ಸುದ್ಧಿ
ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಸ್ಟಾವಧಿ ಮುಷ್ಕರ -2 ಹಂತ. ಹ.ಬೊ.ಹಳ್ಳಿ.

ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಸ್ಟಾವಧಿ ಮುಷ್ಕರ -2 ಹಂತ
ಹ.ಬೊ.ಹಳ್ಳಿ 11 ಫೆಬ್ರವರಿ 2025
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳ ವರ್ಗ ಇಲ್ಲಿನ ತಹಶಿಲ್ದಾರ ಕಚೇರಿ ಎದುರುಗಡೆ ಮುಷ್ಕರ ಮುಂದುವರೆಸಿದರು
ಗ್ರಾಮ ಅಧಿಕಾರಿಗಳ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ ಗ್ರಾಮ ಅಧಿಕಾರಿಗಳ ಬೇಡಿಕೆಗಳು ಈ ಕೆಳಗಿನಂತಿವೆ
ಮೂಲಭೂತ ಸೌಲಭ್ಯಗಳು
- ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಚೇರಿ
- ಉತ್ತಮವಾದ ಗುಣಮಟ್ಟದ ಟೇಬಲ್ ಮತ್ತು ಕುರ್ಚಿ ಮತ್ತು ಅಲ್ಮೆರಾ
- ಅತ್ಯುತ್ತಮ ಗುಣಮಟ್ಟದ ಮೊಬೈಲ್ ಫೋನ್ 12 Rom/256GB ಸಿ ಯು ಜಿ ಸಿಮ್
- ಗೂಗಲ್ ಕ್ರೋಮ್ ಬುಕ್/ ಲ್ಯಾಪ್ ಟಾಪ್
- ಪ್ರಿಂಟರ್ ಮತ್ತು ಸ್ಕ್ಯಾನರ್ ನೀಡಬೇಕು.
ಹಾಗೂ ಪ್ರಯಾಣ ದರವನ್ನು 500 ಗಳಿಂದ 5000ಗಳಿಗೆ ಹೆಚ್ಚುವರಿ ಮಾಡಬೇಕು. ಆಯುಕ್ತಾಲಯಾದ ಅಡಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಜೇಷ್ಠತೆಯನ್ನು ರಾಜ್ಯಮಟ್ಟದ ಜೇಷ್ಠತೆಯನ್ನಾಗಿ ಪರಿಗಣಿಸುವುದು. ವಂಶವೃಕ್ಷ/ ಜಾತಿ ಪ್ರಮಾಣ ಪತ್ರ ಇತರೆ ಪ್ರಮಾಣ ಪತ್ರಗಳ ವಿತರಣೆ ವಿಚಾರವಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳನ್ನು ಹೊಣೆಗಾರನಾಗಿಸಿ ಎಫ್ಐಆರ್ ದಾಖಲಿಸುತ್ತಿರುವುದನ್ನು ನಿಲ್ಲಿಸಿ ತಪ್ಪು ಮಾಹಿತಿ ನೀಡುವ ಅರ್ಜಿದಾರರನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಪ್ರಕರಣ ದಾಖಲಿಸುವ ಬಗ್ಗೆ ಇಲಾಖೆಯ ಮುಖ್ಯಸ್ಥರಿಗೆ ಸೂಕ್ತ ಆದೇಶ ನೀಡುವುದು ಹಾಗೂ ಪೌತಿ ಖಾತೆ ಆಂದೋಲನವನ್ನು ಕೈಬಿಡುವುದು ಮತ್ತು ಇನ್ನೂ ಅನೇಕ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ, ಮುಷ್ಕರಕ್ಕೆ ಕರೆ ನೀಡಲಾಗಿದೆ.
ಮುಷ್ಕರದಲ್ಲಿ ಜಿಲ್ಲಾಧ್ಯಕ್ಷರಾದ ಯಂಕಾರೆಡ್ಡಿ ತಾಲೂಕು ಅಧ್ಯಕ್ಷರಾದ ದೇವೇಂದ್ರಪ್ಪ ಹೊಸಮನೆ, ಪ್ರಧಾನ ಕಾರ್ಯದರ್ಶಿಯಾದ ಪಂಪಾಪತಿ ವಾಲಿ, ಉಪಾಧ್ಯಕ್ಷರಾದ ಹೊನ್ನೂರ್ ಷಾ, ಗ್ರಾಮ ಆಡಳಿತ ಅಧಿಕಾರಿಗಳದ ಕೆ ಪ್ರಭಾಕರ, ಮಂಜುಳ, ಶಶಿಕಲಾ ಇನ್ನಿತರರು ಮುಷ್ಕರದಲ್ಲಿ ಭಾಗವಹಿಸಿದ್ದರು.
ವರದಿ – ಮಹೇಶ್ ಮಾದೂರು
ಜಿಲ್ಲಾ ಮುಖ್ಯ ವರದಿಗಾರರು
ವಿಜಯನಗರ ಜಿಲ್ಲೆ.



