ಸಾರಿಗೆ ನೌಕರ ಸಿಬ್ಬಂಧಿಗಳೊಂದಿಗೆ ಪ್ರಜಾಶ್ರೀ ಪತ್ರಿಕೆ?

ಸಾರಿಗೆ ನೌಕರ ಸಿಬ್ಬಂಧಿಗಳೊಂದಿಗೆ ಪ್ರಜಾಶ್ರೀ ಪತ್ರಿಕೆ?
ಕರ್ನಾಟಕ ಸರಕಾರದಲ್ಲಿ ಧಮನಿತರು, ಅನ್ಯಾಯಕ್ಕೊಳಪಟ್ಟವರು, ನತದೃಷ್ಟರೆಂದರೇ ಕರ್ನಾಟಕ ಸಾರಿಗೆ ಸಾಂಸ್ಥೆಯ ನೌಕರರು.
ಸಂಸ್ಥೆಯ ಸಿಬ್ಬಂಧಿಗಳಲ್ಲಿ ಕಂಡಕ್ಟರ್-ಡ್ರೈವರ್ಗಳ ಪರಿಸ್ಥಿತಿಯಂತೂ ಆ ವೈರಿಗೂ ಬೇಡ ಎನ್ನುವಂತಿದೆ. ಹರೆಯದ ವಯಸ್ಸಿನಲ್ಲಿಯೇ ಕಂಡಕ್ಟರ್ – ಡ್ರೈವರ್ಗಳೆಂದು ನೇಮಕವಾಗಿ ಇಡೀ ಜೀವನ ಸಂಸ್ಥೆಯಲ್ಲಿಯೇ ಮುಗಿಸುತ್ತಾರೆ. ತಮ್ಮ ಜೀವಿತಾವಧಿಯಲ್ಲಿ ಮನೆ, ಮಠ, ಬಂಧು-ಬಾಂಧವರು, ಮದುವೆ ಮೂಹೂರ್ತಗಳು, ಸಾವು ಸಮಸ್ಯೆಗಳೆಲ್ಲವನ್ನೂ ಮನೆಯಿಂದ ದೂರವಾಗಿದ್ದುಕೊಂಡೇ ಎದುರಿಸುವ ಪ್ರಸಂಗಳೇ ಹೆಚ್ಚು.
ಕಂಡಕ್ಟರ್ – ಡ್ರೈವರ್ಗಳು ಕರ್ತವ್ಯದ ಮೇಲೆ ದೂರದ ಊರಿಗೆ ಹೋಗಿದ್ದಾಗಲೇ ತಂದೆ ತಾಯಿ ಬಂಧುಗಳನ್ನು ಕಳೆದುಕೊಂಡ ಸುದ್ಧಿ-ಸಮಾಚಾರ ತಾವಿದ್ದ ಜಾಗೆಯಲ್ಲಿಯೇ ತಿಳಿದುಕೊಂಡು ವಿಲವಿಲನೇ ಒದ್ದಾಡಿದ ಸಂದರ್ಭಗಳಿವೆ.
ಇನ್ನೂ ಸಂಸ್ಥೆಯ ಅಧಿಕಾರಿಗಳು ಕಂಡಕ್ಟರ್ – ಡ್ರೈವರ್ಗಳನ್ನು ಮನುಷ್ಯರಂತೆ ಪರಿಗಣಿಸಿದ್ದು ತುಂಬಾ ಕಡಿಮೆ. ಡಿಪೋ ಮ್ಯಾನೇಜರ್ಗಳು, ಟಿಕೇಟ್ ಕಲೆಕ್ಟರ್ಗಳ ನಿರಂಕೂಶ ದಬ್ಬಾಳಿಕೆ ಸಹಿಸಿಕೊಂಡು ತಮ್ಮ ಜವಾಬ್ದಾರಿಯುತ ಕರ್ತವ್ಯವನ್ನು ಚಾಚೂ ತಪ್ಪದೇ ನಿರ್ವಹಿಸುತ್ತಾರೆ.
