ಸಾರಿಗೆ ಸಿಬ್ಬಂಧಿ ಶವಗಳ ಮೇಲೆ ಅಧಿಕಾರಿ, ಸಚಿವರ ಬ್ರೇಕ್ ಡ್ಯಾನ್ಸ್.
ಸಾರಿಗೆ ಸಿಬ್ಬಂಧಿ ಶವಗಳ ಮೇಲೆ ಅಧಿಕಾರಿ, ಸಚಿವರ ಬ್ರೇಕ್ ಡ್ಯಾನ್ಸ್.
ಗುಲಾಮಗಿರಿಯಲ್ಲಿಯೇ ಹುಟ್ಟಿ ಬೆಳೆದು, ಜೀವನ ಮಾಡಿಕೊಂಡು ಕೊನೆಗೊಂದು ದಿನ ಗುಲಾಗಿರಿಯಲ್ಲಿಯೆ ಸಾಯುವುದು ಈ ದೇಶದ ಬಡಜನರ/ ಅಸಹಾಯಕರ ಮತ್ತು ಕೆಲ ಸರಕಾರಿ ನೌಕರರ ಹಣೆ ಬರಹವೇ ಆಗಿದೆ.
ಈ ಗುಲಾಮಿತನ ಆದಿಕಾಲದಿಂದಲೂ ಅನುಚಾನವಾಗಿ ನಡೆದುಬಂದ ದೇಶದ ಸಂಪ್ರದಾಯವಾಗಿದೆ. ಸಮಾಜದಲ್ಲಿ ಈ ಕೆಟ್ಟ ಅನಿಷ್ಟ ಪದ್ಧತಿ ಐತಿಹಾಸಿಕವಾಗಿ ಭಾರತ ದೇಶದೊಂದಿಗೆ ಬೆರೆತು, ಸಮ್ಮಿಳಿತವಾಗಿದೆ. ಆದರೇ ಸಂವಿಧಾನದ ಚೌಕಟ್ಟಿನಡಿ ಆಡಳಿತ ನಡೆಯಿಸುತ್ತಿರುವ ಅಧಿಕಾರಿಗಳೂ, ಮಂತ್ರಿಗಳೂ ಕೂಡ ಗುಲಾಮಿ ಪದ್ಧತಿಯನ್ನು ಸಂವಿಧಾನ ಬದ್ಧವಾಗಿ ಮಾಡಲು ಹೊರಟಂತಿದೆ. ಗುಲಾಮಿ ಪದ್ಧತಿಯು ಸರಕಾರದ ಆಡಳಿತ ಯಂತ್ರದಲ್ಲೂ ಬೇರು ಬಿಟ್ಟಿರುವುದಕ್ಕೆ ಕರ್ನಾಟಕ ಸಾರಿಗೆ ಸಂಸ್ಥೆ ಇದಕ್ಕೆ ಒಳ್ಳೆಯ ಉದಾಹರಣೆ ಎನ್ನಬಹುದು.
ಕರ್ನಾಟಕ ರಾಜ್ಯ ಸರಕಾರಿ ಇಲಾಖೆಯ ನೌಕರರ ಸಂಬಳ ಕಾಲ ಕಾಲಕ್ಕೆ ಹೆಚ್ಚಳವಾಗುತ್ತಾ ಇರುತ್ತದೆ. ಆದರೆ ಸಾರಿಗೆ ಸಂಸ್ಥೆಗಳಾದ (1) BMTC BNG, (2) ksrtc (3) nwkrtc (4) nekrtc ಹೀಗೆ 4 ವಲಯಗಳನ್ನಾಗಿ ವಿಭಾಗಿಸಿದ್ದಾರೆ ನಾಲ್ಕೂ ವಲಯಗಳನ್ನು ಬೆಂಗಳೂರು ಕೇಂದ್ರದೊಂದಿಗೆ ಎಲ್ಲಾ ವಲಯಗಳು ಸಂಪರ್ಕ ಮತ್ತು ಆಡಳಿತಾತ್ಮಕ ವ್ಯೆವಹಾರಗಳು ನಡೆಯುತ್ತವೆ.
