ಸುದ್ಧಿ

ವಿಜಯನಗರ ತಿರುಗಾಟ ಸಂಶೋಧನ ತಂಡದಿಂದಕರಿಕಲ್ಲು ಗುಡ್ಡದಲ್ಲಿ ಕುಟ್ಟುಚಿತ್ರಗಳು

ವಿಜಯನಗರ ತಿರುಗಾಟ ಸಂಶೋಧನ ತಂಡದಿಂದ
ಕರಿಕಲ್ಲು ಗುಡ್ಡದಲ್ಲಿ ಕುಟ್ಟುಚಿತ್ರಗಳು : ಮಹತ್ವದ ಸಂಗೀತದ ನಾದ ಕಲ್ಲುಗಳ ಶೋಧ

         ಅರೆ ಇದು ಎಲ್ಲಿರಬೇಕೆಂಬ ಕಾತುರ ನಿಮಗಾಗಿರಬೇಕು ಅಲ್ಲವೇ ಇದು ಹೊಸಪೇಟೆಯಿಂದ ಬಳ್ಳಾರಿಗೆ ತೆರಳುವ ಧರ್ಮಸಾಗರ ಗ್ರಾಮದ ತಿರುವು ರಸ್ತೆಯಿಂದ ದೇವಲಾಪುರಕ್ಕೆ ಸಾಗುವ ಮಾರ್ಗ ಮದ್ಯೆದಲ್ಲಿಯ ಅಪ್ಪಳಪ್ಪನ ಕೆರೆಯ ಅನತಿ ದೂರದಲ್ಲಿರುವ ಕರಡಿ ವೀಕ್ಷಣೆಗಾಗಿ ಕಟ್ಟಿಸಿದ ಕಾವಲು ಗೋಪುರ ಪಕ್ಕದಲ್ಲಿದೆ. ಈ ಕರೆಕಲ್ಲು ಗುಡ್ಡದಲ್ಲಿ ಸಂಗೀತದ ಕಲ್ಲುಗಳೊಂದಿಗೆ, ಕ್ರಿ. ಪೂ 3000 ಕಾಲಮಾನದ ಆದಿಮಾನವ ನೆಲೆಸಿದನೆನ್ನಲಿಕ್ಕೆ ಕುರುಹಾಗಿ ಅಲ್ಲಿನ  ಬಹುತೇಕ ಗುಂಡುಕಲ್ಲುಗಳಿಗೆ ಆದಿಮ ಕುಟ್ಟಿದ ಕುಟ್ಟು ಚಿತ್ರಗಳಿವೆ. ಇದರಲ್ಲಿ ವಿಶೇಷವಾಗಿ ಸುಂದರವಾದ ಗೂಳಿ ಚಿತ್ರವಿದ್ದು, ಇದು ಆರು ಇಂಚು ಉದ್ದ ನಾಲ್ಕು ಇಂಚು ಅಗಲದ ಆ ಗೂಳಿಯ ಹಿಂದೆ ಮಾನವನ ಚಿತ್ರವಿದೆ. ಅಲ್ಲದೇ ಗುಡ್ಡದ ಬಹುತೇಖ ಕಲ್ಲುಗಳಿಗೆ ಇತರೆ ಪ್ರಾಣಿಗಳ ಚಿತ್ರಗಳಿವೆ.  ಅದರಲ್ಲೂ ಹುಲಿಯ ಚಿತ್ರ ತುಂಬಾ ಸುಂದರವಾಗಿ ಚಿತ್ರಿಸಿದ್ದಾರೆ. ಇವು ಅಲ್ಲದೇ ಆದಿ ಮಾನವ ಬೇಟಯಾಡುವ, ಹಾಗೂ ಎತ್ತರದ ಮನುಷ್ಯನ ಚಿತ್ರಗಳನ್ನು ಕುಟ್ಟಿರುವುದು ಕಂಡು ಬಂದಿವೆ. ಇನ್ನಿತರೆ ಗುಂಡು ಕಲ್ಲುಗಳಿಗಿರುವ  ಕುಟ್ಟು ಚಿತ್ರಗಳು ಗಾಳಿ, ಮಳೆ, ಬಿಸಿಲಿನಿಂದ ಸವೆದು ಹೋಗಿವೆ. ಇವುಗಳನ್ನು ಪುರಾತತ್ವ ಇಲಾಖೆ ಇಲ್ಲವೇ ಆಡಳಿತಾಂಗವು ಸಂರಕ್ಷಣೆ ಮಾಡಬೇಕೆಂದು ಡಾ. ಗೋವಿಂದ ತಿಳಿಸಿದ್ದಾರೆ.
       
