ರಾಜಾ ವೇಣುಗೋಪಾಲ ನಾಯಕರು (ನಾಯಕ್ ಸಾಹೇಬ್) ಸುರಪುರ ಶಾಸಕರಿಗೆ ಬಹಿರಂಗ ಪತ್ರ.

ರಾಜಾ ವೇಣುಗೋಪಾಲ ನಾಯಕರು (ನಾಯಕ್ ಸಾಹೇಬ್) ಸುರಪುರ ಶಾಸಕರಿಗೆ ಬಹಿರಂಗ ಪತ್ರ.
ಸನ್ಮಾನ್ಯಶ್ರೀ ರಾಜಾ ವೇಣುಗೋಪಾಲ ನಾಯಕರು ( ನಾಯಕ್ ಸಾಹೇಬ್ ) ಸುರಪುರ ಶಾಸಕರಿಗೆ ಈ ಮೂಲಕ ನಾನು ಎಮ್.ಎ.ಸುಗಂಧಿ ವಕೀಲರು, ಪತ್ರಕರ್ತರು, ಬೆಂಗಳೂರು ಈ ಮೂಲಕ ವಿಷಾಧನೀಯವಾಗಿ ತಮ್ಮಲ್ಲಿ ಬಹಿರಂಗ ಪತ್ರ ಬರೆದುಕೊಳ್ಳುತ್ತಾ,
ಶಾಸಕರು, ನಾಯಕ ಸಾಹೇಬರೇ, ನಾನು ಅಪ್ಪಾಜೀಯವರ ಕಟ್ಟಾ ಬೆಂಬಲಿಗ, ಅನುಯಾಯಿ, ದಿ.ರಾಜಾ ವೆಂಕಟಪ್ಪ ನಾಯಕರೊಂದಿಗೆ ತುಂಬಾ ಒಳ್ಳೆಯ ಒಡನಾಟವಿತ್ತು. ಜಯ ಜಯಕಾರ ಹಾಕುತ್ತಾ ಅವರ ಹಿಂದೆ- ಮುಂದೆ ತಿರುಗುತ್ತಿದ್ದಿಲ್ಲ. ಆದರೇ ರಾಜಕೀಯ ಪಕ್ಷದ ನಾಯಕರಿಗೆ, ಸಾಮಾಜಿಕ ಜಾಲ ತಾಣಗಳಲ್ಲಿ, ಪತ್ರಿಕೆಗಳಲ್ಲಿ, ಸರಕಾರಿ ಕಾರ್ಯಲಯದ ಅಧಿಕಾರಿಗಳಲ್ಲಿ ನನ್ನ ನೆಚ್ಚಿನ ನಾಯಕರು ದಿ. ರಾಜಾಸಾಹೇಬರ ರಾಜಕೀಯ ಕೆಲಸಗಳನ್ನು ಮಾಡುತ್ತಾ ಬಂದಿದ್ದೆನೆ. ಅವರು ಹಾಸ್ಪೇಟಲ್‌ಗೆ ಅಡ್ಮೀಟ್ಟಾಗುವ ೨ ವಾರದವರೆಗೂ ಅವರೊಂದಿಗೆ ನಿರಂತರ ಸಂಪರ‍್ಕದಲ್ಲಿದ್ದೆನು. ಇಂದು ಅವರು ಬದುಕಿದ್ದರೇ ನನ್ನ ಸಮಸ್ಯೆಗೆ ಕ್ಷಣದಲ್ಲಿಯೇ ಪರಿಹಾರ ಸಿಕ್ಕುತ್ತಿತ್ತು.
ದೇವಪುರ್ ಗ್ರಾಮದಲ್ಲಿ ನನ್ನ ಸಹೋದರನ ಮನೆಯಲ್ಲಿ ಚಿನ್ನ ಕದ್ದವನನ್ನು ಪೊಲೀಸ್ ಸ್ಟೇಷನ್‌ಗೆ ಫೋನ ಮಾಡಿ ನಿಮ್ಮ ಕರ‍್ಯಾಲಯದ ಪಿ.ಎ. ಅವರೇ ರಕ್ಷಿಸುತ್ತಿದ್ದಾರೆ. ಎಂದು ನಾನು ನಿಮಗೆ ಫೋನ ಮಾಡಿ ತಿಳಿಸಿದಾಗ್ಯೂ ನೀವು ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ನಾನು 1982 ರಿಂದಲೂ ಕಾಂಗೈ ಪಕ್ಷದಲ್ಲಿಯೇ ಇದ್ದೆನೆ ಅಂದು ವಿದ್ಯಾರ್ಥಿಗಳ ನಾಯಕರಾಗಿದ್ದ ದಿ.ರಾಜಾ ಮದನಗೋಪಾಲ ನಾಯಕರು ಮಾಜಿ ಶಾಸಕರು, ಮಾಜಿ ಸಚಿವರೊಂದಿಗೆ ಗುರುತಿಸಿಕೊಂಡವನು. ಅಂದಿನಿಂದಲೂ ಸುರಪುರ ಕ್ಷೇತ್ರದಲ್ಲಿ ನಡೆದ ಎಲ್ಲಾ ಚಿಕ್ಕ-ದೊಡ್ಡ ಚುನಾವಣೆಯಲ್ಲೂ ನಾನು ಮತ್ತು ನನ್ನವರಿಂದ, ನನ್ನ ಹಿತೈಷಿಗಳಿಂದ ಕಾಂಗೈಗೇನೇ ಮತ ಚಲಾಯಿಸಿ ಹಲವಾರು ಬಾರಿ ಪಕ್ಷದ ಗೆಲುವಿಗೆ ಕಾರಣನಾಗಿದ್ದು ದೇವರಾಣೆಗೂ ಸತ್ಯೆ.