ಕರ್ನಾಟಕ ರಾಜ್ಯ ಸರಕಾರಿ ಇಲಾಖೆಯ ನೌಕರರ ಸಂಬಳ ಕಾಲ ಕಾಲಕ್ಕೆ ಎರಿಕೆಯಾಗುತ್ತಾ ಇರುತ್ತದೆ ಆದರೆ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ಎಲ್ಲಾ ವಲಯಗಳ ಸಿಬ್ಬಂಧಿಗಳು ಅಂದರೇ ಸಾರಿಗೆ ಡಿಪೋನಲ್ಲಿ ಕೆಲಸ ಮಾಡುವವರು, ಕಂಡಕ್ಟರ್, ಡ್ರೈವರ್ ಗಳು, ಆಡಳಿತ ಸಿಬ್ಬಂಧಿಗಳ ವೇತನವು ಪ್ರತಿ ನಾಲ್ಕು 4 ವರ್ಷಗಳಿಗೆ ಒಮ್ಮೆ ರಾಜ್ಯ ಸರಕಾರದಿಂದ ಒಪ್ಪಂದ ಪತ್ರ ಅಥವಾ ಅಗ್ರೀಮೆಂಟ ಆಗುತ್ತದೆ. ಇದು ಹಿಂದಿನಿಂದಲೂ ನಡೆದು ಬಂದಿರುವ ಅನಿಷ್ಟ.
ಈ ಹಿಂದಿನ Pay Fixation agreement 1 ನೇ ಜನೇವರಿ 2020 ರಲ್ಲಿ ಆಗಿತ್ತು. ನಂತರ 1 ನೇ ಜನೇವರಿ 2024 ರಲ್ಲಿ ಪುನಃ ರಿನಿವಲ್ ಆಗಬೇಕಾಗಿತ್ತು ಆದರೇ ಕುರುಡು ಸರ್ಕಾರ, ದಪ್ಪ ಚರ್ಮದ ಅಧಿಕಾರಿಗಳಿಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ.
2020 – 2024 ರ 4 ವರ್ಷಗಳ ರಿನಿವಲ್ ಅಗ್ರಿಮೆಂಟ ಅವಧಿ ಮುಗಿದು 9 ತಿಂಗಳು ಕಳೆದರೂ ಅಧಿಕಾರಿಗಳಾಗಲೀ ಸಚಿವರಾಗಲೀ ತಿರುಗಿಯೂ ನೋಡುತ್ತಿಲ್ಲ ಖ್ಯಾರೇ ತೇರಾ ಪರೇಶಾನಿ ಎಂದು ಕೇಳುವವರಿಲ್ಲ. ಕೆ.ಎಸ.ಆರ್.ಟಿ.ಸಿ ಎಂದರೇ ಅದು ಹಂಗೇನೇ!
೧ನೇ ಜನೇವರಿ ೨೦೨೦ ರಲ್ಲಿ ಸಿಬ್ಬಂಧಿಗಳಿಗೆ ಕೊಡಬೇಕಾಗಿದ್ದ ಶೇ 15℅ ಹೆಚ್ಚುವರಿ ವೇತನ ಎಪ್ರೀಲ್ 2023 ಕ್ಕೆ ಅನ್ವಯವಾಗುವಂತೆ ಜಾರಿ ಮಾಡಿದ್ದಾರೆ. ಒಪ್ಪಂದದ ಪ್ರಕಾರ ಜಾರಿ ಮಾಡುವ ದಿನಾಂಕಕ್ಕೆ ಜಾರಿ ಮಾಡದೇ 14 ತಿಂಗಳು ತಡ ಮಾಡಿ ಜಾರಿ ಮಾಡಿದ್ದಾರೆ ಇನ್ನೂ ಕರ್ತವ್ಯದಲ್ಲಿರುವ ಸಿಬ್ಬಂಧಿಗಳ 38 ತಿಂಗಳುಗಳ arrears balance ಕೊಟ್ಟಿರುವುದಿಲ್ಲ. ಸಿಬ್ಬಂಧಿಗಳು ದಿನ ಬೆಳಗಾದರೇ ಸಂಬಂಧಿಸಿವರಿಗೆ ಹಿಡಿಶಾಪ ಹಾಕುತ್ತಿದ್ದಾರೂ ಸಹ ಅಧಿಕಾರಿ, ಮಂತ್ರಿಗಳು ಗಮನ ಹರಿಸಿಯೇ ಇಲ್ಲ. ( ಇದು ಸಧ್ಯ ಕರ್ತವ್ಯದಲ್ಲೊರುವ ಸಿಬ್ಬಂಧಿಗಳ ಗೋಳು) ಇದೆಲ್ಲಾ ಅಪ್ಪಟ ಮೋಸ, ವಂಚನೆಯಲ್ಲದೇ ಮತ್ತೇನು? ಇಂಥಹ ಹಲವಾರು ತೋಳ-ಕುರಿ ನ್ಯಾಯ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯಲ್ಲಿ ನಡೆಯುತ್ತಲೇ ಇವೆ.
