ದಾಬಾಗಳಲ್ಲಿ ಸರಿಯಾದ ಸುಚಿತ್ವ ಇರುವುದಿಲ್ಲ. ಸಾರಿಗೆ ಬಸ್ಸಗಳು ಊಟ/ ಉಪಹಾರಕ್ಕೆ ನಿಲ್ಲಿಸಲು ಅಧಿಕಾರಿಗಳ ಒತ್ತಡ.

ಬೆಂಗಳೂರಿನಿಂದ ಕುಂದಾಪುರಕ್ಕೆ ಹೊರಟಿದ್ದ ಬಸ್ಸ ಸಂಖ್ಯೆ- KA-19. F.3609 ಈ ಬಸ್ ಯಡಿಯೂರಿನಿಂದ ಹಾಸನ ರಸ್ತೆಯ ಎಡ ಭಾಗದಲ್ಲಿರುವ ವೈಶಾಲಿ ದಾಬಾದ ಪಕ್ಕದಲ್ಲಿರುವ ಹರಿಪ್ರೀಯ ಹೊಟೆಲ್ ನಲ್ಲಿ ಉಪಹಾರಕ್ಕೆ ನಿಲ್ಲಿಸಿದರು.
ಬಸ್ಸಿನ ಕೆಲ ಪ್ರಯಾಣಿಕರು ಹರಿಪ್ರೀಯ ಹೊಟೆಲ್ ನಲ್ಲಿ ಉಪಹಾರ ಮಾಡಲಾರಂಭಿಸಿದರು. ಕೆಲ ಪ್ರಯಾಣಿಕರು ಮನೆಯಿಂದ ತಂದಂಥಹ ತಿಂಡಿಯೊಂದಿಗೆ ಹೊಟೆಲನಲ್ಲಿ ತಿನ್ನಲು ತಯಾರಿ ನಡೆಸಿದಾಗ ಹರಿಪ್ರೀಯ ಹೊಟೆಲ್ನ ಸಿಬ್ಬಂಧಿ ಹೊರಗಿನ ತಿಂಡಿ ತಿನ್ನಲು ಈ ಹೊಟೆಲನಲ್ಲಿ ಅವಕಾಶವಿಲ್ಲ ಎಂದು ಅಕ್ಷೇಪ ವ್ಯಕ್ತ ಪಡಿಸಿದಾಗ, ಮನೆಯಿಂದ ತಿಂಡಿ ತಂದಿದ್ದ ಪ್ರಯಾಣಿಕರು, ಹೊರಗಿನಿಂದ ತಂದಂತಹ ತಿಂಡಿ ಅಲ್ಲ. ಹೊಟೆಲ್ ಊಟ ಆರೋಗ್ಯಕ್ಕೆ ಹೊಂದಲಾರದ ಕಾರಣಕ್ಕೆ ಮನೆಯಿಂದ ತಿಂಡಿ ತಂದಿದ್ದೆವೆ. ನಿಮ್ಮ ಹೊಟೆಲ್ನಲ್ಲಿ ಗಲೀಜು ಮಾಡದೇ ಶಿಸ್ತಿನಿಂದ ತಿನ್ನುತ್ತೆವೆ ಮತ್ತು ನಿಮ್ಮ ಹೊಟೆಲ್ನಲ್ಲಿ ಟೀ ಕುಡಿಯುತ್ತೆವೆ. ಅಲ್ಲದೇ ನಾವು ಇಲ್ಲಿ ಕುಳಿತುಕೊಳ್ಳಲು ಚಾರ್ಜ ಮಾಡಿ. ಅದನ್ನೂ ಕೂಡ ಕೊಡುತ್ತೆವೆ ” ಎಂದು ಪ್ರಯಾಣಿಕರು ವಿನಂತಿಸಿಕೊಂಡರೂ ಸಹ ಅಮಾನವೀಯತೆಯಿಂದ ಅವಮಾನಿಸಿದರು. ” ಹಿಗ್ಯಾಕೆ ” ಎಂದು ಬಸ್ಸಿನ ನಿರ್ವಾಹಕರಿಗೆ ಕೇಳಿದರೇ ” ಅದೆನೋ ನಮಗೆ ಗೊತ್ತಿಲ್ಲ ಹಾಸನ್ ಡಿವಿಜನಲ್ ಕಂಟ್ರೋಲರ್ ಅವರೇ ಆರ್ಡರ್ ಮಾಡಿದ್ದಾರೆ. ಈ ಹರಿಪ್ರೀಯ ಹೊಟೆಲ್ಗೆ ಬಸ್ಸು ನಿಲ್ಲಿಸಿ ಅಲ್ಲಿಯೇ ತಿಂಡಿ ಮಾಡಬೇಕು ಎಂದು ಹೇಳಿದ್ದಾರೆ. ಆ ಕಾರಣಕ್ಕೆ ಬಸ್ ಇಲ್ಲಿ ನಿಲ್ಲಿಸಿದ್ದೆವೆ. ನೀವು ಹಾಸನ್ ಡಿವಿಜನಲ್ ಕಂಟ್ರೋಲರ್ ಅವರಿಗೇನೇ ಕೇಳಿರಿ ” ಎಂದು ಹೇಳಿ ತಮ್ಮ ಪಾಡಿಗೆ ತಾವು ತಿಂಡಿ ತಿನ್ನಲಾರಂಭಿಸಿದರು.
