ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ತುಂಬಾ ದೊಡ್ಡದಿರುತ್ತದೆ : ಅರುಣಾ ನರೇಂದ್ರ

ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ತುಂಬಾ ದೊಡ್ಡದಿರುತ್ತದೆ : ಅರುಣಾ ನರೇಂದ್ರ
ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ತುಂಬಾ ದೊಡ್ಡದಿರುತ್ತದೆ. ಆಕೆ ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ ಬಾಳಿಗೆ ಬೆಳಕಾಗುತ್ತಾಳೆ. ವೈಯಕ್ತಿಕವಾಗಿ ಮನೆಯ ಅರ್ಧ ಜವಾಬ್ದಾರಿಯನ್ನು ಹೊರುವ ಜೊತೆಗೆ ಒಬ್ಬ ಶಿಕ್ಷಕಿಯಾಗಿ, ಇಂಜಿನಿಯರ್ ಆಗಿ, ಪೈಲೆಟ್ ಆಗಿ ಕೂಡ ತನ್ನ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ. ಸಮಾಜದ ಕಟ್ಟುಪಾಡುಗಳ ಹೊರತಾಗಿಯೂ ಕೂಡ ಈಗಿನ ಆಧುನಿಕ ದಿನಗಳಲ್ಲಿ ಆಕೆ ಸಾಧನೆಯ ಶಿಖರವನ್ನು ಮುಟ್ಟುತ್ತಿದ್ದಾಳೆ. ಆದರೂ ಸಾಮಾಜಿಕವಾಗಿ ಆರ್ಥಿಕವಾಗಿ, ರಾಜಕೀಯವಾಗಿ, ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಿಂಜರಿಕೆಯಂತಹ ಸಂದರ್ಭಗಳನ್ನು ಎದುರಿಸುತ್ತಿದ್ದಾಳೆ. ಈ ಎಲ್ಲವುಗಳನ್ನೂ ಮೀರಿ ಆಕೆಯ ಹಕ್ಕು, ಜವಾಬ್ದಾರಿಗಳು, ಸಮಾಜನತೆ ಹಾಗೂ ಸಬಲೀಕರಣದ ಕುರಿತಾದ ಜಾಗೃತಿಯ ಅವಶ್ಯಕತೆ ಇದೆ. ಹಾಗಾಗಿ ವಿಶ್ವದಾದ್ಯಂತ ಮಹಿಳೆಯರಿಗಾಗಿ ಗೌರವಾನ್ವಿತವಾಗಿ ಈ ಒಂದು ದಿನವನ್ನು “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಯನ್ನಾಗಿ ಆಚರಿಸುವ ಮೂಲಕ ಮೀಸಲಿಡಲಾಗಿದೆ.
ಸಮಾನತೆಯ ಜೊತೆಗೆ ಒಗ್ಗಟ್ಟಿನಲ್ಲಿ ಸಹ ಮಹಿಳೆಯರು ಸದಾ ಮುಂದಿರುವುದು ದೇಶದ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಲಿದೆ. ಪ್ರತಿ ವರ್ಷ ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳೆಯರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಮಹಿಳೆಯರ ಸಾಧನೆಗೆ ಮನಃಪೂರ್ವಕ ಗೌರವ ಸೂಚಿಸುವ ದಿನ ಇದಾಗಿದೆ ಎಂದು ಖ್ಯಾತ ಹಿರಿಯ ಸಾಹಿತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅರುಣಾ ನರೇಂದ್ರ ಹೇಳಿದರು.
ಇಲ್ಲಿನ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳ ಶೆಟ್ರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸಬಲೀಕರಣ ಘಟಕ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬ ಮಹಿಳೆ ಅನೇಕ ಕ್ಷೇತ್ರದಲ್ಲಿ ತಮ್ಮನ್ನೂ ತಾವು ಗುರುತಿಸಿಕೊಂಡು ಸಮಾಜಕ್ಕೆ ತನ್ನದೇ ಅದ ಕೊಡಗೆಯನ್ನು ನೀಡುತ್ತಿದ್ದಾರೆ.