        ಈ ಕರೆಕಲ್ಲು ಗುಡ್ಡದಲ್ಲಿ ಕುಟ್ಟುಚಿತ್ರಗಳೊಂದಿಗೆ ತುಂಬಾ ಆಕರ್ಷಕ ಹಾಗೂ ವಿಶೇಷವಾಗಿ ಸಂಗೀತದ ನಾದ ಕೇಳಿಸುವ ಮೂರ್ನಾಲ್ಕು ಕಲ್ಲುಗಳಿವೆ.

ನಾದ ಮೊಳಗುವ ಸಂಗೀತದ ಮಹತ್ವದ ಕಲ್ಲುಗಳು : ಹಂಪಿಯ ವಿಠ್ಠಲ ಮಂಟಪದಲ್ಲಿ ಮಾತ್ರ ಸಂಗೀತ ನಾದ ಮೊಳಗುವುದನ್ನು ಕೇಳಿ, ನೋಡಿ ಸಂತಸ ಪಟ್ಟಿದ್ದೇವೆ. ಆದರೆ ಇಲ್ಲಿ ವಿಶೇಷವಾಗಿ ಇಡೀ ಕರೆಕಲ್ಲು ಗುಡ್ಡದ ಸಮೂಹದ ಮದ್ಯೆ ಭಾಗದಲ್ಲಿರುವ ನಾಲ್ಕೈದು ಕಲ್ಲುಗು0ಡುಗಳಿಗೆ ಕಲ್ಲಿನಿಂದ ಕುಟ್ಟಿದಾಗ ಸಂಗೀತದ ನಾದವು ಹೊರ ಹೊಮ್ಮುವುದನ್ನು ವಿಜಯನಗರ ತಿರುಗಾಟ ಸಂಶೋಧನ ತಂಡದ ಡಾ.ಗೋವಿಂದ ಡಾ.ಎಚ್. ತಿಪ್ಪೇಸ್ವಾಮಿ, ಡಾ.ಗೋವರ್ಧನ್, ಡಾ. ಕೃಷ್ನೆಗೌಡ, ಡಾ. ವೀರಾಂಜಿನೇಯ, ಕೆ ವೀರಭದ್ರ ಗೌಡ, ರವಿ, ಮಂಜು ಅವರುಗಳು ಭೈರಪ್ಪ,ಶಂಕರ್ ಅವರ ಸಹಕಾರದಿಂದ ಪತ್ತೆ ಹಚ್ಚಿದ್ದಾರೆ.