1990 ರಿಂದ ಅಪ್ಪಾಜಿಯವರ ಕಟ್ಟಾ ಬೆಂಗಲಿಗನಾಗಿದ್ದೆನು. ದೇವಪುರ ಗ್ರಾಮದಲ್ಲಿದ್ದಾಗ ನಾನು ವಾರಕ್ಕೆ 2,3 ಸಲ ವಸಂತ್ ಮಹಲ್ ಗ್ರೌಂಡ್ನಲ್ಲಿ ಅಪ್ಪಾಜಿಯವರನ್ನು ಭೇಟಿಯಾಗದೇ ಊರಿಗೆ ಮರಳುತ್ತಿದ್ದಿಲ್ಲ. ಒಮ್ಮೆ ಗ್ರೌಂಡಿಗೆ ಬಂದು ರಾಜಾ ಸಾಹೇಬರ ಇಲ್ಲದ್ದನ್ನು ವಿಚಾರಿಸಿದಾಗ ರಾಜಾ ವೆಂಕಟಪ್ಪ ನಾಯಕ ಸಾಹೇಬರು ಭೈರಿಮರಡಿ ( ಭೈರಿಮಡ್ಡಿ) ತೋಟದಲ್ಲಿ ಮನೆ ಮಾಡಿದ್ದಾರೆ ಇನ್ನು ಅವರು ಅಲ್ಲಿಯೇ ಇರುತ್ತಾರೆ. ಪ್ರತಿ ವಾರದಲ್ಲಿ ಸೋಮವಾರ ಮತ್ತು ಶುಕ್ರವಾರ ಮಾತ್ರ ಸುರಪುರಕ್ಕೆ ಬರುತ್ತಾರೆ ಎಂದು ಗ್ರೌಂಡಿನಲ್ಲಿರುವ ಕೆಲ ವ್ಯಕ್ತಿಗಳು ಹೇಳಿದರು, ತಕ್ಷಣವೇ ನಾನು ಸುರಪುರದಲ್ಲಿಯೇ ಒಂದು ಬಾಡಿಗೆ ಸೈಕಲ್ ತೆಗೆದುಕೊಂಡು ಭೈರಿಮಡ್ಡಿಯಲ್ಲಿರುವ ತೋಟಕ್ಕೆ ಹೋಗಿ ಅಪ್ಪಾಜೀಯವರನ್ನು ಭೇಟಿಯಾದೆನು. ಆಗ ರಾಜಾ ಸಾಹೇಬರು ಬಿಸಿಲಿನಲ್ಲಿ ಯಾಕೆ ಬಂದೆಯಪ್ಪ ಎಂದು ಹಗುರವಾಗಿ ಗದರಿ ತೋಟದ ಗಿಡದ ನೆರಳಿನಲ್ಲಿ ಹಾಕಿದ್ದ ಖುರ್ಚಿಯಲ್ಲಿ ಕೂಡ್ರಿಸಿ ನೀರು ಟಿ. ಕೊಟ್ಟು ಮಾತಾಡಿಸಿದರು. ನಂತರ ತೋಟದಲ್ಲಿದ್ದ ಯಾವುತ್ತೂ ಬತ್ತದ ಸದಾ ನೀರಿನಿಂದ ಕೂಡಿದ ಬಾಂವಿ ತೋರಿಸಿದರು. ಅದೇ ತಾನೆ ಮಾಡಿದ ಭತ್ತದ ನಾಟಿ, ಗಿಡ, ಮರ, ತೋರಿಸಿದರು. “ ಆಗ ನಾನು ನೀವು ಸುರಪುರ ಪಟ್ಟಣದಲ್ಲಿಯೇ ಇದ್ದರೆ ಒಳ್ಳೆಯದು ಧಣಿ. ನೊಂದವರು ನಿಮಗೆ ಭೇಟಿಯಾಗಲು ಹಗಲು ರಾತ್ರಿ ಎನ್ನದೇ ಬರ‍್ತಾರೆ. ಎಂದಾಗ “ ನಾನು ಪ್ರತಿ ಸೋಮವಾರ ಮತ್ತು ಶುಕ್ರವಾರ ಸುರಪುರಕ್ಕೆ ಬರ‍್ತೇನೆ ಜನರಿಗೆ ಭೇಟಿಯಾಗ್ತೇನೆ ” ಆಗ ನೀನು ಬಂದು ಅಲ್ಲಿ ಭೇಟಿಯಾಗು ಎಂದರು. ಆಗ ನಾನು ಅದೆಲ್ಲಾ ಬೇಡ ಧಣಿ. ನೀವು ಸದಾ ಕಾಲ ಸುರಪುರ ಪಟ್ಟಣದಲ್ಲಿಯೇ ಇರಬೇಕು ಎಂದು ಪ್ರೀತಿಯಿಂದ ಒತ್ತಾಯಿಸಿದಾಗ. ನಿಜ ಸುಗಂಧಿ ನೀವು ಹೇಳುವುದು ನಿಜ. ನಾನೂ ಕೂಡ ಮನಸ್ಸು ಬದಲಾಯಿಸಿದ್ದೆನೆ. ಮೊನ್ನೆ ನಮ್ಮ ಹುಡುಗ( ಮಗ ) ತೋಟದ ಪಕ್ಕದಲ್ಲಿಯೇ ಹರಿಯುತ್ತಿರುವ ಕಾಲುವೆಯಲ್ಲಿ ಬಿದ್ದು ತೇಲುತ್ತಾ ಹೋಗುತ್ತಿದ್ದ ಅದನ್ನು ನೋಡಿದ ಪಕ್ಕದ ಹೊಲದ ರೈತ ಉಳಿಸಿಕೊಂಡಾಗಿನಿಂದ ನಾವು ಇಲ್ಲಿ ಇರಲು ಯಾರಿಗೂ ಇಷ್ಟವಿಲ್ಲ ಅರ್ಜoಟ್ ಸುರಪುರಕ್ಕೆ ಹೊರಟು ಬಾ ಎಂದು ಅಮ್ಮ ಬೈದಿದ್ದಾರೆ ನಾಳೆನೇ ಸುರಪುರ ಮನೆಗೆ ಶಿಫ್ಟ ಆಗುತ್ತೇನೆ ಎಂದು ಹೇಳಿ ನಕ್ಕಿದ್ದರು. ಮುಂದಿನ ಒಂದೆರಡು ದಿನದಲ್ಲಿಯೇ ರಾಜಾ ಸಾಹೇಬರು ವಸಂತ ಮಹಲ್ ಮನೆಯಲ್ಲಿ ಶಿಫ್ಟ ಆಗಿದ್ದರು.