ರಾಜ್ಯದ ಕೆಲ ಡಿವಿಜನಲ್ ಕಂಟ್ರೋಲರ್ಗಳು ಕಂಡಕ್ಟರ್ – ಡ್ರೈವರ್ಗಳ ಮೇಲೆ ನಡೆಸುತ್ತಿರುವ ಅತೀಕ್ರಮಣ ನಾಚಿಕೆ ಬರಿಸುವಂತಿರುತ್ತದೆ.
“ ಪ್ರಜಾಶ್ರೀ ಕನ್ನಡ ಪಾಕ್ಷೀಕ ಪತ್ರಿಕೆ. ಪ್ರಜಾಶ್ರೀ ಆನ್ಲೈನ ನ್ಯೂಸ್ ಪತ್ರಿಕೆ. ಪ್ರಜಾಶ್ರೀ ” ಕಂಡಕ್ಟರ್ – ಡ್ರೈವರ್ಗಳ ಸಮಸ್ಯೆಗಳನ್ನು ಹತ್ತಿರದಿಂದ ಕಂಡು ಮಮ್ಮಲ ಮರುಗುತ್ತಾ ಹಲವಾರು ಬಾರಿ ಸಂಸ್ಥೆಯ ನೌಕರರ ಬೆನ್ನಿಗೆ ನಿಂತಿದ್ದು ಉಂಟು. ಅಂಥಹ ಕೆಲ ಘಟನೆಗಳನ್ನು ನೆನಪು ಮಾಡಿಕೊಂಡು ಓದುಗರ ಗಮನಕ್ಕೆ ತರುತ್ತಿದ್ದೆವೆ.
ಕಳೆದ ಕೆಲ ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯ ಡಿವಿಜಿನಲ್ ಕಂಟ್ರೋಲರಾಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದಪ್ಪ ಜಿ. ಗಂಗಾಧರ ಪ್ರಭಾರಿ ಸಾರಿಗೆ ಡಿ.ಸಿಯವರು ಅಲ್ಲಿಯ ಸಿಬ್ಬಂಧಿಗಳಿಗೆ ಕೊಡುತ್ತಿದ್ದ ನರಕಯಾತನೆಯಾಗಿತ್ತು ಅವರ ಕಿರುಕುಳದಿಂದ ಬೆಸತ್ತು ರೋಸಿ ಹೋಗಿದ್ದರು. ಈ ಪ್ರಭಾರಿ ಡಿ.ಸಿ.ಯವರ ಹಲವಾರು ಪವಾಡ, ಲಂಚಬಾಕತನ, ನೌಕರರಿಗೆ ಇನ್ನಿಲ್ಲದಂತೆ ಕೊಡುತ್ತಿದ್ದ ಕಿರುಕುಳದ ವಿವರಣೆಯನ್ನು ವಿಜಯಪುರದ ನಮ್ಮ ಪತ್ರಿಕೆಯ ವರದಿಗಾರರ ಎದುರು ಅಲವತ್ತುಕೊಂಡದ್ದರಂತೆ, ಪ್ರಕರಣದ ನೈಜತೆಯನ್ನು ಅರಿತು ನಮ್ಮ ವರದಿಗಾರ ವಿಷಯ ಸಂಗ್ರಹಿಸಿ ಪತ್ರಿಕಾ ಕಾರ್ಯಾಲಯಕ್ಕೆ ಕಳುಹಿಸಿದರು.