ಮಹಿಳೆಯು ತನ್ನ ಸ್ವಾವಲಂಬಿ ಜೀವನ ನಡೆಸಲು ಸಶಕ್ತಳು. ಒಬ್ಬ ಹೆಣ್ಣು ಅನೇಕ ರೀತಿಯ ಸೂಚನೀಯ ಸ್ಥಿತಿಯಿಂದ ಹೊರ ಬಂದು ಬದಕು ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದಾಳೆ ಎಂದು ತಿಳಿಸಿದರು.
ಸಮಾಜದ ಅನೇಕ ಕ್ಷೇತ್ರಗಳಲ್ಲಿ ಶೋಷಣೆ, ಕಿರುಕುಳ, ಅಸಭ್ಯ ವರ್ತನೆ, ಹೀಗೆ ಅನೇಕ ರೀತಿಯ ಸಮಸ್ಯೆಗಳ ಮಧ್ಯೆ ಸಾಧಿಸಿ ಮುನ್ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ. 12 ನೇ ಶತಮಾನದಲ್ಲಿಯೇ ಮಹಿಳಾ ಸಮಾನತೆ ಬಗ್ಗೆ ಹೇಳಲಾಯಿತು ಎಂದರು.
ಮಹಿಳೆಯನ್ನು ನಾವು ಶ್ರಮಾಧರಿತ್ರಿ ಎಂದು ಕರೆಯುತ್ತೇವೆ. ನಮ್ಮ ಸಂವಿಧಾನದಲ್ಲಿ ಮಹಿಳಾ ಸ್ವತಂತ್ರ ಮತ್ತು ಹಕ್ಕುಗಳ ಸಮಾನತೆ ಬಗ್ಗೆ ಹೇಳಲಾಗಿದೆ ಎಂದು ತಿಳಿಸಿದರು. ಇತ್ತೀಚಿನ ದಿನದಲ್ಲಿ ಸುನೀತಾ ವಿಲಿಯಮ್ಸ್ ಕಲ್ಪನಾ ಚಾವ್ಲಾ ರವರ ಸಾಧನೆಯನ್ನು ತಮ್ಮ ಜೀವನದಲ್ಲಿ ಮಾದರಿಗಳನ್ನಾಗಿ ಕಂಡು ವಿದ್ಯಾರ್ಥಿನಿಯರು ತಮ್ಮ ಭವಿಷ್ಯದಲ್ಲಿ ಉನ್ನತ ಮಟ್ಟದಲ್ಲಿ ಸಾಧಿಸಿ ಬೆಳಬೇಕೆಂದು ಕಿವಿಮಾತು ಹೇಳಿದರು.
ಮಹಿಳಾ ಸಬಲೀಕರಣ ಎಂಬ ವಿಷಯದ ಕುರಿತು ವಿಷೇಶ ಉಪನ್ಯಾಸವನ್ನು ಅರ್ಚನಾ ಹಿರೇಮಠ್ ಮಾತನಾಡಿ,
ಮಹಿಳೆ ಭಾವಾನಾತ್ಮಕ ಜೀವಿ, ಆದರೆ ಸಮಾಜದಲ್ಲಿ ಅವಳ ಪಾತ್ರ ಮಾತ್ರ ಗೌಣ. ಒಬ್ಬ ಮಹಿಳೆ ರಕ್ಷಣೆಗೆ ತಂದೆಯೇ ಸೂಕ್ತ. ಪುರುಷ ಮತ್ತು ಮಹಿಳೆ ಸಮಾನತೆಗೆ ಒಬ್ಬರು ಇನ್ನೊಬ್ಬರ ಪೂರಕ. ಹೆಣ್ಣಿಗೆ ಹೆಣ್ಣು ಶತ್ರು ಅಂತ ಹೇಳುವುದು ಸೂಕ್ತವಲ್ಲ. ಎಂದು ಹೇಳಿದರು. ಒಬ್ಬ ಮಹಿಳೆ ಮನೆಯ ಜವಾಬ್ದಾರಿ ನಿಭಾಯಿಸಿ ಸಮಾಜದ ವಿಭಿನ್ನ ಕ್ಷೇತ್ರದಲ್ಲಿ ಅವಳು ತನ್ನ ಸಮಾಜದಲ್ಲಿ ಪಾತ್ರ ನಿಭಾವಿಸುತ್ತ ಮುನ್ನಡೆಯುತ್ತಾಳೆ ಎಂದು ಹೇಳಿದರು. ಸಂಸ್ಕೃತದಲ್ಲಿ ಹೇಳಿರುವಂತೆ ನಾವು ಸೇವಿಸುವ ಆಹಾರ ನಮ್ಮ ಜೀವನ ನಿರ್ಧಾರವಾಗುತ್ತದೆ. ನಮ್ಮ ಆಹಾರ ಪದ್ಧತಿ ಚೆನ್ನಾಗಿ ಇದ್ದಾಗ ಮಾತ್ರ ಒಂದು ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದರು. ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಹೊಂದಬೇಕಾದರೆ ಉತ್ತಮ ಆಹಾರ ಪದ್ಧತಿಯನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಆಗ ಮಾತ್ರ ಒಂದು ಸದೃಢ ವ್ಯಕ್ತಿತ್ವ ವಿಕಸನ ಜೊತೆ ಕೆಲಸ ಕಾರ್ಯದಲ್ಲಿ ಮಗ್ನರಾಗುವುದಕ್ಕೆ ಸಾಧ್ಯ ಎಂದರು. ಮಹಿಳೆಯು ತನ್ನ ಜೀವನದಲ್ಲಿ ಸ್ವಲಂಬಿ ಜೀವನ ನಡೆಸಲು ಬಯಸುತ್ತಾಳೆ. ಅವಳ ಆಸೆ. ಆಕಾಂಕ್ಷೆಗಳ ಪೂರಕ ವಾತಾವರಣ ನಿರ್ಮಾಣಗೊಂಡ ಮಾತ್ರ ಸಮ ಸಮಾಜದ ಕನಸನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ ಬಜರಂಗ ಬಲಿ ವಹಿಸಿದ್ದರು. ಪ್ರಾಸ್ತಾವಿಕ ನುಡಿಯನ್ನು ಕನ್ನಡ ವಿಭಾಗದ ಮುಖ್ಯಸ್ಥರು, ಮತ್ತು ಮಹಿಳಾ ಸಬಲೀಕರಣ ಘಟಕದ ಸಂಯೋಜಕರಾದ ಡಾ. ಆಶಿಕಾ ಎಚ್.ಸಿ. ಕಾರ್ಯಕ್ರಮದ ಗೀತೆಯನ್ನು ದ್ವಿತೀಯ ವರ್ಷದ ವಿದ್ಯಾರ್ಥಿ ನಾಗರಾಜ್ ಗದ್ದಿ, ಸಂಗಡಿಗರು ಹಾಡಿದರು. ಕಾರ್ಯಕ್ರಮದ ರೂಪಣೆಯನ್ನು ಚನ್ನಮ್ಮ ಹಾಗೂ ರಂಜಿತ ನೆರವೇರಿಸಿದರು. ಸ್ವಾಗತ ಭಾಷಣವನ್ನು ಬಿ. ಎ. ದ್ವಿತೀಯ ವರ್ಷದ ವಿಧ್ಯಾರ್ಥಿಗಳಾದ ಶಶಿಕಲಾ, ಅಂಬಿಕಾ ನಿರ್ವಹಿಸಿದರು. ಪ್ರಾಧ್ಯಾಪಕರಾದ ಮಾರ್ವಿನ್ ಡಿಸೋಜ, ಲಲಿತಾ ಕಿನ್ನಾಳ, ಸರ್ವಮಂಗಳಮ್ಮ ಟಿ.ಆರ್. ರಕ್ಷಿತ್ ಎನ್. ಉಪನ್ಯಾಸಕರಾದ ಗೋಪಾಲ ರೆಡ್ಡಿ, ಸೋಮಶೇಖರ್, ಮಾರುತೆಶ್, ರವಿಕುಮಾರ್, ದೇವೇಂದ್ರಪ್ಪ, ಮಂಜುನಾಥ, ಎಸ್. ಕೆ ಖಾದ್ರಿ, ವೀರೇಶ್, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



