ಸುದ್ಧಿ

ಏರೋ ಗ್ಯಾಸ್ ಟರ್ಬೈನ್ ಇಂಜಿನ್ನಿನ ಬಳಕೆಗಳು ಮತ್ತು….. (SAAP) ಟಿ.ಮೋಹನ್ ರಾವ್ ಬೆಂಗಳೂರು

ಏರೋ ಗ್ಯಾಸ್ ಟರ್ಬೈನ್ ಇಂಜಿನ್ನಿನ ಬಳಕೆಗಳು ಮತ್ತು ಭಾರತೀಯ ಪ್ರಯತ್ನಗಳು (SAAP) ಟಿ.ಮೋಹನ್ ರಾವ್ ಬೆಂಗಳೂರು, ಇವರು ಏರೋನಾಟಿಕ್ಸ್ ಸೊಸೈಟಿ ಆಫ್ ಇಂಡಿಯಾ (AeSI) ಬೆಂಗಳೂರು ಸಹಭಾಗಿತ್ವದಲ್ಲಿ ತಾ, 20 04.2024 ರಂದು ಒಂದು ದಿನದ ಮಟ್ಟಿಗಿನ “ಏರೋ ಗ್ಯಾಸ್ ಟರ್ಬೈನ್ ಇಂಜಿನ್ನಿನ ಬಳಕೆಗಳು ಮತ್ತು ಭಾರತೀಯ ಪ್ರಯತ್ನಗಳು” ಎಂದು ವಿಷಯದ ಬಗ್ಗೆ, ರಾಷ್ಟ್ರೀಯ ವಿಚಾರ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆಎಂದು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಜಿ ಟಿ ಆರ್ ಇ ಅದ್ಯಕ್ಷರಾದ ಟಿ ಮೊಹನ್ ರಾವ್ ಅವರು ತಿಳಿಸಿದರು.

ಅಂತರಿಕ್ಷ ಯಾನಕ್ಕೆ ಸಂಬಂಧಿಸಿದಂತೆ ಪ್ರೊಪಲಶನ್ ವ್ಯವಸ್ಥೆಯ ವಿನ್ಯಾಸ ಮತ್ತು ಅಭಿವ್ರುದ್ಧಿ ನಿರ್ಮಾಣ ಮತ್ತು ವಾಯು ಯೋಗ್ಯತೆ ಪ್ರಮಾಣೀಕರಣದಲ್ಲಿ (Air worthiness Certification) ತೊಡಗಿರುವ ಎಲ್ಲಾ ವಿಜ್ಞಾನಿಗಳನ್ನೂ, ವಿಶ್ರಾಂತ ವಿಜ್ಞಾನಿಗಳನ್ನೂ ವ್ಯತ್ತಿಪರರನ್ನೂ, ಶೈಕ್ಷಣಿಕ ಸಂಸ್ಥೆಗಳನ್ನೂ ಹಾಗೂ ಔದ್ಯೋಗಿಕ ಸಂಸ್ಥೆಗಳನ್ನೂ ಒಂದೇ ಸೂರಿನಡಿ ತಂದು ಅವರು ಹೊಂದಿರುವ ಪರಸ್ಪರ ಜ್ಞಾನ ಮತ್ತು ಅನುಭವಗಳ ಹಿನ್ನೆಲೆಯಲ್ಲಿ ಈ ವಿಜ್ಞಾನವನ್ನು ಮುಂದುವರೆಸುವ ಹಾಗೂ ಪ್ರಯೋಜನ ಪಡೆಯುವ ಒಂದು ಉದ್ದೇಶದಲ್ಲಿ ಸೊಸೈಟಿ ಫಾರ್ ಅಡ್ಯಾನ್ಸೆಂಟ್ ಆಫ್ ಏರೋಸ್ಪೇಸ್ ಪ್ರೊಪಲ್ಮನ್ (SAAP) “ಅನ್ನು ಸ್ಥಾಪಿಸಲಾಯಿತು.

