ಖಜಾನೆ ಖಾಲಿ ಆಗಲು ಬಿಡುವುದಿಲ್ಲ. ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಾಡಲಾಗುವುದು.

ರೂ.52,000 ಕೋಟಿ ಗ್ಯಾರೆಂಟಿ ಯೋಜನೆಗಳಿಗೆ ಮೀಸಲು ಇರಿಸಲಾಗಿದೆ. ಇದರೊಂದಿಗೆ ರೂ.68,000 ಕೋಟಿ ಅಭಿವೃದ್ಧಿ ಕಾರ್ಯಗಳಿಗೆ ಇರಿಸಲಾಗಿದೆ.ಖಜಾನೆ ಖಾಲಿ ಆಗಲು ಬಿಡುವುದಿಲ್ಲ. ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಾಡಲಾಗುವುದು. ಕೊಪ್ಪಳ ಜಿಲ್ಲೆಯ ಯಲಬುರ್ಗಾಕ್ಕೆ ರೂ.970 ಕೋಟಿ ಕಾರಟಗಿಗೆ ರೂ.203, ಅಂಜನಾದ್ರಿಗೆ ರೂ.100 ಕೋಟಿ ನೀಡಲಾಗಿದೆ. ಮುಂದಿನ ವರ್ಷ ಕನಕಗಿರಿ ದೇವಾಲಯ ಪ್ರಾಧಿಕಾರ ರಚನೆ ಮಾಡಲಾಗುವುದು. ಕೊಪ್ಪಳ ಜಿಲ್ಲೆ ಬಂದರೆ ನನ್ನ ಸ್ವಂತ ಕ್ಷೇತ್ರಕ್ಕೆ ಬಂದ ಅನುಭವ ಆಗುತ್ತದೆ. ಸ್ವಾತಂತ್ರ್ಯ ಸಮಾನತೆ ಭ್ರಾತೃತ್ವದಲ್ಲಿ ನಂಬಿಕೆ ಹಾಗೂ ಬದ್ದತೆ ಇದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್.ತಂಗಡಗಿ ಮಾತನಾಡಿ, ಕಳೆದ 3 ಉತ್ಸವಗಳಿಂದ ಅದ್ದೂರಿಯಾಗಿ 4ನೇ ಕನಕಗಿರಿ ಉತ್ಸವ ಆಯೋಜಿಸಲಾಗಿದೆ. ಈ ಮೂಲಕ ಹುನಚಪ್ಪ ನಾಯಕ ಪರಂಪರೆ ಇತಿಹಾಸ ನಾಡಿಗೆ ಸಾರಲಾಗುತ್ತಿದೆ. ಸಣ್ಣನೀರಾವರಿ ಸಚಿವನಿದ್ದಾಗ ಈ ಭಾಗದ 9 ಕೆರೆಗಳಿಗೆ ನೀರು ತುಂಬಿಸುವ ಮೂಲಕ ಒಣ ಬೇಸಾಯದ ರೈತರಿಗೆ ನೀರಾವರಿ ಸೌಲಭ್ಯ ಕಲ್ಲಿಸಲಾಗಿದೆ. ಮೋಟರ್ ಕೆಟ್ಟು ಕೆರೆಗಳಿಗೆ ನೀರು ತುಂಬವ ಕಾರ್ಯ ನಿಂತಿತ್ತು. ರೂ.85 ಲಕ್ಷ ಖರ್ಚು ಮಾಡಿ ಮೋಟಾರ್ ರಿಪೇರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನೀರು ಹರಿಸಲಾಗುವುದು.