ವರದಿಗಾರರ ವರದಿಯನ್ನು ಯಥಾವತ್ತಾಗಿ ಆಡಿಯೋ-ವಿಡಿಯೋ ಮಾಡಿ “ ಪ್ರಜಾಶ್ರೀ ನ್ಯೂಸ್ ಯ್ಯೂಟ್ಯೂಬ್ ಚಾನೆಲ್ಗೆ ” ಹಾಕಿಕೊಂಡೆವು ( ಆ ವಿಡಿಯೋದ ಲೀಂಕ್ ನೋಡಬಹುದು.) ಮತ್ತು ಆ ವಿಡಿಯೋ ಲಿಂಕ್ ಬೆಂಗಳೂರು ಮಹಾನಗರದ ಸಾರಿಗೆ ಕೇಂದ್ರ ಕಾರ್ಯಾಲಯದ ಅಧಿಕಾರಿಗಳಿಗೆ ಹಾಗೂ ಸಾರಿಗೆ ಸಚಿವರಾಗಿದ್ದ ಲಕ್ಷ್ಣಣ ಸೌದಿಯವರ ಗಮನಕ್ಕೆ ತರಲಾಯಿತು.
ಕೆಲ ದಿನ ಬಿಟ್ಟುಕೊಂಡು ಪತ್ರಿಕೆಯ ಲೆಟರ್ ಹೆಡ್ನಲ್ಲಿ ವಿಜಯಪುರ ಸಾರಿಗೆ ನೌಕರರ ಸಮಸ್ಯೆಯ ತೀವ್ರತೆಯನ್ನು ಬರೆದುಕೊಂಡು ವಿಧಾನಸೌಧದ ಸಾರಿಗೆ ಸಚಿವರ ಕಾರ್ಯಾಲಯಕ್ಕೆ ಸಲ್ಲಿಸಿ ಮತ್ತು ಅಲ್ಲಿಯ ಅಧಿಕಾರಿಗಳಿಗೆ ಸಮಸ್ಯೆಯನ್ನು ವಿವರಿಸಿದಾಗ, ಸಚಿವರು ವಿಜಯಪುರಕ್ಕೆ ಹೋಗುವ ಶೆಡ್ಯೂಲ ದಿನಾಂಕ ತಿಳಿಸಿದರು.
ಅದೇ ಪ್ರಕಾರ ಸಾರಿಗೆ ಸಚಿವರು ವಿಜಯಪುರಕ್ಕೆ ಬರುತ್ತಿರುವ ವಿಷಯ ಅಲ್ಲಿಯ ನಮ್ಮ ವರದಿಗಾರರಿಗೆ ತಿಳಿಸಿ. ನೊಂದ ಸಾರಿಗೆ ನೌಕರರನ್ನು ಒಟ್ಟುಗೂಡಿಸಿ ಸಚಿವರಿಗೆ ಭೇಟಿ ಮಾಡಿ, ಮನವಿ ಪತ್ರ ಸಲ್ಲಿಸಲು ನಿರ್ದೇಶಿಸಿದೆವು. ನಾವು ತಯಾರಿಸಿದ ಯೋಜನೆಯಂತೆ ಅಲ್ಲಿಯ ನಮ್ಮ ವರದಿಗಾರ ಕೆಲಸ ಮಾಡಿದನು. ನೌಕರರ ಮನವಿ ಪತ್ರ ಸ್ವೀಕರಿಸಿದ ಸಚಿವರು ಸಮಸ್ಯೆಯ ಗಂಭಿರತೆಯನ್ನು ನೊಂದ ಸಾರಿಗೆ ನೌಕರರಿಂದ ಕೇಳಿ ತಿಳಿದುಕೊಂಡು ತತ್ಕ್ಷಣಕ್ಕೆ ಪ್ರಭಾರಿ ಡಿ.ಸಿ. ಸಿದ್ಧಪ್ಪನವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದರು.
ಇದೇ ಥರಹ
ಸಾರಿಗೆ ನೌಕರರ ಚಿಕ್ಕ-ಪುಟ್ಟ ಸಮಸ್ಯೆಗಳಿಗೆ ಪತ್ರಿಕೆ ಆಗಾಗ ಸ್ಪಂಧಿಸುತ್ತಾ ಇರುತ್ತದೆ.



