ಎನ್.ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿ.ಹುಬ್ಬಳ್ಳಿ ನಗರ ಸಾರಿಗೆ ಕಂಡಕ್ಟರ್ ಡ್ರೈವರ್ ದುಂಡಾವರ್ತನೆ.

ಎನ್.ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿ. ನಗರ ಸಾರಿಗೆ ಕಂಡಕ್ಟರ್ ಡ್ರೈವರ್ ದುಂಡಾವರ್ತನೆ.
ದಿನಾಂಕ :
30-042024
ಸಮಯ ಅಂದಾಜು ಮಧ್ಯಾಹ್ನದ 1 ಗಂಟೆಯ ಆಸುಪಾಸುನಲ್ಲಿ ಕೆ.ಎ.63 – ಎಫ್ – 0007 ಬಸ್ನ ಡ್ರೈವರ್, ಕಾಲೇಜು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಯಿಸಿ, ಬಾಯಿಗೆ ಬಂದಂತೆ ಲೈಂಗಿಕ ಶಬ್ದಗಳಿಂದ, ಅಸಂವಿಧಾನಿಕ ಶಬ್ದಗಳಿಂದ ಬೈದು ಕುತ್ತಿಗೆ ಕಾಲರ್ ಹಿಂದಿನಿಂದ ಹಿಡಿದು, ಬಸ್ಸಿಗೆ ಡಿಕ್ಕಿ ಹೊಡೆಯಿಸುವ ಕ್ರೂರ ಕೃತ್ಯ ನಡೆಯಿಸಿದ್ದಾನೆ. ಕಂಡಕ್ಟರ್ ಕೂಡ ಈ ಕೂಕೃತ್ಯಕ್ಕೆ ಸಾಥ್ ನೀಡಿದ್ದಾನೆ. ಲಿಂಗರಾಜ ಬಡಾವಣೆ ಕಡೆಗೆ ಓಡಾಡುವ ಸಿಟಿ ಬಸ್ಸಗಳ ಕಂಡಕ್ಟರ್ ಡ್ರೈವರ್ಗಳ ಅನಾಗರೀಕ ಅಸಭ್ಯ ವರ್ತನೆಯಿಂದ ಈ ಪ್ರದೇಶದ ಪ್ರಯಾಣಿಕರು ರೋಷಿ ಹೋಗಿದ್ದಾರಂತೆ.
ಹೆಸರು : ಮಂದಾರ ನವೀನ ಕುಮಾರ ಸುಗಂಧಿ
ವಯಸ್ಸು – 17 (ಪ್ರಥಮ ಪಿಯುಸಿ)
ಮನೆಯ ವಿಳಾಸ : ಹುಬ್ಬಳ್ಳಿಯ ವಿದ್ಯಾನಗರ ಕಾಳಿದಾಸ ನಗರ ಬಳಿ
ಘಟನೆ ನಡೆದ ಸ್ಥಳ :
ಹುಬ್ಬಳ್ಳಿ ನಗರದ ಕಾಳಿದಾಸ ನಗರ ಬಸ್ ನಿಲ್ದಾಣದ ಬಳಿ
(ಲಿಂಗರಾಜ ನಗರ ಕಡೆಯಿಂದ ಬಸ್ ಡಿಪೋಕ್ಕೆ ಹೋಗುತ್ತಿದ್ದ ಬಸ್ ಎಂದು ಹೇಳಲಾಗಿದೆ)
ಘಟನೆ ನಡೆದ ಸಮಯ ಮತ್ತು ದಿನಾಂಕ :
30-042024
ಸಮಯ ಅಂದಾಜು ಮಧ್ಯಾಹ್ನದ 1 ಗಂಟೆಯ ಆಸುಪಾಸು
ಘಟನೆಗೆ ಕಾರಣ; ವಿದ್ಯಾರ್ಥಿಗಳು
ಕಾಲೇಜಿಗೆ ತೆರಳುತ್ತಿದ್ದ ವೇಳೆ ಅಂದಾಜು 1 ಗಂಟೆಯ ಆಸುಪಾಸು ಬೋರ್ಡ್ ಇರದೇ ಲಿಂಗರಾಜ ನಗರ ಕಡೆಯಿಂದ ಕೆ.ಎ.63 – ಎಫ್ – 0007 ನೋಂದಣಿ ಸಂಖ್ಯೆ ಬಸ್ ಬಂದಿದೆ. ಆಗ ಹಲವಾರು ಪ್ರಯಾಣಿಕರ ಜೊತೆಗೆ ವಿದ್ಯಾರ್ಥಿ ಮಂದಾರ ಬಸ್ ಗೆ ಕೈ ಮಾಡಿ ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಆಗ ಥಟ್ನೇ ಬಸ್ ನಿಲ್ಲಿಸಿದ ಚಾಲಕ ಏಕಾಏಕಿ ಕೆಳಗಿಳಿದು ಬಂದು ವಿದ್ಯಾರ್ಥಿಯನ್ನ ಕೊರಳ ಪಟ್ಟಿ ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೇ ಸಾರ್ವಜನಿಕರ ಮುಂದೆ ಅವಮಾನಿಸಿರುತ್ತಾನೆ. ಈ ವೇಳೆ ಸಾರ್ವಜನಿಕರು ಅಡ್ಡ ಬಂದ ಹಿನ್ನೆಲೆಯಿಂದಾಗು ಹುಡುಗ ಬಚಾವ ಆಗಿದ್ದಾನೆ. ಬಸ್ ಚಾಲಕ ಹಲ್ಲೆಗೂ ಮುಂದಾಗಿದ್ದನೆಂದು ವಿದ್ಯಾರ್ಥಿಯೇ ಹೇಳಿದ್ದಾನೆ.