ಅಷ್ಟೇ ಅಲ್ಲ ಶಾಸಕರೇ ‘’ ಸುರಪುರ ವಿಧಾನ ಸಭಾ ಕ್ಷೇತ್ರದ ಕೆ.ಜೆ.ಪಿ ಪಕ್ಷದಿಂದ ಸ್ಪರ್ಧಿಸ ಬಯಸುವ ಅಭ್ಯಥಿಗಳನ್ನು ಆಯ್ಕೆ ಮಾಡಿ ಕಳುಹಿಸಿರಿ ಎಂದು ಕೆ.ಜೆ.ಪಿ ಪಕ್ಷದ ಅಧ್ಯಕ್ಷರು ಶ್ರೀ ದಿ. ಬಂಗಾರಪ್ಪನವರು ಬೆಂಗಳೂರುನಿಂದ ಟೆಲಿಗ್ರಾಂ ಕಳುಹಿಸಿದ್ದರು. ಆಗ ಸುರಪುರ ಕ್ಷೇತ್ರದಲ್ಲಿರುವ ಎಲ್ಲಾ ಕೆ.ಜೆ.ಪಿ. ಕಾರ್ಯಕರ್ತನ್ನು ಕರೆಯಿಸಿ ರಾಜಾ ವೆಂಕಟಪ್ಪ ನಾಯಕರು, ರಾಜಾ ರಂಗಪ್ಪನಾಯಕರು, ರಾಜಾ ಶ್ರೀನಿವಾಸ ನಾಯಕರು, ರಾಜಾ ಮೋನೇಶ ನಾಯಕರು, ರಾಜಾ ರಾಮ ನಾಯಕರು, ಅರವಿಂದ ವಕೀಲರು, ಶರಣಪ್ಪ ಸಾಹುಕಾರ ಅರಳಹಳ್ಳಿ, ಚನ್ನಪಟ್ಟಣ ಗೌಡ, ದೇವಿಕೇರಿಯ ರವಿ, ಮತ್ತು ತಾಲ್ಲೂಕಿನ ಹಲವಾರು ಮುಖಂಡರು ನಾವೆಲ್ಲಾ ವಸಂತ ಮಹಲ್ ಗ್ರೌಂಡನಲ್ಲಿ ಸೇರಿಕೊಂಡೆವು. ಆಗ ಬೆಂಗಳೂರು ಕೆ.ಜೆ.ಪಿ. ಕೇಂದ್ರ ಕರ‍್ಯಾಲದಿಂದ ಬಂದಂಥಹ ಟೆಲಿಗ್ರಾಮನ್ನು ರಾಜಾ ರಂಗಪ್ಪ ನಾಯಕರು ಕರ‍್ಯರ‍್ತರ ಸಭೆಯಲ್ಲಿ ಎಲ್ಲಾ ಸದಸ್ಯರ ಎದುರು ಎದ್ದು ನಿಂತು ಓದುತ್ತಿರುವಾಗಲೇ, ಸಭೆಯ ಮಧ್ಯೆದಲ್ಲಿ ನಾನು ಈ ಸುರಪುರ ವಿಧಾನಸಭಾ ಕ್ಷೇತ್ರದ ಅಭ್ಯರ‍್ಥಿ ಎಂದರೇ? ರಾಜಾ ವೆಂಕಟಪ್ಪ ನಾಯಕರೇ ಸೂಕ್ತ ಕ್ಯಾಂಡಿಡೆಟ್, ಅವರನ್ನೇ ಸರ್ವನುಮತದಿಂದ ಆಯ್ಕೆ ಮಾಡಲೇಬೇಕೆಂದು ಸಭೆಯ ಮಧ್ಯೆದಲ್ಲಿಯೇ ಎದ್ದು ನಿಂತು ಘೋಷಿಸಿದ ವ್ಯಕ್ತಿ ನಾನು.
ಸಭೆ ಮುಗಿದ ನಂತರ ರಾಜಾ ರಂಗಪ್ಪ ನಾಯಕರು ನನ್ನನ್ನು ಕರೆದು ನಗುತ್ತಾ, ನೋಡು ಸುಗಂಧಿ ಕ್ಯಾಂಡಿಡೆಟ್ಗೆ ನೀನೇ ಅನೌನ್ಸ ಮಾಡಿದ್ದಿಯ, ಏನಾದರೂ ಆದರೇ ನಿನ್ನನ್ನು ಮಾತ್ರ ನಾನು ಸುಮ್ಮನೇ ಬಿಡುವುದಿಲ್ಲ ಎಂದರು. ಅದೇ ವೇಳೆಯಲ್ಲಿ ತಿರುಪತಿ ವೆಂಕಟರಮಣನ ಪೂಜಾರಿಗಳು ದುಡ್ಡು ಕಲೆಕ್ಟ ಮಾಡಲು ಜಾಗಟೆ ಬಾರಿಸುತ್ತಾ ಗ್ರೌಂಡಿನಲ್ಲಿ ಬಂದಿದ್ದರು “ ಆಗ ನಾನು ಧಣಿ ನನ್ನ ಮಾತು ನಿಜವಾಗುತ್ತದೆ ಯಾಕೆಂದರೇ ನಿಷ್ಕಲ್ಮಷವಾದ ಹೃದಯದಿಂದ ನಾನು ಕ್ಯಾಂಡಿಡೇಟ ಅನೌನ್ಸ್ ಮಾಡಿದ್ದೆನೆ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯ ಪೂಜಾರಿಗಳು ಇದೇ ವೇಳೆ ಗ್ರೌಂಡಿನಲ್ಲಿ ಜಾಗಟೆ ಬಾರಿಸುತ್ತಾ ಬಂದಿದ್ದಾರೆ. ನನ್ನ ಮಾತು ಸತ್ಯೆವಾಗುತ್ತದೆ ನೋಡ್ತಾ ಇರಿ ಎಂದು ರಾಜಾ ರಂಗಪ್ಪನಾಯಕರ ಎದುರು ಕೊಚ್ಚಿಕೊಂಡಿದ್ದ ಮಾತು ಇಂದಿಗೂ ನೆನಪು ಮಾಡಿಕೊಳ್ಳಲು ನನಗೆ ಹೆಮ್ಮೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ರಾಜಾ ವೆಂಕಟಪ್ಪ ನಾಯಕರು ಶಾಸಕರಾಗಿ ಆಯ್ಕೆ ಆದರು.
ಅಣ್ಣ ದಿ.ರಾಜಾ ಸಾಹೇಬರು ಮೊದಲ ಬಾರಿ ಚುನಾವಣೆಗೆ ಸ್ಪರ್ಧೆಸಿದಾಗ ದೇವಪುರ ಗ್ರಾಮದ ಹಲವಾರು ಹಿರಿ-ಕಿರಿ ಮುಖಂಡರಿಗೆ ಎದುರಾಗಿ ನನ್ನ ಮನೆಯ ಗೋಡೆಯ ಮೇಲೆ ತೆಂಗಿನ ಮರದ ಚಿತ್ರ ಹಾಕಿ, ನಮ್ಮ ಓಟು ರಾಜಾ ವೆಂಕಟಪ್ಪ ನಾಯಕರಿಗೆ ಎಂದು ಬರೆದುಕೊಂಡಿದ್ದೆನು. ಆಗ ನನ್ನ ಗ್ರಾಮದ ಕೆಲ ಕುಹಕಿಗಳು ಅದು ತೆಂಗಿನ ಮರವಲ್ಲ ಸೇಂದಿಯ ಮರ ಎಂದು ನಗಾಡಿದ್ದರು. ಆಗ ಅವರಿಗೆ ಚೆನ್ನಾಗಿಯೇ ಉತ್ತರಿಸಿದ್ದೆನು ಮತ್ತು ರಾಜಾ ವೆಂಕಟಪ್ಪ ನಾಯಕರ ಗೆಲುವಿಗೆ ಹಗಲಿರುಳು ದುಡಿದ ವ್ಯಕ್ತಿಗಳಲ್ಲಿ ನಾನೂ ಒಬ್ಬನಾಗಿದ್ದೆನು. ಅಂದಿನಿಂದಲೂ ಇಲ್ಲಿಯವರೆಗೂ ಮತ್ತು ನಿಮ್ಮ ಚುನಾವಣೆಯ ವರೆಗೂ ಮತ್ತು ಇಂದಿಗೂ ನಾನು ಕಾಂಗೈ ಬೆಂಗಲಿಗನಾಗಿಯೇ ಇದ್ದನೆ.