ಕೆ.ಎಸ್.ಆರ್.ಟ. ಇಲಾಖೆಯ ಇದೆಂಥಹ ವ್ಯೆವಸ್ಥೆ? ಇದೇ ದಾಬಾಕ್ಕೆ ಬಸ್ಸ ನಿಲ್ಲಿಸಬೇಕು. ನಿರ್ವಾಹಕ ಡ್ರೈವರ್ . ಅಲ್ಲಿಯೇ ತಿಂಡಿ ತಿನ್ನಬೇಕು. ಮತ್ತು ತಿಂಡಿ ತಿಂದಿದ್ದಕ್ಕೆ ಆ ದಾಬಾ/ ಹೋಟೆಲ್ಲಿನ ಮ್ಯೆನೇಜರ್ ರಿಂದ ರಶೀದಿ ಪಡೆದುಕೊಂಡು ಸಂಬಂಧಿಸಿದ ಡಿಪೋ ಮ್ಯೆನೇಜರ್ಗೆ ಸಲ್ಲಿಸಬೇಕು. ತಪ್ಪಿದರೇ, ನಿರ್ವಾಹಕ-ಚಾಲಕರಿಗೆ ಮೆಮೋ ಕೊಡುತ್ತಾರೆಂಬ ವಿಷಯ ತಿಳಿಯಿತು.
೧) ಕೆಲ ದಾಬಾಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸರಿಯಾದ ಸುಚಿತ್ವ ಇರುವುದಿಲ್ಲ.
೩) ಕುಡಿಯಲು ಸರಿಯಾದ ನೀರು ಇರುವುದಿಲ್ಲ. ಸ್ವಚ್ಚ ನೀರು ಕೇಳಿದರೆ ವಾಟರ ಬಾಟಲಿ ಖರೀದಿಸಿರಿ ಎಂದು ಹೊಟೆಲ್ಲನವರು ದಬಾಯಿಸುತ್ತಾರೆ.
೩) ಕೆಲ ದಾಬಾಗಳಲ್ಲಿ ಮಲ-ಮೂತ್ರಕ್ಕೂ ರೂ. ೫,ರೂ ೧೦ ಚಾರ್ಜ ಮಾಡ್ತಾರೆ.
೪) ಕೆಲ ಬಸ್ಸಗಳು ನಾನ್ ವೆಜ್ ದಾಬಾಗಳ ಎದುರು ನಿಲ್ಲಿಸುತ್ತಾರೆ. ಸಸ್ಯಹಾರಿಗಳಿಗೆ ತುಂಬಾ ಮುಜುಗರವಾಗುತ್ತದೆ. ಹೊಟೆಲ್ನವರಿಗೆ ಕೇಳಿದರೇ ಇಲ್ಲಿ ವೆಜ್ ಅಂಡ ನಾನ್ ವೆಜ್ ಎರಡೂ ಇದೆ ಎನ್ನುತ್ತಾರೆ. ಆದರೇ ಸಸ್ಯಹಾರಿಗಳು ಮಾಂಸಹಾರ ಹೊಟೆಲ್ನಲ್ಲಿ ಮಾಂಸಹಾರದ ವಾಸನೆಯೊಂದಿಗೆ ಸಸ್ಯೆಹಾರದ ಊಟ ತಿನ್ನಲು ತುಂಬಾ ತೊಂದರೆಯಾಗುತ್ತ ದೆ. ಪ್ರಯಾಣಿಕರ ಗೋಳು ಆ ದೇವರಿಗೇನೇ ಪ್ರೀತಿ ಎನ್ನುವಂತಾಗಿದೆ.
ಹರಿಪ್ರೀಯಾ ಹೊಟೆಲ್ನಲ್ಲಿ ಬಸ್ಸ ನಿಲ್ಲಿಸಲು ಯಾವ ಥರಹದ ಆರ್ಡರ ಮಾಡಿದ್ದಿರಾ? ಇದಕ್ಕೆ ಸರಕಾರದ ಸುತ್ತೋಲೆ. ಆದೇಶ ಏನಿದೆ? ಪ್ರಯಾಣಿಕರ ಸಮಸ್ಯೆಗಳಿಗೆ ಸಾರಿಗೆ ಅಧಿಕಾರಿಗಳು ಸ್ವಂಧಿಸದೇ, ಅನಾರೋಗ್ಯಕರವಾದ ದಾಬಾಗಳಿಗೆ, ಹೊಟೆಲ್ಗಳಿಗೆ ಮಣೆ ಹಾಕುತ್ತಿರುವುದು ಅದೆಷ್ಟು ಕಾನೂನುಬದ್ಧವಾಗಿದೆ. ಎಂಬ ಪ್ರಶ್ನೆಗಳಿಗೆ ಸಂಬಂಧಿಸಿದ ಸಾರಿಗೆ ಅಧಿಕಾರಿಗಳು ಉತ್ತರಿಸುವರೇ?
ವರದಿಗಾರರು ಬೆಂಗಳೂರು.