ಬೋರ್ಡ್ ಇಲ್ಲದೇ ಇದ್ದ ಬಸ್ ಗೆ ಕೈ ಮಾಡಿದ ವೇಳೆ ಬಸ್ ನಿಲ್ಲಸಿದ್ದಾನೆ. ಈ ವೇಳೆ ಬಸ್ ಸ್ಟಾಪ್ ನಲ್ಲಿದ್ದ ಅನೇಕ ಬಸ್ ಹತ್ತಿಕೊಂಡಿದ್ದಕ್ಕಷ್ಟೇ ಆತ ಕೋಪಕೊಂಡಿದ್ದಾನೆ.
ಬಸ್ಸಿನಿಂದ ಇಳಿದ ಡ್ರೈವರ್ ಬಾಯಿಗೆ ಸಿಕ್ಕ ಅತೀ ಕೀಳುಮಟ್ಟದ, ಅಸಂವಿಧಾನಿಕ ,ಲೈಂಗಿಕ ಶಬ್ದಗಳಿಂದ ಬೈಯುತ್ತಾ ಮಂದಾರ ಎಂಬ ಹುಡುಗನ ಕುತ್ತಿಗೆಯ ಹಿಂದಿನಿಂದ ಕಾಲರ್ ಹಿಡಿದುಕೊಂಡು ದರದರನೇ ಏಳೆದುಕೊಂಡು ಹೋಗಿ ಹಿಂದಿನ ಬಸ್ ಬಾಡಿಗೆ ಡಿಕ್ಕಿ ಹೊಡೆಸಿದ್ದಾನಂತೆ. ಉರಿ ಬ ಇಸಿಲಿನಲ್ಲಿ ಹುಡುಗನ ತಲೆ ಬಸ್ಸಿಗೆ ಡಿಕ್ಕಿ ಹೊಡೆಸಿದರೇ, ಹುಟುಗನ ಆರೋಗ್ಯದ ಗತಿ ಏನು?
ಹುಬ್ಬಳ್ಳಿ ನಗರದ ಲಿಂಗರಾಜನಗರದ ಕಡೆಗೆ ಹೋಗುವ ಎನ್.ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿ. ಸಿಟಿ ಬಸ್ಸನ ಕಂಡಕ್ಟರ್ ಡ್ರೈವರ್ಗಳ ಅಟಾಟೋಪ ತುಂಬಾ ಇದೆ ಎಂದು ಸಾರ್ವಜನಿಕರು ಹಿಡಿ ಶಾಒ ಹಾಕುತ್ತಿದ್ದಾರಂತೆ. ಏನಿದು ಸಿಟಿ ಬಸ್ಸಗಳ ಕಂಡಕ್ಟಕರ್ ಡ್ರೈವರ್ಗಳ ಗುಂಡಾವರ್ತನೆ? ಹಿರಿಯ ಅಧಿಕಾರಿಗಳು ನವರಂಧ್ರ ಮುಚ್ಚಿಕೊಂಡು ಕುಳಿತಿದ್ದಾರೆಯೇ? ಸಾರ್ವಜನಿಕ ಸಾರಿಗೆಯ ಸಿಬ್ಬಂಧಿಗಳಿಗೆ ಪ್ರೊಟೋಕಾಲ ತರಬೇತಿ ಕೊಡುವುದಿಲ್ಲವೇ? ಸಿಬ್ಬಂಧಿಗಳು ಮಾನಸೀಕ ರೋಗದಿಂದ ಬಳಲುತ್ತಿದ್ದಾರೆಯೇ? ಹಿರಿಯ ಅಧಿಕಾರಿಗಳು ದಿನಾಂಕ 30/04/2024 ರಂದು ನಡೆದ ಘಟನೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೇ ಕಾನೂನು ಹೋರಾಟ ಮಾಡಲು ಈ ಪ್ರದೇಶದ ಸಾರ್ವಜನಿಕರು ಸಿದ್ಧರಾಗುತ್ತಿದ್ದಾರೆ.