ಅಣ್ಣ ದಿ. ರಾಜಾವೆಂಕಟಪ್ಪ ನಾಯಕರೊಂದಿಗೆ ಅನ್ಯೂನ್ಯೆತೆಯಿಂದ ( 1990 ರಿಂದ 2024 ) ಸುಮಾರು 24 ವರ್ಷ ಅವರೊಂದಿಗೆ ಕಳೆದಿದ್ದು ಕಣ್ಣಿಗೆ ಕಟ್ಟಿದಂತಿದೆ.
ಅಣ್ಣ ದಿ.ರಾಜಾವೆಂಕಟಪ್ಪ ನಾಯಕರು ಇಂದು ನಮ್ಮೊಂದಿಗಿಲ್ಲವೆಂಬುದು ನನಗೆ ಅರಗಿಸಿಕೊಳ್ಳಲಾರದ ವಿಷಯವಾಗಿದೆ. ಈ ವಿಷಯವನ್ನು ದಿನ ಬೆಳಗಾದರೇ ತಮ್ಮ ಮುಂದೆ ಬಂದು ಅತ್ತು ಕರೆದು ಹೇಳಲಾಗದು. ಆದರೇ ಮನಸ್ಸಿನಲ್ಲಿಯೇ ನೊಂದುಕೊಳ್ಳುತ್ತಿದ್ದೆನೆ.
ಕಳೆದ 3 ತಿಂಗಳ ಹಿಂದೆ ನನ್ನ ನೆಚ್ಚಿನ ನಾಯಕರಾಗಿದ್ದ ಆತ್ಮೀಯರು, ಸುಮಾರು 29 ವರ್ಷ ಒಡನಾಟದ ಸನ್ಮಾನ್ಯಶ್ರೀ ದಿ.ರಾಜಾವೆಂಕಟಪ್ಪ ನಾಯಕರು ಇವರ ಹಳೆಯ ಫೋನ ನಂಬರಿಗೆ ಒಂದು ದಿನ ಬೆಳಗ್ಗೆ 11 ಗಂ.ಗೆ ನಾನು ಫೋನ ಮಾಡಿದಾಗ ರಿಂಗಾಗುತ್ತಿತ್ತು ಆದರೇ ತೆಗೆಯಲಿಲ್ಲ ಆಗ ನನ್ನ ಪ್ರೀತಿಪಾತ್ರರು ನಿಧನ ಹೊಂದಿ ವರ್ಷಕ್ಕಿಂತಲೂ ಹೆಚ್ಚಿನ ದಿನಗಳು ಉರುಳಿವೆ ರಾಜಾಸಾಹೇಬರ ನಂಬರ ರಿಂಗಣಿಸುತ್ತಿದೆ ಎಂದು ಯೋಚಿಸುತ್ತಿದ್ದೆ ನಂತರ ಸಾಯಂಕಾಲ 5.45 ಕ್ಕೆ ನನ್ನ ಮೋಬೈಲ ರಿಂಗಣಿಸುತ್ತಿದ್ದಾಗ ತೆಗೆದು ನೋಡಿದಾಗ ರಾಜಾ ಸಾಹೇಬರೇ ನನಗೆ ಫೋನ ಮಾಡುತ್ತಿದ್ದಾರೆ ಎನ್ನಿಸಿತು. ಹಲೋ ಎಂದಾಗ ಆ ಕಡೆಯಿಂದ ಯಾರು ತಾವು? ಬೆಳಗ್ಗೆ ಈ ನಂಬರಿನಿಂದ ೨,೩, ಬಾರಿ ಕಾಲ ಬಂದಿದೆ ಅಪ್ಪಾಜಿಯವರ ಫೋನ ನಾನು ಇಟ್ಟುಕೊಂಡಿದ್ದೆನೆ. ಅಪ್ಪಾಜಿಯವರ ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳು ಇಂದಿಗೂ ಅವರ ಹಳೆಯ ನಂಬರಿಗೇನೇ ಫೋನ ಮಾಡುತ್ತಾರೆ ಆಗ ನಾನೇ ಉತ್ತರಿಸುತ್ತೇನೆ ಎಂದು ನೀವು ಫೋನನಲ್ಲಿ ಹೇಳಿದಾಗ ನಾನು ನನ್ನ ಪರಿಚಯ ಮಾಡಿಕೊಂಡು, ಸುರಪುರದ ನಿಮ್ಮ ಪಿ.ಎ.ಯವರಿಂದ ನನಗಾಗುತ್ತಿರುವ ತೊಂದರೆ,. ನನ್ನ ನೈಜವಾಗಿರುವ, ನಿಜವಾಗಿರುವ, ಸಮಸ್ಯೆಯನ್ನು ಫೋನ ಮುಖಾಂತರ ತಮಗೆ ರಿಕ್ವೇಸ್ಟ ಮಾಡಿ ತಿಳಿಸಿದೆನು ಆದರೂ ತಾವು ಸ್ಪಂಧಿಸಲಿಲ್ಲ. ಆದರೇ, ನಿಮ್ಮ ಕಾರ‍್ಯಾಲಯದ ಪಿ.ಎ. ಕಳೆದ ವಾರವೇ ಪೊಲೀಸ ಸ್ಟೇಷನ್‌ಗೆ ಫೋನ ಮಾಡಿ ನಮ್ಮ ಸಹೋದರನ ಚಿನ್ನಕದ್ದ ಕಳ್ಳನನ್ನು ಬಿಟ್ಟು ಬಿಡಲು ಫೋನ ಮಾಡಿದ್ದಾರೆ. ಮತ್ತು ದೇವಪುರದ ಈ ಗೌಡ ಪೊಲೀಸ ಸ್ಟೇಷನ್‌ಗೆ ಹೋಗಿ 50 ಗ್ರಾ. ಚಿನ್ನ ಕೊಡುವುದು ನನ್ನ ಜಾವಾಬ್ದಾರಿ ಎಂದು ಹೇಳಿ ಆ ಕಳ್ಳನ್ನು ಬಿಡಿಸಿಕೊಂಡು ಬಂದಿದ್ದಾನೆ.
ಇದರಿಂದ ಸುರಪುರ ಶಾಸಕರ ಕಾರ‍್ಯಾಲಯದ ಶಾಸಕರ ಪಿ.ಎ.ಗಳಿಂದ ಅಧಿಕಾರ ದುರುಪಯೋಗವಾಗುತ್ತಿದೆ.
ದೇವಪುರದ ಈ ಗೌಡನ ಮಾತು ಕೇಳಿಕೊಂಡು ನಿಮ್ಮ ಪಿ.ಎ.ಗಳು, ಕಳ್ಳರ ಬೆನ್ನಿಗೆ ನಿಂತಿದ್ದಾರೆ. ನಿಮ್ಮ ಪಿ.ಎ.ಗಳು, ಸುರಪುರ ಪೊಲೀಸ ಸ್ಟೇಷನ್‌ಗೆ ಫೋನ ಮಾಡಿ, ಕಳ್ಳರನ್ನು ಬಚಾವ ಮಾಡಲು ಸಹಕರಿಸುತ್ತಿರುವುದು ಇದು ಅನ್ಯಾಯದ ಪರಮಾವಧಿಯಾಗಿದೆ.
