ಮನರಂಜನೆಗೊಳಿಸುವ ಪ್ರವಾಸೋದ್ಯಮದ ವಿರುದ್ಧ ಅಪಪ್ರಚಾರ – ನೌಕರರ ಸಂಘ ಅಧ್ಯಕ್ಷ.ಡಿ.ಲಕ್ಷ್ಮೀ ವೆಂಕಟೇಶ್

ಮನರಂಜನೆ ಗೊಳಿಸುವ ಪ್ರವಾಸೋದ್ಯಮವಿರುದ್ಧದ ಅಪಪ್ರಚಾರ – ನೌಕರರ ಸಂಘ ಅಧ್ಯಕ್ಷ.ಡಿ.ಲಕ್ಷ್ಮೀ ವೆಂಕಟೇಶ್
ಸಂಸ್ಥೆಯ ಘನತೆ ಹಾಗೂ ನೌಕರರ ಹಿತ ಕಾಪಾಡಲು ಕ್ರಮಕ್ಕೆ ಒತ್ತಾಯ
ಬೆಂಗಳೂರು, ಸೆ.8: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KSTDC) ಆಡಳಿತ ಹಾಗೂ ನೌಕರರ ವಿರುದ್ಧ ಕೆಲವು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಆರೋಪಗಳು ಹಾಗೂ ಅಪಪ್ರಚಾರಗಳಿಗೆ ಕಡಿವಾಣ ಹಾಕಬೇಕು ಎಂದು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕೆಎಸ್‌ಟಿಡಿಸಿ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಡಿ.ಲಕ್ಷ್ಮೀ ವೆಂಕಟೇಶ್ ಆಗ್ರಹಿಸಿದರು
ಈ ಕುರಿತು ಸಂಘದ ಪದಾಧಿಕಾರಿಗಳು ಸೆ.8ರಂದು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ನಿಗಮವು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದು, ನೌಕರರು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬಾಬು ಪೂಜಾರಿ ತಿಳಿಸಿದರು.
ನಿಗಮದ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಆಧಾರರಹಿತ ಆರೋಪಗಳನ್ನು ಸಾಮಾಜಿಕ ಜಾಲತಾಣ ಹಾಗೂ ಯೂಟ್ಯೂಬ್‌ಗಳಲ್ಲಿ ಪ್ರಸಾರ ಮಾಡುವುದರಿಂದ ಸಂಸ್ಥೆಯ ಘನತೆಗೆ ಧಕ್ಕೆ ಉಂಟಾಗುತ್ತದೆ. ಇಂತಹ ಬೆಳವಣಿಗೆಗಳಿಂದ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಕ್ಕೂ ಹೆಚ್ಚು ನೌಕರರ ಹಿತಕ್ಕೂ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಸಂಘ ಆತಂಕ ವ್ಯಕ್ತಪಡಿಸಿದೆ.
ನಿಗಮದ ಸಚಿವರು, ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಸಂಸ್ಥೆ ಅಭಿವೃದ್ಧಿಯತ್ತ ಸಾಗುತ್ತಿದ್ದು, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ. ನೌಕರ ವರ್ಗವೂ ನಿಗಮದ ಅಭಿವೃದ್ಧಿಗೆ ಸಹಕರಿಸುತ್ತಿದೆ ಎಂದು ಸಂಘ ತಿಳಿಸಿದರು.
ಆದ್ದರಿಂದ ನಿಗಮದ ಘನತೆಗೆ ಧಕ್ಕೆ ತರುವಂತಹ ಆಧಾರರಹಿತ ಆರೋಪಗಳು ಮತ್ತು ಅಪಪ್ರಚಾರಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ದೃಶ್ಯ, ಮುದ್ರಣ ಹಾಗೂ ಸಾಮಾಜಿಕ ಮಾಧ್ಯಮಗಳು ಯಾವುದೇ ಆರೋಪಗಳನ್ನು ಪ್ರಕಟಿಸುವ ಮುನ್ನ ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ಕೆಎಸ್‌ಟಿಡಿಸಿ ಎಂಪ್ಲಾಯಿಸ್ ಯೂನಿಯನ್ ಲಕ್ಷ್ಮೀಪತಿ ತಿಳಿಸಿದರು.
ಸೂಚನೆ: ಮೇಲಿನ ವರದಿಯಲ್ಲಿನ ಆರೋಪಗಳು ಸಂಘದ ಲಿಖಿತ ಹೇಳಿಕೆಯಲ್ಲಿ ಮಾಡಿರುವ ಆರೋಪಗಳಾಗಿದ್ದು, ಅವುಗಳನ್ನು ಸ್ವತಂತ್ರವಾಗಿ ದೃಢಪಡಿಸಿದ ಮಾಹಿತಿಯೆಂದು ಪರಿಗಣಿಸಬಾರದು. ವರದಿ. ಮಂಜುಳಾ ರೆಡ್ಡಿ.