2020 ರಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ
ಉದಾಹರಣೆಯೊಂದಿಗೆ ಹೇಳಬೇಕೆಂದರೇ ಜೂನ್ ೩೦ ೨೦೨೦ ರಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ
೬ ತಿಂಗಳ 15℅ difference arrears amount ಬರಬೇಕಾಗಿದೆ ಇಲ್ಲಿಯವರೆಗೂ ಮಂಜೂರಿ ಮಾಡಿರುವುದಿಲ್ಲ.
ಒಬ್ಬ ನೌಕರ, ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ನಂತರ. PF & Gratuity ಕೊಡುತ್ತಾರೆ.
Gratuity ಹಣವು ಅಯಾ ನೌಕರ ನಿವೃತ್ತಿಯಾಗುವ ಕೊನೆಯ ತಿಂಗಳ ಸಂಬಳ ಎಷ್ಟು ಪಾವತಿ ( ಸಂದಾಯ) ಆಗುತ್ತದೆಯೋ ಅದನ್ನು consider ಮಾಡಿ ಮಂಜೂರಿ ಮಾಡುತ್ತಾರೆ.
ಸಾರಿಗೆ ನೌಕರರ Gratuity ಹಣವು ಹಿಂದಿನ ಬೆಸಿಕ + ಡಿ.ಎ. ಮೇಲೆ ಲೆಕ್ಕ ಹಾಕಿ ಕೊಡುತ್ತಾರೆ ಅಂದರೆ ನೌಕರ ನಿವೃತ್ತಿ ಹೊಂದುವ ಸಮಯದಲ್ಲಿ ಇನ್ನೂ Fixation ಮಾಡಿಲ್ಲದ ಕಾರಣ ಅಂಥಹವರಿಗೆ ಅಂದರೆ 2020ರಲ್ಲಿ ನಿವೃತ್ತಿ ಹೊಂದಿದವರಿಗೆ gratuity difference amount ಸಂಸ್ಥೆಯಲ್ಲಿಯೇ ಬಾಕಿ ಉಳಿದುಕೊಂಡಿದೆ. ಉದಾಹರಣೆಗೆ ಶೇ 15℅ ರ ಪ್ರಕಾರ ಒಬ್ಬ ಸಾವಿರಾರು, ಲಕ್ಷ್ಯಾನೂಗಟ್ಟಲೇ ಹಣ ನೌಕರನಿಗೆ ನ್ಯಾಯಯುತವಾಗಿ ಕಾನೂನು ಪ್ರಕಾರ ಬರಬೇಕಾಗಿರುವ ಬಾಕಿ ಹಣ ಈವತ್ತಿಗೂ ಸಂದಾಯವಾಗಿರುವುದಿಲ್ಲ.