ಈ ಗೌಡನಿಂದಾಗಿ ದೇವಪುರದ ಗ್ರಾಮದಲ್ಲಿ ಯಾರಿಗೂ ನೆಮ್ಮದಿಯಿಲ್ಲದಂತಾಗಿದೆ, ಹಲವಾರು ಕಾಂಗೈ ಕಾರ್ಯಕರ್ತರೇ ಈ ಗೌಡನನ್ನು ಧ್ವೇಷಿಸುತ್ತಿದ್ದಾರೆ. ನಿಮ್ಮ ಪಿ.ಎ.ಯನ್ನು ಹಿಡಿದುಕೊಂಡು ಒಳಗಿಂದೊಳಗೆ ಸರಕಾರದಿಂದ ಬರುವ ಸೌಲಭ್ಯಗಳನ್ನು ತಾನೇ ಗೆಬರಿಕೊಳ್ಳುತ್ತಾನೆ. ತನ್ನೊಂದಿಗಿರುವ ಕಾಂಗೈ ಮುಖಂಡರಿಗೇನೇ ಮೋಸ ಮಾಡುತ್ತಿದ್ದಾನೆ. ಅದಲ್ಲದೇ ಶಾಸಕರ ಪಿ.ಎ.ಗಳಿಂದ ಸುರಪುರ ಪೊಲೀಸ ಸ್ಟೇಷನ್ನಿಗೆ ಫೋನ ಮಾಡಿಸಿ ತಾನೇ ಮಧ್ಯದಲ್ಲಿ ನಿಂತು ಲಂಚದ ವ್ಯೆವಹಾರ ಮಾಡುತ್ತಿದ್ದಾನೆ. ದೇವಪುರ ಗ್ರಾಮದ ಕಾಡಾ ಕ್ಯಾಂಪಿನ ಪ್ರದೇಶದಲ್ಲಿ ಬೀದರ ಬೆಂಗಳೂರು ರಸ್ತೆಯನ್ನು ಅಡ್ಡಡ್ಡಲಾಗಿ ಅಗೆದು ಪೈಪಲೈನ ಮಾಡಿಕೊಂಡಿದ್ದಾನೆ ಆ ರಸ್ತೆ ಸರಿಯಾಗಿ ಮುಚ್ಚದೇ ಇರುವುದರಿಂದ ದಿನಬೆಳಗಾದರೇ ಆ ಪ್ರದೇಶದಲ್ಲಿ ಹಲವಾರು accident ಆಗುತ್ತಿವೆ. ಸರಕಾರಿ ಸೌಲಭ್ಯಗಳನ್ನು ದುರಪಯೋಗ ಪಡಿಸಿಕೊಂಡಿರುವುದು ಸಾಬೀತು ಮಾಡಬಲ್ಲೇನು.
ತಮಗೆ ಬರೆದುಕೊಳ್ಳುತ್ತಿರುವ ಈ ವಿಷಯವನ್ನು ಯಾವುದೇ ಹೊಟ್ಟೆಕಿಚ್ಚಿನಿಂದಾಗಲೀ, ವೃತ್ತಿ ಮತ್ಸರದಿಂದಾಗಲೀ ಹೇಳುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ವ್ಯಕ್ತಿಯಿಂದಲೇ ಕಾಂಗೈ ಪಕ್ಷಕ್ಕೆ ಪೆಟ್ಟಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತದೆ. ಎಂದು ಹೆಸರು ಹೇಳಲು ಬಯಸದ ಮತದಾರರ
ಮಾಹಿತಿ ನಿಮಗೆ ನೇರವಾಗಿ ತಿಳಿಸುತ್ತಿದ್ದೆನೆ.
ಕಳೆದ 2023-24 ರಲ್ಲಿ ದೇವಪುರ ಗ್ರಾಮದಲ್ಲಿ 13 ಮೊಟರ್‌ಬೈಕಗಳು, 1 ಬೊಲೇರೋ ವಾಹನ ಕಳುವಾಗಿದೆ. ಇದಕ್ಕೆ ಈ ಗೌಡನ ಕೈಚಳಕ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಪ್ರಮಾಣಿಕವಾಗಿ ತನಿಖೆ ಮಾಡಿದರೇ ಎಲ್ಲವೂ ತಿಳಿದು ಬರುತ್ತದೆ.
ಕಳವು ಆಗಿರುವ ವಾಹನಗಳ ಮಾಲೀಕರು ಈ ಗೌಡನನ್ನೇ ಪೊಲೀಸ ಸ್ಟೇಷನ್‌ಗೆ ಕಂಪ್ಲೇಂಟ್ ಕೊಡಲು ಕರೆದುಕೊಂಡು ಹೋಗಿದ್ದಾರೆ. ಕಳುವಾದ ವಾಹನ ಪತ್ತೆಗಾಗಿ ಈ ಗೌಡ, ವಾಹನ ಮಾಲೀಕರಿಂದಲೇ ತನಗೆ ಬೇಕಿದ್ದ ಪೊಲೀಸರಿಗೆ ದುಡ್ಡು ಕೊಡಿಸಿದ್ದಾನೆ. ಕೆಲ ದಿನಗಳಾದ ನಂತರ ವಾಹನ ಸಿಕ್ಕುತ್ತಿಲ್ಲ ನಾವೇನು ಮಾಡೋಣ? ಎಂದು ಪೊಲೀಸರು ವಾಹನ ಮಾಲಿಕರಿಗೆ ಬೆದರಿಸಿ ಕಳುಹಿಸಿದ್ದಾರೆ.
ದೇವಪುರ ಗ್ರಾಮದಲ್ಲಿ ಆಗುತ್ತಿರುವ ಅದೆಷ್ಟೋ ಕಳುವು ಮುಚ್ಚಿಹೋಗುತ್ತಿರುವುದು ಈ ಗೌಡನಿಂದಲೇ ಎಂಬುದು ಮುಂದಿನ ದಿನಗಳಲ್ಲಿ ಸಾಬೀತಾಗುತ್ತದೆ ಯಾವುದೇ ಕಾರಣಕ್ಕೂ ಶತಾಯ ಗತಾಯ ಹೊರಗಡೆ ಬಂದೇ ಬರುತ್ತದೆ ಮತ್ತು ಎಲ್ಲಾ ಕಡೆಗೂ ಪ್ರಚಾರವಾಗುತ್ತದೆ.
