ್ವಿತೀಯ ಸ್ಥಾನ ಸೆಟಲ್ ಆಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಹಲವಾರು ಆಟದಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆ ಆಗಿರುವ ಬೈಲಕುಂಟಿಯ ಮಕ್ಕಳಿಗೆ ಗ್ರಾಮಸ್ಥರಿಂದ ಹಾಗೂ ಶಿಕ್ಷಕರಿಗೂ ಸನ್ಮಾನಿಸಿ ಗೌರವಿಸಲಾಯಿತು ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಮಾತನಾಡಿ ನಮ್ಮೂರಿನ ಶಾಲೆಗೆ ಪಾಲಕರು ಹಾಗೂ ಊರಿನ ಗ್ರಾಮಸ್ಥರು ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ಇನ್ನು ಹೆಚ್ಚಿನ ಸಹಕಾರ ನೀಡಿದರೆ ನಮ್ಮ ಶಾಲೆ ತಾಲೂಕು ಮಟ್ಟ ದಿಂದ ರಾಜ್ಯ ರಾಷ್ಟ್ರಮಟ್ಟದವರೆಗೆ ನಮ್ಮ ಮಕ್ಕಳನ್ನು ಕ್ರೀಡೆಯಲ್ಲಿ ಸಾಧನೆ ಮಾಡುವಲ್ಲಿ ಯಶಸ್ವಿ ಆಗುತ್ತಾರೆ ಹಾಗೂ ಶಿಕ್ಷಣದಲ್ಲಿ ಉನ್ನತ ಸ್ಥಾನ ಪಡೆಯಲು ನಾವು ಎಲ್ಲ ಶಿಕ್ಷಕರು ಸೇರಿ ಇನ್ನು ಹೆಚ್ಚಿನ ಸಮಯ ತೆಗೆದುಕೊಂಡು ಶಿಕ್ಷಣ ನೀಡುತ್ತೇವೆ ನಿಮ್ಮ ಗ್ರಾಮಸ್ಥರ ಸಹಕಾರ ನಮ್ಮ ಶಾಲೆಗೆ ಬಹಳ ಅವಶ್ಯಕತೆ ಇದೆ ದಯವಿಟ್ಟು ಗ್ರಾಮಸ್ಥರು ಸಹಕರಿಸಬೇಕೆಂದು ಮನವಿ ಮಾಡಿಕೊಂಡರು ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ ನಮ್ಮ ಶಾಲೆಯ ಮಕ್ಕಳಿಗೆ ಪ್ರಥಮ ಸ್ಥಾನ ಗಳಿಸಲು ಶಾಲೆಯ ಶಿಕ್ಷಕರು ಕ್ರೀಡೆಯ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು

ಗುಂಡಪ್ಪ ಜೆ ಬೋಗಿ ಬೈಲಕುಂಟಿ

Related Articles

Leave a Reply

Your email address will not be published. Required fields are marked *

Back to top button