                ಈ ಕಲ್ಲುಗಳಲ್ಲಿ ಒಂದು ಕಲ್ಲು ಚಪ್ಪಟೆಯಾಕಾರವಾಗಿದ್ದು, ಅದು ಎಂಟು ಅಡಿ ಎತ್ತರ ನಾಲ್ಕು ಅಡಿ ಅಗಲವಾಗಿದೆ. ಅದರ ಪಕ್ಕದ ಇನ್ನಿತರೆ ಮೂರು ಹಾಸು ಗುಂಡು ಕಲ್ಲುಗಳಿಂದಲೂ ಸುನಾದ ಸಂಗೀತ ಕೇಳುತ್ತದೆ.ಈ ಸಂಗೀತ ನಾದವು ಮೊಳಗುವುದನ್ನು ಆದಿ ಮಾನವರು ಗುರುತಿಸಿ ಅವರು ಕುಟ್ಟಿದ ಗುರುತು ಈಗಲೂ ಕಾಣಿಸುತ್ತವೆ. ಇದೇ ರೀತಿ ಈಗಾಗಲೇ ಪ್ರಾಗೈತಿಹಾಸಿಕ ಸ್ಥಳವೆಂಬ ಖ್ಯಾತಿಗೆ ಗುರಿಯಾಗಿರುವ ಸಂಗನಕಲ್ಲಿನಲ್ಲಿ ಸಹ ಇದೇ ರೀತಿಯ ಸಂಗೀತ ನಾದ ಹೊರಹೊಮ್ಮುವ ಕಲ್ಲುಗಳು ಕಂಡು ಬರುತ್ತವೆ. ಆದರೂ ಈ ಕರೆಕಲ್ಲು ಗುಡ್ಡದ ಕಲ್ಲುಗಳು ತುಂಬಾ ವಿಶೇಷವಾಗಿವೆ ಎನಿಸುತ್ತದೆ. ರಸ್ತೆ ಪಕ್ಕದಲ್ಲಿರುವ ಈ ಗುಂಡುಕಲ್ಲುಗಳ ಸುತ್ತಲೂ ರಕ್ಷಣೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಡಾ. ತಿಪ್ಪೇಸ್ವಾಮಿ ಅವರು ತಿಳಿಸಿದ್ದಾರೆ.

          ಬಹುತೇಖವಾಗಿ ಕರೆಕಲ್ಲು ಗುಡ್ಡಗಳಲ್ಲಿ ಆದಿಮಾನವನು ನೆಲೆಸಿರುವುದು ತುಂಬಾ ವಿಶೇಷವಾಗಿದೆ. ಈ ಹಿಂದೆ ನಮ್ಮ ತಂಡವು ಪಾಪಿನಾಯಕನ ಹಳ್ಳಿಯ ಅಂಕಾಲಮ್ಮ ದೇವಾಲಯದ ಹಿಂಬದಿಯ ಕರೆಕಲ್ಲು ಗುಡ್ಡದಲ್ಲಿ ಇದೇ ರೀತಿಯ ಕುಟ್ಟುಚಿತ್ರಗಳನ್ನು ಪತ್ತೆಮಾಡಿದ್ದೆವು. ಆದರೆ ಇಲ್ಲಿ ವಿಶೇಷವಾಗಿ ಕಲ್ಲುಗಳಲ್ಲಿ ಸಂಗೀತದ ನಾದ ಕೇಳಿಸುತ್ತದೆ. ಈ ಭಾಗದಲ್ಲಿ ಅದರಲ್ಲೂ ಕರೆಕಲ್ಲು ಗುಡ್ಡದಲ್ಲಿ ಗುಂಪು ಗುಂಪಾಗಿ ಆದಿಮಾನವನು ವಾಸಿಸಿದ್ದಿರಬೇಕು. ಇಲ್ಲವೇ ಬೇಟೆಯ ಹಿನ್ನೆಲೆಯಲ್ಲಿ ತಿರುಗಾಡುತ್ತಾ ತಂಗಿದಾಗ ಕುಟ್ಟು ಚಿತ್ರಗಳನ್ನು ಕುಟ್ಟಿರಬೇಕೆಂದು ತಿಳಿದುಬರುತ್ತದೆ ಎಂದು ಡಾ. ಗೋವರ್ಧನ ತಿಳಿಸಿದ್ದಾರೆ.
         ತುಂಬಾ ವಿಶಿಷ್ಟವಾದ ಈ ಕರೆಕಲ್ಲು ಗುಡ್ಡದ ಪ್ರಾಗೈತಿಯಸಿಕ ನೆಲೆಯೆಂದು ಗುರುತಿಸಿ,ಮುಂದಿನ ಪೀಳಿಗೆಗೆ ತಿಳಿಸಲು ಉಳಿಸಿಕೊಳ್ಳಬೇಕಾಗಿರುವುದು ತುಂಬಾ ಅವಶ್ಯಕವಾಗಿದೆ ಎಂದು ಡಾ. ಕೃಷ್ಣೆಗೌಡ ಹಾಗೂ ಅವರ ಇಡೀ ತಂಡದ ಆಶಯವಾಗಿದೆ.

Related Articles

Leave a Reply

Your email address will not be published. Required fields are marked *

Back to top button