“ ಶಾಸಕರೇ ದೇವಪುರ ಗ್ರಾಮದಲ್ಲಿ ನನ್ನ ಸಹೋದರನ ಮನೆ ಕಳುವು ಆಗಿ ಸುಮಾರು 7 ತಿಂಗಳಾಗಿದೆ. ಸುರಪುರ ಪೊಲೀಸ ಸ್ಟೇಷನನಲ್ಲಿ ಎಫ್.ಐ.ಆರ್. ಆಗಿದೆ ಆದರೇ ದೇವಪುರದ ಗೌಡ ಎಂಬ ವ್ಯಕ್ತಿ ಕಳ್ಳರ ಬೆನ್ನಿಗೆ ನಿಂತಿದ್ದಾನೆ ಸುರಪುರ ಠಾಣೆಯ ಈ ಕೇಸ ನೋಡಿಕೊಳ್ಳುತ್ತಿರುವ ಪೊಲೀಸರು ಮಲ್ಲಯ್ಯ ಪಿ. ಸಿ. & ಲಕ್ಕಪ್ಪ ಪಿ. ಸಿ. ಮತ್ತು ಪಿ.ಐ. ಆನಂದ ಅವರು ಈ ಕಳುವಿನ ಪ್ರಕರಣದಲ್ಲಿ ಕಳ್ಳರನ್ನು ಬೆನ್ನಿಗೆ ಹಾಕಿಕೊಂಡು ದೇವಪುರದ ವಾರ್ಡ್ ಸಂಖ್ಯೆ-3 ರಲ್ಲಿರುವ ಹಲವಾರು ಅಮಾಯಕ ಜನರನ್ನು ಬಂಧಿಸಿ ಸ್ಟೇಷನ್‌ಗೆ ಕರೆದುಕೊಂಡು ಹೋಗುತ್ತಿದ್ದಾರೆ. ವಿನಾಕಾರಣ ಹೊಡೆದು, ಬಡಿದು, ಹೆದರಿಸಿ, ಬೆದರಿಸಿ ರೋಪ ಹಾಕಿ, ಕಳ್ಳತನ ಒಪ್ಪಿಕೋ ಇಲ್ಲವೇ ೫೦ ಸಾವಿರ ಕೊಡು, ಒಂದು ಲಕ್ಷ ಕೊಡು ನಿನ್ನನ್ನು ಬಿಟ್ಟು ಬಿಡುತ್ತೇವೆ ಇಲ್ಲದಿದ್ದರೇ ಈ ಕಳುವಿನ ಕೇಸನಲ್ಲಿ ನಿನ್ನನ್ನು ಫಿಟ್ ಮಾಡುತ್ತೇವೆ ಎಂದು ಹೆದರಿಸಿ ದುಡ್ಡು ವಸೂಲಿ ಮಾಡುತ್ತಿದ್ದಾರೆ.
ಸಂಶಯಾಸ್ಪದದ ಮೇಲೆ ಬೇರೆ ಬೇರೆಯವರನ್ನು ಪೊಲೀಸರು ಎತ್ತಾಕಿಕೊಂಡು ಹೋದಾಗ ಅಮಾಯಕರ ಸಂಬಂಧಿಕರು ಈ ಗೌಡನನ್ನು ಜೊತೆಗೆ ಸುರಪುರ ಪೊಲಿಸ ಸ್ಟೇಷನ್‌ಗೆ ಕರೆದುಕೊಂಡು ಹೋಗುತ್ತಾರೆ. ಆಗ ಈ ಗೌಡ ಶಾಸಕರ ಕರ‍್ಯಾಲಯದ ನಿಮ್ಮ ಪಿ.ಎ.ಗಳಿಂದ ಪೊಲೀಸ ಸ್ಟೇಷನ್‌ಗೆ ಫೋನ ಹಾಕಿಸಿ ಅವರನ್ನು ಬಿಟ್ಟು ಬಿಡಲು ಹೇಳಿಸುತ್ತಾರೆ. ಆಗ ಈ ಗೌಡ ಪೊಲೀಸ ಸ್ಟೇಷನ್‌ಗೆ ಹೋಗಿ ಅಮಾಯಕರ ಸಂಬಂಧಿಗಳಿ0ದ ದುಡ್ಡು ವಸೂಲಿ ಮಾಡಿ ಪೊಲೀಸರಿಗೆ ಕೊಡಿಸುತ್ತಾನೆ ದೇವಪುರದಲ್ಲಿ ಚಿನ್ನ ಕಳುವಾಗಿರುವ ಸುಗಂಧಿ ಮನೆಯವರೇ ನಿಮ್ಮ ಹೆಸರು ಪೊಲೀಸರಿಗೆ ಹೇಳ್ತಾರೆ, ನಿಮ್ಮ ಓಣಿಯ ಸುಮಾರು ೫೦ ಜನರ ಹೆಸರು ಬರೆಯಿಸಿದ್ದಾರೆ ಒಬ್ಬರ ನಂತರ ಒಬ್ಬರಂತೆ ಪೊಲೀಸರು ಹಿಡಿದುಕೊಂಡು ಸ್ಟೇಷನ್ಗೆ ತಂದು ಬೆಂಡೆತ್ತುತ್ತಾರೆ ಎಂದು ಅಮಾಯಕರಿಗೆ ಕಿವಿಯೂದಿ ಸುಗಂಧಿ ಸಹೋದರರಿಗೂ ಮತ್ತು ಅದೇ ವಾರ‍್ಡನ ಜನರಿಗೆ ಬೆಂಕಿ ಹಚ್ಚುವ, ಕಡ್ಡಿ ಆಡಿಸುವ ಕೆಲಸ ಮಾಡುತ್ತಿದ್ದಾನೆ.