ಕನಕಗಿರಿ ಹೊಸ ತಾಲ್ಲೂಕು ಕೇಂದ್ರವಾಗಿದೆ. ಇಲ್ಲಿ ಮಿನಿವಿಧಾನ ಸೌಧ ನಿರ್ಮಿಸಬೇಕು. ಎಲ್ಲಾ ಕಚೇರಿಗಳು ಬರಬೇಕು. ಕನಕಚಾಲಪತಿ ದೇವಾಲಯ ಪ್ರಾಧಿಕಾರ ಮಾಡಿ ದೇವಾಲಯವನ್ನು ಪ್ರವಾಸೋಧ್ಯಮ ಇಲಾಖೆ ಸೇರಿಸಿ ಅಭಿವೃದ್ಧಿ ಮಾಡಬೇಕು. ನವಿಲಿ ಜಲಾಶಯ ಜೊತೆಗೆ ಇತರೆ ಜಲಾಶಗಳನ್ನು ನಿರ್ಮಿಸಿದರೆ ಈ ಭಾಗದ ಜನರಿಗೆ ಅನುಕೂಲವಾಗಿದೆ. ಕೃಷ್ಣಾ ಹಾಗೂ ತಂಗಾಭದ್ರ ನದಿ ಜೋಡಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಅಂಜನಾದ್ರಿ ರೂ.100 ಕೋಟಿ ನೀಡಿದ್ದಾರೆ. ವರ್ಷದಲ್ಲೇ ಅಭಿವೃದ್ಧಿ ಕಾರ್ಯ ಮಾಡಿ ನಾಡಿಗೆ ತೋರಿಸಲಾಗಿದೆ. ಪ್ರತಿ ವರ್ಷವೂ ಕನಕಗರಿ ಉತ್ಸವ ಆಯೋಜಿಸಲಾಗುವುದು. ಕನಕಗಿರಿಯಲ್ಲಿ ತೋಟಗಾರಿಕೆ ಪಾರ್ಕ್ ನಿರ್ಮಿಸಲು ಜಾಗ ಗುರುತಿಸಲಾಗಿದೆ. ಮುಂದಿನ ಬಜಟ್‌ನಲ್ಲಿ ರೂ.10 ಕೋಟಿ ಮೀಸಲಿರಿಸಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಬಸವಣ್ಣ ಅವರನ್ನು ರಾಯಭಾರಿ ಎಂದು ಘೋಷಿಸದೆ, ವಿಶ್ವಗುರು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಮುಖ್ಯಮಂತ್ರಿಗಳಿಗೆ ವೇದಿಕೆಯಲ್ಲಿ ಅಭಿನಂಧಿಸಿಲಾಯಿತು.
ವೇದಿಕೆಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ, ವಿರೋಧ ಪಕ್ಷದ ಮುಖ್ಯ ಸಚೇತನ ಹಾಗೂ ಶಾಸಕ ದೊಡ್ಡನಗೌಡ ಹನುಮನಗೌಡ ಪಾಟೀಲ್ , ಸಂಸದ ಕರಡಿ ಸಂಗಣ್ಣ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಜನಾರ್ಧನ್ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯ್ಕ್, ಶರಣಗೌಡ ಅನ್ನದಾನಗೌಡ ಪಾಟೀಲ ಬಯ್ಯಾಪುರ, ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ, ಇಕ್ಬಾಲ್ ಅನ್ನಾರಿ, ಅಜಯ್ ನಾಗಭೂಷಣ್, ಸುವರ್ಣಗಿರಿ ಕ್ಷೇತ್ರದ ಡಾ.ಚನ್ನಮಲ್ಲ ಮಹಾಸ್ವಾಮೀಜಿ, ಸುಳೇಕಲ್‌ನ ಕಲ್ಮಠದ ಭುವನೇಶ್ವರ ದಿವ್ಯ ಸಾನಿಧ್ಯ ವಹಿಸಿದ್ದರು. ಕನಕಗಿರಿ ರಾಜವಂಶಸ್ಥ ರಾಜ ನವೀನ್‌ಚಂದ್ರ ನಾಯಕ ಹುಲಿ ಹೈದರ್, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿ.ಪಂ.ಸಿಇಓ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಸುನೀಲ್ ವಂಟಗೋಡಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಗಳು ಇದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ .



