ಸುದ್ಧಿ

ಕಾರ್ಮಿಕನಿಗೆ ಉಪಧನ ಪಾವತಿ ಅಡಿಯಲ್ಲಿ ರೂ.54850 ಹಣವನ್ನು ಚೆಕ್ಕಿನ ಮುಖೇನ ಪಾವತಿ.

ಉಪಧನ ಪಾವತಿ ಕಾಯಿದೆ ಅಡಿಯಲ್ಲಿ ಗುತ್ತಿಗೆದಾರರಾದ ಡಸ್ಟರ್ ಕಂಪನಿ, ಬಹು ರಾಷ್ಟ್ರೀಯ ಕಂಪನಿ ಜೆಎಲ್ಎಲ್ ಹಾಗೂ ಆಕ್ಷನ್ಚರ್ ಉಪಧನ ಪಾವತಿ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕಾರ್ಮಿಕರಾದ ಶ್ರೀಯುತ ಕೃಷ್ಣ ಅವರು ಶ್ರೀಯುತ ಮನು ಎಂಬುವರ ಮುಖೇನ ಕರ್ನಾಟಕ ಕಾರ್ಮಿಕ ಕಲ್ಯಾಣ ಪ್ರತಿಷ್ಠಾನವನ್ನು ನೆರವು ಕೋರಿ ಸಂಪರ್ಕಿಸಿದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ ಶ್ರೀಯುತ ಮುಕುಂದ ಅವರ ಸಹಕಾರದೊಂದಿಗೆ ವಿಧಿಯಿಲ್ಲದೆ ಕಾರ್ಮಿಕನಿಗೆ ಉಪಧನ ಪಾವತಿ ಅಡಿಯಲ್ಲಿ ಬರಬೇಕಾದ 54850 ರೂಗಳ ಹಣವನ್ನು ಚೆಕ್ಕಿನ ಮುಖೇನ ಪಾವತಿಸಿದ ಕಂಪನಿ ಮಾಲೀಕರು.

ಯಾವುದೇ ಕಂಪನಿಯಾಗಲಿ, ಯಾವುದೇ ಮಾಲೀಕರಾಗಲಿ ಕಾನೂನಿನ ಮುಂದೆ ತಲೆಬಾಗಲೇಬೇಕು. ಎಷ್ಟೇ ಬಲಾಡ್ಯರಾಗಲಿ, ಯಾವುದೇ ಹಿನ್ನೆಲೆ ಇರಲಿ, ಯಾರೇ ಇರಲಿ ಕಾನೂನು ಎಲ್ಲರಿಗೂ ಒಂದೇ, ಎಲ್ಲವನ್ನು ಅದುಮಿಟ್ಟುಕೊಂಡು ತಲೆಬಾಗಲೇಬೇಕು ಇದು ಭಾರತೀಯ ಕಾನೂನಿನ / ಸಂವಿಧಾನದ ಶಕ್ತಿ.

ಕರ್ನಾಟಕ ಕಾರ್ಮಿಕ ಕಲ್ಯಾಣ ಪ್ರತಿಷ್ಠಾನ ಮತ್ತು ಯೂತ್ ಫಾರ್ ಹ್ಯೂಮನ್ ರೈಟ್ಸ್ ಕರ್ನಾಟಕ ಕಳೆದ 14 ವರ್ಷಗಳಿಂದ ಸುಮಾರು 600 ಜನ ಕಾರ್ಮಿಕರಿಗೆ ಬರಬೇಕಾದ ಸಂದಾಯವನ್ನು ಕಾರ್ಮಿಕ ಇಲಾಖೆಯ ಸಹಕಾರದೊಂದಿಗೆ ಕೊಡಿಸಿರುತ್ತದೆ ಮಾತ್ರವಲ್ಲದೆ ಈ ಹಿಂದೆ ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿದ್ದ ಶ್ರೀಯುತ ಆರ್.ವಿ.ದೇಶಪಾಂಡೆ ಸೇರಿದಂತೆ ಬಲೆತ, ಕೊಳೆತ ಮನಸ್ಥಿತಿಯುಳ್ಳ ಬಲಾಢ್ಯರ ವಿರುದ್ಧ ಹೋರಾಟ ಮಾಡಿ ಸುಮಾರು 5 ಕೋಟಿಗೂ ಹೆಚ್ಚು ಕಟ್ಟಡ ಸುಂಕ ಹಣವನ್ನು ನಮ್ಮ ಸಂಘಟನೆ ಕಾರ್ಮಿಕ ಇಲಾಖೆಗೆ ಕಟ್ಟಿಸುವಲ್ಲಿ ಸಫಲವಾಗಿರುತ್ತದೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ.

ನಮ್ಮ ಈ ಪಯಣದಲ್ಲಿ ಎಲ್ಲ ರೀತಿಯಲ್ಲಿ ಸಹಕಾರ ನೀಡುತ್ತಿರುವ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಅಗತ್ಯವಿದ್ದಾಗ ತನು, ಮನು, ಧನ ರೂಪೇಣ ಸಹಕಾರ ನೀಡುತ್ತಿರುವ ಇಡೀ ರಾಜ್ಯದಲ್ಲಿ ಇರುವ ನಮ್ಮ ಸಂಘಟನೆಯ ಎಲ್ಲರಿಗೂ ಅಭಿನಂದನೆಗಳು.

ಮಲ್ಲಿಕಾರ್ಜುನ ರಾಜು
ಸಂಸ್ಥಾಪಕ ಅಧ್ಯಕ್ಷರು
ಕರ್ನಾಟಕ ಕಾರ್ಮಿಕ ಕಲ್ಯಾಣ ಪ್ರತಿಷ್ಠಾನ ಮತ್ತು ಯೂತ್ ಫಾರ್ ಹ್ಯೂಮನ್ ರೈಟ್ಸ್ ಕರ್ನಾಟಕ

Related Articles

Leave a Reply

Your email address will not be published. Required fields are marked *

Back to top button