ಕಳೆದ ತಿಂಗಳು ದಿನಾಂಕ.29 /೦3/2025 ರಂದು ಮೊಹರಂ-ಯುಗಾದಿಯ ವೇಳೆಯಲ್ಲಿ ಅಂಬಿಗರ ಓಣಿಯಲ್ಲಿಯ ಶಂಕರಪ್ಪ ಯಜಮಾನನ ಮಗ ಹಣಮಂತ ಮತ್ತು ಮೊಮ್ಮಗನಾದ ಮಹೇಶ ಎಂಬ ಅಮಾಯಕರನ್ನು ಪೊಲೀಸರು ಹಿಡಿದುಕೊಂಡು ಹೋದಾಗ ಈತನೇ ಮುಂದೆ ನಿಂತು ಪೊಲೀಸ ಸ್ಟೇಷನನಲ್ಲಿ ಕೆಲ ಪೊಲೀಸರೊಂದಿಗೆ ಲಾಂಛಫಾ ದುಡ್ಡು ಮಾತಾಡಿ ತಲಾ 60 ಸಾವಿರ ಕೊಡಲು ಒತ್ತಾಯಿಸಿದ್ದಾನೆ. ಆಗ ಶಂಕರಪ್ಪ ಯಜಮಾನ ಮತ್ತು ಆತನ ದೊಡ್ಡ ಮಗ ಗೊವಿಂದ, ಅವರು ದುಡ್ಡು ಕೊಡಲು ಒಪ್ಪಿಲ್ಲ. ಮೊಹರಂ ಮತ್ತು ಯುಗಾದಿ ಹಬ್ಬವಿದೆ ಹಬ್ಬ ಕಳೆದ ನಂತರ ಬರುತ್ತೇವೆ ಎಂದು ಹೇಳಿ ಎಲ್ಲರನ್ನೂ ಈ ಗೌಡನೇ ಕರೆದುಕೊಂಡು ವಾಪಿಸ್ಸು ದೇವಪುರಕ್ಕೆ ಬಂದಿದ್ದಾನೆ. ದಿನಾಂಕ.೦೧/೦೪/೨೦೨೫ ರಂದು ಪೊಲೀಸರು ಕರೆ ಮಾಡಿದ್ದಾರೆ ಅರ್ಜ0ಟ್ ಬರಬೇಕಂತೆ ಎಂದು ಹಣಮಂತ ಮತ್ತು ಮಹೇಶ ಅವರನ್ನು ಕರೆದುಕೊಂಡು ಬನ್ನಿರಿ ಎಂದು ಈ ಗೌಡ ಫೋನ ಮಾಡಿ ಸುರಪುರ ಪೊಲೀಸ ಸ್ಟೇಷನ್‌ಗೆ ಕರೆಯಿಸಿದ್ದಾನೆ ಆದರೇ ಹಣಮಂತ ಹೋಗಿಲ್ಲ ಮಹೇಶ ಒಬ್ಬನೇ ಹೋಗಿದ್ದಾನೆ ಮಹೇಶನ ವಿರುದ್ಧ (೧) ಕಂಪ್ಲೇಂಟ ಇಲ್ಲ (೨) ಕಂಪ್ಲೇಂಟ ಮಾಡಿದ ವ್ಯಕ್ತಿನೇ ಇಲ್ಲ (೩) ಎನ್.ಸಿ.ಆರ್. ಇಲ್ಲ (೪) ಎಫ್.ಐ.ಆರ್. ಇಲ್ಲ. (೫) ವಿಚಾರಣೆಗೆ ಹಾಜರಾಗಲು ಪೊಲೀಸ ಸ್ಟೇಷನ್‌ನಿಂದ ನೋಟೀಸ ಇಲ್ಲ ಯಾವ ಕಾರಣವೂ ಇಲ್ಲದೇ ಮಹೇಶನನ್ನು ಬಂಧಿಸಿ ಸುರಪುರ ಪೊಲೀಸ ಸ್ಟೇಷನ್ ಕಸ್ಟಡಿಯಲ್ಲಿ 28 ಗಂಟೆ ಇಟ್ಟಿದ್ದಾರೆ.
ಮರುದಿನ ೧/೦೩/೨೦೨೫ ರಂದು ಸಾಯಂಕಾಲ ೪ ಗಂಟೆಯವರೆಗೂ ಮಹೇಶ ಕಸ್ಟಡಿಯಲ್ಲಿಯೇ ಇದ್ದಾನೆ. ನಂತರ ಮಲ್ಲಯ್ಯಾ ಪಿ.ಸಿ. ಲಕ್ಕಪ್ಪ ಪಿ.ಸಿ. ಮತ್ತು ಪಿ.ಐ. ಆನಂದ ಇವರು ಲಂಚಕ್ಕಾಗಿ ಹಗ್ಗ-ಜಗ್ಗಾಟ ನಡೆಯಿಸಿದ್ದಾರೆ. ಕೊನೆಗೆ ಗೊವಿಂದನು ಫೋನ ಮಾಡಿ ಮಾಮಾ ನನ್ನ ಅಕ್ಕನ ಮಗ ಮಹೇಶನನ್ನು ನಿನ್ನೆಯಿಂದಲೂ ಪೊಲೀಸ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದಾರೆ ಆಗಲೇ ೨೬ ಗಂಟೆಯಾಗುತ್ತಿದೆ. ಈಗ ನನ್ನ ತಮ್ಮ ಹಣಮಂತನನ್ನೂ ಕೂಡ ಪೊಲೀಸ ಸ್ಟೇಷನ್‌ಗೆ ಕರೆದುಕೊಂಡು ಬನ್ನಿರಿ. ಹಣಮಂತ ಮತ್ತು ಮಹೇಶನನ್ನು ಬಂಧಿಸಿದ ಯಾದಗಿರಿ ಜೈಲಿಗೆ ಕಳುಹಿಸುತ್ತೇವೆ ಎಂದು ಪಿ.ಐ. ಮತ್ತು ೨ ಜನ ಪೊಲಸರು ಹೇಳುತ್ತಿದ್ದಾರೆ. ನಿಮ್ಮ ಮನೆಯ ಚಿನ್ನ ನನ್ನ ತಮ್ಮ ಹಣಮಂತ ಮತ್ತು ನನ್ನ ಅಕ್ಕನ ಮಗ ಮಹೇಶ ಕದ್ದಿಲ್ಲ ಮಾಮಾ ವಿನಾಕಾರಣ ಪೊಲೀಸರು ತಲಾ 60 ಸಾವಿರ ಕೊಡಿ ಇಲ್ಲದಿದ್ದರೇ ಅವರನ್ನು ಯಾದಗಿರಿ ಜೈಲಿಗೆ ಕಳುಹಿಸುತ್ತೇವೆ ಎನ್ನುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿರುವ ನನಗೆ ಫೋನ ಮಾಡಿ ತನ್ನ ಸಮಸ್ಯೆಯನ್ನು ನನ್ನಗೆ ತಿಳಿಸಿದನು. ತಕ್ಷಣವೇ
ನಾನು ಯಾದಗಿರಿ ಜಿಲ್ಲೆಯ ಎಸ್.ಪಿ.ಯವರಿಗೆ ಫೋನ ಮಾಡಿ ಅಮಾಯಕರಿಂದ ತಲಾ ರೂ.೬೦,೦೦೦ ಲಂಚ ಕೇಳುತ್ತಿದ್ದಾರೆ ಸರ್, ಆ ೨ ಹುಡುಗರು ನಮ್ಮ ಮನೆಯ ಪಕ್ಕದಲ್ಲಿಯೇ ಇದ್ದಾರೆ ಕಳುವು ಮಾಡುವಂಥಹ ಗುಣ ಅವರದ್ದಲ್ಲ ಅವರ ಕುಟುಂಬ ನಮ್ಮ ಕುಟುಂಬ ಅಕ್ಕ-ಮಾವ ಎಂಬ ಸಂಬಂಧದಿ0ದ ತಲೆ ತಲಾಂತರದಿಂದ ನಡೆದುಕೊಂಡು ಬಂದಿದ್ದೆವೆ. ಆದರೇ ಸುರಪುರ ಪೊಲೀಸ ಸ್ಟೇಷನ್‌ನ ಪಿ.ಐ. ಆನಂದ, ಪಿ.ಸಿ.ಮಲ್ಲಯ್ಯ ಮತ್ತು ಪಿ.ಸಿ ಲಕ್ಕಪ್ಪ ಅವರು ಅನ್ಯಾಯವಾಗಿ ಹುಡುಗನನ್ನು ಬಂಧಿಸಿದ್ದಾರೆ ಆಗಲೇ ೨೬ ಗಂಟೆಯಾಗಿದೆ ಮಹೇಶ ಎಂಬ ಹುಡುಗ ಕಸ್ಟಡಿಯಲ್ಲಿದ್ದಾನೆ. ೨ನೇ ಹುಡುಗ ಹಣಮಂತನನ್ನೂ ಕೂಡ ಹುಡುಕಿ ಕರೆತನ್ನಿರಿ ಎಂದು ಹೇಳುತ್ತಿದ್ದಾರೆ ಎಂದು ಫೋನ ಮುಖಾಂತರ ಎಸ್.ಪಿ.ಯವರಿಗೆ ಮನವಿ ಮಾಡಿಕೊಂಡೆನು ಆಗ ಎಸ್. ಪಿ.ಅವರು ನಾನು ಚೆಕ್ ಮಾಡ್ತೇನೆ ಎಂದು ಹೇಳಿ ಫೋನ್ ಕಟ್ ಮಾಡಿದರು. ಅಂದಂತೆ ಒಂದು ಗಂಟೆಯ ಒಳಗಾಗಿ ಮಹೇಶನನ್ನು ಬಿಟ್ಟು ಕಳುಹಿಸಿದ್ದಾರೆ.
