ಸುದ್ಧಿ

*ಶಾಸನಗಳಲ್ಲಿ ಶ್ರೀವೀರಭದ್ರ*

*ಶಾಸನಗಳಲ್ಲಿ ಶ್ರೀವೀರಭದ್ರ*

ಕ್ರಿ.ಶ.338ರ ಮುಳಬಾಗಿಲು ಮುಡಿಯನೂರು ತಾಮ್ರಪಟದ ಸಂಸ್ಕೃತ ಶಾಸನದಲ್ಲಿ ಬಾಣವಂಶದ ರಾಜ ಮಲ್ಲಿದೇವ ನಂದಿವರ್ಮನ ಶೌರವೂ ವೀರಭದ್ರನ ಶೌಲ್ಯದಂತಿತ್ತು ಎಂದಿದೆ. ಕ್ರಿ.ಶ.4ನೇ ಶತಮಾನದ ಕಂಚಿ ಶಾಸನದಲ್ಲಿ ವೀರಭದ್ರನ ಅಸ್ತಿತ್ವವನ್ನು ಮಹೇಶ್ವರಾಚಾರದ ಗುರುವಾಗಿದ್ದಾನೆ ಎಂದು ವೀರಭದ್ರನು 4ನೇ ಶತಮಾನದ ಕಾಲಕ್ಕಾಗಲೇ ಪ್ರಖ್ಯಾತನಾಗಿದ್ದನೆಂದೂ, ಗುರುಗಳಿಗೆ ಗುರುವಾಗಿದ್ದನೆಂದೂ, ಶಿರ-ಮುಕುಟಗಳಲ್ಲಿ ಶಿವಲಿಂಗ ಧರಿಸಿರುವ ವೀರಭದ್ರನ ಶಿಲ್ಪಗಳು, ವೀರಭದ್ರ ಪ್ರತಿಮಾತಂತ್ರದ ಈ ಪ್ರಭಾವವೇ ಕಾರಣವೆಂದು ಡಾ. ಎಂ.ಜಿ. ನಾಗರಾಜ್‌ರವರು ಅಭಿಪ್ರಾಯಿಸಿದ್ದಾರೆ. ಹಾಗೆಯೇ ವಿಯಲೂರು ಶಾಸನದಲ್ಲಿ ಮಹೇಶ್ವರ ಶಿಖಾಮಣಿ ದೀಪ್ತಿಮೌಲಿ ಕಂಚಿಯ ಪಲ್ಲವರು “ಶಿವಶಿರಸಿ ಧಾರೆಯತು ಆಗಮಾನುಸಾರಿ” ಇವೆಲ್ಲ ವೀರಭದ್ರನು ಶಿರದಲ್ಲಿ ಲಿಂಗಧಾರಣ ಮಾಡಿದ ಬಗ್ಗೆ ತಿಳಿದುಬರುತ್ತದೆ. ಚಾಲುಕ್ಯರ ಐಹೊಳೆ 6ನೇ ಶತಮಾನದ ಶಾಸನದಲ್ಲಿ ಸಪ್ತಮಾತೃಕೆಯರ ಬಗ್ಗೆ ಉಲ್ಲೇಖವಿದೆ. ಮಾತೃಣಾಮಭಿ ರಕ್ಷಕ ವೀರಭದ್ರನು ಸಪ್ತಮಾತೃಕೆಯರನ್ನು ರಕ್ಷಿಸಿದ್ದನೆಂದೂ, ಪರಮಮಹೇಶ್ವರ, ಶಿವಮಂಡಲ ದೀಕ್ಷೆ, “ಕ್ರಿ.ಶ.900ರ ಹೊಸಕೋಟೆ ಶಾಸನದಲ್ಲಿ ಕೈವಾರನಾಡಿನ ಪ್ರಭು ‘ಕಣ್ಣಡಿ ಅರಸ’ ಎಂಬ ಹೆಸರು ಶಾಸನಗಳಲ್ಲಿ ಇದೆ. *’! ಈ ಹೆಸರು ವೀರಭದ್ರನಿಗೆ ಆರೋಪಿಸಿರುವುದಾಗಿದೆ. ಇದರಿಂದ

“ವಿಷ್ಣುವಿನ ನೇತ್ರ ಕಮಲದಿಂದ ವಾಮ ಪಾದದಲ್ಲಿ ಪೂಜೆಗೊಂಡವನಾದ ಕಾರಣ ವೀರಭದ್ರನಿಗೆ ಕಣ್ಣಡಿಕ”ನೆಂಬ ಹೆಸರು ಬಂದಿದೆ.

ಕ್ರಿ.ಶ.1166ರ ಮುದ್ದನಗೆರೆಯ ಶಾಸನದಲ್ಲಿ “ಸ್ವಸ್ತಿಶ್ರೀ ಮನ್ನಮಹಾಮಹಿಮನಪ್ಪ, ಶ್ರೀ ಕೈಲಾಸ ಪೂರವರಾಧೀಶ್ವರಂ, ದೇವಲೋಕದ ದೇವಗಣಂಗಳು ವೀರಭದ್ರ ಸ್ವಸ್ತಿಶ್ರೀ .” ಎಂದಿದೆ.

ಇದರಲ್ಲಿ ವೀರಭದ್ರನು ಕೈಲಾಸದ ದೇವಗಣಗಳಲ್ಲಿ ವೀರಭದ್ರನು ಒಬ್ಬ ಪ್ರಬಲ, ಪ್ರಮುಖಗಣಗಳ ಒಡೆಯನೆಂದಿದೆ- ಅದೇ ರೀತಿ 1850 ರಾಯಿಶೆಟ್ಟಿಪುರ ಶಾಸನದಲ್ಲಿ ಅಸಂಖ್ಯಾತ ವೀರಭದ್ರ ದೇವರು ಮುಖ್ಯವಾದ ಎಂಬ ಉಲ್ಲೇಖವಿದೆ.

*ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ*

Related Articles

Leave a Reply

Your email address will not be published. Required fields are marked *

Back to top button