HAL, DRDO, NAL ಶೈಕ್ಷಣಿಕ ಸಂಸ್ಥೆಗಳು ಮತ್ತು ಅಂತರಿಕ್ಷ ವಾಯುಯಾನ ಸಂಬಂಧಿತ ಔದ್ಯೋಗಿಕ ಸಂಸ್ಥೆಗಳನ್ನೊಳಗಂಡಂತೆ ಸುಮಾರು 150ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಈ ವಿಚಾರ ಗೋಷ್ಠಿಯಲ್ಲಿ ಕಾರ್ಯಾಗಾರದಲ್ಲಿ ಭಾಗವಹಿಲಿದ್ದು ಭಾರತದಲ್ಲಿ ವಿನ್ಯಾಸಗೊಳ್ಳಲಿರುವ ಗ್ಯಾಸ್ ಟರ್ಬೈನ್ ನ ಬಳಕೆಯ ಬಗ್ಗೆ ಹಲವಾರು ಮಾರ್ಗ, ವಿಚಾರ-ವಿಮರ್ಶೆ ನಡೆಸಲಿದ್ದಾರೆ. ಗ್ಯಾಸ್ ಟರ್ಬೈನ್ ಇಂಜಿನ್ ನ ವಿನ್ಯಾಸ, ಅಭಿವೃದ್ಧಿ ಮತ್ತು ಪರೀಕ್ಷಾ ವಿಧಾನಗಳ ಬಗ್ಗೆಯೂ ಚರ್ಚಿಸಲಾಗುತ್ತದೆ.

ಈ ವಿಚಾರ ಗೋಷ್ಠಿಯ ಸಂದರ್ಭದಲ್ಲಿ ಲೇಖಕರ “ಜರ್ನಿ ತೂ ಗ್ಯಾಸ್ ಟರ್ಬೈನ್ ಟೆಕ್ನಾಲಜೀಸ್” ಎಂಬ ಶೀರ್ಷಿಕೆಯ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತದೆ.

SAAP ಸಂಸ್ಥೆಯು ಭಾರತೀಯ ಗ್ಯಾಸ್ ಟರ್ಬೈನ್ಸ್ ಪಿತಾಮಹ AVM ರಾಯ್ ಚೌಧರಿ ಸ್ಮರಣಾರ್ಥವಾಗಿ, ವಾರ್ಷಿಕ “AVM ರಾಯ್ ಚೌಧರಿ ಸ್ಮರಣಾರ್ಥ ಪ್ರಶಸ್ತಿ ರೂಪಿಸಿದ್ದು, ಇದನ್ನು ಗ್ಯಾಸ್ ಟರ್ಬೈನ್ ಟೆಕ್ನಾಲಜೀಸ್ ಅನ್ನು ಅಭ್ಯಸಿಸುತ್ತಿರುವ ಶ್ರೇಷ್ಠ ವ್ಯಕ್ತಿಗೆ ಸ್ಮರಣಾರ್ಥ ಭಾಷಣದೊಂದಿಗೆ ನೀಡಲಾಗುತ್ತಿದೆ.

ಇದರ ಜೊತೆಗೆ HAL, DRDO, NAL, IAF, ಶೈಕ್ಷಣಿಕ ಸಂಸ್ಥೆಗಳು ಮತ್ತು ಅಂತರಿಕ್ಷ ವಾಯುಯಾನ ಸಂಬಂಧಿತ ಔದ್ಯೋಗಿಕ ಸಂಸ್ಥೆಗಳ ಖ್ಯಾತ ವ್ಯಕ್ತಿಗಳು ತಾಂತ್ರಿಕ ಭಾಷಣಗಳನ್ನು ನೀಡಲಿದ್ದಾರೆ. ಅಲ್ಲದೆ ಪ್ರೊ. ) ) ಐಸಾಕ್, ಪಾರ್ಕ್ ಎಂಜಿನಿಯರಿಂಗ್ ಕಾಲೇಜು, ಕೊಯಮತ್ತೂರು, ವಿಶ್ರಾಂತ ಕಾರ್ಯವಾಹಿ ನಿರ್ದೇಶಕರು, NAL ಅವರು ” ಗ್ಯಾಸ್ ಟರ್ಬೈನ್ ಗಾಗಿ ಪರ್ಯಾಯ ಇಂಧನವಾಗಿ ಜಲಜನಕ” ಎಂಬುಧರ ಬಗ್ಗೆ ಮುಖ್ಯ ಭಾಷಣ ನೀಡಲಿದ್ದಾರೆ.

ಅಂತಿಮವಾಗಿ ಗ್ಯಾಸ್ ಟರ್ಬೈನ್ ಭ್ರಾತೃತ್ವದ ಪ್ರಯೋಜನಕ್ಕಾಗಿ ವಿಚಾರಗೋಷ್ಠಿಯ ಸಮಗ್ರ ಸಾರಾಂಶ ಹಾಗೂ ಸಕ್ರಿಯ ಸೂಚನಾಂಶಗಳನ್ನು ನೀಡಲು ಪ್ಯಾನೆಲ್ ಚರ್ಚೆ ನಡೆಯಪಡುತ್ತದೆ. ನಂತರದ ಭೋಜನ ಕೂಟದೊಂದಿಗೆ ವಿಚಾರಗೋಷ್ಠಿಗೆ ತೆರೆ ಬೀಳುತ್ತದೆ.

ತನ್ಮೂಲಕ ನಮ್ಮೆಲ್ಲಾ ಮಾಧ್ಯಮ ಮಿತ್ರರು ವಿಚಾರ ಗೋಷ್ಠಿಯ ತಿರುಳನ್ನೂ, ದೊರೆಯಲಿರುವ ಅವಕಾಶಗಳನ್ನು ಉತ್ತಮ ಮಾಧ್ಯಮ ಪ್ರಸಾರ ನೀಡುವುದರ ಮೂಲಕ ದೇಶಾದ್ಯಂತ ಸಮಸ್ತ ಜನರಿಗೆ ಅರಿವಿಕೆ ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಈ ಕಾರ್ಯಕ್ರಮ HAL ನ ಹಳೆಯ ಮಾನೇಷ್ಮೆಂಟ್ ಅಕಾಡೆಮಿಯ ಸಭಾಂಗಣ ಸುರಂಜನ್ ದಾಸ್ ರಸ್ತೆ, (HAL ಆಸ್ಪತ್ರೆಯ ಪಕ್ಕ) ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ.

ಶ್ರೀ ಟಿ. ಮೋಹನ ರಾವ್, ವಿಶ್ರಾಂತ ನಿರ್ದೇಶಕರು, GTRE, ಅಧ್ಯಕ್ಷ ರು, SAAP

ಶ್ರೀ ಬಾಲಕೃಷ್ಣನ್, ವಿಶ್ರಾಂತ ಕಾರ್ಯಕಾರಿ ನಿರ್ದೇಶಕರು, HAL

ಶ್ರೀ ಸಿ. ಕಲೈವಾನನ್, ವಿಶ್ರಾಂತ ಗ್ರೂಪ್ ನಿರ್ದೇಶಕರು, ಜಿವಟಿ ಆರ್ ಇ

ಶ್ರೀ ಎನ್ ಎಮ್.ಕಾವೇರಪ್ಪ, ವಿಶ್ರಾಂತ( RPRO.) ಆರ್ ಪಿ ಆರ್ ಓ,(DRDO ), ಕನ್ನೀನರ್. ಉಪಸ್ಥಿತಿ ಯಲ್ಲಿದ್ದರು. ವರದಿ. ಮಂಜುಳಾ ರೆಡ್ಡಿ..

Related Articles

Leave a Reply

Your email address will not be published. Required fields are marked *

Back to top button