ಸುರಪುರ ಪೊಲೀಸರು ಕಳ್ಳನನ್ನು ತಮ್ಮ ಪಕ್ಕದಲ್ಲಿಯೇ ಇಟ್ಟುಕೊಂಡು ಅಮಾಯಕರನ್ನು ಬಂಧಿಸುತ್ತಿದ್ದಾರೆ ಎಂಬ ವಿಷಯವನ್ನು ನಾನು ಡಿ.ಜಿ.ಪಿ.ಯಾದಿಯಾಗಿ ಎಲ್ಲಾ ಪೊಲೀಸ ಅಧಿಕಾರಿಗಳಿಗೆ ಬರೆದುಕೊಂಡ ಕಾರಣಕ್ಕೆ ಸುರಪುರ ಪೊಲೀಸ ಸ್ಟೇಷನ್‌ನ ಕ್ರೈಂ ಬ್ರಾಂಚಿನ ಪೊಲಿಸರು ದೇವಪುರ ಗ್ರಾಮಕ್ಕೆ ಬಂದು ಅಸಲಿ ಕಳ್ಳನನ್ನು ಹಿಡಿದುಕೊಂಡು ಸುರಪುರ ಪೊಲೀಸ ಸ್ಟೇಷನ್‌ಗೆ ಕರೆ ತಂದಿದ್ದಾರೆ. ಆಗ ಇದೇ ಗೌಡ ಶಾಸಕರ ಕರ‍್ಯಾಲಯದಿಂದ ಫೋನ ಮಾಡಿಸಿ ಕಳ್ಳನ್ನನ್ನು ಬಿಡಲು ಆದ್ದೇಶಿಸಿದ್ದಾರೆ ಅಲ್ಲದೇ ೫೦ ಗ್ರಾಂ.( ೫ ತೊಲಾ ) ಚಿನ್ನ ನಾನು ತಂದು ಕೊಡುತ್ತೇನೆ ಎಂದು ಜವಾಬ್ದಾರಿ ಹೊತ್ತುಕೊಂಡು ಕಳ್ಳನನ್ನು ಸ್ಟೇಷನ್‌ನಿಂದ ಬಿಡಿಸಿಕೊಂಡು ಹೋಗಿದ್ದಾನೆ. ನಂತರದ ದಿನಗಳಲ್ಲಿ ಆ ವ್ಯಕ್ತಿ ಚಿನ್ನ ಕೊಡುವುದಿಲ್ಲವಂತೆ ಎಂದು ಈ ಗೌಡ ಕೈ ಹಾರಿಸಿದ್ದಾನೆ. ಆಗ ಕ್ರೈಂ ಬ್ರಾಂಚಿನ ಪೊಲೀಸರು ಗೌಡನ ಮಾತು ನಂಬಿ ಇಂಗು ತಿಂದ ಮಂಗನಂತಾಗಿದ್ದಾರೆ.
ಶಾಸಕರೇ, ನಮಗಾಗುತ್ತಿರುವ ಮತ್ತು ಆಗಿರುವ ಸಮಸ್ಯೆಯನ್ನು ನನ್ನಂತೆಯೇ ನೂರಾರು ಜನರಿಗೆ ಆಗುತ್ತಿದೆ. ಈ ವಿಷಯವನ್ನು ತಾವು ಯಾವ ಥರಹ ತೆಗೆದುಕೊಳ್ಳುತ್ತಿರೋ ತಮಗೆ ಬಿಟ್ಟ ವಿಚಾರ ಯಾಕೆಂದರೇ ಈ ಗೌಡನಂತಹ ವ್ಯಕ್ತಿಗಳು ಹಳ್ಳಿಯಲ್ಲಿ ಸುಮಾರು ಜನ ಇದ್ದಾರೆ. ವಸಂತಮಹಲ ಗ್ರೌಂಡಿನ ಅಧಿಕಾರ ನಮ್ಮನ್ನು ಬಿಟ್ಟು ಹೋಗಬಾರದು. ನಮ್ಮ ಕೈ ತಪ್ಪಬಾರದು. ಅಂದಿಗೂ ಇಂದಿಗೂ ಎಂದೆಂದಿಗೂ ಸುರಪುರ ವಿಧಾನಸಭಾ ಮತಕ್ಷೇತ್ರದ ಕಿಂಗ್ ನಾವೇ ಆಗಿರಬೇಕೆಂಬ ಆಸೆಯಿಂದ ಬರೆದುಕೊಳ್ಳುತ್ತಿದ್ದೆನೆ.
ಅಪ್ಪಾಜೀಯವರು ಇದ್ದಾಗ ಈ ದೇವಪುರ ಗೌಡನನ್ನು ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ ಯಾಕೆಂದರೇ ದಿನದ ಮೂರೂ ಹೊತ್ತು ಗ್ರೌಂಡಿನಲ್ಲಿಯೇ ಓಡಾಡಿಕೊಂಡಿರುತ್ತಿದ್ದ ನೋಡುವವರಿಗೆ ಬೇಜಾರು ಮಾಡಿದ್ದ. ಅಪ್ಪಾಜೀಯವರಿಗೂ ಈ ಗೌಡನ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದಿಲ್ಲವೆಂಬುದು ಜನರೇ ಆಡಿಕೊಳ್ಳುತ್ತಿರುವ ಮಾತು ತಮ್ಮ ಗಮನಕ್ಕೆ ತರುತ್ತಿದ್ದೆನೆ,.
ಗೌರವಗಳೊಂದಿಗೆ.
ತಮ್ಮ ವಿಶ್ವಾಸಿ,
ಸಹಿ ಎಮ್.ಎ.ಸುಗಂಧಿ, ವಕೀಲರು, ಪತ್ರಕರ್ತರು,
ಬೆಂಗಳೂರು – 560 010. ಮೋ.9731113141.