ಇನ್ನೂ ಸಂಸ್ಥೆ ಮತ್ತು ಸರಕಾರ ಮಾಡಿಕೊಂಡಿರುವ ಒಪ್ಪಂದದಂತೆ ಪ್ರತಿ 4 ವರ್ಷಕ್ಕೊಮ್ಮೆ ಪೇ ಫಿಕ್ಸೇಷನ್ ಅಗ್ರೀಮೆಂಟ 1ನೇ ಜನೇವರಿ 2024 ಕ್ಕೆ ಮುಗಿದು 9 ತಿಂಗಳು ಕಳೆದಿವೆ ಇಲ್ಲಿಯವರೆಗೂ ಪೇ ಫಿಕ್ಸೇಷನ್ ಹೊಸ ಅಗ್ರಿಮೆಂಟ ಆಗಿಲ್ಲ. ದಪ್ಪ ಚರ್ಮದ ಅಧಿಕಾರಿಗಳಿಗೆ ಸಚಿವರಿಗೆ ಕಾಳಜಿಯೂ ಇಲ್ಲ. ಆದರೇ ಸಿಬ್ಬಂಧಿಗಳು ಯಾವಾಗ ಜಾರಿ ಆಗುತ್ಯೋ ಎಂದು ಕಣ್ಣು ಕಣ್ಣು ಬಿಡುತ್ತಾ ಜಾತಕ ಪಕ್ಷಿಯಂತೆ ಕಾಯುತ್ತಾ ಇದ್ದಾರೆ. ಮನೆ ಮಕ್ಕಳು ಸಂಸಾರ ಎನ್ನದೇ ಹಗಲು-ರಾತ್ರಿ ದುಡಿಯುತ್ತಿರುವ ಇಲಾಖೆಯ ನೌಕರರ ಗೋಳು ಆ ಭಗವಂತನಿಗೆ ಗೊತ್ತು ಆದರೇ ಈ ಅಧಿಕಾರಿಗಳು ಸಚಿವರಿಗೇಕೇ ಅರ್ಥವಾಗುತ್ತಿಲ್ಲವೋ ಅಥವಾ ಜಾಣ ಕುರುಡೋ ಅರ್ಥವಾಗುತ್ತಿಲ್ಲ.
ಎಸ್.ಎ.ಸುಗಂಧಿ ನಿವೃತ್ತ ನೌಕರರು,
ಎನ್.ಇ.ಕೆ.ಎಸ್.ಆರ್.ಟಿ.ಸಿ. ಯಾದಗಿರಿ.
ಆತ್ಮೀಯ ಸಹೋದ್ಯೋಗಿಗಳೇ…… ಸಾರಿಗೆ ನೌಕರರ ಸಂಘದ ಮಾನ್ಯ ಮುಖಂಡರ ಅಹೋರಾತ್ರಿ ನೌಕರರ ಹಿತಕ್ಕಾಗಿ ದುಡಿಯುತ್ತಿದ್ದಾರೆ. ಪರಿಶ್ರಮದೊಂದಿಗೆ ಹೋರಾಟ ಮಾಡುತ್ತಿದ್ದಾರೆ ಅವರ ಕಾಯಕ ಅನುಚಾನವಾಗಿ ನಡೆಯುತ್ತಿರಲಿ.
ಅವರ ಜೊತೆಗೆ ಸಾರಿಗೆ ನೌಕರರ ಬದುಕು-ಬವಣೆ, ದೂರು-ದುಮ್ಮಾನ-ದುಃಖದ ಕ್ಷಣಗಳನ್ನು ಬರೆದು ಕಳುಹಿಸಿರಿ.
ನಮ್ಮ ನಿಮ್ಮ ಶ್ರಮದಿಂದ ಚಿಕ್ಕಪುಟ್ಟ ಸಮಸ್ಯೆ ಅಧಿಕಾರಿಗಳು, ಸಚಿವರ ಗಮನಕ್ಕೆ ತಂದು ಕಣ್ತೆರೆಯಿಸೋಣ ಬನ್ನಿ ಕೈಜೋಡಿಸಿರಿ.
ಪ್ರಜಾಶ್ರೀ ಅನ್ ಲೈನ್ ನ್ಯೂಸ್ ಪತ್ರಿಕೆ ಬೆಂಗಳೂರು.



